Breaking News
Home / ಜಿಲ್ಲೆ / ಕೋಲಾರ / ಬಿಜೆಪಿ ಮುಖಂಡರು ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಚಿಕನ್ ಬಿರಿಯಾನಿ ವಿತರಿಸುವುದರ ಜೊತೆಗೆ ಪಾದ ಪೂಜೆ ಮಾಡಿ ಗೌರವ

ಬಿಜೆಪಿ ಮುಖಂಡರು ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಚಿಕನ್ ಬಿರಿಯಾನಿ ವಿತರಿಸುವುದರ ಜೊತೆಗೆ ಪಾದ ಪೂಜೆ ಮಾಡಿ ಗೌರವ

Spread the love

ಕೋಲಾರ: ಜಿಲ್ಲೆಯ ಬಿಜೆಪಿ ಮುಖಂಡರು ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಚಿಕನ್ ಬಿರಿಯಾನಿ ವಿತರಿಸುವುದರ ಜೊತೆಗೆ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದರು.

ಕೆಜಿಎಫ್ ನಗರದಲ್ಲಿ ಪೌರಕಾರ್ಮಿಕರಿಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಹೀಗೆ ವಿಭಿನ್ನವಾಗಿ ಗೌರವ ಸಲ್ಲಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸಾರ್ವಜನಿಕರಿಗೆ ಆಹಾರ ಪದಾರ್ಥ ಹಾಗೂ ಊಟವನ್ನ ನೀಡುತ್ತಿದ್ದ ತಾಲೂಕು ಬಿಜೆಪಿ ಮುಖಂಡರು ಮಂಗಳವಾರ ಪೌರಕಾರ್ಮಿಕರಿಗೆ ಪಾದ ಪೂಜೆ ಸಲ್ಲಿಸಿ, ಆಹಾರ ಪದಾರ್ಥಗಳೊಂದಿಗೆ ಚಿಕನ್ ಬಿರಿಯಾನಿ ನೀಡಿದರು.

ಕೆಜಿಎಫ್ ನಗರವನ್ನ ಸ್ವಚ್ಛಗೊಳಿಸುವ ಮೂಲಕ ಮಾರಕ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪೌರ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ. ಹೀಗಾಗಿ ಅವರ ಪಾದ ಪೂಜೆ ಮಾಡಿದ್ದೇವೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ನಾರಾಯಣ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಕಮಲ್ ನಾಥ್ ನೇತೃತ್ವದಲ್ಲಿ ಬಿರಿಯಾನಿ ಹಂಚಿಕೆ ಮಾಡಿದ್ದು, ಕೆಜಿಎಫ್ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು ಹಾಜರಿದ್ದರು.


Spread the love

About Laxminews 24x7

Check Also

ವರ್ತೂರು ಕಿಡ್ನಾಪ್ ಕೇಸ್: ಇಬ್ಬರು ವಿದ್ಯಾರ್ಥಿಗಳು ಸೇರಿ 6 ಜನರ ಬಂಧನ

Spread the loveಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಾರಿನಲ್ಲಿ ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ