Breaking News
Home / ರಾಷ್ಟ್ರೀಯ (page 451)

ರಾಷ್ಟ್ರೀಯ

ವಿದ್ಯಾರ್ಥಿಗಳಿಗೆ ಸಂವಹನ ಕಲೆ ಮುಖ್ಯ: ಕತ್ತಿ

ಹುಕ್ಕೇರಿ: ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಜಾಣರಿದ್ದರೂ, ಆ ಜಾಣತನವನ್ನು ಬಿಂಬಿಸುವ ಸಂವಹನ ಕಲೆಯ ಕೊರತೆಯಿಂದ ಉದ್ಯೋಗಾವಕಾಶ ಕಳೆದುಕೊಳ್ಳುತ್ತಿದ್ದಾರೆಂದು ಮಾಜಿ ಸಂಸದರು ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದರು.   ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಕಾರ್ಯ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡದ ಜತೆ ಇಂಗ್ಲಿಷ್‌ ಕಲಿಯಬೇಕು. ಶಿಕ್ಷಣ ಪಡೆದು ಇನ್ನೊಬ್ಬರ ಕೈಯಲ್ಲಿ ನೌಕರಿ ಮಾಡುವ …

Read More »

ನವಿಲುತೀರ್ಥ ಜಲಾಶಯ: ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಪಟ್ನಾಳ ಗ್ರಾಮದಲ್ಲಿ ಗೃಹಿಣಿಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಸಿ ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಶಶಿಕಲಾ ಉರೂಫ್‌ ತನುಜಾ ಪರಸಪ್ಪ ಗೋಡಿ (32) ಮಕ್ಕಳಾದ ಸುದೀಪ (4) ರಾಧಿಕಾ (3) ಸಾವಿಗೀಡಾದವರು.   ಗೃಹಿಣಿ ಗುರುವಾರ ರಾತ್ರಿ ತಮ್ಮ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳಗಿಸಿ ಕೊಲೆ ಮಾಡಿದರು. ಬಳಿಕ ತಾವೂ ನೀರಿಗೆ ಹಾರಿದರು. ಕುಟುಂಬದವರು ರಾತ್ರಿಯಿಡೀ …

Read More »

ಜಾರಕಿಹೊಳಿ ಕುಟುಂಬಕ್ಕೆ ಜನರೇ ಬ್ರ್ಯಾಂಡ್… ಸರ್ವೋತ್ತಮ ಜಾರಕಿಹೊಳಿ

ಗೋಕಾಕ: ಜನರ ಆಶೀರ್ವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿರುವ ನಮ್ಮ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುತ್ತಿರುವ ಜನರೇ ನಮ್ಮ ಕುಟುಂಬಕ್ಕೆ ಬ್ರ್ಯಾಂಡ್ ಆಗಿದ್ದಾರೆಂದು ಯುವ ಮುಖಂಡ ಸರ್ವೋತ್ತಮ ಭೀಮಶಿ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ನಗರದ ಮಹಾಲಕ್ಷ್ಮೀ ದೇವಸ್ಥಾನದ ಸಭಾ ಭವನದಲ್ಲಿ ನಡೆದ ತಮ್ಮ 23ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜನರ ಪ್ರೀತಿ ವಿಶ್ವಾಸಕ್ಕೆ …

Read More »

ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾಧಾರಿಗಳಿಗೆ ಅಚ್ಚುಕಟ್ಟಿನ ವ್ಯವಸ್ಥೆ: ಶಶಿಕಲಾ ಜೊಲ್ಲೆ

ಕೊಪ್ಪಳ: ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್‌ 5 ರಂದು 2 ಲಕ್ಷದಷ್ಟು ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಿನ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಕಲ್ಪಿಸುವತ್ತ ಕ್ರಮ ವಹಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ಸೂಚನೆ ನೀಡಿದರು.   ಇಂದು ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ …

Read More »

ಎಸ್ಟಿ ಸಮಾಜಕ್ಕೆ ಘೋರ ಅನ್ಯಾಯ; ನಿಜವಾದ ಸಮಾಜಗಳಿಗೆ ನಷ್ಟ: ಶ್ರೀ

ಅಡಹಳ್ಳಿ: ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಇನ್ನೂ ಅನೇಕ ಸಮಾಜಗಳಿಗೆ ಎಸ್ಟಿ ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿರುವುದು ನಿಜವಾದ ಎಸ್ಟಿ ಸಮಾಜಕ್ಕೆ ಮಾಡುವ ಘೋರ ಅನ್ಯಾಯ ಎಂದು ರಾಜನಹಳ್ಳಿ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.   ಸಮೀಪದ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಅಥಣಿ ತಾಲೂಕಾ ಮಟ್ಟದ ವಾಲ್ಮೀಕಿ ಸಮುದಾಯ ಜನಜಾಗೃತಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ ತಳವಾರ, ಪರಿವಾರ ಮತ್ತು …

Read More »

ಹಿಂದೂ ಎಂಬುದು ಧರ್ಮವಲ್ಲ: ಸಿದ್ಧರಾಮಶ್ರೀ

ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವ‍ಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗು ವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು. ‘ಹಿಂದೂಗಳು …

Read More »

ಕಾರವಾರ: ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ನೀಡಿ ಎಂದು ಜಿಲ್ಲಾಡಳಿತಕ್ಕೆ ಮನವಿ

ಕಾರವಾರ: ಜಿಲ್ಲೆಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಮರಳು ಕಾರ್ಮಿಕರ ಸಂಘವು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಹಸಿರು ಪೀಠದ ಆದೇಶದಂತೆ ಕರಾವಳಿಯಲ್ಲಿ ಕಳೆದ 2022ರ ಮೇ 18 ರಂದು ಸಾಂಪ್ರದಾಯಿಕವಾಗಿ ಮರಳುದಿಬ್ಬ ತೆರವುಗೊಳಿಸಿ ಸಾಗಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದೆ. ಇದರಿಂದ ಜಿಲ್ಲೆಯಲ್ಲಿ ಮರಳು ತೆಗೆಯುವುದು ಸ್ಥಗಿತವಾಗಿದೆ.   ಜಿಲ್ಲೆಯ ಜನರಿಗೆ ಮರಳು ಲಭ್ಯವಾಗುತ್ತಿಲ್ಲ. ಸದ್ಯ ಮಂಗಳೂರಿನ ಕೆಲವು ಗುತ್ತಿಗೆದಾರರು …

Read More »

ಬಣಜಿಗರಿಗೆ ಅವಹೇಳನ ಆರೋಪ: ಶಾಸಕ ಬಸನಗೌಡ ಯತ್ನಾಳ್‌ ವಿರುದ್ಧ ಪ್ರತಿಭಟನೆ

ಹೊಸಪೇಟೆ (ವಿಜಯನಗರ): ಬಣಜಿಗರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ತಹಶೀಲ್ದಾರ್‌ ಕಚೇರಿ ಎದುರು ಸೇರಿದ ಸಂಘದವರು ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಮನವಿ ಪತ್ರ ಸಲ್ಲಿಸಿದರು.   ಇತ್ತೀಚೆಗೆ ವಿಜಯಪುರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್‌ ಅವರು ವಿನಾಕಾರಣ ಬಣಜಿಗ ಸಮಾಜದ ಬಗ್ಗೆ …

Read More »

Pro Kabaddi | ಕಬಡ್ಡಿ: ಯೋಧಾಸ್‌ಗೆ ಗೆಲುವು

ಪುಣೆ : ಪ್ರದೀಪ್‌ ನರ್ವಾಲ್‌ (22 ಪಾಯಿಂಟ್ಸ್‌) ಅವರ ಮಿಂಚಿನ ಆಟದ ನೆರವಿನಿಂದ ಯು.ಪಿ.ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸುಲಭ ಗೆಲುವು ಪಡೆಯಿತು. ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯೋಧಾಸ್‌ 50-31 ರಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು ಮಣಿಸಿತು.   ವಿಜಯಿ ತಂಡ ವಿರಾಮದ ವೇಳೆಗೆ 29-14 ರಲ್ಲಿ ಮುನ್ನಡೆಯಲ್ಲಿತ್ತು.   ಪೈರೇಟ್ಸ್‌- ತಲೈವಾಸ್‌ ಪಂದ್ಯ ಟೈ: ಪಟ್ನಾ ಪೈರೇಟ್ಸ್‌ ಮತ್ತು ತಮಿಳ್ ತಲೈವಾಸ್‌ …

Read More »

ದೆಹಲಿ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮವಿತ್ತ ಹುಬ್ಬಳ್ಳಿ ಮಹಿಳೆ

ನವದೆಹಲಿ: ಕರ್ನಾಟಕದ ಹುಬ್ಬಳ್ಳಿಗೆ ತೆರಳಬೇಕಾಗಿದ್ದ ಮಹಿಳೆ ರಾಷ್ಟ್ರ ರಾಜಧಾನಿ ನವದೆಹಲಿ ವಿಮಾನ ನಿಲ್ದಾಣದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಂಗಳವಾರ ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ ಈ ಘಟನೆ ನಡೆದಿದೆ. ಈ ಮೂಲಕ ನವದೆಹಲಿ ವಿಮಾನ ನಿಲ್ದಾಣಕ್ಕೆ ಅತ್ಯಂತ ಯುವ ಪ್ರಯಾಣಿಕರೊಬ್ಬರು ಆಗಮಿಸಿದಂತೆ ಆಗಿದೆ. ವಿಮಾನಕ್ಕಾಗಿ ಮಹಿಳೆ ಪತಿಯ ಜತೆಗೆ ಕಾಯುತ್ತಿದ್ದರು. ತುಂಬು ಗರ್ಭಿಣಿಯಾಗಿದ್ದ ಅವರು ಶೌಚಾಲಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ಸಮೀಪದಲ್ಲಿಯೇ …

Read More »