Breaking News
Home / ನವದೆಹಲಿ / ರಿಯಾ ಚಕ್ರವರ್ತಿ ಮತ್ತು ಶೋವಿಕ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಅರೆಸ್ಟ್

ರಿಯಾ ಚಕ್ರವರ್ತಿ ಮತ್ತು ಶೋವಿಕ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಅರೆಸ್ಟ್

Spread the love

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿರುವ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್‍ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ನಾರ್ಕೋಟಿಕ್ಸ್ ಬ್ಯೂರೋ(ಎನ್‍ಸಿಬಿ) ಬಂಧಿಸಿದೆ.ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಬೆಳಕಿಗೆ ಬಂದ ನಂತರ ಪರಾರಿಯಾಗಿದ್ದ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ಎನ್‍ಸಿಬಿ ಈಗ ಮುಂಬೈನ ಪಶ್ಚಿಮ ಉಪನಗರದಲ್ಲಿ ಬಂಧಿಸಿದೆ.

ಮಹಕಲ್ ಈ ಪ್ರಕರಣದ ಆರೋಪಿ ಅನುಜ್ ಕೇಶ್ವಾನಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದನು. ನಂತರ ಅದನ್ನು ಕೈಜಾನ್ ಎಂಬ ವ್ಯಕ್ತಿಗೆ ಹಸ್ತಾಂತರಿಸುತ್ತಿದ್ದನು. ಕೈಜಾನ್ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್‍ಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದ.

ಈ ಕುರಿತಾಗಿ ಸುಳಿವು ಸಿಕ್ಕಿರುವ ಎನ್‍ಸಿಬಿ ಅಧಿಕಾರಿಗಳು ಮತ್ತೊಬ್ಬ ಪೆಡ್ಲರ್ ನ ಮೇಲೆ ದಾಳಿ ನಡೆಸಿ 2.5 ಕೋಟಿ ರೂ.ಗಳ ಮೌಲ್ಯದ ಮಲಾನಾ ಕ್ರೀಮ್ ಅನ್ನು ವಶಪಡಿಸಿಕೊಂಡಿದ್ದಾರೆ


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ