Breaking News

ಎಸಿಸಿ ಸಿಮೆಂಟ್​ ಘಟಕ​ ಬಂದ್​. ಸಾವಿರಾರು ಉದ್ಯೋಗಿಗಳಿಗೆ ಬರಸಿಡಿಲ

Spread the love

1984ರಲ್ಲಿ ಇಲ್ಲಿ ಎಸಿಸಿ ಗಗ್ಗಲ್​ ಘಟಕವನ್ನು ಸ್ಥಾಪಿಸಲಾಯಿತು. ಕೆಲವು ವರ್ಷಗಳ ಹಿಂದೆ ವಿದೇಶಿ ಕಂಪನಿ ಹೊಲ್ಸಿಮ್​ ವಲಫರ್ಜ್​ ಇದರ ನಿರ್ವಹಣೆ ಮಾಡುತ್ತಿದ್ದು, ಇದೀಗ ಇದು ಅದಾನಿ ಗ್ರೂಪ್​ಗೆ ಸೇರಿದೆ.

ಬಿಲಾಸ್ಪುರ್​ (ಹಿಮಾಚಲ ಪ್ರದೇಶ): ನಷ್ಟದ ಹಿನ್ನೆಲೆ ಇಲ್ಲಿರುವ ಎಸಿಸಿ ಸಿಮೆಂಟ್​​​ ಘಟಕಕ್ಕೆ ಬೀಗ ಹಾಕಲಾಗಿದ್ದು, ತಕ್ಷಣದಿಂದಲೇ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.

ಎಲ್ಲಾ ನೌಕರರು ಕರ್ತವ್ಯಕ್ಕೆ ಬರದಂತೆ, ಇಲ್ಲಿ ಕೆಲಸ ಸ್ಥಗಿತಗೊಳಿಸುತ್ತಿರುವ ಕುರಿತು ನೋಟಿಸ್​ ಜಾರಿ ಮಾಡಲಾಗಿದೆ. ಘಟಕ ಬಂದ್​ ಮಾಡುತ್ತಿರುವ ಹಿನ್ನೆಲೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತ್ತು ಟ್ರಕ್ ಆಪರೇಟರ್‌ಗಳು ನಿರುದ್ಯೋಗಿಗಳಾಗಿದ್ದು, ಉದ್ಯೋಗದ ಬಿಕ್ಕಟ್ಟು ಎದುರಿಸುವಂತಾಗಿದೆ.

ನೌಕರರಿಗೆ ಬರಸಿಡಿಲಿನಂತೆ ಬಂದ ನೋಟಿಸ್​.. ‘ಪ್ರಿಯ ನೌಕರರೇ, ಸದ್ಯದ ಮಾರುಕಟ್ಟೆ ಸ್ಥಿತಿಯಲ್ಲಿ ಕಾರ್ಯ ನಿರ್ವಹಣೆ ವೆಚ್ಚ ದುಬಾರಿಯಾಗಿದೆ ಎಂಬುದು ನಿಮ್ಮ ಅರಿವಿಗೆ ಬಂದಿದೆ. ಸಿಮೆಂಟ್​​​ ಸಾರಿಗೆಯಲ್ಲಿ ಅಸಮರ್ಪಕತೆ ಕಂಡು ಬಂದಿದ್ದು, ಇದರಲ್ಲಿ ಭಾರೀ ಇಳಿಕೆ ಇದೆ. ಇದು ಕಳಪೆ ಮಟ್ಟದ ಸಿಮೆಂಟ್​​ ರವಾನೆಗೆ ಕಾರಣವಾಗಿದೆ. ಇದು ನಮ್ಮ ಮಾರುಕಟ್ಟೆಯ ಷೇರುಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಂಪನಿಯ ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಕಾಣವಾಗಿದೆ. ಈ ಎಲ್ಲಾ ಪರಿಸ್ಥಿತಿಗಳ ಅವಲೋಕನ ನಡೆಸಿ ಆಡಳಿತ ಮಂಡಳಿ, ಘಟಕದ ಕಾರ್ಯ ಚಟುವಟಿಕೆ ನಿಲ್ಲಿಸಲು ನಿರ್ಧರಿಸಿದೆ. ತಕ್ಷಣಕ್ಕೆ ಇದು ಜಾರಿಯಾಗಲಿದೆ. ಈ ಹಿನ್ನೆಲೆ ಎಸಿಸಿ ಗಗ್ಗಲ್​ ಸಿಮೆಂಟ್​ನ ಎಲ್ಲಾ ನೌಕರರು ಮುಂದಿನ ಆದೇಶದವರೆಗೂ ಕೆಲಸಕ್ಕೆ ಬರಬೇಡಿ’ ನೋಟಿಸ್​ ಮೂಲಕ ಸೂಚನೆ ನೀಡಲಾಗಿದೆ.

 ನೋಟಿಸ್​ಮೂರು ದಶಕದ ಹಿಂದೆ ಸ್ಥಾಪನೆಯಾಗಿದ್ದ ಘಟಕ.. 1984ರಲ್ಲಿ ಇಲ್ಲಿ ಎಸಿಸಿ ಗಗ್ಗಲ್​ ಘಟಕವನ್ನು ಸ್ಥಾಪಿಸಲಾಯಿತು. ಕೆಲವು ವರ್ಷಗಳ ಹಿಂದೆ ವಿದೇಶಿ ಕಂಪನಿ ಹೊಲ್ಸಿಮ್​ ವಲಫರ್ಜ್​ ಇದರ ನಿರ್ವಹಣೆ ಮಾಡುತ್ತಿದ್ದು, ಇದೀಗ ಇದು ಅದಾನಿ ಗ್ರೂಪ್​ಗೆ ಸೇರಿದೆ. ಸದ್ಯ ಸಿಮೆಂಟ್ ಕಂಪನಿ ಮತ್ತು ಸಾರಿಗೆ ನಡುವೆ ಸಹಕಾರ ವೃದ್ಧಿ ಕಾರ್ಯ ನಡೆಯುತ್ತಿದ್ದು, ಯಾವುದೇ ಪ್ರಗತಿ ಕಂಡುಬಂದಿಲ್ಲ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ