Home / ರಾಜ್ಯ / ಸ್ಥಿರತೆ ಮತ್ತು ಏಕತೆಯೇ ನನ್ನ ಆದ್ಯತೆ; ಯುಕೆಗೆ ಹೊಸ ಭರವಸೆ ಮೂಡಿಸಿದ ರಿಷಿ ಸುನಕ್‌

ಸ್ಥಿರತೆ ಮತ್ತು ಏಕತೆಯೇ ನನ್ನ ಆದ್ಯತೆ; ಯುಕೆಗೆ ಹೊಸ ಭರವಸೆ ಮೂಡಿಸಿದ ರಿಷಿ ಸುನಕ್‌

Spread the love

ಲಂಡನ್‌: “ಯುನೈಟೆಡ್‌ ಕಿಂಗ್‌ಡಮ್‌(ಯುಕೆ) ಒಂದು ಶ್ರೇಷ್ಠ ರಾಷ್ಟ್ರ. ಆದರೆ ನಾವು ದೊಡ್ಡಮಟ್ಟಿನ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎನ್ನುವುದೂ ಅಷ್ಟೇ ಸತ್ಯ. ನಮಗೆ ಈಗ ಬೇಕಾಗಿರುವುದು ಸ್ಥಿರತೆ ಮತ್ತು ಏಕತೆ. ನಮ್ಮ ಪಕ್ಷವನ್ನು ಮತ್ತು ದೇಶವನ್ನು ಒಗ್ಗೂಡಿಸುವುದೇ ನನ್ನ ಆದ್ಯತೆಯಾಗಿದೆ.

ಆಗ ಮಾತ್ರ ನಾವು ಎಂತಹ ಸವಾಲನ್ನು ಬೇಕಿದ್ದರೂ ಸುಲಭವಾಗಿ ಎದುರಿಸಿ ಗೆಲ್ಲಲು ಸಾಧ್ಯ.’

ಇದು ಬ್ರಿಟನ್‌ನ 57ನೇ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್‌ ಅವರ ಮಾತುಗಳು. ಕಳೆದ 200 ವರ್ಷಗಳಲ್ಲಿ ಬ್ರಿಟನ್‌ನ ಪ್ರಧಾನಿ ಪಟ್ಟಕ್ಕೇರುತ್ತಿರುವ ಅತಿ ಕಿರಿಯ (42 ವರ್ಷ) ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುನಕ್‌ ಅವರು ಸೋಮವಾರ ರಾತ್ರಿ ಟೋರಿ ನಾಯಕನಾಗಿ ಮೊದಲ ಭಾಷಣ ಮಾಡಿದರು.

“ನನ್ನ ಸಂಸದೀಯ ಸಹೋದ್ಯೋಗಿಗಳ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಅತ್ಯಂತ ಪ್ರೀತಿಯಿಂದ ಕಾಣುವಂಥ ನನ್ನ ಪಕ್ಷ ಮತ್ತು ನನ್ನ ದೇಶದ ಋಣ ತೀರಿಸಲು ಅವಕಾಶ ಸಿಕ್ಕಿರುವುದು ನನಗೆ ಜೀವನದಲ್ಲಿ ಸಿಕ್ಕಿರುವ ಅತಿದೊಡ್ಡ ಉಡುಗೊರೆ. ಹಗಲಿರುಳೆನ್ನದೇ ದೇಶವಾಸಿಗಳ ಸೇವೆ ಮಾಡುವುದಾಗಿ ನಾನಿಂದು ಶಪಥ ಮಾಡುತ್ತೇನೆ’ ಎಂದೂ ಸುನಕ್‌ ಭಾವನಾತ್ಮಕವಾಗಿ ನುಡಿದರು.

ಭಾರತೀಯ ಸಮುದಾಯದ ಹರ್ಷೋದ್ಗಾರ
ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಯುಕೆಯಲ್ಲಿರುವ ಭಾರತೀಯ ಸಮುದಾಯದ ಸಂಭ್ರಮ ಮುಗಿಲು ಮುಟ್ಟಿದೆ. ದೀಪಾವಳಿ ಹಬ್ಬದ ದಿನವೇ ಸಿಹಿ ಸುದ್ದಿ ಸಿಕ್ಕಿರುವುದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಭಾರತೀಯ ಮೂಲದವರೊಬ್ಬರು ಪ್ರಧಾನಿ ಪಟ್ಟಕ್ಕೇರುತ್ತಿರುವುದನ್ನು ಆನಿವಾಸಿ ಭಾರತೀಯರು, “ಐತಿಹಾಸಿಕ, ಸ್ಫೂರ್ತಿದಾಯಕ’ ಎಂದು ಬಣ್ಣಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ