Breaking News
Home / ಜಿಲ್ಲೆ / ನಾಳೆ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ನಾಳೆ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

Spread the love

ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ನಿಧನ ಹಿನ್ನಲೆಯಲ್ಲಿ ನಾಳೆ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಚಿದಾನಂದಮೂರ್ತಿಯವರ ಸಾವು ನೋವುಂಟು ಮಾಡಿದೆ‌. ಕನ್ನಡ ನಾಡು, ನುಡಿ ಅಸ್ಮಿತೆಗಾಗಿ ಹೋರಾಟ ಮಾಡುತ್ತಿದ್ದವರು. ಅವರ ನಿಧನದಿಂದ ಕನ್ನಡ ಸ್ವಾರಸ್ವತಲೋಕಕ್ಕೆ ತುಂಬಾ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ನಾನು ಹಿಂದೆ ಸಿಎಂ ಆಗಿದ್ದಾಗಲೇ ಚಿದಾಮೂರ್ತಿಯವರಿಗೆ ವಿಧಾನಪರಿಷತ್ ಸದಸ್ಯರಾಗಿ ಅಂತ ಕೇಳಿಕೊಂಡಿದ್ದೆ. ನನಗೆ ವಯಸ್ಸಾಗಿದೆ ಬೇರೆಯವರಿಗೆ ಮಾಡಿ ಅಂತ ಚಿ.ಮೂ ಹೇಳಿದ್ದರು ಎಂದು ಸಿಎಂ ಬಿಎಸ್​ವೈ ಚಿದಾನಂದಮೂರ್ತಿಯವರ ಜೊತೆಗಿನ ನೆನಪು ಬಿಚ್ವಿಟ್ಟರು.

ಇನ್ನು ನಾಳೆ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಬರುವ ಹಿನ್ನೆಲೆ, ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನ ಮಾಡಲು ತೀರ್ಮಾನ ಮಾಡಲಾಗಿದೆ. ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸುಮನಹಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸುವ ಸಾದ್ಯತೆ ಇದೆ.

ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆ, ಚಿದಾನಂದಮೂರ್ತಿಯವರ ಅಂತ್ಯಸಂಸ್ಕಾರವನ್ನು ನಾಳೆ ನಡೆಸುವುದಾಗಿ ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಜೊತೆಗೆ ಚಿಮೂ ಅವರ ಆಸೆಗಳಿಗೆ ಧಕ್ಕೆಯಾಗಬಾರದೆಂದು ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ. ಅದಕ್ಕೆ ನೀವು ಕೂಡ ಸಹಕರಿಸಿ ಎಂದು ಚಿಮೂ ಮಗ ವಿನಯ್​ಕುಮಾರ್ ಕುಟುಂಬಸ್ಥರಿಗೆ ಹಾಗೂ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.
Advertisement


Spread the love

About Laxminews 24x7

Check Also

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಕ್ಯಾ. ಪ್ರಾಂಜಲ್​ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯಾರ್ಥವಾಗಿ ಚೆಕ್​ ವಿತರಣೆ

Spread the love ಆನೇಕಲ್: ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ