Breaking News
Home / ರಾಷ್ಟ್ರೀಯ (page 449)

ರಾಷ್ಟ್ರೀಯ

ಹೆಡ್ ಮಾಸ್ಟರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ ಹಾಸ್ಟೆಲ್ ವಿದ್ಯಾರ್ಥಿನಿಯರು

ಹಾಸ್ಟೆಲ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಹೆಡ್ ಮಾಸ್ಟರ್ ಚಿನ್ಮಯಾನಂದ ವಿದ್ಯಾರ್ಥಿನಿಯರ ಕೈಗೆ ಸಿಕ್ಕಿ ಹಿಗ್ಗಾ ಮುಗ್ಗಾ ಹೊಡೆತ ತಿಂದು ಹೈರಾಣಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಹಾಸ್ಟೆಲ್ ನ ಎಲ್ಲ ವಿದ್ಯಾರ್ಥಿನಿಯರು ಕೈಯಲ್ಲಿ ಕೋಲು ಹಿಡಿದುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

Read More »

ವಾಹನ ಡಿಕ್ಕಿಯಾಗಿ ಇಬ್ಬರ ಸಾವು

ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ. ಗೋಕಾಕ ಮೂಲದ ಸಂಜುಹಿತಾರಗೌಡರ(33) ಹಾಗೂ ನಾಗರಾಜ ಯಡವಣ್ಣವರ (34) ಮೃತ ದುರ್ದೈವಿಗಳು. ಆಶಿಫ್ ಮುಲ್ಲಾ(24) ಗಾಯಗೊಂಡಿದ್ದಾನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.

Read More »

ಎಸಿಸಿ ಸಿಮೆಂಟ್​ ಘಟಕ​ ಬಂದ್​. ಸಾವಿರಾರು ಉದ್ಯೋಗಿಗಳಿಗೆ ಬರಸಿಡಿಲ

1984ರಲ್ಲಿ ಇಲ್ಲಿ ಎಸಿಸಿ ಗಗ್ಗಲ್​ ಘಟಕವನ್ನು ಸ್ಥಾಪಿಸಲಾಯಿತು. ಕೆಲವು ವರ್ಷಗಳ ಹಿಂದೆ ವಿದೇಶಿ ಕಂಪನಿ ಹೊಲ್ಸಿಮ್​ ವಲಫರ್ಜ್​ ಇದರ ನಿರ್ವಹಣೆ ಮಾಡುತ್ತಿದ್ದು, ಇದೀಗ ಇದು ಅದಾನಿ ಗ್ರೂಪ್​ಗೆ ಸೇರಿದೆ. ಬಿಲಾಸ್ಪುರ್​ (ಹಿಮಾಚಲ ಪ್ರದೇಶ): ನಷ್ಟದ ಹಿನ್ನೆಲೆ ಇಲ್ಲಿರುವ ಎಸಿಸಿ ಸಿಮೆಂಟ್​​​ ಘಟಕಕ್ಕೆ ಬೀಗ ಹಾಕಲಾಗಿದ್ದು, ತಕ್ಷಣದಿಂದಲೇ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಬರದಂತೆ, ಇಲ್ಲಿ ಕೆಲಸ ಸ್ಥಗಿತಗೊಳಿಸುತ್ತಿರುವ ಕುರಿತು ನೋಟಿಸ್​ ಜಾರಿ ಮಾಡಲಾಗಿದೆ. ಘಟಕ ಬಂದ್​ ಮಾಡುತ್ತಿರುವ …

Read More »

B.SY. ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ : C.M. ಸ್ಪಷ್ಟನೆ

ನವದೆಹಲಿ : ಬಿ.ಎಸ್ ಯಡಿಯೂರಪ್ಪಕೊಪ್ಪಳ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಬಿ.ಎಸ್ ಯಡಿಯೂರಪ್ಪ ಕೊಪ್ಪಳ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ,ಕಾಂಗ್ರೆಸ್ ಕತ್ತಲಿನಲ್ಲಿ ಕರಿ ಬೆಕ್ಕು ಹುಡುಕುವ ಕೆಲಸ ಮಾಡ್ತಿದೆ, ಅಹಮದಾವಾದ್ ನಲ್ಲಿ ಎಲ್ಲರೂ ಜೊತೆಯಾಗಿ ಇದ್ವಿ, ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ತಮ್ಮ ಬಿರುಕು ಮರೆಮಾಚಲು ಕಾಂಗ್ರೆಸ್ ಯತ್ನ ಮಾಡುತ್ತಿದೆ. ಬಿ.ಎಸ್ ಯಡಿಯೂರಪ್ಪ ನಾಳೆ ಕೊಪ್ಪಳ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ …

Read More »

ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ: ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಕುರಿತು ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.   ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, 2021 ಮಾರ್ಚ್ 1ರಂತೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ 9,79,327 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. …

Read More »

PM ಕೇರ್ಸ್ ನಿಧಿ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ದೇಶವಾಸಿಗಳಿಗೆ ನೆರವಾಗುವ ಸಲುವಾಗಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿತ್ತು. 2020 ರ ಮಾರ್ಚ್ ನಲ್ಲಿ ಆರಂಭವಾದ ಪಿಎಂ ಕೇರ್ಸ್ ಫಂಡ್ ಗೆ ಈ ವರ್ಷದ ಮಾರ್ಚ್ ವರೆಗೆ ಒಟ್ಟು 13,000 ಕೋಟಿ ರೂಪಾಯಿಗಳ ದೇಣಿಗೆ ಹರಿದು ಬಂದಿದೆ ಎಂದು ತಿಳಿದುಬಂದಿದೆ.   ಈ ಪೈಕಿ 7,700 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಇನ್ನು 5400 ಕೋಟಿ ರೂಪಾಯಿ ಉಳಿದಿದೆ. ಈ ನಿಧಿಯಿಂದ ವೈದ್ಯಕೀಯ ಆಮ್ಲಜನಕ …

Read More »

ಜಿ.ಪಂ, ತಾಲೂಕು ಪಂಚಾಯತ್‌ ಚುನಾವಣೆ ವಿಳಂಬ: ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಜಿ.ಪಂ, ತಾಲೂಕು ಪಂಚಾಯತ್‌ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್‌ ಸರ್ಕಾರಕ್ಕೆ ದಂಡ ಹಾಕಿ ಚಾಟಿ ಬೀಸಿದೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 5 ಲಕ್ಷ ರೂ.ದಂಡ ವಿಧಿಸಿದೆ.   ಪದೇ ಪದೇ ‌ಕಾಲಾವಕಾಶ ಕೇಳಿದ ಸರ್ಕಾರ ಹಾಗೂ ಸೀಮಾ ನಿರ್ಣಯ ಆಯೋಗದ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಹೈಕೋರ್ಟ್, 24 ವಾರ ಕಾಲಾವಕಾಶ ನೀಡಿದರೂ ಸರ್ಕಾರ …

Read More »

ಬಾಲಿವುಡ್ ನ “ಸ್ಪೆಷಲ್ 26” ಸಿನಿಮಾ ಸ್ಟೈಲ್.ಸಿಬಿಐ ಅಧಿಕಾರಿಗಳು ಎಂದು ನಂಬಿಸಿ ಲಕ್ಷಾಂತರ ರೂ. ಲೂಟಿ!

ನವದೆಹಲಿ: ಬಾಲಿವುಡ್ ನ ಅಕ್ಷಯ್ ಕುಮಾರ್ ನಟನೆಯ “ಸ್ಪೆಷಲ್ 26” ಸಿನಿಮಾದ ರೀತಿಯಲ್ಲೇ ಸಿಬಿಐ ಅಧಿಕಾರಿಗಳೆಂದು ಪೋಸು ನೀಡಿ ಉದ್ಯಮಿಯೊಬ್ಬರ ಮನೆಯೊಳಗೆ ನುಗ್ಗಿ 30 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಕೋಲ್ಕತಾದ ಭವಾನಿಪುರ್ ನಲ್ಲಿ ನಡೆದಿದೆ.   ಇತ್ತೀಚೆಗೆ ಕೋಲ್ಕತಾದ ಉದ್ಯಮಿಯೊಬ್ಬರ ಮನೆಗೆ ಸುಮಾರು 7-8 ಮಂದಿಯ ಗುಂಪೊಂದು ಆಗಮಿಸಿದ್ದು, ತಾವು ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಯೊಳಗೆ ನುಗ್ಗಿದ್ದರು ಎಂದು ಉದ್ಯಮಿ ಸುರೇಶ್ ವಾಧ್ವಾ (60ವರ್ಷ) …

Read More »

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ

ಬೆಂಗಳೂರು,ಡಿ.14- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ ನಡೆದಿದೆ. ಈ ಸಭೆಯ ರಹಸ್ಯವನ್ನು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಬಿಚ್ಚಿಟ್ಟಿದೆ, ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದೆ.   ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‍ನ ಒಳಜಗಳ ದಿನೇ ದಿನೇ ಹೆಚ್ಚಾಗಿ ಬೀದಿರಂಪವಾಗುತ್ತಿದೆ. ಇವರೆಲ್ಲ ದೇಶೋದ್ಧಾರಕ್ಕಾಗಿ ಗುದ್ದಾಡಿಕೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ …

Read More »

ಬಿಜೆಪಿಗೆ ಅಡ್ಡಿಯಾಗುವುದೇ ಅಂತಿಮ ಕ್ಷಣದ ಮಿನಿ ಬಂಡಾಯ..?

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎರಡು ರಾಜ್ಯಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸಾಕಷ್ಟು ಪ್ರಯೋಗಗಳನ್ನು ನಡೆಸಿತ್ತು. ಆ ಬದಲಾವಣೆಯ ಅಸ್ತ್ರ ಗುಜರಾತ್ ನಲ್ಲಿ ಫಲ ನೀಡಿದರೆ, ಹಿಮಾಚಲದಲ್ಲಿ ತಿರುಗು ಬಾಣವಾಗಿದೆ.   ಹೀಗಾಗಿ ಒಂದು ರಾಜ್ಯಕ್ಕೆ ಅನ್ವಯವಾಗುವ ಬಿಜೆಪಿಯ ಚುನಾವಣಾ ʼಮಾಡೆಲ್ʼ ಇನ್ನೊಂದು ರಾಜ್ಯಕ್ಕೆ ವ್ಯತಿರಿಕ್ತವಾಗುತ್ತದೆ ಎಂಬುದಕ್ಕೆ ಈ ಫಲಿತಾಂಶವೇ ಉದಾಹರಣೆಯಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ …

Read More »