Breaking News
Home / ಜಿಲ್ಲೆ / ಬೆಳಗಾವಿ / ಹುಕ್ಕೇರಿ (page 6)

ಹುಕ್ಕೇರಿ

ಪಟ್ಟಣದ ಹಿರಿಯರಾದ ಶಿವಪುತ್ರಪ್ಪ ಶಂಕ್ರಪ್ಪ ಶಿರಕೋಳಿಯವರು ಕೊರೊನಾ ಸೊಂಕನ್ನು ತಡೆಯುವ ನಿಟ್ಟಿ‌ನಲ್ಲಿ ಹಗಲಿರುಳೆನ್ನದೇ

ಸಂಕೇಶ್ವರ ಪಟ್ಟಣದ ಹಿರಿಯರಾದ ಶಿವಪುತ್ರಪ್ಪ ಶಂಕ್ರಪ್ಪ ಶಿರಕೋಳಿಯವರು ಕೊರೊನಾ ಸೊಂಕನ್ನು ತಡೆಯುವ ನಿಟ್ಟಿ‌ನಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಸಂಕೇಶ್ವರ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಪಿಪಿ ಕೀಟ್’ನ್ನು ವಿತರಿಸಿ, ಪೋಲಿಸ್ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗೋಕಾಕ ಡಿವೈಎಸ್ಪಿ ಶ್ರೀ ಡಿ.ಟಿ.ಪ್ರಭು, ಹುಕ್ಕೇರಿ ಸಿಪಿಆಯ್ ಗುರುರಾಜ ಕಲ್ಯಾಣ ಶೆಟ್ಟಿ, ಪಿಎಸ್ಐ ಗಣಪತಿ ಕೊಗನೊಳಿ, ಸಿಬ್ಬಂದಿಗಳಾದ ಬಿ.ಕೆ.ನಾಗನೂರಿ, ಬಿ.ಎಸ್.ಕಪರಟ್ಟಿ, ಎಸ್.ಆರ್.ರಾಜಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More »

ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ.- ಮಾಜಿ ಸಂಸದ ರಮೇಶ ಕತ್ತಿ

ಬೆಳಗಾವಿ -: ಕೊರೋನ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನರನ್ನು ರಕ್ಷಿಸಲು ಸರಕಾರಕ್ಕೆ ಎಲ್ಲರ ಸಹಾಯ ಸಹಕಾರ ಅವಶ್ಯವಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನ ರೋಗ ಹೊಡೆದೋಡಿಸಲು ಸರಕಾರಗಳಿಗೆ ನೆರವು …

Read More »

129 ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ಬಾಗೇವಾಡಿ ಗ್ರಾಮಸ್ಥರು..

  ಹುಕ್ಕೇರಿ: ತಾಲ್ಲೂಕಿನ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಯ ಭವನದಲ್ಲಿ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಹಾಗೂ ದ್ವಜಾರೋಹಣ ಮಾಡುವ ಮುಂಕಾತರ್ 129 ನೇ ಅಂಬೇಡ್ಕರ್ ಜಯಂತಿಯನ್ನು ಬಾಗೇವಾಡಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು. ಬಳಿಕ ಗ್ರಾಮದಲ್ಲಿ ಸಮೂದಾಯ ಭವನದಲ್ಲಿ ಅಂಬೇಡ್ಕರ್ ಜಯಂತಿ ಬಗ್ಗೆ ಮಾದ್ಯಮದ ಜೊತೆಗೆ ಮಾತನಾಡಿದ ಮಾಜಿ ಜಿಲ್ಲಾ.ಪಂಚಾಯತಿ ಸದಸ್ಯ ಶಿವಾಜಿ ಸಂಜೀವಗೋಳ ಅವರು ಸರಳ ರೀತಿಯಲ್ಲಿ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನದಲ್ಲಿ ದೀಪ ಬೆಳಗಿಸಿ, …

Read More »

ದೆಹಲಿ ಸಮಾವೇಶಕ್ಕೆ ಹೋಗಿದ್ದವರ ಶೋಧಕ್ಕೆ ಹುಕ್ಕೇರಿ ಪೊಲೀಸರ ಹೊಸ ಐಡಿಯಾ

ಬೆಳಗಾವಿ(ಚಿಕ್ಕೋಡಿ): ದೇಶವನ್ನೇ ತಲ್ಲಣಗೊಳಿಸಿರುವ ಕೊರೊನಾ ಶಂಕಿತರಾದ ದೆಹಲಿ ನಿಜಾಮುದ್ದೀನ್ ಸಮಾವೇಶದ ನಂಟು ಇದ್ದವರ ಪತ್ತೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಪೊಲೀಸರು ಹೊಸ ಐಡಿಯಾವೊಂದನ್ನ ಮಾಡಿದ್ದಾರೆ. ಪೊಲೀಸರು ಗಲ್ಲಿ ಗಲ್ಲಿಗಳಿಗೆ ಹೋಗಿ ಯಾರಾದರೂ ದೆಹಲಿಯ ನಿಜಾಮುದ್ದೀನ್ ಸಮಾವೇಶಕ್ಕೆ ಜಮಾತ್‍ಗೆ ಹೋಗಿ ಬಂದಿದ್ದರೆ ದಯವಿಟ್ಟು ಬಂದು ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ ಪಟ್ಟಣದ ತಬ್ಲಿಗ ಸಮಾಜದ ಎರಿಯಾಗಳಿಗೆ ಹೋಗಿ ಪೊಲೀಸರು ಧ್ವನಿ ವರ್ಧಕಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ …

Read More »

ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತ

ಹುಕ್ಕೇರಿ ; ದೆಹಲಿಯ ನಿಜಾಮುದ್ದೀನ್ ತಬ್ಲೀಘ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡ ಓರ್ವ ಸೇರಿದಂತೆ ಇದೇ ವೇಳೆ ಅಂತಾರಾಜ್ಯಗಳಿಗೆ ಭೇಟಿ ನೀಡಿದ ತಾಲೂಕಿನ ಐವರಿಗೆ ಕಿಲ್ಲರ್ ಕೊರೋನಾ ವೈರಸ್ ಸೋಂಕು ತಗಲಿರುವ ಶಂಕೆಯ ಮೇಲೆ ನಿಗಾ ವಹಿಸಲಾಗಿದೆ. ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಆತನನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಜತೆಗೆ ಇದೇ ಸಮಯದಲ್ಲಿ …

Read More »

ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಸ್ವಾಮಿಜಿ ರಸ್ತೆಗಿಳಿಯದಂತೆ ಜಾಗೃತಿ ಕಾರ್ಯ ಮಾಡಿದ್ದಾರೆ.

ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಆದೇಶ ಹೇರಲಾಗಿದೆ. ಲಾಕ್‍ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿಯುತ್ತಿರುವ ಜನರಿಗೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಪೋಲಿಸರ ಲಾಠಿ ಏಟಿಗೂ ಲಾಕ್ ಡೌನ್ ಪಾಲಿಸದ ಜನರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಸ್ವಾಮಿಜಿ ರಸ್ತೆಗಿಳಿಯದಂತೆ ಜಾಗೃತಿ ಕಾರ್ಯ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮಿಜಿ …

Read More »

ಬುಲೆರೋ ವಾಹನ  ಹರಿದು ಮೂವರು ಪಾದಚಾರಿಗಳು  ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ: ಬುಲೆರೋ ವಾಹನ  ಹರಿದು ಮೂವರು ಪಾದಚಾರಿಗಳು  ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ. ಹುಕ್ಕೇರಿ  ತಾಲೂಕಿನ ಗುಡಸ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.  ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿದರೆ, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿ ರಭಸಕ್ಕೆ ಒಬ್ಬ ಮಹಿಳೆ 200 ಮೀಟರ್ ಗೂ ಹೆಚ್ಚು ಕಾರು ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು  ತಿಳಿಸಿದ್ದಾರೆ. ಮೃತರ ಹೆಸರು ಇನ್ನು ತಿಳಿದು ಬಂದಿಲ್ಲ. ಸುದ್ದಿ ತಿಳಿದು  …

Read More »

ಸ್ಥಳೀಯ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮೂಡಲಗಿ ಸ್ಥಳೀಯ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಶುಕ್ರವಾರ ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಶ್ರೀ ಬೀಮಶಿ ಮಗದುಮ್ಮ, ರಮೇಶ ಸಣ್ಣಕ್ಕಿ, ಬಗರ್ ಹುಕ್ಕುಂ ಸಾ ಸ ಸ ಮೂಡಲಗಿ ಪಶುಸಾಕಾಣಿಕೆಯಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಪಶುಪಾಲಕ ಪ್ರಶಸ್ತಿ ವಿಜೇತ ಮಾರುತಿ ಮರಡಿ ಇವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ …

Read More »

ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ: ಶಾಸಕ ಸತೀಶ ಜಾರಕಿಹೊಳಿ

ಯಮಕನಮರಡಿ: ಪ್ರತಿಯೊಂದು ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮೊದಲ ಆದ್ಯತೆ ನೀಡುತ್ತಿದೆ.‌ ಇದರ ಸದುಪಯೋಗ ಪಡೆಸಿಕೊಂಡು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು‌. ಸುತಗಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದೆ ಶಿಕ್ಷಣ ಕೆಲವರ ಸ್ವತ್ತಾಗಿತ್ತು‌. ಆದ್ರೆ ಈಗ ಹಾಗಿಲ್ಲ‌. ಪ್ರತಿಯೊಂದು ಸರ್ಕಾರಗಳು ಮನೆ ಬಾಗಿಲಿಗೆ ಬಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದರ …

Read More »

ಬೆಳಗಾವಿಯಲ್ಲಿ 23.88 ಲಕ್ಷ ರೂ. ನಕಲಿ ನೋಟು ವಶ,

    ಬೆಳಗಾವಿ, ಫೆ.22- ನಕಲಿ ನೋಟು ಸರಬರಾಜು ಮಾಡುತ್ತಿದ್ದ ಐವರು ಅಂತಾರಾಜ್ಯ ಕಳ್ಳರನ್ನು ಬೆಳಗಾವಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ಪ್ರತ್ಯೇಕ ವಾಹನಗಳಲ್ಲಿ 23.88 ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ. ಮೌಲ್ಯದ ಅಸಲಿ ನೋಟು ಸಾಗಿಸುವ ಸಂದರ್ಭದಲ್ಲಿ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಂಕೇಶ್ವರ ಠಾಣೆಯ ಪೊಲೀಸರು ಐವರು ಅಂತಾರಾಜ್ಯ ಕಳ್ಳರನ್ನು …

Read More »