Breaking News

Uncategorized

ಇನ್ನೂ ದೊಡ್ಡ ದೊಡ್ಡ ಮೀನುಗಳಿವೆ – ಇಡಿ ದಾಳಿ ಬಗ್ಗೆ ಸತೀಶ್ ಜಾರಕಿಹೊಳಿ ಫಸ್ಟ್ ರಿಯಾಕ್ಷನ್‌

ಬೆಂಗಳೂರು: ನನ್ನ ದೃಷ್ಟಿಯಲ್ಲಿ ಇಡಿ ರೇಡ್  ರಾಜಕೀಯ ಪ್ರೇರಿತ ಇರಬಹುದು. ನಾನೇ ಲಾಸ್ಟ್ ಅಂದುಕೊಂಡಿದ್ದೆ. ಆದ್ರೆ ನಾನೇ ಮೊದಲಿದ್ದೀನಿ. ಇನ್ನೂ ದೊಡ್ಡ ದೊಡ್ಡ ಮೀನುಗಳು ಇವೆ ಎಂದು ಸಚಿವ ಸತೀಶ್ ಜಾರಕಿಹೊಳಿ  ಹೇಳಿದ್ದಾರೆ. ತಮ್ಮ ನಿವಾಸದ ಮೇಲಿನ ಇಡಿ ದಾಳಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ದಾಳಿಗೆ ಕಾರಣ ತಕ್ಷಣಕ್ಕೆ ಗೊತ್ತಿಲ್ಲ, ರಾಜಕೀಯ ಪ್ರೇರಿತ ಇರಬಹುದು. ಅವರಿಗೆ ಮಾಹಿತಿ ಇರಬಹುದು. ಆದ್ರೆ ನಮಗೆ ನೋಟಿಸ್ ಕೊಡಬಹುದಿತ್ತು. ನಮ್ಮ ದೃಷ್ಟಿಯಲ್ಲಿ …

Read More »

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ

ಬೆಳಗಾವಿ:ಬಾಲ ಕಾರ್ಮಿಕ ಪದ್ಧತಿ ಎಂಬ ಸಾಮಾಜಿಕ ಪಿಡುಗನ್ನು ತೊರೆದು ಹಾಕುವುದು ಅಗತ್ಯವಾಗಿದೆ. ಬಾಲ ಕಾರ್ಮಿಕರ ಕುರಿತು ಮಾತನಾಡುವುದು ಸುಲಭವಾಗಿದ್ದು ಇದನ್ನು ತಡೆಗಟ್ಟಲು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಅವರಣದ ಸಭಾಂಗಣದಲ್ಲಿ ಗುರುವಾರ  ಜರುಗಿದ ಕೃಷಿ ಕ್ಷೇತ್ರದ ಕಬ್ಬು ಕಟಾವು ಕಾರ್ಯದಲ್ಲಿ ಮಕ್ಕಳ ಬಳಕೆ ನಿಷೇಧಿಸಿ ಸಕ್ಕರೆ ಉತ್ಪಾದಕರಿಗೆ ಆಗುವ ಸವಲತ್ತುಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಕ್ಕರೆ ಅಂತಾರಾಷ್ಟ್ರೀಯ ಮಟ್ಟದ …

Read More »

ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯ ವಶ

ಖಾನಾಪುರ: ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ತಾಲ್ಲೂಕಿನ ಕಣಕುಂಬಿ ಬಳಿ ಕರ್ನಾಟಕ ಗೋವಾ ಗಡಿಯಲ್ಲಿ ವರದಿಯಾಗಿದೆ. ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕಣಕುಂಬಿ ತನಿಖಾ ಠಾಣೆಯ ಹತ್ತಿರ ಗೋವಾದಿಂದ ಬೆಳಗಾವಿಗೆ ಬರುತ್ತಿದ್ದ ಭಾರತ …

Read More »

ಮಗುವಿನ ಪಾಲಕರ ಪತ್ತೆಗಾಗಿ ಮನವಿ

ಬೆಳಗಾವಿ: ಸವದತ್ತಿ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ- ನರಗುಂದ ರಸ್ತೆಯ ಬಸವಣಕಟ್ಟೆ ಸೇತುವೆ ಕೆಳಭಾಗದಲ್ಲಿ ನವಜಾತ ಗಂಡು ಶಿಶುವನ್ನು ದಿನಾಂಕ 06.07.2026 ರಂದು ಯಾರೋ ಅಪರಿಚಿತರು ಬಿಟ್ಟು ಹೋಗಿದ್ದು, ಸ್ಥಳೀಯ ಗ್ರಾಮಸ್ಥರು ಗಮನಿಸಿ ಪೋಲಿಸರಿಗೆ ಮಾಹಿತಿಯನ್ನು ನೀಡಿರುತ್ತಾರೆ. ತಕ್ಷಣ ಪೋಲಿಸರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ರಕ್ಷಣೆ ಮಾಡಿ ಸವದತ್ತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ …

Read More »

ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನ

ಅಹಮದಾಬಾದ್: ಯುವಕನೊಂದಿಗಿನ ವೀಡಿಯೋ ವೈರಲ್  ಆದ ಬಳಿಕ ತಂದೆ ಹಾಗೂ ಸಹೋದರ ಸೇರಿಕೊಂಡು 22 ವರ್ಷದ ಯುವತಿಯನ್ನು ಹತ್ಯೆ ಮಾಡಿ, ಬಳಿಕ ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಿದ ಘಟನೆ ಅಹಮದಾಬಾದ್‌ನಲ್ಲಿ  ನಡೆದಿದೆ. ಸೋಫಿಯಾ ಹತ್ಯೆಯಾದ ಯುವತಿ. ಸೋಫಿಯಾ ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ನಡೆದ ಈ ಘಟನೆ ಆರಂಭದಲ್ಲಿ ಹಿಟ್ & ರನ್ ಪ್ರಕರಣ ಎಂದು ದಾಖಲಾಗಿತ್ತು. ಆದರೆ ಪೊಲೀಸರು ನಡೆಸಿದ ತನಿಖೆಯಲ್ಲಿ …

Read More »

ಬಯಲುಸೀಮೆಯ ಬಹುದಿನದ ಕನಸು ನನಸು – ಕೋಟೆ ನಾಡು ಪ್ರವೇಶಿಸಿದ ಭದ್ರಾ ನೀರು

ಚಿತ್ರದುರ್ಗ: ಬಯಲುಸೀಮೆಯ ಬಹುದಿನದ ಕನಸಾದ ಭದ್ರಾ ನೀರು  ಕೊನೆಗೂ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದೆ. ಸಂಭ್ರಮ -ಸಡಗರದಿಂದ ಜನರು ಭದ್ರೆಯನ್ನ ಸ್ವಾಗತಿಸಿದ್ದಾರೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಬಳಿ ತರಳುಬಾಳು ಶಾಖಾ ಮಠದ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸಿ ಭದ್ರೆಯನ್ನ ಜನರು ಸ್ವಾಗತಿಸಿದರು. ಬಾಗಿನ ಅರ್ಪಿಸುವ ವೇಳೆ ಸಾಣೇಹಳ್ಳಿಯ ತರಳುಬಾಳು ಶಾಖಾಮಠದ ಪಂಡಿತಾರಾಧ್ಯ ಸ್ವಾಮೀಜಿ ವ್ಯಂಗ್ಯವಾಡುವ ಭರಾಟೆಯಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಹೋರಾಟಗಾರರು ಹಾಗು ರೈತರ ಹೋರಾಟದ ಪರಿಣಾಮ ಭದ್ರಾ ಜಲಾಶಯದಿಂದ ನೀರು …

Read More »

ರಾಜ್ಯದ ವಿಜ್ಞಾನ ಕೇಂದ್ರಗಳಲ್ಲಿ ‘ವಿದ್ಯಾರ್ಥಿ–ವಿಜ್ಞಾನಿ ಸಂವಾದ’ಕ್ಕೆ ಇಸ್ರೋ ಸಹಕಾರ ಕೋರಿದ ಸಚಿವ ಅಜಯ್ ಸಿಂಗ್

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಪಠ್ಯಪುಸ್ತಕದ ಆಚೆಗೆ ಅನುಭವಾತ್ಮಕವಾಗಿ ಪರಿಚಯಿಸುವ ಉದ್ದೇಶದಿಂದ, ಕರ್ನಾಟಕದ ವಿವಿಧ ವಿಜ್ಞಾನ ಕೇಂದ್ರಗಳಲ್ಲಿ ಇಸ್ರೋ  ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ನಡುವೆ ನೇರ ಸಂವಾದ ಕಾರ್ಯಕ್ರಮಗಳನ್ನುಆಯೋಜಿಸಲು ಸಹಕಾರ ನೀಡುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್  ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರಿಗೆ ಮನವಿ ಮಾಡಿದ್ದಾರೆ. ಇಸ್ರೋ ಅಧ್ಯಕ್ಷರನ್ನು ಭೇಟಿಯಾದ ಸಂದರ್ಭದಲ್ಲಿ ಈ ಸಂಬಂಧ ಅಧಿಕೃತ ಮನವಿ ಸಲ್ಲಿಸಿದ …

Read More »

ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿ

ಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ  ಕನ್ನಡ ಚಲನಚಿತ್ರ ರಂಗದ ನಟ ನಟಿಯರು  ಭಾಗಿಯಾಗಲಿದ್ದಾರೆ. ಸಿಎಂ ಆಶಯದಂತೆ ಈ ಬಾರಿ ಮೆರವಣಿಗೆಯಲ್ಲಿ ನಟ ನಟಿಯರು ಸಾಗಲಿದ್ದಾರೆ. ಜಂಬೂ ಸವಾರಿಯ ದಿನ ಅಂಬಾರಿ ಬಸ್‌ನಲ್ಲಿ ಅರಮನೆ ಆವರಣದಿಂದ ಕೆಆರ್ ಸರ್ಕಲ್‌ವರೆಗೆ ಮೆರವಣಿಗೆ ಮೂಲಕ ನಟ ನಟಿಯರು ಸಾಗಲಿದ್ದಾರೆ. ನಂತರ ಕಲಾವಿದರನ್ನು ಕೆಆರ್ ಸರ್ಕಲ್‌ನಿಂದ ಕರೆದುಕೊಂಡು ಬಂದು ಅರಮನೆ ಗ್ಯಾಲರಿಯಲ್ಲಿ ಬಿಡಲಾಗುವುದು ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ. ಆನೆಗಳ ತಾಲೀಮು ನೋಡಲು ದಿನವೂ …

Read More »

ಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್‌ಗೆ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ: ಜಿಬಿಎ ಸ್ಪಷ್ಟನೆ

ಬೆಂಗಳೂರು: ಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್ ಅವರಿಗೆ ಯಾವುದೇ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ ಅಂತಾ ಜಿಬಿಎ ಸ್ಪಷ್ಟಪಡಿಸಿದೆ. ಪ್ರೊಫೆಸರ್ ಸಿ.ಎನ್ ರಾವ್  ಅವರು 2002ನೇ ಸಾಲಿನ 76-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿದ್ರು. ಅವ್ರ ಹೆಸರು ರಾಮ ಎಂದು ನಮೂದಾಗಿತ್ತು. ಪ್ರಸ್ತುತ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ-59 ರಲ್ಲಿ ಕ್ರಮ ಸಂಖ್ಯೆ 187ರಲ್ಲಿ ಸಿಎನ್‌ಆರ್‌ ರಾವ್ ಎಂಬ ಹೆಸರಿನೊಂದಿಗೆ ಮತದಾರರಾಗಿ ನೋಂದಾಯಿತರಾಗಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ …

Read More »

`ದೃಢ ಕರ್ನಾಟಕದ ಸಂಕಲ್ಪ’: ಸರ್ಕಾರದ 100 ದಿನಗಳ ಯಶಸ್ವಿ ಆಡಳಿತ; ವಿಧಾನಸೌಧದಲ್ಲಿ `ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರ ನೇತೃತ್ವದ ಆಡಳಿತವು 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ, `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಕಾರ್ಯಕ್ರಮವನ್ನು ವಿಧಾನಸೌಧದ  ಬ್ಯಾಂಕ್ವೇಟ್ ಸಭಾಂಗಣದಲ್ಲಿ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೆರವೇರಿಸಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ …

Read More »