Home / ರಾಷ್ಟ್ರೀಯ (page 469)

ರಾಷ್ಟ್ರೀಯ

ವಿಶ್ವದ ಎತ್ತರದ ಶಿವ ಮೂರ್ತಿ ಇಂದು ಲೋಕಾರ್ಪಣೆ

ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ “ವಿಶ್ವಾಸ ಸ್ವರೂಪಂ’ ಶನಿವಾರ ಲೋಕಾರ್ಪಣೆಗೊಳ್ಳಲಿದೆ.ರಾಜಸ್ಥಾನದ ರಾಜಸ್‌ಮಂಡ್‌ ಜಿಲ್ಲೆಯ ನಾಥ್‌ದ್ವಾರ ಪಟ್ಟಣದಲ್ಲಿ ಈ ಪ್ರತಿಮೆ ತಲೆಎತ್ತಿದೆ. ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಸಿಎಂ ಅಶೋಕ್‌ ಗೆಹೊÉàಟ್‌, ಸ್ಪೀಕರ್‌ ಸಿ.ಪಿ. ಜೋಷಿ ಮತ್ತಿತರರು ಭಾಗಿಯಾಗಲಿದ್ದಾರೆ. 9 ದಿನ ಕಾರ್ಯಕ್ರಮ ಉದಯಪುರದಿಂದ 45 ಕಿ.ಮೀ. ದೂರದಲ್ಲಿ ಧ್ಯಾನಸ್ಥನಾಗಿರುವಂತೆ ಶಿವನ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಲೋಕಾರ್ಪಣೆಗೊಂಡ ಬಳಿಕ ಅ. 29ರಿಂದ ನ. 6ರ …

Read More »

ಸೋಲಿನ ಭೀತಿ: ಹೊಸ ಕ್ಷೇತ್ರದ ಹುಡುಕಾಟದಲ್ಲಿ ಸಿದ್ದು: ಬಿಎಸ್‌ವೈ

ಮಂಗಳೂರು: ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಜನರ ವಿಶ್ವಾಸ, ನಂಬಿಕೆಯನ್ನು ಕಳೆದುಕೊಂಡಿದ್ದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.   ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಮೈಸೂರು, ಬಾದಾಮಿ ಬಿಟ್ಟು ಈಗ ಮತ್ತೂಂದು ಕ್ಷೇತ್ರ ಹುಡುಕುತ್ತಿದ್ದಾರೆ.ಯಾವುದೂ ಸಿಕ್ಕಿಲ್ಲ. ಹಾಗಾಗಿ ಈಗ ಕೋಲಾರ ಎಂದು ಹೇಳುತ್ತಿದ್ದಾರೆ. ಬಾದಾಮಿಯಲ್ಲಿ ನಿಲ್ಲಲು ಹಿಂದೇಟು ಹಾಕುತ್ತಿರುವುದುರಿಂದ ಗೊತ್ತಾಗುತ್ತದೆ …

Read More »

ಕರ್ನಾಟಕವನ್ನು ದೇಶದಲ್ಲೇ ನಂ.1 ಮಾಡ್ತೇವೆ: C.M. ಬೊಮ್ಮಾಯಿ

ಬೆಂಗಳೂರು: ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಬದುಕು ಕಟ್ಟಿಕೊಳ್ಳಲು, ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡುವ ಮೂಲಕ ಭಾರತದಲ್ಲೇ ನಂಬರ್‌ 1 ರಾಜ್ಯ ಮಾಡುವ ಛಲವನ್ನು ತೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೋಟಿ ಕಂಠ ಗಾಯನ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಇನ್ನಷ್ಟು ಶಕ್ತಿಶಾಲಿಯಾಗಿ ಹೊರ ಹೊಮ್ಮಲು ಎಲ್ಲ ಕನ್ನಡಿಗರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಕನ್ನಡನಾಡು ಶ್ರೇಷ್ಠವಾದ ನಾಡು …

Read More »

ಮುರುಘಾ ಶ್ರೀ ಜಾಮೀನು ಆಕ್ಷೇಪಣೆಗೆ ವಾರ ಗಡುವು ಚಿತ್ರದುರ್ಗ ಜೈಲಿನಲ್ಲಿ ಮುರುಘಾ ಶ್ರೀ

ಬೆಂಗಳೂರು: ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಮ್ಮ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯರ ಪರ ವಕಾಲತ್ತಿನ ಕಾನೂನು ಬದ್ಧತೆ ಪ್ರಶ್ನಿಸಿದ್ದಾರೆ.   ಶ್ರೀಗಳ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. …

Read More »

2023ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ:H.D.D.

ಬೆಂಗಳೂರು: ‘2023ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು. ಪಕ್ಷದ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಪರಿಷತ್‌ ಸಭೆಯಲ್ಲಿ ಅವರು ಮಾತನಾಡಿ, ‘ಕೆಲವರು ಜೆಡಿಎಸ್‌ಗೆ 20 ರಿಂದ 25 ಸೀಟುಗಳು ಬರುತ್ತವೆ ಎಂದು ಹೇಳುತ್ತಿದ್ದಾರೆ. ಅದನ್ನೆಲ್ಲ ನಂಬಬೇಡಿ. ನನ್ನ ಜೊತೆ ನೀವು ಕೈ ಜೋಡಿಸಿ, ಜನರ ಮುಂದೆ ನಮ್ಮ ಯೋಜನೆಗಳ ಬಗ್ಗೆ ತಿಳಿಸಿ’ ಎಂದರು. ‘ನೀವು ಎಷ್ಟು …

Read More »

ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣೆ

ಅಪ್ಪು ಅಭಿಮಾನಿಗಳ ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಆಗಿದ್ದು, ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣ ಮನೆ ಮಾಡಿತ್ತು.   ಇಂದು ರಾಜ್ಯಾದ್ಯಂತ ಪವರ್ ಸ್ಟಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಗೊಂಡಿದೆ. ಬೆಳಗಾವಿಯಲ್ಲೂ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ನಡೆಯಿತು. ಸ್ವರೂಪ-ನರ್ತಕಿ, ಕಾರ್ನಿವಲ್ ಹಾಗೂ ಐನಾಕ್ಸ್ ಈ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರದ ಮೊದಲ ಶೋ ವಿಕ್ಷೀಸಲು ೧೦:೪೫ ಗಂಟೆಗೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. …

Read More »

ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಬೆಳಗಾವಿಯ ಕರಾಟೆಪಟು

ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಕರಾಟೆ ಪಟು ಕೇತನ ಕಲ್ಲಪ್ಪಾ ಫಾಟಕೆ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಳಗಾವಿಯ ಮಂಡೋಳಿ ರಸ್ತೆಯ ಮನೋಪ್ರಭಾ ಮಂಗಲ ಕಾರ್ಯಾಲಯದಲ್ಲಿ ಇದೇ ಅಕ್ಟೋಬರ್ 23ರಂದು ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 70 ಕರಾಟೆ ಪಟುಗಳು ಭಾಗಿಯಾಗಿದ್ದರು. ಈ ವೇಳೆ ಮುಖ್ಯ ತೀರ್ಪುಗಾರರಾಗಿ ಗಜೇಂದ್ರ ಕಾಕತಿಕರ ಆಗಮಿಸಿದ್ದರು. ಕಳೆದ 9 ವರ್ಷಗಳಿಂದ ಇಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ …

Read More »

10 ಉಗ್ರರ ಖಾತೆಗಳ ಮಾಹಿತಿಯ ವರದಿ ನೀಡಿ : ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

ಮುಂಬಯಿ : ಈ ತಿಂಗಳ ಆರಂಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಉಗ್ರರೆಂದು ಗೊತ್ತುಪಡಿಸಿದ 10 ವ್ಯಕ್ತಿಗಳನ್ನು ಹೋಲುವ ಖಾತೆಗಳ ಬಗ್ಗೆ ಸರಕಾರಕ್ಕೆ ವಿವರವಾದ ವರದಿ ನೀಡುವಂತೆ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಗುರುವಾರ ತಿಳಿಸಿದೆ.   ಅಕ್ಟೋಬರ್ 4 ರಂದು, ಕೇಂದ್ರ ಗೃಹ ಸಚಿವಾಲಯವು ಹಿಜ್ಬುಲ್ ಮುಜಾಹಿದ್ದೀನ್ , ಲಷ್ಕರ್-ಎ-ತೈಬಾ ಮತ್ತು ಇತರ ನಿಷೇಧಿತ ಸಂಘಟನೆಗಳ ಒಟ್ಟು 10 ಸದಸ್ಯರನ್ನು ಯುಎಪಿಎ ಕಾಯ್ದೆಯ ಅಡಿಯಲ್ಲಿ ಉಗ್ರರೆಂದು ಗೊತ್ತುಪಡಿಸಿದೆ. …

Read More »

ಪಣಜಿ: ಮಾದಕ ವಸ್ತು ಮಾರಾಟ ಪ್ರಕರಣ; ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ

ಪಣಜಿ: ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ವರ್ಷ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾಹಿತಿ ನೀಡಿದರು. ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಂಟಿ ನಾರ್ಕೋಟಿಕ್ಸ್ ಸೆಲ್ ಅನ್ನು ಬಲಿಷ್ಠಗೊಳಿಸಲು ಅದರ ಸಿಬ್ಬಂದಿಯನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಮಾದಕ ದ್ರವ್ಯ ಪ್ರಕರಣಗಳಲ್ಲಿ …

Read More »

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 150 ಅಭ್ಯರ್ಥಿಗಳ ಪಟ್ಟಿ ಪ್ರಕಟ ಬಗ್ಗೆ ನಾಯಕರ ಮಹತ್ವದ ಚರ್ಚೆ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಸಭೆ ನಡೆದಿದೆ. ಸುನಿಲ್ ಕನಗೋಲು ವರದಿ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಸಲಹೆ ನೀಡಲಾಗಿದೆ. ಸುನಿಲ್ ಟೀಂ ನೀಡಿರುವ ವರದಿ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ನಡೆಸಿದ್ದು, ಡಿಸೆಂಬರ್ ಒಳಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 150 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು …

Read More »