Breaking News

ಮಹಾಮಾರಿ ಕರೋನಾ ವಿರುದ್ಧ ದೇಶಾದ್ಯಂತ ಜನತಾ ಕಫ್ರ್ಯೂ ಜಾರಿ, ಮನೆಸೇರಿದ ಜನ

Spread the love

ಬೆಂಗಳೂರು,ಮಾ.22- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನ ಸೋಂಕು ಹಬ್ಬದಂತೆ ನಾಳೆ ಜನತಾ ಕಫ್ರ್ಯೂ(ಸ್ವಯಂ ನಿರ್ಬಂಧ) ಹಾಕಿಕೊಳ್ಳಲು ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಈಡಿ ಭಾರತವೇ ಸ್ತಬ್ಧವಾಗಿದೆ. ದಿನದ ವಹಿವಾಟು ಸ್ಥಗಿತಗೊಂಡರೂ 8 ಗಂಟೆಗೂ ಅಧಿಕ ಕಾಲ ನಿರ್ಬಂಧ ವಿಧಿಸುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನತಾಕಫ್ರ್ಯೂ ಘೋಷಿಸಿ ರಾಷ್ಟ್ರದ ಜನತೆ ಸಹಕರಿಸುವಂತೆ ಮನವಿ ಮಾಡಿದ್ದರು. ಪ್ರಧಾನಿ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಹುತೇಕ ಭಾರತವೇ ಸ್ತಬ್ಧವಾಗಿದೆ

ಆಸ್ಪತ್ರೆ, ಆ್ಯಂಬುಲೆನ್ಸ್, ಔಷಧಿ ಮಳಿಗೆಗಳು, ದಿನಪತ್ರಿಕೆ, ಹಾಲು, ಹಣ್ಣು , ತರಕಾರಿ ಹೊರತುಪಡಿಸಿದರೆ ಉಳಿದಂತೆ ಸಾರಿಗೆ, ರೈಲು, ವಿಮಾನ, ಟ್ಯಾಕ್ಸಿ, ಸರಕು ಸಾಗಾಣಿಕೆ, ಓಲಾ, ವೂಬರ್, ತರಕಾರಿ, ದಿನಸಿ ಅಂಗಡಿಗಳು, ಖಾಸಗಿ ಬಸ್ ಮಾಲೀಕರ ಸಂಘ, ಆಟೋಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಚಿನ್ನಾಭರಣ ಮಳಿಗೆಯವರು ಸ್ವಯಂ ನಿರ್ಬಂಧಕ್ಕೆ ಬೆಂಬಲ ಸೂಚಿಸಿವೆ

ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೊ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಬಿಎಂಟಿಸಿ ಸೇವೆ ಕೂಡ ಬಂದ್ ಬಹುತೇಕ ಬಂದ್ ಆಗಿದೆ. ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಯಶವಂತಪುರ, ಎಪಿಎಂಸಿ, ಯಲಹಂಕ ಮಾರುಕಟ್ಟೆ, ರೈತಸಂತೆ, ಶಿವಾಜಿನಗರ, ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಮತ್ತಿತರ ಪ್ರಮುಖ ಪ್ರದೇಶಗಳಲ್ಲಿ ಜನತಾ ಕಫ್ರ್ಯೂಗೆ ಬೆಂಬಲ ವ್ಯಕ್ತವಾಗಿದೆ.

ಐಟಿಬಿಟಿ ಕಂಪನಿಗಳು ಈಗಾಗಲೇ ತಮ್ಮ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿರುವುದರಿಂದ ಬಹುತೇಕ ಎಲ್ಲ ಐಟಿ ಕಂಪನಿಗಳು ಸ್ತಬ್ದಗೊಂಡಿವೆ.ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಎಲ್ಲೆಡೆ ವ್ಯಾಪಕ ಬೆಂಬಲ ಕಂಡುಬಂದಿದೆ.

ಇಂದು ನಡೆಯಬೇಕಿದ್ದ ಜಾತ್ರೆ, ಸಮಾರಂಭಗಳು, ಧಾರ್ಮಿಕ ಆಚರಣೆಗಳು ಎಲ್ಲವನ್ನೂ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇನ್ನು ರಾಜ್ಯದ ಪ್ರಮುಖ ದೇವಾಲಯಗಳ ದರ್ಶನಕ್ಕೂ ಸಹ ಕಡಿವಾಣ ಬಿದ್ದಿದೆ. ಧಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಮಲೆಮಹದೇಶ್ವರ, ಪ್ರಮುಖ ಮಠಗಳಾದ ಸಿದ್ದಗಂಗಾ, ಆದಿಚುಂಚನಗಿರಿ, ಶೃಂಗೇರಿ, ಸುತ್ತೂರು ಮಠ ಮತ್ತಿತರ ಕಡೆಯೂ ಭಕ್ತರ ದರ್ಶನಕ್ಕೆ ಕಡಿವಾಣ ಹಾಕಲಾಗಿದೆ.

ಇನ್ನು ಚರ್ಚ್‍ಗಳು, ಮಸೀದಿಗಳು, ದರ್ಗಾಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಬಹುದೆಂಬ ಹಿನ್ನೆಲೆಯಲ್ಲಿ ಕೆಲವೇ ಕೆಲವು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಾಳಿನ ಸ್ವಯಂ ನಿರ್ಬಂಧಕ್ಕೆ ರಾಜಕೀಯ ವಲಯದಲ್ಲೂ ಪಕ್ಷಾತೀತವಾಗಿ ಬೆಂಬಲ ದೊರೆಕಿದೆ. ಸಾರ್ವಜನಿಕ ವಲಯದಲ್ಲೂ ಕೂಡ ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ. ಚಿತ್ರೋದ್ಯಮ, ನಿರ್ಮಾಪಕರ ಸಂಘ, ಕಲಾವಿದರ ಸಂಘಗಳು ಕೂಡ ಜನತಾ ಕಫ್ರ್ಯೂನ್ನು ಸ್ವಾಗತಿಸಿವೆ.

# ತುರ್ತು ಅಗತ್ಯವಿದ್ದರೆ ಈ ನಂಬರ್​ಗೆ ಕರೆ ಮಾಡಿ :
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇಶಾದ್ಯಂತ ಇಂದು ಜನತಾ ಕರ್ಫ್ಯೂ ಘೋಷಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಮನೆಯಿಂದ ಆಚೆ ಬರುವಂತಿಲ್ಲ. ಆದರೆ, ಒಂದುವೇಳೆ ಯಾರಿಗಾದರೂ ತುರ್ತು ಅಗತ್ಯವಿದ್ದಲ್ಲಿ ಅವರಿಗೆ ನೆರವಾಗಲು ಬೆಂಗಳೂರಿನಲ್ಲಿ ಸ್ವಯಂಸೇವಕರ ತಂಡ ಸಿದ್ಧವಾಗಿದೆ.

ಜನತಾ ಕರ್ಫ್ಯೂ ಇರುವುದರಿಂದ ಯಾರಾದರೂ ಹೊರಗಡೆ ಅಡ್ಡಾಡಿದರೆ ಅವರ ಮೇಲೆ ಕೇಸ್ ದಾಖಲಿಸಿಕೊಳ್ಳುವುದಾಗಿ ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾರಿಗಾದರೂ ಅನಾರೋಗ್ಯದ ತೊಂದರೆ, ತುರ್ತು ಅಗತ್ಯದ ಅವಶ್ಯಕತೆಯಿದ್ದರೆ ಅಂಥವರಿಗೆ ನೆರವಾಗಲು ಸ್ವಯಂಸೇವಕರು ಸಿದ್ಧವಾಗಿದ್ದಾರೆ.

ಇಂದು ಸಾರ್ವಜನಿಕರಿಗೆ ನೆರವಾಗಲೆಂದೇ ಸ್ವಯಂ ಸೇವಕರ ತಂಡವೊಂದು ರಚನೆಯಾಗಿದ್ದು, ತುರ್ತು ಸೇವೆ ಬೇಕಾದಲ್ಲಿ ಉಚಿತವಾಗಿ ನೆರವು ನೀಡಲಿದೆ. ಯಾರಿಗಾದರೂ ಬೆಂಗಳೂರಿನಲ್ಲಿ ಇಂದು ತುರ್ತು ಸೇವೆಯ ಅಗತ್ಯವಿದ್ದರೆ ಕಿರಣ್- 9916963710, 9916933330 ಸಂಖ್ಯೆಗೆ ಕರೆ ಮಾಡಬಹುದು. ಈ ತಂಡ ಇಂದು ಉಚಿತವಾಗಿ ತುರ್ತುಸೇವೆ ಒದಗಿಸಲಿದೆ


Spread the love

About Laxminews 24x7

Check Also

ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ,

Spread the loveಚಾಮರಾಜನಗರ: “ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ” ಎಂದು ಅರಣ್ಯ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ