Breaking News
Home / ರಾಷ್ಟ್ರೀಯ (page 470)

ರಾಷ್ಟ್ರೀಯ

ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

ರಾಮನಗರ: ಮಾಗಡಿಯ (Magadi) ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವೀಡಿಯೋ ಕಾಲ್ (Video Call) ಮಾಡಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಈಗಾಗಲೇ ವೈರಲ್ (Video Viral) ಆಗಿದ್ದು, ಈ ವೀಡಿಯೋ ಆಧರಿಸಿ ಅನುಮಾನಿತ ಮೂವರು ಮಹಿಳೆಯರನ್ನು (Woman) ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಂಡೆಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ಇದೀಗ …

Read More »

ಇಪ್ಪತ್ತರವರಲ್ಲಿ ಮುಂದಿನ ಐವತ್ತರ ಕನಸು

ಬೆಂಗಳೂರು: ಭವಿಷ್ಯದ ನಾಯಕತ್ವ ಸೃಷ್ಟಿಗಾಗಿ ಬೃಹತ್‌ ಪ್ರಮಾಣದಲ್ಲಿ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಂದಾಗಿದೆ. ಇಪ್ಪತ್ತರಿಂದ ಮೂವತ್ತರೊಳಗಿನ ಎಲ್ಲ ಜಾತಿ ಸಮುದಾಯದ ಯುವಜನರನ್ನು ಬೂತ್‌ ಮಟ್ಟ ದಲ್ಲಿ ಪಕ್ಷಕ್ಕೆ ಸೆಳೆದು ಮುಂದಿನ 50 ವರ್ಷದ ರಾಜಕಾರಣಕ್ಕೆ ಅಣಿಗೊಳಿಸುವುದು ಇದರ ಉದ್ದೇಶ.   ಈ ಯುವಜನರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಮುದಾಯ ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅವುಗಳ ಫ‌ಲಾನುಭವಿಗಳ ಅಂಕಿ ಅಂಶಗಳನ್ನು ಮತದಾರರ ಮನೆ ಮನೆಗೆ ತಲುಪಿಸುವ …

Read More »

ಬ್ರಿಟಿಷರ ಮಂಡಿಯೂರಿಸಿದ್ದ ರಾಣಿ ಕಿತ್ತೂರು ಚನ್ನಮ್ಮಾಜಿ

1585 ರಿಂದ 1824ರವರೆಗೆ 12 ರಾಜರ ಆಳ್ವಿಕೆಯನ್ನು ನಂತರ ಸಂಸ್ಥಾನದ ಸಂದಿಗ್ಧತೆಯಲ್ಲಿ ರಾಣಿ ಚನ್ನಮ್ಮಾಜಿಯ ಸೂಕ್ತ ನಾಯಕತ್ವ ಕಿತ್ತೂರು ಸಂಸ್ಥಾನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಸಿತು. ರಾಣಿ ಚನ್ನಮ್ಮಾ ಇವತ್ತಿನ ಬೆಳಗಾವಿ ಜಿಲ್ಲೆಯ ಕಾಕತಿಯ(ಸಾಂಗ್ಲಿ ಸಂಸ್ಥಾನ) ದೂಳಪ್ಪಗೌಢ ದೇಸಾಯಿಯ ಮಗಳಾಗಿ ಜನ್ಮ ತಾಳಿದಳು. ನಂತರ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿಯ ಕೈ ಹಿಡಿದು ಕಿತ್ತೂರಿನ ಸಂಸ್ಥಾನಕ್ಕೆ ರಾಜ ಕಳೆ ತಂದು ಕೊಟ್ಟಳು. 1816ರಲ್ಲಿ ದೊರೆ ಮಲ್ಲಸರ್ಜ ದೇಸಾಯಿ ನಿಧನದ ನಂತರ ಸಂಸ್ಥಾನದಲ್ಲಿ …

Read More »

ಬಸವಲಿಂಗಶ್ರೀ ವಿರುದ್ಧ ನಡೆದಿತ್ತು ಹನಿಟ್ರ್ಯಾಪ್; ಹೆಣ್ಣಿನ ಮೋಹ ಪಾಶಕ್ಕೆ ಸಿಲುಕಿದ್ರಾ ಸ್ವಾಮೀಜಿ?

ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು. ರಾಮನಗರ: ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು. ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರೆದಿದ್ದಾರೆ, ಮೂರು ಪುಟ ಪೊಲೀಸರಿಗೂ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಡೆತ್ನೋಟ್ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) …

Read More »

ವಿಶ್ವದಾದ್ಯಂತ ಕೇತುಗ್ರಸ್ತ ಸೂರ್ಯಗ್ರಹಣ ಆರಂಭ : ಇಂಗ್ಲೆಂಡ್‌, ಇಟಲಿ, ನಾರ್ವೆಯಲ್ಲಿ ಗ್ರಹಣ ಸ್ವರ್ಶ|

27 ವರ್ಷಗಳ ಬಳಿಕ ಸಂಭವಿಸುತ್ತಿರೊ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಿದ್ದು, ಇಂಗ್ಲೇಡ್‌, ನಾರ್ವೆಯಲ್ಲಿ ಅರ್ಥ ಸೂರ್ಯನನ್ನು ನುಂಗಿದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಸೂರ್ಯಗ್ರಹಣ ಆರಂಭಗೊಳ್ಳಲು ಇನ್ನೂ ಒಂದು ಗಂಟೆ ಮಾತ್ರ ಬಾಕಿಯಿದೆ. ಬರೊಬ್ಬರಿ 4 ಗಂಟೆಗಳ ಕಾಲ ಬಾನಂಗಳಲ್ಲಿ ವಿಸ್ಮಯ ಕಾಣಿಸಲಿದೆ. ಭಾರತದ ಸೂರ್ಯ ಗ್ರಹನ ಗೋಚರತೆ ಭಾಗಶಃ ಸೂರ್ಯಗ್ರಹಣವನ್ನು ಅನುಭವಿಸುವ ಭಾರತೀಯ ನಗರಗಳೆಂದರೆ ನವದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾ ಭಾಗಗಳಲ್ಲಿ ಕಾಣಿಸುತ್ತದೆ. ಗ್ರಹಣದ ಅವಧಿ: …

Read More »

ಟ್ರ್ಯಾಕ್ಟರ್- ಲಾರಿ ಡಿಕ್ಕಿ: ಐವರಿಗೆ ಗಾಯ

ಬೆಳಗಾವಿ: ನಗರ ಹೊರವಲಯದ ಅಲಾರವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ತಡರಾತ್ರಿ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ, ಐವರು ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಟ್ರಾಲಿ ತುಂಡಾಗಿ ಬೋರಲು ಬಿದ್ದಿದ್ದು, ಅದರಲ್ಲಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಎರಡು ಟ್ರಾಲಿಗಳನ್ನು ಹೊಂದಿದ ಟ್ರ್ಯಾಕ್ಟರಿನಲ್ಲಿ ಕಬ್ಬು ಕಟಾವು ಮಾಡುವವರು ಕೆಲಸ ಮುಗಿಸಿ ಪ್ರಯಾಣಿಸುತ್ತಿದ್ದರು. ಹುಬ್ಬಳ್ಳಿ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಬಂದ ಲಾರಿ ಟ್ರ್ಯಾಕ್ಟರಿನ ಎರಡನೇ ಟ್ರಾಲಿಗೆ ಡಿಕ್ಕಿ …

Read More »

ಮುಂದಿನ ಚುನಾವಣೆ ಕ್ಷೇತ್ರ ಘೋಷಿಸಿದ ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ

ಚಿತ್ರದುರ್ಗ: ದೀಪಾವಳಿ ದಿನದಂದೇ ಮೀಸಲಾತಿ ಜಾರಿಯಾಗಿದ್ದು, ಇದೇ ದಿನ ವಾಲ್ಮೀಕಿ ಪುತ್ಥಳಿ ಅನಾವರಣವಾಗುತ್ತಿರುವುದು ಸಂತೋಷ ತಂದಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, 2023 ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಘೋಷಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಎಂದು ಕೂಡ ಹಿಂದೆ ಸರಿಯಲಿಲ್ಲ. …

Read More »

ಸ್ಥಿರತೆ ಮತ್ತು ಏಕತೆಯೇ ನನ್ನ ಆದ್ಯತೆ; ಯುಕೆಗೆ ಹೊಸ ಭರವಸೆ ಮೂಡಿಸಿದ ರಿಷಿ ಸುನಕ್‌

ಲಂಡನ್‌: “ಯುನೈಟೆಡ್‌ ಕಿಂಗ್‌ಡಮ್‌(ಯುಕೆ) ಒಂದು ಶ್ರೇಷ್ಠ ರಾಷ್ಟ್ರ. ಆದರೆ ನಾವು ದೊಡ್ಡಮಟ್ಟಿನ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎನ್ನುವುದೂ ಅಷ್ಟೇ ಸತ್ಯ. ನಮಗೆ ಈಗ ಬೇಕಾಗಿರುವುದು ಸ್ಥಿರತೆ ಮತ್ತು ಏಕತೆ. ನಮ್ಮ ಪಕ್ಷವನ್ನು ಮತ್ತು ದೇಶವನ್ನು ಒಗ್ಗೂಡಿಸುವುದೇ ನನ್ನ ಆದ್ಯತೆಯಾಗಿದೆ. ಆಗ ಮಾತ್ರ ನಾವು ಎಂತಹ ಸವಾಲನ್ನು ಬೇಕಿದ್ದರೂ ಸುಲಭವಾಗಿ ಎದುರಿಸಿ ಗೆಲ್ಲಲು ಸಾಧ್ಯ.’ ಇದು ಬ್ರಿಟನ್‌ನ 57ನೇ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್‌ ಅವರ ಮಾತುಗಳು. ಕಳೆದ 200 …

Read More »

ವಿಧಾನಸಭೆ ಚುನಾವಣೆ ಮೊದಲೇ ಬಿಜೆಪಿಯಲ್ಲಿ‌ ಭಿನ್ನಮತ ಸ್ಫೋಟ: 14 ಪದಾಧಿಕಾರಿಗಳ ಉಚ್ಛಾಟನೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ‌ಭಿನ್ನಮತ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಹಾಗೂ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಅಂತಹ ಬಂಡಾಯ ಅಭ್ಯರ್ಥಿಗಳನ್ನ ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ ಅವರು ಪಕ್ಷ ವಿರೋಧಿ ಚಟುಟವಿಕೆ ಮಾಡಿದ್ದಾರೆಂಬ ಆರೋಪದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು 14 …

Read More »

ಆನಂದ ಮಾಮನಿ ನಿಧನಕ್ಕೆ ಹುಕ್ಕೇರಿಶ್ರೀ ಸಂತಾಪ…

ಆನಂದ ಮಾಮನಿ ಅವರ ನಿಧನಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕರು, ರಾಜ್ಯ ವಿಧಾನಸಭೆಯ ಮಾನ್ಯ ಉಪ ಸಭಾಧ್ಯಕ್ಷರು ಹುಕ್ಕೇರಿ ಹಿರೇಮಠದ ಜೊತೆಗೆ ಅಭಿನಾಭಾವ ಸಂಬAಧವನ್ನಿಟ್ಟುಕೊAಡಿದ್ದ ಶ್ರೀ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ …

Read More »