Breaking News
Home / ಅಂತರಾಷ್ಟ್ರೀಯ / ಕೊರೋನಾ ಹಾವಳಿ : ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು ನೀಡಿದ ವಿಶ್ವಬ್ಯಾಂಕ್

ಕೊರೋನಾ ಹಾವಳಿ : ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು ನೀಡಿದ ವಿಶ್ವಬ್ಯಾಂಕ್

Spread the love

ವಾಷಿಂಗ್ಟನ್ : ವಿಶ್ವದಾದ್ಯಂತ ಕೊರೋನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದು, ಬಲಿಷ್ಠ ರಾಷ್ಟ್ರಗಳ ಜಂಗಾಭಲವನ್ನೇ ಕುಸಿಯುವಂತೆ ಮಾಡಿದೆ. ಕೊರೋನಾ ಪೀಡಿತ ರಾಷ್ಟ್ರಗಳ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದ್ದು ಸಂಕಷ್ಟಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಅನೇಕ ದೇಶಗಳಿಗೆ ನೆರವಾಗಲು ಮಂದಾಗಿದ್ದ ವಿಶ್ವಬ್ಯಾಂಕ್, 12 ಶತಕೋಟಿ ಡಾಲರ್ ವರೆಗೆ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು.

ಇದರಂತೆ ಇದೀಗ ಭಾರತಕ್ಕೆ 1 ಬಿಲಿಯನ್ ಡಾಲರ್ ಗಳಷ್ಟು ತುರ್ತು ನೆರವು ನೀಡಲು ಇದೀಗ ಒಪ್ಪಿಗೆ ನೀಡಿದೆ. ಕೇವಲ ಭಾರತದವಷ್ಟೇ ಅಲ್ಲದೆ, ಕೊರೋನಾ ವಿರುದ್ಧ ಹೋರಾಡುತ್ತಿರುವ ಇತರೆ 40 ರಾಷ್ಟ್ರಗಳಿಗೂ ನೆರವು ನೀಡಲು ವಿಶ್ವಬ್ಯಂಕ್ ಮುಂದಾಗಿದೆ.

ಪಾಕಿಸ್ತಾನಕ್ಕೆ 200 ಮಿಲಿಯನ್, ಅಫ್ಘಾನಿಸ್ತಾನಕ್ಕೆ 100 ಮಿಲಿಯನ್, 7.3 ಮಿಲಿಯನ್ ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ರಾಷ್ಟ್ರಕ್ಕೆ 128.6 ಮಿಲಿಯನ್ ಡಾಲರ್ ನೀಡಲು ಒಪ್ಪಿಗೆ ನೀಡದೆ ಎಂದು ತಿಳಿದುಬಂದಿದೆ.

ವಿಶ್ವಬ್ಯಾಂಕ್ ನೀಡಿರುವ ನೆರವಿನಿಂದ ಭಾರತದಲ್ಲಿ ಉತ್ತಮ ಸ್ಕ್ರೀನಿಗ್ ವ್ಯವಸ್ಥೆ, ಸೋಂಕಿತರ ಹುಡುಕಲು, ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಲು, ವೈದ್ಯಕೀಯ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ, ಸಲಕರಣೆಗಳು ಒದಗಿಸಲು ಹಾಗೂ ಐಸೋಲೇಷನ್ ವಾರ್ಡ್ ಗಳನ್ನು ಸಂಖ್ಯೆ ಹೆಚ್ಚಿಸಲು ಸಹಾಯಕವಾಗಲಿದೆ.

ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ರೌದ್ರನರ್ತನ ಪ್ರದರ್ಶಿಸುತ್ತಿದ್ದು, ಈವರೆಗೂ ಭಾರತ ಸೇರಿದಂತೆ ವಿಶ್ವದಲ್ಲಿ 53 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೊರಟೋನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರು ಭಾರತಕ್ಕೆ 1 ಬಿಲಿಯನ್ ಡಾಲರ್’ಗಳಷ್ಟು ತುರ್ತು ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಗುರುವಾರ ಒಪ್ಪಿಗೆ ನೀಡಿದೆ.


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ