Breaking News
Home / ನವದೆಹಲಿ (page 5)

ನವದೆಹಲಿ

ಸರ್ವಪಕ್ಷ ಸಭೆಗೆ ಪ್ರಧಾನಿ ಗೈರು : ಜೈರಾಮ್ ರಮೇಶ್ ಗೆ ಸಚಿವ ಜೋಶಿ ತಿರುಗೇಟು

ನವದೆಹಲಿ: ಸರ್ವಪಕ್ಷ ಸಭೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿದ್ದು, ಪ್ರಧಾನಿ ಯಾಕೆ ಸಭೆಗೆ ಹಾಜರಾಗಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ತಿರುಗೇಟು ನೀಡಿದ್ದು,ಇಂದು ಸಭೆಗೆ ಪ್ರಧಾನಿ ಹಾಜರಾಗಿಲ್ಲ ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ವಿಷಯ ಪ್ರಸ್ತಾಪಿಸಿದ್ದಾರೆ. 2014ಕ್ಕಿಂತ ಮೊದಲು ಪ್ರಧಾನಿ ಸರ್ವಪಕ್ಷ ಸಭೆಗೆ ಹಾಜರಾಗುತ್ತಿರಲಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಮನಮೋಹನ್ …

Read More »

ಜೂನ್ 9ರ ವರೆಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ED ಕಸ್ಟಡಿಗೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅರೆಸ್ಟ್ ಆಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ನನ್ನು ಜಾರಿ ನಿರ್ದೇಶನಾಲಯವು ಜೂನ್ 9ರ ವರೆಗೆ ಕಸ್ಟಡಿಗೆ ಪಡೆದುಕೊಂಡಿದೆ. ಜೈನ್ ಅವರನ್ನು ರೋಸ್ ರೆವೆನ್ಯೂ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಗಿತ್ತು. ಜೈನ್ ಪರವಾಗಿ ಹಿರಿಯ ವಕೀಲ ಎನ್.ಹರಿಹರನ್ ಅವರು ವಾದ ಮಂಡಿಸಿದರು. ಕೇಂದ್ರೀಯ ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.  ಹಿನ್ನೆಲೆ ಏನು?: ಏಪ್ರಿಲ್ ತಿಂಗಳಲ್ಲಿ ಸತ್ಯೇಂದ್ರ ಜೈನ್ ಕುಟುಂಬದ ಒಡೆತನದಲ್ಲಿರುವ …

Read More »

ದುಬಾರಿಯಾಗಲಿವೆ ಎಲ್ಲಾ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು

ನವದೆಹಲಿ, ಮೇ 24: ಕಳೆದ ವರ್ಷವಷ್ಟೇ ಶೇ. 25ರವರೆಗೂ ರೀಚಾರ್ಜ್ ಪ್ಲಾನ್ ದರಗಳನ್ನು ಏರಿಸಿದ್ದ ಟೆಲಿಕಾಂ ಆಪರೇಟರ್‌ಗಳು ಈಗ ಒಂದೇ ವರ್ಷದ ಅಂತರದಲ್ಲಿ ಮತ್ತೊಮ್ಮೆ ಭಾರೀ ಏರಿಕೆಗೆ ಮುಂದಾಗುತ್ತಿವೆ. ಮುಂದಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು ಶೇ. 10-12ರಷ್ಟು ದುಬಾರಿಯಾಗಲಿವೆ. ನವೆಂಬರ್‌ನಲ್ಲಿ ಬರಲಿರುವ ದೀಪಾವಳಿ ಹಬ್ಬದಷ್ಟರಲ್ಲಿ ತಮ್ಮ ಪ್ರೀಪೇಯ್ಡ್ ದರಗಳನ್ನು ಏರಿಸಲು ಭಾರ್ತಿ ಏರ್ಟೆಲ್, ರಿಲಾಯನ್ಸ್ ಜಿಯೋ ಮತ್ತು ವೊಡಫೋನ್ ಐಡಿಯಾ ಸಂಸ್ಥೆಗಳು ನಿರ್ಧರಿಸಿವೆ. 2021ರ ನವೆಂಬರ್ ತಿಂಗಳಲ್ಲೇ ಈ …

Read More »

ಮಳೆ ಬಂದಾಗ ಈ ಸಮಸ್ಯೆ ಆಗಿದೆ. ಈ ಸಮಸ್ಯೆ ಬಗೆಹರಿಸದಿದ್ರೇ ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ.

ಬೆಂಗಳೂರು: ವಾರ್ಡ್ ನಂ.160 ರಾಜರಾಜೇಶ್ವರಿ ನಗರದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಬೆಂಗಳೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ನಡುವೆ ರಾಜಕಾಲುವೆಗಳ ಒತ್ತುವರಿ ಮಾಡಿಕೊಂಡಿರುವುದರಿಂದಾಗಿ ಮಳೆ ಬಂದಾಗ ಈ ಸಮಸ್ಯೆ ಆಗಿದೆ. ಈ ಸಮಸ್ಯೆ ಬಗೆಹರಿಸದಿದ್ರೇ ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ. ನಾನು ನನ್ನ ಮತದಾರರಿಗೆ ಭರವಸೆ ಕೊಡ್ತೀನಿ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಳೆ ಜಾಸ್ತಿಯಾದಾಗ ತಗ್ಗು ಪ್ರದೇಶಗಳಿಗೆ ನೀರು ಬರುತ್ತೆ. …

Read More »

ಕಾಂಗ್ರೆಸ್ ನಾಯಕ ಪಿ. ಚಿದಂಬರಂಗೆ ಸಿಬಿಐ ಶಾಕ್: ಚೆನ್ನೈ, ದೆಹಲಿ ಸೇರಿ 7 ಕಡೆ ದಾಳಿ

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ನಿವಾಸದ ಮೇಲೆ ಕೇಂದ್ರ ತನಿಖಾ ದಳ ಮಂಗಳವಾರ ಬೆಳಗ್ಗೆ ದೆಹಲಿ, ಹೈದರಾಬಾದ್ ಮತ್ತು ಚೆನ್ನೈನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಈ ದಾಳಿಗಳು ಮಗ ಕಾರ್ತಿ ಚಿದಂಬರಂ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿವೆ. ಈ ಹಿಂದೆಯೂ ಅವರ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಹೊಸದಾಗಿ ಪ್ರಕರಣ ದಾಖಲಿಸಿದ್ದ ಸಿಬಿಐ ಅಧಿಕಾರಿಗಳು ಇಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮನೆ …

Read More »

ನಂಗು ಬೇಕು ದ್ರಾಕ್ಷಿ ನಂಗೂ ಬೇಕು..! ರಸ್ತೆ ಬದಿ ಬಿದ್ದಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನ!

ಮಂಡ್ಯ: ಯಾವುದೇ ವಸ್ತು ರಸ್ತೆಯಲ್ಲಿ ಬಿದ್ದಿದ್ದಾಗ ಎತ್ತಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡೋ ಜನರು ಮಾತ್ರ, ರಸ್ತೆ ಪಕ್ಕದಲ್ಲಿ ಬಿದ್ದಿದ್ದ ರಾಶಿ ರಾಶಿ ದ್ರಾಕ್ಷಿಯನ್ನು ನನಗೂ ಬೇಕು.. ನನಗೂ ಬೇಕು ಎಂಬುದಾಗಿ ನಾ ಮುಂದು, ತಾ ಮುಂದು ಎನ್ನುವಂತೆ ಮುಗಿಬಿದ್ದು ಬಾಚಿಕೊಂಡು ಹೋಗಿರೋ ಘಟನೆ, ಮಂಡ್ಯದಲ್ಲಿ ನಡೆದಿದೆ.   ಮಂಡ್ಯ ಜಿಲ್ಲೆಯ ವಿಸಿ ಫಾರ್ಮ್ ಗೇಟ್ ಬಳಿಯ ರಸ್ತೆಯ ಪಕ್ಕದಲ್ಲಿಯೇ ರಾಶಿ ರಾಶಿ ದ್ರಾಕ್ಷಿಯನ್ನು ಯಾರೋ ಸುರಿದು ಹೋಗಿದ್ದರು. ಹೀಗೆ ರಸ್ತೆಯ …

Read More »

ಅಸನಿ ಚಂಡಮಾರುತದಿಂದಾಗಿ ವಾತಾವರಣ ಕೂಲ್ ಕೂಲ್

ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಟ್ ನಿಂದಾಗಿ ಬೆಂಗಳೂರಿನ ವಾತಾವರಣ ಕಂಪ್ಲೀಟ್ ಕೂಲ್ ಆಗಿದೆ. ಇಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮೋಡದ ಮರೆಯಲ್ಲೇ ಸೂರ್ಯ ದೇವನ ಜಾರಿಹೋಗಲಿದ್ದಾನೆ. ಬಂಗಾಳಕೊಲ್ಲಿಯನ್ನ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸನಿ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದ ಹಲವು ಕಡೆ ಜೋರು ಮಳೆ ಆಗ್ತಿದೆ. ಬೆಂಗಳೂರಿನಲ್ಲೂ ಚಂಡಮಾರುತದ ಪರಿಣಾಮ ಬೇಸಿಗೆ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದೆ. ನಗರದಲ್ಲಿ ನೆನ್ನೆಯಿಂದಲೂ ಸಹ ಮೋಡ ಕವಿದ ವಾತಾವರಣವಿದೆ. ನಿನ್ನೆ …

Read More »

ಮತ್ತೆ ನಾಳೆಗೆ ಕ್ಯಾಬಿನೆಟ್ ಸಭೆ ಮುಂದೂಡಿಕೆಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ

ನವದೆಹಲಿ/ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಇಂದು ಸಿಎಂ ಅವರು ಅಮಿತ್ ಶಾ ಹಾಗೂ ನಡ್ಡಾ ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಭೇಟಿ ವೇಳೆ ಹೈಕಮಾಂಡ್‍ನಿಂದ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಕುತೂಹಲ ಹುಟ್ಟಿಕೊಂಡಿದ್ದು, ಆ ಸಂದೇಶದಿಂದ ಯಾವ ಬದಲಾವಣೆ..? ಯಾರಿಗೆ ಶಾಕ್.. ಯಾರಿಗೆ ಲಕ್ ಎಂಬುದು ತಿಳಿದುಬರಲಿದೆ. …

Read More »

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್

ಚೀನಾ :ಅಪ್ರಾಪ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ, 16 ವರ್ಷದೊಳಗಿನವರನ್ನು ಲೈವ್-ಸ್ಟ್ರೀಮಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.   16 ಮತ್ತು 18 ರ ನಡುವಿನ ವಯಸ್ಸಿನ ಬಳಕೆದಾರರು ಲೈವ್ ಸ್ಟ್ರೀಮ್ ಮಾಡುವ ಮೊದಲು ತಮ್ಮ ಪೋಷಕರು ಅಥವಾ ಪೋಷಕರಿಂದ ಅನುಮತಿಯನ್ನು ಪಡೆಯಬೇಕು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. …

Read More »

ಭಾರತೀಯ ರೈಲ್ವೆ ಹೊಸ ನಿಯಮ : ರಾತ್ರಿ ರೈಲಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ

ನವದೆಹಲಿ: ರೈಲ್ವೆ ಪ್ರಯಾಣಿಕರು ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುವುದನ್ನು ಅಥವಾ ‘ಲೌಡ್‌ ಸ್ಪೀಕರ್‌’ನಲ್ಲಿ ಸಂಗೀತ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶ|ದಿಂದ ಭಾರತೀಯ ರೈಲ್ವೆ ಹೊಸದಾಗಿ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ.   ಅದರ ಪ್ರಕಾರ, ಪ್ರಯಾಣಿಕರು ದೂರು ನೀಡಿದರೆ, ಆ ಸಮಸ್ಯೆ ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ. ರೈಲಿನಲ್ಲಿರುವ ರೈಲ್ವೆ ತಪಾಸಣೆ ಸಿಬ್ಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು …

Read More »