Breaking News
Home / ಜಿಲ್ಲೆ / ಬೆಳಗಾವಿ / ಹುಕ್ಕೇರಿ (page 4)

ಹುಕ್ಕೇರಿ

ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ

ಬೆಳಗಾವಿ: ಹುಕ್ಕೇರಿ ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ ಗನ್ ತೋರಿಸಿ ಬೆದರಿಸಿದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊದಲ ಆರೋಪಿಯಾಗಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರು ಕೊಟ್ಟ ದೂರು ಮತ್ತು ದಾಖಲಾದ FIR ಅಂಶಗಳ ಅನ್ವಯ ಖಾನಾಪುರ ತಾಲೂಕಿನ ಕಸಮಳ್ಳಿ ಗ್ರಾಮದಿಂದ ಬರುತ್ತಿದ್ದ ಬೆಳಗಾವಿ ಶಹಾಪುರದ ಇನ್ನೋವಾ ಕಾರು ರಸ್ತೆ ತಗ್ಗಿನ ಬಳಿ ಮುಂದಿನ ಸ್ವಿಫ್ಟ್ ಗೆ ತಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. …

Read More »

ನಟಿ ಸಂಜನಾ ಜತೆ ಶಾಸಕ ಜಮೀರ್ ಅಹಮ್ಮದ್ಹೆಸರು ಕೇಳಿ ಬಂದಿರುವ ವಿಚಾರವಾಗಿ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಹುಕ್ಕೇರಿ : ಡ್ರಗ್ಸ್ ದಂಧೆ ಜಾಲದಲ್ಲಿ ನಟಿ ಸಂಜನಾ ಜೊತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೆಸರು ಕೇಳಿ ಬಂದಿರುವ ವಿಚಾರವಾಗಿ ಶಾಸಕ ಸತೀಶ್ ಜಾರಕಿಹೊಳಿ  ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಜಮೀರ್ ಇಲ್ಲ. ಹೀಗಾಗಿ ಅವರೊಂದಿಗೆ ಹೊಲಿಕೆ ಮಾಡುವುದು ಸರಿಯಲ್ಲ. ನಟಿ ಸಂಜನಾ ಜತೆ ಶಾಸಕ ಜಮೀರ್ ಅಹಮ್ಮದ್ ಪಾರ್ಟಿಗೆ ಹೋದರೆ ಅಥವಾ ತಿರುಗಾಡಿದ್ರೆ ಏನೂ ಸಂಬಂಧವಿಲ್ಲ. ಡ್ರಗ್ಸ್ ತೆಗೆದುಕೊಂಡರೆ, ಮಾರಾಟ ಮಾಡಿದರೆ …

Read More »

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಕಂಪ್ಯೂಟರ್, ಗ್ರಂಥಾಲಯ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ: ಸತೀಶ ಜಾರಕಿಹೊಳಿ

ಬೆಳಗಾವಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಕಂಪ್ಯೂಟರ್, ಗ್ರಂಥಾಲಯ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ್ ಹೇಳಿದರು. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಮಣ್ಣಿಕೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರು, ಶಾಲಾ ಅಭಿವೃದ್ದಿ ಪದಾಧಿಕಾರಿಗಳು ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು‌ ಮಾತನಾಡಿದರು.  ಗ್ರಾಮೀಣ ಭಾಗದ ಯುವಕ, …

Read More »

ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ. ಇದು …

Read More »

ಹಿಡಕಲ್ ಜಲಾಶಯಿಂದ 40 ಸಾವಿರ ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಬಿಡುಗಡೆ- ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗೋಕಾಕ ತಹಶಿಲ್ದಾರ ಸೂಚನೆ.

ಬೆಳಗಾವಿ: ಪಶ್ಚಿಮ ಗಟ್ಟದಲ್ಲಿ ಧಾರಾಕಾರು ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ‌ ಒಳ ಹರಿಯುವ ಹೆಚ್ಚಾಗಿದ್ದು ಜಲಾಶಯದಿಂದ ಇಂದು 40000 ಕ್ಯೂಸೆಕ್ಸ ನೀರು ಹೊರ ಬಿಡಲಾಗಿದೆ . ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಒಳಹರಿಯುವ 18052 ಕ್ಯೂಸೆಕ್ಸ ಇದ್ದು ಈ ಒಳ ಹರಿವಿನ ಪ್ರಮಾಣವನ್ನು‌ ದೃಷ್ಟಿಯಲ್ಲಿಟ್ಟುಕೊಂಡು‌ ಜಲಾಶಯದ ಕ್ರಷ್ಟ ಗೇಟುಗಳು ಮೂಲಕ  ಘಟಪ್ರಭಾ ನದಿಗೆ ನೀರು ಹರಿದು ಬಿಡಲಾಗಿದೆ. ಬಾನುವಾರ ಸಂಜೆ 5:30 ಕ್ಕೆ 40 ಸಾವಿರ ಕ್ಯೂಸೆಕ್ಸ ನೀರು ನದಿಗೆ …

Read More »

ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ.

ಹುಕ್ಕೇರಿ: ಕಳೆದ ಮೂರ್ನಾಲ್ಕು ದಿನಗಳಿಂದ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ. ಮಣಗುತ್ತಿ, ಬೆನಕನಹೊಳಿ, ಬೋಳಶ್ಯಾನಟ್ಟಿ, ಸೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಸೋಮವಾರ ಸಭೆ ನಡೆಸಿ, ಮಣಗುತ್ತಿ ಗ್ರಾಮದಲ್ಲಿನ ಲಕ್ಷ್ಮಿ ಟ್ರಸ್ಟ್‌ ಜಾಗದಲ್ಲಿ ಶಿವಾಜಿ ಮೂರ್ತಿ ಸೇರಿ ಐದು ಪುತ್ಥಳಿ ನಿರ್ಮಾಣಕ್ಕೆ ತಿರ್ಮಾನ ಕೈಗೊಂಡಿದ್ದಾರೆ. ಮಣಗುತ್ತಿ ಗ್ರಾಮದಲ್ಲಿ ಅನಧಿಕೃತವಾಗಿ ಶಿವಾಜಿ ಮೂರ್ತಿ ಸ್ಥಳಾಂತರ ಮಾಡಿ, ತೆರವುಗೊಳಿಸಿದ ಹಿನ್ನೆಲೆ ಗ್ರಾಮದಲ್ಲಿ …

Read More »

ಘಟಪ್ರಭಾ-ಮಣಗುತ್ತಿ ವಿವಾದ ಸೌಹಾರ್ದತೆ ಕಾಪಾಡುವಂತೆ ಪೋಲಿಸ್ ಕಮೀಶನರ್ ಗೆ ಕನ್ನಡ ಸೇನೆ ವತಿಯಿಂದ ಮನವಿ

ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮತ್ತು ಸ್ಥಳಾಂತರ ಪ್ರಕರಣವನ್ನು ಶಿವಸೇನೆ ಮತ್ತು ಹೊರಗಿನಿಂದ ಬಂದ ಇತರೆ ಸಂಘಟನೆಗಳು ವಿವಾದ ಸೃಷ್ಟಿ ಮಾಡಿ ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳನ್ನು ಕೂಡಲೇ ಅವರನ್ನು ಬಂದಿಸಬೇಕು. ಅದರಂತೆ ಅಲ್ಲಿಯ ಜನರಿಗೆ ಸೌಹಾರ್ದತೆಯಿಂದ ಬಾಳಲು ಅನುಮಾಡಿ ಕೊಡಬೇಕು ಎಂದು ಕನ್ನಡ ಸೇನೆ ಮತ್ತು ಕರವೇ ಸಂಘಟನೆ ವತಿಯಿಂದ ಪೋಲಿಸ್ ಕಮೀಶನರ್ ಮನವಿ ಸಲ್ಲಿಸಲಾಯಿತು. ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ …

Read More »

ಮರಾಠ ಹಾಗೂ ಕನ್ನಡಿಗರ ನಡುವೆ ಭಾಷಾ ಧ್ವೇಷ ಮೂಡಿಸಲು ಶಿವ ಸೇನೆ ಪುಂಡರು ಯತ್ನ

ಹುಕ್ಕೇರಿ :  ತಾಲ್ಲೂಕಿನಲ್ಲಿ ಮನಗುತ್ತಿಯಲ್ಲಿ ಸ್ಥಾಪಿಸಿದ್ದ ಶಿವಾಜಿ ಮೂರ್ತಿ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಶಿವ ಸೇನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ದೊಣ್ಣೆಗಳಿಂದ ಬಡಿದಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಮನಗುತ್ತಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಸಮೀಪ ಸ್ಥಾಪಿಸಿರುವ ಶಿವಾಜಿ ಮೂರ್ತಿಯೂ ಗ್ರಾಮ ದೇವತೆ ಜಾತ್ರೆಗೆ ಸಮಸ್ಯೆಯಾಗುತ್ತದೆ ಎಂದು ಗ್ರಾಮದ ಹಿರಿಯರು, ಮುಖಂಡರು ಒಮ್ಮತದಿಂದ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಮ್ಮತಿಸಿರುತ್ತಾರೆ. ಆದರೆ ಇದನ್ನೇ ಮಹಾರಾಷ್ಟ್ರ ಶಿವ ಸೇನೆ ಕಾರ್ಯಕರ್ತರು ಮೂರ್ತಿ ಸ್ಥಳಾಂತರಕ್ಕೆ ವಿರೋಧ …

Read More »

ಪ್ರವಾಹದೊಂದಿಗೆ ಬಂದ ಬೃಹತ್ ಮೀನು; ಅಚ್ಚರಿಗೊಂಡ ಬೆಳಗಾವಿ ಜನ

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ಪರಿಣಾಮ ಭೂಮಿ ಮೇಲೆ ಇರುವ ಪ್ರಾಣಿಗಳಿಗೆ ಮಾತ್ರ ಸಂಕಷ್ಟಕ್ಕೆ ಒಳಗಾಗಿಲ್ಲ, ಜಲಚರ ಜೀವಿಗಳೂ ಆಘಾತಕ್ಕೆ ಒಳಗಾಗಿವೆ. ಹುಕ್ಕೇರಿ ತಾಲೂಕಿನ ಬಸಾಪೂರ ಬಳಿ ಮಾರ್ಕಂಡಯ್ಯ ನದಿ ಪ್ರವಾಹದ ಜೊತೆ ದೊಡ್ಡದಾದ ಮೀನು ಒಂದು ಈಜಿಕೊಂಡು ಬಂದಿದೆ. ಸ್ಧಳೀಯರು ಈ ಮೀನಿನ ಫೋಟೋವನ್ನು ಮೊಬೈಲ್​ನಲ್ಲಿ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಹಾಕಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗಿದೆ.

Read More »

ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕೊರೊನಾ ವಾರಿಯರ್ಸ್ ಶನಿವಾರ ಸನ್ಮಾನ

ಹುಕ್ಕೇರಿ:  ತಾಲ್ಲೂಕಿನ ಬಸಾಪೂರ ಆರೋಗ್ಯ ಕೇಂದ್ರದಲ್ಲಿ  ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕೊರೊನಾ ವಾರಿಯರ್ಸ್ ಶನಿವಾರ ಸನ್ಮಾನ ಮಾಡಲಾಯಿತು. ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ಹಗಲಿರುಳ ಶ್ರಮ ಪಡುತ್ತಿರುವ  ಅಂಗನವಾಡಿ ಆಶಾ  ಕಾರ್ಯಕರ್ತರು, ಆರೋಗ್ಯ ಇಲಾಖೆ ಅಧಿಕಾರಿಗಳು , ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಕರಗುಪ್ಪಿ ಬಸಾಪೂರ ತಾಲ್ಲೂಕು ಪಂಚಾಯಿತಿ ಸದಸ್ಯ  ಸೋಮನಗೌಡ ಪಾಟೀಲ …

Read More »