Breaking News
Home / ರಾಷ್ಟ್ರೀಯ (page 440)

ರಾಷ್ಟ್ರೀಯ

‘ಕೈ’ ಟಿಕೆಟ್‌: ಡಿಕೆಶಿ ಇಂದು ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸುಮಾರು 150 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಸಂಕ್ರಾಂತಿ (ಜ.14) ಕಳೆಯುತ್ತಿದ್ದಂತೆ ಘೋಷಿಸಲು ತಯಾರಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ಬುಧವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.   ‘ಬುಧವಾರ ಬೆಳಿಗ್ಗೆ ತುರುವೇಕೆರೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ದೆಹಲಿಗೆ ತೆರಳಲಿದ್ದಾರೆ. ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರನ್ನು …

Read More »

ನನ್ನಂತೆ ರಾಜಕೀಯಕ್ಕೆ ಕುಟುಂಬದವರನ್ನು ಕರೆತರದಿರಲು ನಿಮ್ಮಿಂದ ಸಾಧ್ಯವೇ?: ಎಚ್​ಡಿಕೆಗೆ ಪ್ರಹ್ಲಾದ್​ ಜೋಶಿ ಸವಾಲು

ಗದಗ, ಜ.3: ‘ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು. ನಾನು ನನ್ನ ಕುಟುಂಬದಿಂದ ಯಾರನ್ನೂ ರಾಜಕೀಯಕ್ಕೆ ಕರೆ ತರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ಅದರಂತೆಯೇ ಕುಮಾರಸ್ವಾಮಿ ಅವರು ಹೇಳಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸವಾಲು ಹಾಕಿದ್ದಾರೆ.   ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಯಾರ ಗುಂಡಿ ಯಾರು ತೋಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಅಂತ ಬಂದಾಗ ಕುಮಾರಸ್ವಾಮಿ, ದೇವೇಗೌಡ್ರು, ರೇವಣ್ಣ, …

Read More »

ಬೆಳಗಾವಿ ಜಿಲ್ಲೆಯ ಭಕ್ತರೊಂದಿಗೆ ಸಿದ್ಧೇಶ್ವರ ಸ್ವಾಮೀಜಿ ದಶಕಗಳ ಆಪ್ತತೆ

ಬೆಳಗಾವಿ: ವಿಶ್ವಸಂತ, ನಡೆದಾಡುವ ದೇವರು ಎಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಗೂ ಬೆಳಗಾವಿ ಜಿಲ್ಲೆಗೂ ಎರಡು ದಶಕಗಳ ನಂಟಿದೆ. ಅವರ ಅತಿ ಹೆಚ್ಚು ಪ್ರವಚನಗಳು ಬೆಳಗಾವಿ ಜಿಲ್ಲೆಯಲ್ಲೇ ನಡೆದಿವೆ. ಇಂದೋ ನಿನ್ನೆಯೋ ಶ್ರೀಗಳು ಕಣ್ಣ ಮುಂದೆ ತಮ್ಮ ಜ್ಞಾನ ಬಿತ್ತಿದ್ದಾರೆ ಎನ್ನುವಷ್ಟು ಆಪ್ತತೆ ಜಿಲ್ಲೆಯ ಜನರಲ್ಲಿದೆ. ಶ್ರೀಗಳು ಇನ್ನಿಲ್ಲ ಎನ್ನುವ ಸುದ್ದಿ ತಿಳಿದು ಜಿಲ್ಲೆಯ ಭಕ್ತರೂ ದಿಗಿಲುಗೊಂಡಿದ್ದಾರೆ. ಕಳೆದೊಂದು ವಾರದಿಂದ ಅಪಾರ ಸಂಖ್ಯೆಯ ಜನ ಶ್ರೀಗಳನ್ನು ನೋಡಲು …

Read More »

ಮಹದಾಯಿ ನೀರನ್ನು ತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಅಭಿಪ್ರಾಯ

ಪಣಜಿ: ಕೇಂದ್ರ ಸರ್ಕಾರವೇ ಏನು… ಮಹದಾಯಿ ನೀರನ್ನು ತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೋವಾ ರಾಜ್ಯದ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಕಳಸಾ-ಭಂಡೂರ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರದ ಪರಿಷ್ಕೃತ ವಿಸ್ತೃತ ಯೋಜನಾ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ ಅಸಮಾಧಾನ ಹರಡಿದೆ. ಈ ಹಿನ್ನೆಲೆಯಲ್ಲಿ ಅಡ್ವಕೇಟ್ ಜನರಲ್ ಪಾಂಗಮ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರವು …

Read More »

ಒಪಿಎಸ್‌: ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟ

ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒ‍ಪಿಎಸ್‌) ಮರು ಜಾರಿಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎನ್‌ಪಿಎಸ್‌ ನೌಕರರು ನಡೆಸುತ್ತಿದ್ದ ಧರಣಿಯನ್ನು ಸೋಮವಾರ ಅಂತ್ಯಗೊಳಿಸಿದ್ದಾರೆ. ‘ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ’ದ ಆಶ್ರಯದಲ್ಲಿ ಡಿ.19ರಿಂದ ಧರಣಿ ನಡೆಸುತ್ತಿದ್ದರು.   ‘ಎನ್‌ಪಿಎಸ್‌ ನೌಕರರ ಸಭೆ ಕರೆಯುವುದಾಗಿ ಸಿ.ಎಂ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ‘ವೋಟ್‌ ಫಾರ್‌ ಒಪಿಎಸ್‌’ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಅವರು …

Read More »

*ಶತಮಾನದ ಮಹಾನ್ ಸಂತ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ*

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ನಿಧನರಾದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ನಮ್ಮ ಶ್ರೀ ಗಳ ನಿಧನದಿಂದ ಇಡೀ ನಾಡೇ ಶೋಕ ಸಾಗರದಲ್ಲಿ ಮುಳುಗಿದೆ. ಅತ್ಯಂತ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ದೇಶವಲ್ಲದೇ ಜಾಗತೀಕವಾಗಿಯೂ ಹಲವಾರು ರಾಷ್ಟಗಳಲ್ಲಿ ಪ್ರವಚನಗಳನ್ನು ನೀಡಿದ್ದರು. ಕನ್ನಡವಲ್ಲದೇ ಇಂಗ್ಲಿಷ್ ಭಾಷೆಯಲ್ಲಿಯೂ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಇವರೊಬ್ಬ ಈ ಶತಮಾನದ ಮಹಾನ್ ಸಂತ. ಕನ್ನಡ ನಾಡು ಕಂಡ ಅತೀ ಶ್ರೇಷ್ಠ ವಾಗ್ಮೀ. ತುಮಕೂರು ಸಿದ್ಧಗಂಗಾಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. …

Read More »

ಸಾಧನೆಗೈದ ಕಾನಸ್ಟೆಬಲ್ ಪುತ್ರಿ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ

ಸಾಧನೆಗೈದ ಕಾನಸ್ಟೆಬಲ್ ಪುತ್ರಿ ಹಾಗೂ ಆಕೆಯ ತಂದೆ – ತಾಯಿಯನ್ನು ಕಚೇರಿಗೆ ಕರೆಸಿ ಸೋಮವಾರ ಸನ್ಮಾನಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಆದರ್ಶ ಕೆಲಸ ಮಾಡಿದ್ದಾರೆ. ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಲಗಮಣ್ಣಾ ನಾಯಕ್ ಮತ್ತು ಶೀಲಾ ಲಗಮಣ್ಣ ನಾಯಕ ರವರ ಮಗಳು ಸ್ನೇಹಾ ನಾಯಕ್ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ ಆಯ್ಕೆಯಾಗಿದ್ದಾರೆ. ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ …

Read More »

‘ಕಳಸಾ ಬಂಡೂರಿ ನಾಲಾ ಯೋಜನೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಚುನಾವಣೆ ಗಿಮಿಕ್ : ಸತೀಶ ಜಾರಕಿಹೊಳಿ

ಬೆಳಗಾವಿ: ‘ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿಯ ಸಮಗ್ರ ಯೋಜನಾ ವರದಿಗೆ ಅನುಮೋದನೆ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿರುವುದು ಬಿಜೆಪಿಯ ಚುನಾವಣೆ ಗಿಮಿಕ್’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪಾದಿಸಿದರು.   ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಇಂತಹ ದಾಳ ಉರುಳಿಸುತ್ತಿದ್ದಾರೆ. ಆದರೆ, ಅವುಗಳಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಿಡಿಕಾರಿದರು.

Read More »

ಸಾಮಾನ್ಯ ಕಾರ್ಯಕರ್ತನನ್ನು ಸಿದ್ದರಾಮಯ್ಯ ವಿರುದ್ದ ಗೆಲ್ಲಿಸುತ್ತೇವೆ: ಈಶ್ವರಪ್ಪ

ಶಿವಮೊಗ್ಗ: ಚುನಾವಣೆಯಲ್ಲಿ ಗೆದ್ದ ಶಾಸಕ ಬೇರೆ ಕ್ಷೇತ್ರ ಹುಡುಕುವುದು ರಾಜ್ಯದ ಮತ್ತು ಆ ಕ್ಷೇತ್ರದ ಮತದಾರರಿಗೆ ಮಾಡುವ ಅವಮಾನ. ತನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆಯ ಮುಂದಿಟ್ಟು ಮತ ಕೇಳುವಂತಿರಬೇಕು. ಇವತ್ತಿಗೂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳುತ್ತಿಲ್ಲ. ಇಂದಲ್ಲ ನಾಳೆ ಯಾವ ಪಕ್ಷದಿಂದ ಸ್ಪರ್ಧೆ ಎಂದು ಹೇಳುವ ದಿನ ಕೂಡ ಬರಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧೆ …

Read More »

ಪಣಜಿ: ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೇಂದ್ರಕ್ಕೆ ಗೋವಾ ಸರಕಾರ ಒತ್ತಾಯ

ಪಣಜಿ: ಮಹದಾಯಿ ನದಿಯಿಂದ ಅಕ್ರಮವಾಗಿ ನೀರು ತಿರುಗಿಸುವುದನ್ನು ತಡೆಯಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸಚಿವ ಸಂಪುಟವು ಇಂದು ನಿರ್ಧರಿಸಿದೆ. ಕಳಸಾ-ಭಂಡೂರಿ ನೀರಿನ ಯೋಜನೆಗೆ ಕರ್ನಾಟಕದ ವಿವರವಾದ ಯೋಜನಾ ವರದಿಗೆ ನೀಡಲಾದ ಎನ್‍ಒಸಿಯನ್ನು ತಕ್ಷಣವೇ ಹಿಂಪಡೆಯಲು ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸೋಮವಾರ ಪಣಜಿಯಲ್ಲಿ ವಿಶೇಷ ಸಚಿವ …

Read More »