Breaking News
Home / new delhi / ಘಟಪ್ರಭಾ-ಮಣಗುತ್ತಿ ವಿವಾದ ಸೌಹಾರ್ದತೆ ಕಾಪಾಡುವಂತೆ ಪೋಲಿಸ್ ಕಮೀಶನರ್ ಗೆ ಕನ್ನಡ ಸೇನೆ ವತಿಯಿಂದ ಮನವಿ

ಘಟಪ್ರಭಾ-ಮಣಗುತ್ತಿ ವಿವಾದ ಸೌಹಾರ್ದತೆ ಕಾಪಾಡುವಂತೆ ಪೋಲಿಸ್ ಕಮೀಶನರ್ ಗೆ ಕನ್ನಡ ಸೇನೆ ವತಿಯಿಂದ ಮನವಿ

Spread the love

ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮತ್ತು ಸ್ಥಳಾಂತರ ಪ್ರಕರಣವನ್ನು ಶಿವಸೇನೆ ಮತ್ತು ಹೊರಗಿನಿಂದ ಬಂದ ಇತರೆ ಸಂಘಟನೆಗಳು ವಿವಾದ ಸೃಷ್ಟಿ ಮಾಡಿ ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳನ್ನು ಕೂಡಲೇ ಅವರನ್ನು ಬಂದಿಸಬೇಕು.

ಅದರಂತೆ ಅಲ್ಲಿಯ ಜನರಿಗೆ ಸೌಹಾರ್ದತೆಯಿಂದ ಬಾಳಲು ಅನುಮಾಡಿ ಕೊಡಬೇಕು ಎಂದು ಕನ್ನಡ ಸೇನೆ ಮತ್ತು ಕರವೇ ಸಂಘಟನೆ ವತಿಯಿಂದ ಪೋಲಿಸ್ ಕಮೀಶನರ್ ಮನವಿ ಸಲ್ಲಿಸಲಾಯಿತು.
ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿ ಸ್ಥಾಪನೆ ವಿವಾದವೇ ಅಲ್ಲ ಆದರೆ ಜಾಗೆಯ ಕೊರತೆಯಿಂದ ಉದ್ಭವ ವಾಗಿರುವ ಸಮಸ್ಯೆ ಇದನ್ನು ದೊಡ್ಡದಾಗಿ ಮಾಡಿ ಕೆಲವು ಸಂಘಟನೆಗಳು ವಿವಾದ ಸೃಷ್ಟಿ ಉಂಟು ಮಾಡಿ ಭಾಷೆ ಸಾಮರಸ್ಯ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ.ಇದನ್ನು ತಡೆದು ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಮತ್ತು ಕರವೇ ಸಂಘಟನೆ ವತಿಯಿಂದ ಬೆಳಗಾವಿ ನಗರ ಪೋಲಿಸ್ ಆಯುಕ್ತ ಡಾ ತ್ಯಾಗರಾಜನ್ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಅದ್ಯಕ್ಷ ರಾಜು ಕೋಲಾ ಮಾತನಾಡಿ ಗ್ರಾಮದ ಧಾರ್ಮಿಕ ಮುಖಂಡರು ಹಾಗೂ ಪಂಚ ಕಮೀಟಿಯವರು ಈಗಾಗಲೇ ಹೇಳಿರುವಾಗ ಅದು ಸ್ಥಳೀಯ ಸಮಸ್ಯೆಇರುವುದರಿಂದ ಅಲ್ಲೀನ ಜನರು ಬಗೆಹರಿಸಿಕೊಳ್ಳುತ್ತಾರೆ ಇದಕ್ಕೆ ಜಾತಿ ಧರ್ಮ ಬಾಷೆಯ ಹೆಸರಿನಲ್ಲಿ ರಾಜಕಾರಣ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.ಹೊರಗಿನಿಂದ ಬಂದ ಜನರು ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಅಂತವರ ಮೇಲೆ ತಕ್ಷಣ ಕ್ರಮ ಕೈಗೊಂಡು ಶಾಂತಿ ಸೌಹಾರ್ದತೆಯಿಂದ ಬದುಕುತ್ತಿರುವ ಅಲ್ಲಿಯ ಜನರಿಗೆ ನೆಮ್ಮದಿಯಿಂದ ಇರಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪೋಲಿಸ್ ಆಯುಕ್ತರ ಪರವಾಗಿ ಡಿಸಿಪಿ ಸೀಮಾ ಲಾಟ್ಕರ್ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಸೇನೆಯ ಅಕ್ಬರ ಸಡೇಕರ್.ಅನ್ನಪೂರ್ಣ ಅಸೂರಕರ್.ಶೋಭಾ ನವಲಗುಂದ. ಕಮಲಾಕರ ಬಾಳೇಕುಂದ್ರಿ.ರಮೇಶ್ ಕೋಲಾ.ಪ್ರಬುದಾಸ್ ಹಾಜರಿದ್ದರು.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಹೊರಬಂದು ಮತ ಹಾಕಿ : ನಿರ್ಮಲಾ ಸೀತಾರಾಮನ್‌ ಮನವಿ

Spread the love ಬೆಂಗಳೂರು,ಏ.26- ಪ್ಲೀಸ್‌ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ