Breaking News

ಮತ್ತೆ ನಾಳೆಗೆ ಕ್ಯಾಬಿನೆಟ್ ಸಭೆ ಮುಂದೂಡಿಕೆಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ

Spread the love

ನವದೆಹಲಿ/ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಇಂದು ಸಿಎಂ ಅವರು ಅಮಿತ್ ಶಾ ಹಾಗೂ ನಡ್ಡಾ ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಭೇಟಿ ವೇಳೆ ಹೈಕಮಾಂಡ್‍ನಿಂದ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಕುತೂಹಲ ಹುಟ್ಟಿಕೊಂಡಿದ್ದು, ಆ ಸಂದೇಶದಿಂದ ಯಾವ ಬದಲಾವಣೆ..? ಯಾರಿಗೆ ಶಾಕ್.. ಯಾರಿಗೆ ಲಕ್ ಎಂಬುದು ತಿಳಿದುಬರಲಿದೆ.

ಸದ್ಯ ದೆಹಲಿಯಲ್ಲಿ ಸಿಎಂ ಇದ್ದರೆ, ಇತ್ತ ಸಂಪುಟ ಸಭೆ ಸಂಕಷ್ಟ ಎದುರಾಗಿದೆ. ಸತತ 3ನೇ ಬಾರಿಗೆ ಸಂಪುಟ ಸಭೆ ಮುಂದೂಡಿಕೆಯಾಗಿದೆ. ಈ ಹಿಂದೆ ಮೇ 5ರಿಂದ ಮೇ 11ಕ್ಕೆ ಮುಂದೂಅಡಲಾಯ್ತು. ಆದರೆ ಇಂದು ಬೆಳಗ್ಗೆ 11ಕ್ಕೆ ಇದ್ದ ಸಭೆ ಸಂಜೆಗೆ ಮುಂದೂಡಲಾಯ್ತು. ಇದೀಗ ಇಂದು ಸಂಜೆ ನಿಗದಿ ಆಗಿದ್ದ ಕ್ಯಾಬಿನೆಟ್ ನಾಳೆಗೆ ಮುಂದೂಡಿಕೆಯಾಗಿದೆ.


Spread the love

About Laxminews 24x7

Check Also

ನಮ್ಗೆ 1 ವೋಟು, ಅಂಬಾನಿಗೆ 1 ಲಕ್ಷ ವೋಟ್‌ ಇರುತ್ತಾ? – ವಿಪಕ್ಷಗಳಿಗೆ ತೇಜಸ್ವಿ ಸೂರ್ಯ ತರಾಟೆ

Spread the loveನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕ್ಷೇತ್ರ ಪುನರ್‌ವಿಂಗಡಣೆಗಾಗಿ ಸಂವಿಧಾನ (131ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ