Breaking News
Home / ಜಿಲ್ಲೆ / ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

Spread the love

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಕೊರೋನಾ ಶಂಕೆ ಹಿನ್ನಲೆಯಲ್ಲಿ ವಿದೇಶದಿಂದ ಬಾಂದವರನ್ನು 16 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆ ಸೇರಿಕೊಂಡಿದ್ದಾರೆ.

ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ್ ಸೇರಿ‌ 6 ದೇಶಗಳಿಂದ 47 ಮಂದಿ ಭಾರತೀಯರು ಆಗಮಿಸಿದ್ದರು. ಕೊರೋನಾ ಶಂಕೆ ಹಿನ್ನೆಲೆ, ಸಪ್ತಗಿರಿ ಆಸ್ಪತ್ರೆಯಲ್ಲಿ ಕಳೆದ 16 ದಿನಗಳಿಂದ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ. ಹೀಗಾಗಿ ಇಂದು ಅವರೆಲ್ಲರನ್ನೂ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.

ಮೊದಲು ಇವರೆಲ್ಲಾ ಒಟ್ಟಿಗೆ ಆಸ್ಪತ್ರೆಗೆ ಬಂದಾಗ ಸಣ್ಣ ಪ್ರಮಾಣದ ಶೀತ ಜ್ವರ ಇತ್ತು. ಎಲ್ಲರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದರ ಬಳಿಕ ರಿಪೋರ್ಟ್ ನೆಗೆಟಿವ್ ಬಂದಿತ್ತು. ನಂತರ ಐಸೊಲೇಶನ್ ವಾರ್ಡ್ ಗೆ ಇವರನ್ನು ದಾಖಲಿಸಲಾಗಿತ್ತು. ಇದೀಗ 16 ದಿನಗಳನ್ನು ಪೂರೈಸಿದ ನಂತರ ಮತ್ತೊಮ್ಮೆ ಎಲ್ಲರ ಗಂಟಲ ದ್ರವ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಎಲ್ಲಾ‌ 47 ಜನರ ರಿಪೋರ್ಟ್ ನೆಗೆಟಿವ್ ಬಂದ ಹಿನ್ನೆಲೆ, ಇಂದು ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ