Breaking News
Home / Uncategorized (page 27)

Uncategorized

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ ಹುಬ್ಬಳ್ಳಿ: ‘2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್ ಮಾಡುತ್ತೇವೆ. ಯುಪಿಎ ಆಡಳಿದಲ್ಲಿ ದೇಶದಲ್ಲಿ ಕಲ್ಲಿದ್ದಲು ಕೊರತೆ ಇತ್ತು.ಇದೀಗ ಕಲ್ಲಿದ್ದಲು ಹೆಚ್ಚುವರಿ ಉತ್ಪಾದನೆಯಾಗಿದೆ.ರಾಜ್ಯಕ್ಕೆ ಬೇಡಿಕೆಗಿಂತ ಹೆಚ್ಚಿನ ಕಲ್ಲಿದ್ದಲು ನೀಡಿದ್ದೇವೆ. ರಾಜ್ಯದಿಂದ 900 ಕೋಟಿ ರೂ. ಬಾಕಿ ಬರಬೇಕಾಗಿದ್ದು, ರಾಜ್ಯ ಸರ್ಕಾರ ಪಾಪರ್ ಆಗಿದ್ದರಿಂದ ಇದುವರೆಗೂ ಬಾಕಿ ನೀಡಿಲ್ಲ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುಧವಾರ ಹೇಳಿದ್ದಾರೆ. ಬುಧವಾರ …

Read More »

ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಹಾಗೂ ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ಸದಸ್ಯ ಖಾದರ ಆನವಟ್ಟಿ ಮೇಲೆ ಜೇನು ನೊಣಗಳು ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ತಾಲೂಕಿನ ಕೆಂಗ್ರೆಹೊಳೆ ಬಳಿ ನೀರಿನ ಮಟ್ಟ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿವೆ. ಜೇನು ದಾಳಿಯಿಂದ ಮೂವರೂ ಗಾಯಗೊಂಡಿದ್ದು, ತತ್ ಕ್ಷಣ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

Read More »

ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಹೈದರಾಬಾದ್: ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಾಚುಪಲ್ಲಿ ಪ್ರದೇಶದಲ್ಲಿ ನಡೆದಿದೆ. ಮೃತರು ಒಡಿಶಾ ಮತ್ತು ಛತ್ತೀಸ್‌ಗಢಕ್ಕೆ ಸೇರಿದ ವಲಸೆ ಕಾರ್ಮಿಕರಾಗಿದ್ದು, ಮಂಗಳವಾರ(ಮೇ.7 ರಂದು) ಸಂಜೆ ಈ ಘಟನೆ ನಡೆದಿದೆ ಎಂದು ಬಾಚುಪಲ್ಲಿ ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳನ್ನು ಅವಶೇಷಗಳಡಿಯಿಂದ ಬುಧವಾರ ಮುಂಜಾನೆ ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ತೆಲಂಗಾಣದ ಹಲವೆಡೆ ಭಾರೀ ಮಳೆ ಸುರಿದಿದ್ದು, …

Read More »

ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ,

ಶಿವಮೊಗ್ಗ: ಹಾಡಹಗಲೇ ಇಬ್ಬರು ರೌಡಿಶೀಟರ್ ಗಳನ್ನು ನಡುರಸ್ತೆಯಲ್ಲಿ ಹತ್ಯೆಗೈದ ಭಯಾನಕ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಬುಧವಾರ ನಡೆದಿದೆ. ಹತ್ಯೆಯಾದವರನ್ನು ತುಂಗಾನಗರದ ಸೊಹೈಲ್ (35) ಮತ್ತು ದೊಡ್ಡಪೇಟೆ ಮೊಹಮ್ಮದ್ ಗೌಸ್(30) ಎಂದು ಹೇಳಲಾಗಿದೆ. ರೌಡಿ ಶೀಟರ್ ಯಾಸೀನ್ ಕುರೇಶಿ ಮೇಲೆ ದಾಳಿ ಮಾಡಲು ಬಂದ ತಂಡ ಯಾಸೀನ್ ಗೆ ಚಾಕುವಿನಿಂದ ಇರಿದಿದೆ ಇದಕ್ಕೆ ಪ್ರತಿದಾಳಿ ಮಾಡಿರುವ ಯಾಸೀನ್ ಕುರೇಶಿ ಗ್ಯಾಂಗ್ ದಾಳಿಗೆ ಬಂದಿದ್ದ ಇಬ್ಬರು ರೌಡಿಶೀಟರ್ ಗಾಲ ಮೇಲೆ …

Read More »

ಪ್ರಜ್ವಲ್‌ ಪರವಾಗಿ ಮಾತನಾಡುವುದಿಲ್ಲ,ರೇವಣ್ಣ ಪರ ಮಾತ್ರ ಹೋರಾಟ: H.D.K.

ಬೆಂಗಳೂರು: ನಾನು ಪ್ರಜ್ವಲ್‌ ಪರವಾಗಿ ಮಾತನಾಡುವುದಿಲ್ಲ. ಸತ್ಯಾ ಸತ್ಯತೆ ಹೊರಬರಲಿ. ಆದರೆ ರೇವಣ್ಣ ವಿಷಯದಲ್ಲಿ ಸರಕಾರ ಹೇಗೆ ನಡೆದುಕೊಳ್ಳುತ್ತಿದೆ. ಅಧಿಕಾರ ದುರ್ಬಳಕೆ ಆಗುತ್ತಿದೆ ಎಂಬುದು ಗೊತ್ತಿದೆ. ಹೀಗಾಗಿ ರೇವಣ್ಣ ಪರವಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಸಂಬಂಧಿ, ಸಹೋದರ ಎನ್ನುವ ಕಾರಣಕ್ಕೆ ರೇವಣ್ಣ ಪರವಾಗಿ ಹೋರಾಟ ಮಾಡುವುದಿಲ್ಲ. ಒಕ್ಕಲಿಗ ನಾಯಕನಾಗಿಯೂ ಹೋರಾಡುವುದಿಲ್ಲ. ಯಾವ ಒಕ್ಕಲಿಗ …

Read More »

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಮೈಸೂರು: ಸಂಸದ ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಜಾಲವೂ ಒಳಗೊಂಡಿದೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಆಗ್ರಹಿಸಿದರು. ಪೆನ್‌ಡ್ರೈವ್‌ ಹಂಚಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೈವಾಡ ಹಾಗೂ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 3 ಕೋಟಿ ರೂ. ನೀಡಿ ಚೆನ್ನೈ ಕಂಪೆನಿಯೊಂದರಿಂದ ಪೆನ್‌ಡ್ರೈವ್‌ ಖರೀದಿಸಿದ್ದಾರೆ. ಬಳಿಕ ಮಲೇ ಷಿ ಯಾಕ್ಕೆ ಹೋಗಿ ಅಲ್ಲಿನ ಲ್ಯಾಬ್‌ ನಲ್ಲಿ ವೀಡಿಯೋ ಅಪ್‌ಲೋಡ್‌ ಮಾಡಲಾಗಿದೆ ಎಂದು ಆರೋಪಿಸಿದರು. ಮಾಜಿ …

Read More »

ಮುಂದಿನ ತಿಂಗಳು ಪರಿಷತ್‌ನ 11 ಸ್ಥಾನಗಳು ಖಾಲಿ

ಬೆಂಗಳೂರು: ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜ್‌ ಅವರದ್ದು ಸಹಿತ ವಿಧಾನ ಪರಿಷತ್ತಿನ 11 ಸ್ಥಾನಗಳು ಜೂನ್‌ ತಿಂಗಳಲ್ಲಿ ಖಾಲಿಯಾಗಲಿದ್ದು, ಮೇಲ್ಮನೆ ಪ್ರವೇಶಕ್ಕೆ ಈಗ ಮೂರು ಪಕ್ಷಗಳಲ್ಲೂ ತೆರೆಮರೆಯಲ್ಲಿ ಲಾಬಿ ಪ್ರಾರಂಭಗೊಂಡಿದೆ. ಕೋಟ ಶ್ರೀನಿವಾಸ ಪೂಜಾರಿ ಸಂಸತ್‌ ಪ್ರವೇಶಿಸಿದರೆ ಪರಿಷತ್‌ ವಿಪಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕುವ ಅನಿವಾರ್ಯತೆ ಬಿಜೆಪಿಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ಸಂಖ್ಯಾಬಲದ ಆಧಾರದಲ್ಲಿ ಈ ಬಾರಿ ಸಿಂಹಪಾಲು ಪರಿಷತ್‌ …

Read More »

SIT ಕಿರುಕುಳ ವಿರುದ್ಧ ಕೋರ್ಟ್‌ ನಲ್ಲಿ ಕೇಸು: ಬಿಜೆಪಿ‌ ಮುಖಂಡ ದೇವರಾಜೇಗೌಡ

ಬೆಂಗಳೂರು: ಪ್ರಕರಣದ ವಿಶೇಷ ತನಿಖಾ ತಂಡ ಒಂದು ದಿಕ್ಕಿನಲ್ಲಿ ಮಾತ್ರ ತನಿಖೆ ನಡೆಸುತ್ತಿದೆ. ಹೀಗಾಗಿ ಗುರುವಾರ ಕೋರ್ಟ್‌ ನಲ್ಲಿ ಎಸ್‌ಐಟಿ ವಿರುದ್ಧ ಕ್ರಿಮಿನಲ್‌ ಆರೋಪದಡಿ ಖಾಸಗಿ ಪ್ರಕರಣ ದಾಖಲಿಸುತ್ತೇವೆ ಎಂದು ಹಾಸನ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆಪ್ರಕರಣದಲ್ಲಿ ಕಾರ್ತಿಕ್‌ನ ವಿಚಾರಣೆ ನಡೆಸಲಾಗಿದೆ. ಆದರೆ ಆತನನ್ನು ಬಂಧಿಸಿಲ್ಲ. ಇನ್ನು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ರೇವಣ್ಣ ಅವರನ್ನು ಬಂಧಿಸಲಾಗಿದೆ. ಆದರೆ ಕಾರ್ತಿಕ್‌ ಜಾಮೀನು ಅರ್ಜಿ …

Read More »

ಇನ್ನೂ ಒಂದು ವಾರ ಪ್ರಜ್ವಲ್‌ ಬರುವುದು ಸಂಶಯ

ಬೆಂಗಳೂರು: ಹಾಸನದ ಅಶ್ಲೀಲ ವೀಡಿ ಯೋಗಳ ಪೆನ್‌ಡ್ರೈವ್‌ ಪ್ರಕರಣದ ಆರೋಪ ಎದುರಿ ಸುತ್ತಿರುವ ಸಂಸದ ಪ್ರಜ್ವಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿ ವಾರ ಕಳೆದಿದ್ದು, ವಿದೇಶ ದಿಂದ ಬೆಂಗಳೂರಿಗೆ ಬರುವುದನ್ನೇ ಎಸ್‌ಐಟಿ ಕಾದು ಕುಳಿತಿದೆ. ಆದರೆ ಬಂಧನ ಭೀತಿಯಿಂದಾಗಿ ಸದ್ಯಕ್ಕೆ ಪ್ರಜ್ವಲ್‌ ದೇಶಕ್ಕೆ ವಾಪಸಾಗುವುದೇ ಅನುಮಾನ ಎನ್ನಲಾಗುತ್ತಿದೆ.   ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್‌ ಕೊಟ್ಟ ಬಳಿಕ ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ಕೇಳಿದ್ದರು. ಆದರೆ ಇದನ್ನು ಎಸ್‌ಐಟಿ ತಿರಸ್ಕರಿಸಿತ್ತು. ಈಗ …

Read More »

ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

ಬೆಳಗಾವಿ: ಪ್ರಜ್ವಲ್‌ ರೇವಣ್ಣ ವೀಡಿಯೋಗಳ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೆಸರು ಹಿಂದಿನಿಂದಲೂ ಕೇಳಿಬರುತ್ತಿದೆ. ಎಸ್‌ಐಟಿ ತನಿಖೆಯಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಜೆಡಿಎಸ್‌ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಚುನಾವಣೆಗೂ, ಪ್ರಜ್ವಲ್‌ ಪ್ರಕರಣಕ್ಕೂ, ವೈರಲ್‌ ಆಗಿರುವ ಶಿವಕುಮಾರ್‌ ಆಡಿಯೋಗೂ ಸಂಬಂಧವಿಲ್ಲ. ಇದು ಬಿಜೆಪಿಯ ಫಲಿತಾಂಶದ ಮೇಲೆ …

Read More »