Breaking News
Home / ರಾಜಕೀಯ / ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Spread the love

ಬೇಸಗೆ ಝಳದಲ್ಲಿ ಬೇಯುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಕಾವೂ ಹೆಚ್ಚಿದ್ದು, ರಾಜಧಾನಿಯ ಗದ್ದುಗೆ ಹಿಡಿಯಲು ನಡೆಯುತ್ತಿರುವ ಗುದ್ದಾಟವೂ ಬಿರುಸಾಗಿಯೇ ಇದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಎಲ್ಲ 7 ಕ್ಷೇತ್ರಗಳಲ್ಲಿಯೂ ವಿಜಯ ಪತಾಕೆ ಹಾರಿಸಿದ್ದ ಬಿಜೆಪಿ ಈ ಬಾರಿಯೂ ಗೆಲುವಿನ ನಗೆ ಬೀರುವ ಹುಮ್ಮಸ್ಸಿನಲ್ಲಿದೆ.

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಇತ್ತ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಕಳೆದ 10 ವರ್ಷಗಳಿಂದಲೂ ಲೋಕಸಭೆಯ ಒಂದೂ ಸ್ಥಾನವನ್ನೂ ಗೆಲ್ಲಲಾಗದ ಆಮ್‌ ಆದ್ಮಿ ಪಕ್ಷ ಈ ಬಾರಿ ಇಂಡಿಯಾ ಒಕ್ಕೂಟದ ಜತೆಗೆ ಕೈ ಜೋಡಿಸಿ ಖಾತೆ ತೆರೆದೇ ಸಿದ್ಧ ಎಂಬಂತೆ ಟೊಂಕ ಕಟ್ಟಿದೆ. 2009ರ ಚುನಾವಣೆಯಲ್ಲಿ 7ಕ್ಕೆ 7 ಕ್ಷೇತ್ರಗಳನ್ನೂ ಗೆದ್ದು ಆ ಬಳಿಕ ಹೇಳ ಹೆಸರಿಲ್ಲದಂತಾಗಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು 7 ಲೋಕಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 4 ಕ್ಷೇತ್ರಗಳನ್ನು ಮಿತ್ರ ಪಕ್ಷ ಆಪ್‌ಗೆ ಬಿಟ್ಟುಕೊಟ್ಟಿದೆ.

ಇನ್ನು ಆಡಳಿತಾರೂಢ ಆಪ್‌ ಹಾಗೂ ಕೇಂದ್ರ ಸರಕಾರದ ನಡುವಿನ ವೈಮನಸ್ಸು ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಜತೆಗೆ ಕೇಜ್ರಿವಾಲ್‌ ಸರಕಾರದ ಕಾದಾಟಗಳನ್ನು ದಿಲ್ಲಿಯ ಮತದಾರರು ನೋಡುತ್ತಲೇ ಬಂದಿದ್ದಾರೆ. ಏತನ್ಮಧ್ಯೆ ಭ್ರಷ್ಟಾಚಾರ ಆರೋಪಗಳು, ಕೇಜ್ರಿವಾಲ್‌ ಅವರ ಬಂಧನವು ಈವರೆಗಿನ ಲೆಕ್ಕಾಚಾರವನ್ನೇ ಬದಲಿಸುವ ಸಾಧ್ಯತೆಗಳಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿಪಕ್ಷ ನಾಯಕರನ್ನು ಮೋದಿ ಸರಕಾರ ಹಣಿಯುತ್ತಿದೆ ಎಂಬ ವಾದ ಆಪ್‌ನತ್ತ ಜನರ ಅನುಕಂಪದ ಅಲೆ ಬೀಸಲು ಕಾರಣವಾಗುತ್ತಿದೆ. ಇನ್ನು ಅಬಕಾರಿ ನೀತಿ ಹಗರಣವನ್ನು ಮುಂದಿಟ್ಟು ಕೇಂದ್ರ ಬೀಸುತ್ತಿರುವ ಗಾಳಕ್ಕೆ ಮತದಾರ ಸಿಕ್ಕಿಬೀಳುವ ಸಾಧ್ಯತೆಯೂ ಇದೆ. ಇದೆಲ್ಲದರ ನಡುವೆ ಮೇ 25 ರಂದು ದಿಲ್ಲಿಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆ ಬಳಿಕ ಬಿಜೆಪಿಯ ತೆಕ್ಕೆಗೆ ಮತ್ತೆ ರಾಜಧಾನಿ ಸಿಕ್ಕಲಿದೆಯಾ? ಆಪ್‌ಗೆ ಈ ಬಾರಿಯಾದರೂ ಖಾತೆ ತೆರೆಯಲು ಸಾಧ್ಯವಾಗಲಿದೆಯಾ? ಕಾಂಗ್ರೆಸ್‌ನ ಗತ ವೈಭವ ಮರಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಮೈತ್ರಿ ಹೊಂದಾಣಿಕೆ ಸ್ಥಿತಿ: ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ರಚನೆಯಾಗಿರುವ ಇಂಡಿಯಾ ಒಕ್ಕೂಟದ ಭಾಗವಾಗಿಯೇ ಆಪ್‌ ಮತ್ತು ಕಾಂಗ್ರೆಸ್‌ ಲೋಕಸಭೆ ಸೀಟು ಹಂಚಿಕೆ ಮಾಡಿಕೊಂಡಿವೆ. ಇದು ಬಿಜೆಪಿ ವಿರೋಧಿ ಮತಗಳನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ಆಪ್‌ ಮತ್ತು ಕಾಂಗ್ರೆಸ್‌ನ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವ ಜಾಣ ನಡೆ ಇದಾಗಿದ್ದು, ಬಿಜೆಪಿಗೆ ಎದುರಾಗಿ ಇಂಡಿಯಾ ಒಕ್ಕೂಟದಿಂದ ಜಿದ್ದಾಜಿದ್ದಿನ ಫೈಟ್‌ ನಿರೀಕ್ಷಿಸಬಹುದು. ಉಳಿದಂತೆ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಜನಪರ ಯೋಜನೆಗಳು, ರಾಜಧಾನಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಈ ಬಾರಿ ವರವಾಗುವ ಸಾಧ್ಯತೆಯೂ ಹೆಚ್ಚಿದೆ. ಅಲ್ಲದೇ ಅವರ ಬಂಧನದ ಬಳಿಕ ಆಪ್‌ ಕಾರ್ಯಕರ್ತರು ಹಮ್ಮಿಕೊಂಡಿರುವ ಸರಣಿ ಪ್ರತಿಭಟನೆಗಳು ಕೇಂದ್ರ ಸರಕಾರದ ವಿರುದ್ಧದ ಅಲೆಯನ್ನು ರಾಜಧಾನಿಯಲ್ಲಿ ಸೃಷ್ಟಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಜನರಿಗೆ ಈಗಾಗಲೇ ಕೇಜ್ರಿವಾಲ್‌ ಅವರ ಬಗ್ಗೆ ಸಹಾನುಭೂತಿ ಮೂಡಿರುವುದು ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಮೈತ್ರಿಗೆ ಬಲ ನೀಡಲಿವೆ ಎನ್ನಬಹುದು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ