Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ : ಪ್ರಕಾಶ ಹೋಳೆಪ್ಪಗೋಳ

ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ : ಪ್ರಕಾಶ ಹೋಳೆಪ್ಪಗೋಳ

Spread the love

ಗೋಕಾಕ:ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ : ಪ್ರಕಾಶ ಹೋಳೆಪ್ಪಗೋಳ

ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು

ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರು ತಮ್ಮ ಸೇವೆ ಸ್ಥಗಿತಗೋಳಿಸಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಶನಿವಾರದಂದು ನೀಡಿದ ಮನವಿಗೆ ಸ್ವಂದಿಸಿದ ಅಧಿಕಾರಿಗಳು ರವಿವಾರದಂದು ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಖಾಸಗಿ ವೈದ್ಯರ ಸಭೆ ನಡೆಯಿಸಿದರು

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಕಾಶ ಹೋಳೆಪ್ಪಗೋಳ ಕೊರೋನಾ ವೈರಸ್ ( ಸೋಂಕು) ತಡೆಗಟ್ಟಲು ಸರಕಾರ ದೇಶಾದ್ಯಂತ ಲಾಕಡೌನ ಘೋಷಿಸಿದರು ಸಹ ಖಾಸಗಿ ವೈದ್ಯರ ಸೇವೆ ಕಡ್ಡಾಯ ಗೋಳಿಸಿದೆ ಆದರೆ ಗೋಕಾಕ ನಗರದಲ್ಲಿ ಖಾಸಗಿ ವೈದ್ಯರು ತಮ್ಮ ಸೇವೆ ಸ್ಥಗಿತಗೋಳಿಸಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ . ಕಡ್ಡಾಯವಾಗಿ ತಮ್ಮ ಸೇವೆಯನ್ನು ಯತ್ತಾವತ ಮುಂದುವರೆಸಬೇಕು ಅದಕ್ಕಾಗಿ ಎಲ್ಲ ವೈದ್ಯರು ಸೇರಿ ಒಂದು ಸಮಯ ನಿಗದಿ ಪಡೆಸಿ ಆ ನಿಗದಿತ ಸಮಯದಲ್ಲಿ ( ಓ.ಪಿ.ಡಿ ) ಹೊರ ರೋಗಿಗಳನ್ಶು ಪರೀಕ್ಷಿಸಬೇಕು ಎಂದು ಹೇಳಿದರು.

ತಾಲೂಕಾ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಮಾತನಾಡಿ ಖಾಸಗಿ ವೈದ್ಯರ ಸೇವೆಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ . ಲಾಕಡೌನ ಅಂತಹ ತುರ್ತು ಸಂದರ್ಭದಲ್ಲಿ ವೈದ್ಯರು ಮಾನವೀಯ ಆಧಾರ ಮೇಲೆ ಸೇವೆ ಸಲ್ಲಿಸಿ ಸರಕಾರದ ಆದೇಶ ಪಾಲಿಸಬೇಕು . ನಾಳೆಯಿಂದ ಯಾವುದಾರು ದೂರುಗಳು ಬಂದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅಂತಹ ವೈದ್ಯರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವದು ಎಂದು ಹೇಳಿದರು

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ಪೌರಾಯುಕ್ತ ಶಿವಾನಂದ ಹಿರೇಮಠ , ವೈದ್ಯರುಗಳಾದ ಡಾ. ವಿಶ್ವನಾಥ ಶಿಂಧೋಳ್ಳಿಮಠ, ಡಾ. ಗಂಗಾಧರ ಉಮರಾಣಿ , ಡಾ‌. ಉಮೇಶ ನಿಪ್ಪಾಣಿ , ಡಾ‌. ನೀತಿನ ಮೇಸ್ರ್ತಿ , ಡಾ.ಮಲ್ಲಿಕಾರ್ಜುನ ಬಿರನಗಡಿ , ಡಾ‌.ರಮಾಕಾಂತ ಕುಲಕರ್ಣಿ, ಡಾ.ವಾಯ್ ಬಿ.ಗುಡಗುಡಿ , ಡಾ‌. ಅಶೋಕ ಕೊಪ್ಪ, ಡಾ. ಆರ್.ಡಿ.ಪಾಟೀಲ , ಡಾ.ಶೆಟ್ಟೆಪ್ಪಾ ಗರೋಶಿ , ಡಾ . ಹಳ್ಳಿಗೌಡರ , ಡಾ. ಖನಗಲಿ ಸೇರಿದಂತೆ ಇತರರು ಇದ್ದರು


Spread the love

About Laxminews 24x7

Check Also

ಕಾವೇರಿ’ದ ಬಂದ್: ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ.

Spread the love ಬೆಂಗಳೂರು: ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್​ಗೆ ಚಿತ್ರರಂಗ ಕೂಡ ಬೆಂಬಲ ನೀಡಿದೆ. ಕಾವೇರಿಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ