Breaking News
Home / ಹುಬ್ಬಳ್ಳಿ (page 52)

ಹುಬ್ಬಳ್ಳಿ

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಹುಬ್ಬಳ್ಳಿ: ಪರ್ಯಾಯ ಆದಾಯ ಮೂಲವಾಗಿ ಆರಂಭಿಸಿರುವ ಸಾರಿಗೆ ಸಂಸ್ಥೆಯ “ನಮ್ಮ ಕಾರ್ಗೋ’ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಟ್ರ್ರ್ಯಾಕಿಂಗ್‌ ವ್ಯವಸ್ಥೆ ಇರುವುದರಿಂದ ವಿಶ್ವಾಸಾರ್ಹತೆ ಮೂಡಿಸಿದೆ. ಪ್ರತಿ ತಿಂಗಳು ಆದಾಯದ ಪ್ರಮಾಣ ಹೆಚ್ಚುತ್ತಿದ್ದರೂ ಸದ್ಯ ಪ್ರಮುಖ ಸ್ಥಳಗಳಿಗೆ ಮಾತ್ರ ಈ ಸೌಲಭ್ಯವಿದೆ. ನಾಲ್ಕು ಸಂಸ್ಥೆಗಳ ಅತೀ ದೊಡ್ಡ ಸಾರಿಗೆ ಜಾಲಕ್ಕೆ ಹೋಲಿಸಿದರೆ ನಿರೀಕ್ಷಿತ ಆದಾಯವೇನಲ್ಲ. ಕೋವಿಡ್‌ ಲಾಕ್‌ಡೌನ್‌, ನೌಕರರ ಮುಷ್ಕರ, ಡೀಸೆಲ್‌ ದರ, ಬಿಡಿ ಭಾಗಗಳ ಏರಿಕೆ, ಸರ್ಕಾರಗಳಿಂದ ಬಾರದ ಬಾಕಿ …

Read More »

ನನಗೆ ರಾಜ್ಯ ರಾಜಕಾರಣವಷ್ಟೇ ಸಾಕು: ಸಿದ್ದರಾಮಯ್ಯ

ಹುಬ್ಬಳ್ಳಿ: ರಾಹುಲ್‌ ಗಾಂಧಿಯವರೇ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಹಿಂದೆ ಹಲವು ಬಾರಿ ಹೇಳಿದ್ದೇನೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ. ನನಗೆ ರಾಜ್ಯ ರಾಜಕಾರಣವಷ್ಟೇ ಸಾಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೇಂದ್ರ ರಾಜಕಾರಣಕ್ಕೆ ಬರುವಂತೆ ನನ್ನನ್ನು ಯಾರೂ ಕರೆದಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ಇದರ ಬಗ್ಗೆ ಚರ್ಚೆಯೂ ಆಗಿಲ್ಲ. ನನಗೀಗ 74 ವರ್ಷ ವಯಸ್ಸು. ಇನ್ನು ಐದು …

Read More »

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕರಾಗಿದ್ದ ಶರಣ ಬಸವ ಬಿಸರಳ್ಳಿ(94) ಇಂದು ಹುಬ್ಬಳ್ಳಿಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕರಾಗಿದ್ದ ಶರಣ ಬಸವ ಬಿಸರಳ್ಳಿ(94) ಇಂದು ಹುಬ್ಬಳ್ಳಿಯಲ್ಲಿ ಲಿಂಗೈಕ್ಯರಾಗಿದ್ದಾರೆ.   ಮೃತರು ಐವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶರಣ ಬಸವ ಅವರು ತಮ್ಮ ಇಳಿವಯಸ್ಸಿನಲ್ಲೂ ನಿರಂತರ ಅಧ್ಯಯನಶೀಲರಾಗಿದ್ದರು. ಹಂಪಿ ಕನ್ನಡ ವಿವಿಯಿಂದ ಪಿಹೆಚ್​ಡಿ ಅಧ್ಯಯನ ಮಾಡುತ್ತಿದ್ದರು. ಶ್ರಮ ಜೀವಿಗಳಾಗಿದ್ದ ಅವರು ಟ್ರಸ್ಟ್ ರಚಿಸಿ ಅದರ ಮೂಲಕ ನಾಡಿನಲ್ಲಿ ವಿನೂತನ ಸೇವೆ ಮಾಡುತ್ತಿದ್ದ ವ್ಯಕ್ತಿಗಳನ್ನು ಗುರುತಿಸಿ …

Read More »

ಹುಬ್ಬಳ್ಳಿ: ಭೂಸ್ವಾಧೀನ ಕೈಬಿಡಲು ತೀರ್ಮಾನ

ಹುಬ್ಬಳ್ಳಿ: ನಿವೇಶನಕ್ಕಾಗಿ ಧಾರವಾಡ ಸಮೀಪದ ಸತ್ತೂರಿನಲ್ಲಿ 227 ಎಕರೆ ಜಾಗ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆಗೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರಿಂದ ಹುಬ್ಬಳ್ಳಿ-ಧಾರವಾಡ ಪ್ರಾಧಿಕಾರ ಈ ಯೋಜನೆ ಕೈಬಿಟ್ಟಿದೆ. ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಸರ್ವಸಮ್ಮತದಿಂದ ಈ ತೀರ್ಮಾನಕ್ಕೆ ಬರಲಾಯಿತು. ಸತ್ತೂರಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಹುಡಾ 2016ರಿಂದಲೇ ರೈತರ ಜೊತೆ ನಿರಂತರ ಮಾತುಕತೆಯಲ್ಲಿ ತೊಡಗಿತ್ತು. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಾಗ …

Read More »

ಹುಬ್ಬಳ್ಳಿ: ನವರಾತ್ರಿ ಸಡಗರ, ಭಕ್ತರ ಸಂಭ್ರಮ

ಹುಬ್ಬಳ್ಳಿ: ನವರಾತ್ರಿಯ ಮೊದಲ ದಿನವಾದ ಗುರುವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯರ ದರ್ಶನ ಪಡೆದರು. ಹೊಸೂರಿನ ದುರ್ಗಾದೇವಿ ದೇವಸ್ಥಾನ, ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನ, ಬನಶಂಕರಿ ಬಡಾವಣೆಯ ಬನಶಂಕರಿದೇವಿ ದೇವಸ್ಥಾನ ಸೇರಿದಂತೆ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉಣಕಲ್‌ ಕೆರೆ ದಂಡೆಯ ಸಮೀಪ ಇರುವ ವೀರಭದ್ರೇಶ್ವರ ಕಾಲೊನಿಯ ಶಾಕ್ತ ಪೀಠದ ತುಳಜಾ ಭವಾನಿ, ಭವಾನಿಶಂಕರ ದೇವಸ್ಥಾನದಲ್ಲಿ ಗುರುವಾರ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ …

Read More »

ಬೆಲ್ಟಿನಲ್ಲಿ 804 ಗ್ರಾಂ ಚಿನ್ನ ಅಡಗಿಸಿಕೊಂಡು ಬಂದ ಭೂಪನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು!

ಹುಬ್ಬಳ್ಳಿ: ದೇಹದ ಯಾವ್ಯಾವುದೋ ಭಾಗದಲ್ಲಿ ಅಡಗಿಸಿಟ್ಟುಕೊಂಡು ವಿದೇಶಗಳಿಂದ ವಿಮಾನದ ಮೂಲಕ ಚಿನ್ನ ಕದ್ದು ತರೋದನ್ನು ನೋಡಿದ್ದೇವೆ. ಹುಬ್ಬಳ್ಳಿಯಲ್ಲೊಬ್ಬ ಬೆಲ್ಟ್ ನಲ್ಲಿ ಚಿನ್ನದ ಗಟ್ಟಿಗಳನ್ನು (Gold Smuggling) ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹತ್ತಿರ ಹತ್ತಿರ ಒಂದು ಕೆ.ಜಿ.ಯಷ್ಟು ತೂಕದ ಎರಡು ಚಿನ್ನದ ಗಟ್ಟಿಗಳನ್ನು ಬೆಲ್ಟ್ ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸೋ ವೇಳೆ ಪೊಲೀಸರ (Hubballi Police) ಬಲೆಗೆ ಬಿದ್ದಿದ್ದಾನೆ. ಗಾಂಜಾ ಮಾರಾಟ ಪ್ರಕರಣದಿಂದ ತೀವ್ರ ಚರ್ಚೆಗೆ …

Read More »

ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು : ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಹಿಂದುಳಿದ ವರ್ಗಗಳ ನಾಯಕರೆಂದು ಕರೆಯಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಿದ್ದವಾಗಿದ್ದ ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಹಿಂದೇಟು ಹಾಕಿ ಇದೀಗ ಬಿಜೆಪಿ ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದು, ತಮ್ಮ ಅವಧಿಯಲ್ಲಿ ಯಾಕೆ ಬಿಡುಗಡೆ ಮಾಡಲಿಲ್ಲ. ಇದೀಗ ಬಿಡುಗಡೆ ಮಾಡಬೇಕೋ ಬೇಡವೋ ಎನ್ನುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …

Read More »

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ಜಗದೀಶ ಶೆಟ್ಟರ್

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪ್ರಗತಿಯನ್ನು ಶಾಸಕ ಜಗದೀಶ ಶೆಟ್ಟರ್ ಅವರು, ಮಂಗಳವಾರ ವೀಕ್ಷಿಸಿದರು‌. ಉಣಕಲ್ ಕೆರೆ, ಮಾರುಕಟ್ಟೆ ಹಾಗೂ ತೋಳನಕೆರೆಗೆ ಭೇಟಿ ನೀಡಿದ ಶೆಟ್ಟರ್, ಕಾಮಗಾರಿ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಬಿಜೆಪಿ ಮುಖಂಡ ಮಹೇಶ ಬುರ್ಲಿ ಹಾಗೂ ಇತರರು ಇದ್ದರು.

Read More »

ಬಡ್ಡಿ ಹಣ ಕೊಡಲಿಲ್ಲ ಎಂದು ಆಟೋ ಚಾಲಕನ ಕೊಲೆ

ಹುಬ್ಬಳ್ಳಿ: ಸಾಲ ನೀಡಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ನೀಡಿಲ್ಲ ಅಂತ ಆಟೋ ಚಾಲಕನನ್ನು ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಲೋಕೇಶ್ ಹತ್ಯೆಯಾದ ಆಟೋ ಚಾಲಕರಾಗಿದ್ದು, ಕೆಲ ದಿನಗಳ ಹಿಂದೆ ಲೋಕೇಶ್​​, ಮಾರುತಿ ಎನ್ನುವವನಿಂದ 5 ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ ಸಾಲದ ಬಡ್ಡಿ ಜೊತೆಗೆ ಆಟೋದ ನಿತ್ಯ 200 ರೂಪಾಯಿ ಕೊಡುವಂತೆ ಮಾರುತಿ ಪಿಡುಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆ ಮಾರುತಿ …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಹೆಸ್ಕಾಂನಿಂದ 200 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುಬ್ಬಳ್ಳಿ ವಿದ್ಯುತ್​ ಸರಬರಾಜು ನಿಗಮವು 2021ನೇ ಸಾಲಿನಲ್ಲಿ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹೆಸ್ಕಾಂ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅಕ್ಟೋಬರ್​ 20 ಕೊನೆಯ ದಿನಾಂಕವಾಗಿದೆ.‌ ಒಟ್ಟು 200 ಹುದ್ದೆಗಳಿಗೆ ಹೆಸ್ಕಾಂ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಅಭ್ಯರ್ಥಿಗಳು hescom.co.in ಹಾಗೂ mhrdnats.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸುವವರು ಇಂಜಿನಿಯರಿಂಗ್​, ಬಿಇ ಅಥವಾ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. 2019, 2020 ಹಾಗೂ 2021ನೇ ಸಾಲಿನಲ್ಲಿ …

Read More »