ಬೆಂಗಳೂರು, (ಆಗಸ್ಟ್. 06): ಕರ್ನಾಟಕದಲ್ಲಿ (karnataka) ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಯಾರನ್ನು ಮಾಡುತ್ತೆ ಎನ್ನುವುದರಲ್ಲಿ ರಾಜ್ಯ ಬಿಜೆಪಿ(BJP) ನಾಯಕರು ಇದ್ದಾರೆ. ಇದರ ನಡುವೆ ಅತ್ತ ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ವರ್ಗಾವಣೆ ದಂಧೆ ವಿಚಾರವಾಗಿ ಪೆನ್‌ಡ್ರೈವ್ ಬಂಬ್ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಒಂದು ಸಾವಿರ ಕೋಟಿ ವಸೂಲಿ ಪಕ್ಷ.. ಪೆನ್‌ಡ್ರೈವ್ ಎಂದು …
Read More »ಟೊಮ್ಯಾಟೊ ಬೆಳೆದು ಕೋಟ್ಯಧಿಪತಿಗಳಾದ ಅಣ್ತಮ್ಮ
ಈ ಕುಟುಂಬ ಮೊದಲಿಗೆ ಸ್ವಂತ ಜಮೀನಿನಲ್ಲಿ ಮಳೆ ಆಶ್ರಿತ ಬೆಳೆ ಬೆಳೆದು ಜೀವನ ಸಾಗಿಸುತ್ತಿತ್ತು. ಬಳಿಕ ಸಹೋದರರು ಎಸ್ಎಸ್ಎಲ್ಸಿ ಮುಗಿಸಿ, ಕಾಲೇಜು ಮೆಟ್ಟಿಲು ಏರದೆ ಕೃಷಿ ಮಾಡುವ ನಿರ್ಧಾರ ಕೈಗೊಂಡರು. 3-4 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಹೋದರರು ಟೊಮ್ಯಾಟೊ ಬೆಳೆಯುವುದನ್ನೇ ರೂಢಿಯಾಗಿಸಿಕೊಂಡಿದ್ದಾರೆ. 2 ವರ್ಷಗಳ ಹಿಂದೆ ಟೊಮ್ಯಾಟೊ ಬೆಲೆ ಕಡಿಮೆ ಇದ್ದ ಕಾರಣ ಅಷ್ಟೇನೂ ಲಾಭ ಸಿಕ್ಕಿರಲಿಲ್ಲ. ಹಿಂದಿನ ವರ್ಷವೂ ಖರ್ಚು ಸಿಕ್ಕಿತ್ತೇ ಹೊರತು ಲಾಭ ಕಂಡಿರಲಿಲ್ಲ. ಆದರೂ ಟೊಮ್ಯಾಟೊ …
Read More »ಸಾಲುಮರದ ತಿಮ್ಮಕ್ಕ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲು
ಬೆಂಗಳೂರು : ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದು, ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಸಂಜೆ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಯಾವುದೇ ತೊಂದರೆಯಾಗಿಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇಂದು ಹಾಸನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗಿದ ಸಾಲುಮರದ …
Read More »ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಸೋಮವಾರ ವಿವಿಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಆಗಸ್ಟ್ 7 ರಂದು (ನಾಳೆ) ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಕೈ ಬಿಟ್ಟಿದ್ದು, ರಾಜ್ಯದ ಅನ್ನದಾತರ ವಿರುದ್ಧವಾಗಿ ನಡೆದುಕೊಂಡಿದೆ. ರೈತ ವಿರೋಧಿ ನೀತಿಯನ್ನು ಖಂಡಿಸಿ ಸೋಮವಾರ ವಿವಿಧ ಜಿಲ್ಲಾ …
Read More »ವಾರಾಂತ್ಯದ ಪಾರ್ಟಿ ನೆಪದಲ್ಲಿ ಪುಂಡಾಟಿಕೆ ಮದ್ಯದ ಅಮಲಿನಲ್ಲಿದ್ದ ಯುವತಿಯ ರಂಪಾಟ
ಬೆಂಗಳೂರು: ವಾರಾಂತ್ಯದ ಪಾರ್ಟಿ ನೆಪದಲ್ಲಿ ಪುಂಡಾಟಿಕೆ ಮೆರೆಯುವ ಪ್ರಕರಣಗಳು ನಗರದಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ. ಅಂಥಹದ್ದೇ ಮತ್ತೊಂದು ಪ್ರಕರಣ ಶನಿವಾರ ತಡರಾತ್ರಿ ನಗರದ ಚರ್ಚ್ ಸ್ಟ್ರೀಟ್ನಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ತಲೆ ನೋವಾದ ಘಟನೆ ನಡೆದಿದೆ. ಬುದ್ಧಿ ಹೇಳಲು ಹೋದವರ ಮೇಲೆಯೇ ಮುಗಿ ಬೀಳುತ್ತಿದ್ದ ಯುವತಿಯನ್ನು ಸಂಬಾಳಿಸುವಲ್ಲಿ ಪೊಲೀಸರೇ ಹೈರಾಣಾಗಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಯತ್ನಿಸಿದ್ದಾರೆ. ಆದರೆ ಮಹಿಳಾ ಸಿಬ್ಬಂದಿಗಳಿಲ್ಲದ …
Read More »ಹೈದರಾಬಾದ್ನ ಐತಿಹಾಸಿಕ ಸಂಕೇತವಾದ ಚಾರ್ ಮಿನಾರ್ ಇನ್ನು ಮುಂದೆ ವರ್ಷಪೂರ್ತಿ ವಿದ್ಯುದ್ಧೀಪಗಳಿಂದ ಜಗಮಗಿಸಲಿದೆ.
ಹೈದರಾಬಾದ್ (ತೆಲಂಗಾಣ) : ಹೈದರಾಬಾದ್ನ ಐತಿಹಾಸಿಕ ಸಂಕೇತವಾದ ಚಾರ್ ಮಿನಾರ್ ಇನ್ನು ಮುಂದೆ ವರ್ಷಪೂರ್ತಿ ವಿದ್ಯುದ್ಧೀಪಗಳಿಂದ ಜಗಮಗಿಸಲಿದೆ. ಪ್ರಸಿದ್ಧ ಸ್ಮಾರಕವಾಗಿರುವ ಚಾರ್ಮಿನಾರ್ ಮುಂಭಾಗದ ವಿದ್ಯುದ್ದೀಪದ ವ್ಯವಸ್ಥೆಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಶನಿವಾರ ರಾತ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಾರ್ಮಿನಾರ್ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಅದ್ಭುತವಾಗಿ ಬೆಳಗಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ರೆಡ್ಡಿ, “ಇನ್ನು ಮುಂದೆ ವರ್ಷವಿಡೀ ಪ್ರತಿದಿನ ಸಂಜೆ ಚಾರ್ಮಿನಾರ್ ಅನ್ನು ವಿದ್ಯುದ್ದೀಪಗಳಿಂದ …
Read More »ಜಲ ಮೂಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ವಯಂ ಸೇವಕರು, ಗ್ರಾಮೀಣ ಸಮುದಾಯದ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಚಿಂತನೆ
ಬೆಂಗಳೂರು: ”ಜಲ ಮೂಲಗಳಾದ ನದಿ, ಕೆರೆ ಮತ್ತು ನಾಲೆಗಳ ಸಂರಕ್ಷಣೆಗೆ ಸ್ವಯಂ ಸೇವಕರು ಹಾಗೂ ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಚಿಂತನೆ ನಡೆಸಿದೆ” ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಹೇಳಿದರು. ವಿಕಾಸಸೌಧದಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿದ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ ಡಾ. ಲಿಂಗರಾಜು ಯಾಲೆ ಅವರ ನೇತೃತ್ವದ ತಂಡದೊಂದಿಗೆ …
Read More »ಒಣದ್ರಾಕ್ಷಿ ಬೆಲೆ ಕುಸಿತದಿಂದ ಬೆಳೆಗಾರರು ಅಕ್ಷರಶಃ ಕಂಗಾಲ
ಚಿಕ್ಕೋಡಿ (ಬೆಳಗಾವಿ) : ಒಣದ್ರಾಕ್ಷಿ ಬೆಲೆ ಕುಸಿತದಿಂದ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದು, ರಾಜ್ಯ ಸರ್ಕಾರ ತುರ್ತಾಗಿ ಬೆಳೆ ಖರೀದಿ ಮಾಡಿ ತಮ್ಮ ನೆರವಿಗೆ ಬರುವಂತೆ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆಯನ್ನು ಬಿಟ್ಟರೆ ಬೆಳಗಾವಿ ಜಿಲ್ಲೆಯ ರಾಯಬಾಗ, ಕಾಗವಾಡ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಅತಿ ಹೆಚ್ಚು ದ್ರಾಕ್ಷಿ ಬೆಳೆಗಾರರನ್ನು ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ, ಈ ಬಾರಿ ಬೆಲೆ ಕುಸಿತದಿಂದ ಸಾವಿರಾರು ಟನ್ …
Read More »ಜಾಗತಿಕವಾಗಿ ಅಕ್ಕಿ ದರ ಭಾರಿ ಹೆಚ್ಚಳ
ನವದೆಹಲಿ : ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್‌ಎಒ) ಎಲ್ಲಾ ಅಕ್ಕಿ ಬೆಲೆ ಸೂಚ್ಯಂಕವು (All Rice Price Index) ತಿಂಗಳಲ್ಲಿ ಶೇಕಡಾ 2.8 ರಷ್ಟು ಹೆಚ್ಚಾಗಿ ಶೇ 19.7ಕ್ಕೆ ತಲುಪಿದೆ. ಸೆಪ್ಟೆಂಬರ್ 2011 ರ ನಂತರ ಆಲ್ ರೈಸ್ ಪ್ರೈಸ್ ಇಂಡೆಕ್ಸ್ನ ಅತ್ಯಧಿಕ ಮಟ್ಟ ಇದಾಗಿದೆ. ಜುಲೈ 20ರಂದು ಭಾರತವು ಸ್ಟೀಮ್ ಮಾಡದ ಭಾರತೀಯ ಅಕ್ಕಿಯ ರಫ್ತನ್ನು ನಿಷೇಧಿಸಿದ್ದರಿಂದ ಇತರ ಮಾದರಿಯ ಅಕ್ಕಿಯ ಬೆಲೆಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ …
Read More »ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ಮೋದಿಗೆ ಕೊಡುತ್ತೇನೆ,:H.D.K
ಬೆಂಗಳೂರು : ನೈಸ್ ರಸ್ತೆ ಮಾಡುವ ಸಂದರ್ಭದಲ್ಲಿ ರೈತರ ಜಮೀನನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ನೈಸ್ ಹಗರಣದ ದಾಖಲೆಗಳನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಕೋಟಿ, ಕೋಟಿ ಹಣ ಲೂಟಿಯಾಗಿದೆ. ನೈಸ್ ಸಂಸ್ಥೆ ವಿರುದ್ಧ ದೂರು ನೀಡಲು ಪ್ರಧಾನಿ ನರೇಂದ್ರ ಮೋದಿ …
Read More »
Laxmi News 24×7