Breaking News
Home / ಹುಬ್ಬಳ್ಳಿ (page 87)

ಹುಬ್ಬಳ್ಳಿ

ಹುಬ್ಬಳ್ಳಿ:ಹೋಂ ಕ್ವಾರಂಟೈನ್‍ಗೆ ರಾಜ್ಯದ ಐವರು ಮಾಧ್ಯಮ ಪ್ರತಿನಿಧಿಗಳು

ಹುಬ್ಬಳ್ಳಿ: ಐವರು ಮಾಧ್ಯಮ ಪ್ರತಿನಿಧಿಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ನಗರದ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಐವರು ಮಾಧ್ಯಮ ಪ್ರತಿನಿಧಿಗಳು ತಮ್ಮಲ್ಲಿ ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಇವರು ಏಪ್ರಿಲ್ 9ರಂದು ಶಬ್ ಎ ಬರಾತ್ ಆಚರಣೆಯ ಕುರಿತು ವರದಿಗಾರಿಕೆಗಾಗಿ ಹುಬ್ಬಳ್ಳಿಯ ತೊರವಿಹಕ್ಕಲದ ಖಬರಸ್ತಾನಕ್ಕೆ ತೆರಳಿದ್ದರು. ಈ ಸ್ಮಶಾನದ ಕಾವಲುಗಾರನಿಗೆ (ಪಿ- 363) ಕೊರೊನಾ …

Read More »

ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

ಧಾರವಾಡ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ ಇಬ್ಬರೂ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಇನ್ನೂ ಭಯಾನಕ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಗ್ರಾಮದ ಇನ್ನೂ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಭಾನುವಾರವಷ್ಟೇ ಜಿಲ್ಲೆಯ ಗಂಬ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ ಕುಡಿದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಗ್ರಾಮದ ಅಂದಾಜು 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಪರಿಶೀಲನೆಗಾಗಿ ಭಾನುವಾರ ರಾತ್ರಿ …

Read More »

ಹುಬ್ಬಳ್ಳಿಯ ಮುಲ್ಲಾ ಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ……..

ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿಯ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದು ಯೋಗ ಮಾಡುತ್ತಿರುವ ಬಾಲೆಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರು ವರ್ಷದ ಇಫ್ರಾ ಮುಲ್ಲಾ‌ ತನ್ನ ಮನೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಳು. ಟಿವಿ ನೋಡುತ್ತಾ ಯೋಗ ಕಲಿಯುತ್ತಿದ್ದಳು. ಇದನ್ನು ಇಫ್ರಾ ತಾಯಿ ವಿಡಿಯೋ ಚಿತ್ರೀಕರಿಸಿದ್ದರು. ನಂತರ ಇಫ್ರಾ  ತಂದೆ ಇಮ್ತಿಯಾಜ್‌ ಅಹ್ಮದ್ ಮುಲ್ಲಾಗೆ ಈ ವಿಡಿಯೋ ಕಳಿಸಿದ್ದರು. ರೈಲ್ವೇ ಉದ್ಯೋಗಿಯಾಗಿರುವ ಇಮ್ತಿಯಾಜ್‌ಅಹ್ಮದ್ ಮುಲ್ಲಾ ಮಗಳ ಯೋಗಾಭ್ಯಾಸದ ವಿಡಿಯೋ …

Read More »

ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವನೆ- ಬೆಳಗ್ಗೆ ತಮ್ಮ, ಈಗ ಅಕ್ಕ ಸಾವು

ಹುಬ್ಬಳ್ಳಿ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.   ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಗ್ಗೆ ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಸಾವನ್ನಪ್ಪಿದ್ದರೆ, ಇದೀಗ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದಾಳೆ. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಅಲ್ಲದೆ …

Read More »

ಹುಬ್ಬಳ್ಳಿ:ಸಂಚಾರಿ ಫೀವರ್ ಕ್ಲೀನಿಕ್ ಕಾರ್ಯಾರಂಭ- ಕ್ವಾರಂಟೈನ್ ಪ್ರದೇಶಗಳಲ್ಲಿ ತಪಾಸಣೆ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫೀವರ್ ಕ್ಲೀನಿಕ್ ಆಗಿ ಮಾರ್ಪಡಿಸಲಾಗಿದೆ. ಕೊರೊನಾ ಸೋಂಕು ಕಂಡುಬಂದ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರೂ ಆಗಿರುವ ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು. ನಗರದ ಬಿಆರ್ ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಂ ಹಾಗೂ …

Read More »

ಹುಬ್ಬಳ್ಳಿ ಮಂದಿಗೆ ಶುರುವಾಯ್ತು ಹೊಸ ಆತಂಕ..!

ಹುಬ್ಬಳ್ಳಿ : ಹುಬ್ಬಳ್ಳಿಯ ಮಂದಿಗೆ ಇಂದು ಆತಂಕ ಮತ್ತಷ್ಟು ಜಾಸ್ತಿಯಾಗಿದೆ. ಕಾರಣ ಹುಬ್ಬಳ್ಳಿಯ ವಿವಿಧ ಕಡೆ ರೋಗಿ ನಂಬರ್ 236 ಆಹಾರ ಧಾನ್ಯ ಕಿಟ್ ಹಂಚಿದ್ದ…! ಆತನಿಂದ ಸ್ಮಶಾನ ಕಾವಲುಗಾರನಾಗಿರೊನಿಗೋ ಸೋಂಕು ತಗುಲಿ ಇದೀಗ ರೋಗಿ ನಂಬರ್ 363. ಎಂದು ಗುರುತಿಸಲಾಗಿದೆ. ಆತನೊಂದಿಗೆ ಆಹಾರ ಧಾನ್ಯ ಹಂಚಿದ ಹಿನ್ನಲೆ ಇತನಿಗೂ ಕೊರೊನಾ ವಕ್ಕರಿಸಿದೆ. ಮಾಚ್9 27 ರಂದು ಹುಬ್ಬಳ್ಳಿಯ ಡಾಕಪ್ಪ ವೃತ್ತದಿಂದ ಕಾಳಮ್ಮನ ಅಗಸಿಯವರೆಗೆ ಆಹಾರ ದಾನ್ಯ ಹಂಚಿದ್ರು ಪುಣ್ಯಾತ್ಮರು…! …

Read More »

ಏ. 20ರ ನಂತರ ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದ್ದು ಸರಿಯಲ್ಲ: ಹೊರಟ್ಟಿ

ಹುಬ್ಬಳ್ಳಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸವಾರರಿಗೆ ರಿಲಾಕ್ಸ್ ನೀಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯತನಕ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಿದ್ದು, ನನಗೆ ಸರಿ ಅನ್ನಿಸುತ್ತಿಲ್ಲ ಎಂದರು. ಇಲ್ಲಿಯವರೆಗೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಇಲ್ಲ. ಆದರೆ ದ್ವಿಚಕ್ರ ವಾಹನ ಸವಾರರಿಗೆ ರಿಲ್ಯಾಕ್ಸ್ …

Read More »

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದ ಮುಲ್ಲಾ ಓಣಿಯ ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡ್ತಿದೆ. P-236 ರೋಗಿ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ 63 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರೋಗಿ ನಂಬರ್ P-236ನೇ ವ್ಯಕ್ತಿ ಜೊತೆ ದ್ವಿತೀಯ ಸಂಪರ್ಕ ಹೊಂದಿದವರಿಗೆ ಸೋಂಕು ತಗುಲಿದೆ. ಪ್ರಯೋಗಾಲಯದಿಂದ ಬಂದ ವರದಿಯಲ್ಲಿ ಸೋಂಕು ತಗುಲಿರೋದು ಖಚಿತವಾಗಿದೆ. ಜಿಲ್ಲೆಯಲ್ಲಿ …

Read More »

ಸತ್ತ ಅಪ್ಪನನ್ನೇ ಮತ್ತೆ ಸಾಯಿಸಿದ ಹುಬ್ಬಳ್ಳಿಯ ಕೈ ಮುಖಂಡ,……….

ಹುಬ್ಬಳ್ಳಿ: ಕೊರೊನಾದಿಂದ ಮದುವೆ, ಸಭೆ-ಸಮಾರಂಭ ಎಲ್ಲ ಕ್ಯಾನ್ಸಲ್ ಆಗಿದೆ. ಸಂಬಂಧಿಕರು ಸತ್ತರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹೀಗಾಗಿ ಕೆಲವೆಡೆ ಮಾನವೀಯ ದೃಷ್ಟಿಯಿಂದ ಪೊಲೀಸರು ಬಿಟ್ಟುಕಳಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡನೊಬ್ಬ ಐದು ವರ್ಷದ ಹಿಂದೆಯೇ ಸತ್ತ ತಂದೆಯನ್ನೇ ಮತ್ತೊಮ್ಮೆ ಸತ್ತಿರುವುದಾಗಿ ಸುಳ್ಳು ಹೇಳಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತದಿಂದ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಬಯಲಿದೆ ಬಂದಿದೆ. ಹುಬ್ಬಳ್ಳಿಯ ಕೈ ಮುಖಂಡ, ಕರ್ನಾಟಕ ರಕ್ಷಣಾ ದಳದ ರಾಜಾದ್ಯಕ್ಷ ಸೋಮಲಿಂಗ್ ಯಲಿಗಾರ ಜಿಲ್ಲಾಡಳಿತದ ಪಾಸ್ …

Read More »

ಏ.20ರ ನಂತರ ಕೆಲ ಉದ್ಯಮಗಳಿಗೆ ವಿನಾಯಿತಿ:

ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಏಪ್ರಿಲ್ 20ರ ಬಳಿಕ ವಿನಾಯಿತಿ ಕೊಡೋದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಸಾಫ್ಟ್ ವೇರ್ ಮತ್ತು ಐಟಿ ಪಾರ್ಕ್‍ಗಳಲ್ಲಿರುವ ಸ್ಟಾರ್ಟ್ ಅಪ್‍ಗಳಿಗೆ 4 ತಿಂಗಳ  ಬಾಡಿಗೆ ಇಲ್ಲ ಅಂತ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಯಾವುದಕ್ಕೆ ವಿನಾಯಿತಿ? * ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರಿ ಕ್ರೆಡಿಟ್ ಸೊಸೈಟಿಗಳು * ಇತರ ಹಣಕಾಸು ಸಂಸ್ಥೆಗಳಿಗೆ ಕನಿಷ್ಠ …

Read More »