Breaking News
Home / Uncategorized / 32 ಸೆಕೆಂಡುಗಳ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ ರಾಮ ಮಂದಿರ ಭೂಮಿ ಪೂಜೆ

32 ಸೆಕೆಂಡುಗಳ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ ರಾಮ ಮಂದಿರ ಭೂಮಿ ಪೂಜೆ

Spread the love

ಕೋಟ್ಯಂತರ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರದ ಭೂಮಿ ಪೂಜೆಯ ದಿನವು ಬಂದೇ ಬಿಟ್ಟಿದೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಸಜ್ಜಾಗಿರೋ ಅಯೋಧ್ಯೆ ನಗರ ಈಗಾಗಲೇ ಝಗಮಗಿಸುತ್ತಿದೆ.. ಮನೆ ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸಲಾಗ್ತಿದೆ. ಬೀದಿ ಬೀದಿಯಲ್ಲಿ ಬಣ್ಣ ಹಚ್ಚಿ ಸಿಂಗಾರ ಮಾಡಲಾಗಿದೆ. ಗಲ್ಲಿ ಗಲ್ಲಿಯಲ್ಲಿ ಪ್ರಭು ಶ್ರೀ ರಾಮ ಪೋಸ್ಟರ್​ಗಳನ್ನ ಅಂಟಿಸಲಾಗಿದೆ. ದೀಪಾವಳಿ ಸಂಭ್ರಮದಂತೆ ಇಡೀ ಅಯೋಧ್ಯೆ ನಗರ ಕಂಗೊಳಿಸುತ್ತಿದೆ.

ಭೂಮಿ ಪೂಜೆಗೆ 32 ಸೆಕೆಂಡ್​ಗಳ ಮೂಹೂರ್ತ

ಭೂಮಿ ಪೂಜೆಗೆ ಕರ್ನಾಟಕದ ಖ್ಯಾತ ವಿದ್ವಾಂಸ ಎನ್.ಆರ್.ವಿಜಯೇಂದ್ರ ಶರ್ಮಾ ಮೂಹೂರ್ತ ಫಿಕ್ಸ್ ಮಾಡಿದ್ರು. ಅದರಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​​ನವರು ನಾಳೆ ಭೂಮಿ ಪೂಜೆ ಹಮ್ಮಿಕೊಳ್ಳಲಾಗಿದೆ. ಅದರಲ್ಲೂ ವಿಶೇಷವೆಂದ್ರೆ ಭೂಮಿ ಪೂಜೆಗೆ 32 ಸೆಕೆಂಡ್​ಗಳ ಮೂಹೂರ್ತ ಚನ್ನಾಗಿದೆಯೆಂತೆ. 12 ಗಂಟೆ 44 ನಿಮಿಷದ 8 ಸೆಕೆಂಡ್​ನಿಂದ 12 ಗಂಟೆ 44 ನಿಮಿಷದ 40 ಸೆಕೆಂಡ್​ವರೆಗೆ ಶುಭ ಕ್ಷಣ ಇದೆ ಎನ್ನಲಾಗ್ತಿದೆ.

ನಾಳೆ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಧನಿಷ್ಠ ನಕ್ಷತ್ರದಲ್ಲಿ ಆರಂಭವಾಗಿ, ಶತಭಿಷ (ಶತತಾರಾ) ನಕ್ಷತ್ರದಲ್ಲಿ ಕೊನೆಗೊಳ್ಳಲಿದೆ. ಭಗವಾನ್‌ ಶ್ರೀರಾಮನು ಅಭಿಜಿತ್‌ ಮುಹೂರ್ತದಲ್ಲಿ ಜನಿಸಿದ್ದರಿಂದ ಆತನ ದೇವಾಲಯದ ನಿರ್ಮಾಣ ಕೂಡ ಇದೇ ಮುಹೂರ್ತದಲ್ಲಿ ಆಗಬೇಕು. ಅಭಿಜಿತ್ ಮುಹೂರ್ತ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಕೋಟ್ಯಂತರ ಭಕ್ತರನ್ನ ಹೊಂದಿರೋ ರಾಮ ಮಂದಿರದ ಶಿಲಾನ್ಯಾಸಕ್ಕೆ ಇಂತಹ ಒಳ್ಳೆಯ ಮೂಹೂರ್ತ ಸಿಗಲ್ಲ. ಇದೇ 38 ಸೆಕೆಂಡ್​ಗಳಲ್ಲಿ ಪ್ರಧಾನಿ ಅವ್ರು, ಮಂದಿರ ಶಿಲಾನ್ಯಾಸ ನೆರವೇರಿಸುತ್ತಾರೆ.  ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಕಾರ್ಯಕ್ರಮಕ್ಕೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬರೋಬ್ಬರಿ 175 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ವೇದಿಕೆಯಲ್ಲಿ ಜಸ್ಟ್​ 5 ಜನ ಇರಲಿದ್ದು, ಅದರಲ್ಲಿ ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮಹಾಂತ್ ನೃತ್ಯ ಗೋಪಾಲ್‌ ದಾಸ್ ಮಾತ್ರ ವೇದಿಕೆ ಮೇಲೆ ಇರಲಿದ್ದಾರೆ. ಕಾರ್ಯಕ್ರಮದಲ್ಲಿ 175 ಮಂದಿಯ ಪೈಕಿ 135 ಮಂದಿ ಸಂತರ, ವಿದ್ವಾಂಸರು, ಆದ್ಯಾತ್ಮಿಕ ಚಿಂತಕರು, ಲಕ್ಷಾಂತರರ ಅತಿಥಿಗಳು ಭಾಗಿಯಾಗ್ತಿದ್ದಾರೆ.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ