Breaking News
Home / ರಾಷ್ಟ್ರೀಯ (page 32)

ರಾಷ್ಟ್ರೀಯ

ಹಣಕ್ಕಾಗಿ ಮಗಳನ್ನು ಸೋನುಗೆ ದತ್ತು ಕೊಟ್ರಾ ಪೋಷಕರು?

ಬೆಂಗಳೂರು: ಬಾಲಕಿಯನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಬಿಗ್​ಬಾಸ್​ ಒಟಿಟಿ ಸೀಸನ್​-1ರ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ವಿರುದ್ಧ FIR ದಾಖಲಾಗಿದ್ದು, ಆಕೆಯನ್ನು ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ.   ಮಾರ್ಚ್​ 25ರಂದು ಸೋನು ಶ್ರೀನಿವಾಸ್​ ಗೌಡ ಅವರನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಬೇಕಿದೆ. ಅಲ್ಲಿಯವರೆಗೆ ಸೋನು ಗೌಡ ಅವರನ್ನು ರಾಯಚೂರಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಲಿದ್ದಾರೆ. ಆದ್ದರಿಂದ ನ್ಯಾಯಾಲಯ ಅವರನ್ನು …

Read More »

ಕೋಟ ಶ್ರೀನಿವಾಸ್ ಗೆ ಹಿಂದಿ, ಇಂಗ್ಲಿಷ್ ಬರಲ್ಲ, ಅವರನ್ನ ಗೆಲ್ಲಿಸಿದ್ರೆ ದಿಲ್ಲಿಯಲ್ಲಿ ಕೆಲಸಗಳಾಗಲ್ಲ: ಜಯಪ್ರಕಾಶ್ ಹೆಗ್ಡೆ

ಉಡುಪಿ: ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಗೆ (Kota srinivas poojary) ಕನ್ನಡ ಬಿಟ್ಟರೇ ಹಿಂದಿ ಅಥವಾ ಇಂಗ್ಲೀಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ (Delhi) ಕೆಲಸಗಳಾಗುವುದಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ (Jayaprakash Hegde) ಹೇಳಿದ್ದಾರೆ.   ಉಡುಪಿ-ಚಿಕ್ಕಮಗಳೂರು (Udupi-Chikkamagalur) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ತನ್ನ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ್ ಪೂಜಾರಿ ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಕಣಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆ ಬ್ರಹ್ಮಾವರದ (Brahmavara) …

Read More »

ಅಡಿವೆಪ್ಪನಿಗೆ ಒಲಿದಿದ್ದ 7 ಸರ್ಕಾರಿ ನೌಕರಿ

ಆಲಮಟ್ಟಿ: ಒಂದೇ ಒಂದು ಸರ್ಕಾರಿ ಹುದ್ದೆ ಗಿಟ್ಟಿಸಲು ಒದ್ದಾಡುವ ಈಗಿನ ಕಾಲದಲ್ಲಿ ಗ್ರಾಮೀಣ ಭಾಗದ, ಬಡತನದಲ್ಲಿ ಬೆಂದ ಯುವಕ ತನ್ನ ಪ್ರತಿಭೆಯಿಂದ ಪಡೆದಿದ್ದು ಬರೋಬ್ಬರಿ ಏಳು ಸರ್ಕಾರಿ ನೌಕರಿ. ಹೌದು, ಇವರು ಸಮೀಪದ ಬೇನಾಳ ಆರ್.ಎಸ್. ಗ್ರಾಮದ 35ರ ವಯೋಮಾನದ ಅಡಿವೆಪ್ಪ ಸಿದ್ರಾಮಪ್ಪ ಹಂಡಿ. ದುಡಿಯಲು ಹೋದರೆ ಮಾತ್ರ ಊಟ, ಇಲ್ಲದಿದ್ದರೆ ಉಪವಾಸ ಎನ್ನುವಂತಹ ಕುಟುಂಬದ ಸ್ಥಿತಿ. ಬೇನಾಳ ಗ್ರಾಮದ ಸಿದ್ರಾಮಪ್ಪ-ಲಕ್ಷ್ಮಿ ದಂಪತಿಯ ಪುತ್ರ ಅಡಿವೆಪ್ಪ, ಚಿಕ್ಕವನಿದ್ದಾಗಲಿನಿಂದಲೂ ಛಲ ಹಾಗೂ …

Read More »

ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ

ಬೆಂಗಳೂರು: ನವರಸ ನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ ಎಂದು ಹೇಳಬಹುದಾಗಿದೆ. ಮಾರ್ಚ್​ 17ರಂದು ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 61ನೇ ಜನುಮದಿನವನ್ನು ಆಚರಿಸಿಕೊಂಡ ನಟ ಜಗ್ಗೇಶ್​ಗೆ ಇದೀಗ ವಿವಾಹ ವಾರ್ಷಿಕೋತ್ಸವದ ದಿನವನ್ನೂ ಸಂಭ್ರಮಿಸಿದ್ದಾರೆ.ಪತ್ನಿ ಪರಿಮಳ ಜತೆಗಿನ 40 ವರ್ಷದ ಪ್ರಯಾಣವನ್ನು ನೆನೆಪು ಮಾಡಿಕೊಂಡಿದ್ದಾರೆ. 1982ರ ಕಾಲಘಟ್ಟಕ್ಕೆ ಮತ್ತೆ ಜಾರಿದ್ದಾರೆ.   ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಹಲವರು ಲವ್ ಮಾಡಿ ಮದುವೆ ಆಗಿದ್ದಾರೆ. ನಟ …

Read More »

ಬೆಳಗಾವಿ | ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಲೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ‘ನಾವು ನಡೆಸಿರುವ ಎಲ್ಲ ಸಮೀಕ್ಷೆಗಳಲ್ಲೂ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳ ಕುರಿತು ಉತ್ತಮ ಪ್ರತಿಕ್ರಿಯೆ ಬಂದಿದೆ. ಒಗ್ಗಟ್ಟಾಗಿ ಚುನಾವಣೆ ಮಾಡಿ. ಉತ್ತರಕನ್ನಡ ಜಿಲ್ಲೆ ಸೇರಿ ಬೆಳಗಾವಿಯ ಜಿಲ್ಲೆಗಳಿಗೆ ಒಳಪಡುವ ಮೂರೂ ಲೋಕಸಭಾ ಕ್ಷೇತ್ರಗಳಲ್ಲೂ ಖಚಿತವಾಗಿ ಗೆಲುವು ಸಾಧಿಸಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು. ಬೆಂಗಳೂರಿನ ಕಾವೇರಿಯಲ್ಲಿ ಶುಕ್ರವಾರ ನಡೆದ ಬೆಳಗಾವಿ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, …

Read More »

ತೇಗೂರು ಚೆಕ್‌ಪೋಸ್ಟ್‌: 776 ಗ್ರಾಂ ಚಿನ್ನಾಭರಣ ವಶ

ಧಾರವಾಡ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (ನಿಪ್ಪಾಣಿ-ಗಂಗಾವತಿ) ಒಯ್ಯುತ್ತಿದ್ದ 776 ಗ್ರಾಂ ( ₹ 38.5 ಲಕ್ಷ) ಚಿನ್ನಾಭರಣಗಳನ್ನು ತೇಗೂರು ಚೆಕ್ ಪೋಸ್ಟ್‌ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ 11.30 ವೇಳೆಯಲ್ಲಿ ಸಿಬ್ಬಂದಿ ಬಸ್‌ ತಪಾಸಣೆ ಮಾಡಿದಾಗ ಚಿನ್ನಾಭರಣ ಸಿಕ್ಕಿವೆ. ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ ಹುಕುಮಜಿ ಮಾಲಿ ಅವರು ಚಿನ್ನದ ಸರ, ಗುಂಡು, ಲಾಕೆಟ್‌ಗಳನ್ನು ಬಸ್‌ನಲ್ಲಿ ಸಿಂಧನೂರಿಗೆ ಒಯ್ಯುತ್ತಿದ್ದರು. ಅವರು ತೋರಿಸಿದ ಆಭರಣ ಖರೀದಿ ಬಿಲ್‍ಗಳಲ್ಲಿ ನಮೂದಾಗಿರುವ ತೂಕ …

Read More »

ಹಂಸಲೇಖಗೆ ‘ವಿಶ್ವ ಚೇತನ’ ಪ್ರಶಸ್ತಿ

ಚಿಕ್ಕೋಡಿ : ತಾಲ್ಲೂಕಿನ ಯಡೂರು ಗ್ರಾಮದ ಕಾಡ ಸಿದ್ಧೇಶ್ವರ ಮಠ ನೀಡುವ ವಿಶ್ವ ಚೇತನ ಪ್ರಶಸ್ತಿಗೆ ಸಂಗೀತ ನಿರ್ದೇಶಕ ಹಂಸಲೇಖ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 51 ಸಾವಿರ ನಗದು ಮತ್ತು ಸ್ಮರಣಿಕೆ ಹೊಂದಿದೆ. ಮಾರ್ಚ್ 25ರಂದು ನಡೆಯುವ ವೀರಭದ್ರದೇವ ಕಾಡಸಿದ್ದೇಶ್ವರ ಮಠ ಮತ್ತು ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹಾಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Read More »

ಕಾಂಗ್ರೆಸ್‌ನಲ್ಲಿ ಹೊಸ ನೀರಿನ ಹೊಳೆ; ಹಿರಿಯರ ಎದುರು ಹೊಸ ಚಿಗುರು

ಬೆಳಗಾವಿ: ಜಿಲ್ಲೆಯ ಕಾಂಗ್ರೆಸ್‌ ಪಾಳೆಯದಲ್ಲಿ ಕಳೆದ 15 ದಿನಗಳಿಂದ ತೀವ್ರ ಗುಮಾನಿಗೆ ಕಾರಣವಾಗಿದ್ದ ಟಿಕೆಟ್‌ ವಿಚಾರ ಈಗ ನಿರಾಳವಾಗಿದೆ. ಇಬ್ಬರೂ ಸಚಿವರ ಮಕ್ಕಳಿಗೇ ಟಿಕೆಟ್‌ ‘ಗ್ಯಾರಂಟಿ’ ಎಂದು ಕಾಂಗ್ರೆಸ್‌ ಘೋಷಿಸಿದೆ. ತಂದೆ-ತಾಯಿ ಅಧಿಕಾರದಲ್ಲಿ ಇದ್ದಾಗಲೇ ಎಳೆ ವಯಸ್ಸಿನ ರಾಜಕಾರಣಿಗಳು ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ನಲ್ಲಿ ‘ಹೊಸ ನೀರಿನ’ ಹೊಳೆ ಹರಿಯಲಾರಂಭಿಸಿದೆ. ಎರಡೂ ಕ್ಷೇತ್ರಗಳಲ್ಲಿ ಹಿರಿಯರ ಎದುರು ಹೊಸ ಚಿಗುರು ಮೂಡಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ …

Read More »

ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಂಠಿತಗೊಳಿಸಲು ಪ್ರಧಾನಿಯಿಂದ ವ್ಯವಸ್ಥಿತ ಪ್ರಯತ್ನ: ಸೋನಿಯಾ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ನಿಧಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಂಠಿತಗೊಳಿಸಲು ಪ್ರಧಾನಿ ಮೋದಿ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಸಾರ್ವಜನಿಕರಿಂದ ಸಂಗ್ರಹಿಸಲಾಗಿರುವ ನಿಧಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ನಮ್ಮ ಖಾತೆಗಳಿಂದ ಬಲವಂತವಾಗಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಇಂತಹ ಭಾರಿ ಸವಾಲಿನ ಸನ್ನಿವೇಶದಲ್ಲಿಯೂ, ಚುನಾವಣಾ …

Read More »

ಬಿಜೆಪಿ ಅಭ್ಯರ್ಥಿ ಬದಲಾಗದಿದ್ದರೆ ಅಚ್ಚರಿಯ ಬಂಡಾಯ ಅಭ್ಯರ್ಥಿ

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಬದಲಾವಣೆಗೆ ಪಟ್ಟು ಹಿಡಿದಿರುವ ಅಸಮಾಧಾನಿತರ ಗುಂಪು ಬದಲಾವಣೆ ಮಾಡದಿದ್ದಲ್ಲಿ ಅಚ್ಚರಿ ಅಭ್ಯರ್ಥಿಯೊಬ್ಬರನ್ನ ಕಣಕ್ಕಿಳಿಸಲು ಸಹ ನಿರ್ಧರಿಸಿದ್ದಾರೆ. ಗುರುವಾರ ಸಂಜೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರೆಡ್ಡಿ, ಎಸ್.ಎ. ರವೀಂದ್ರನಾಥ್, ದಾವಣಗೆರೆ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗ ಲೇಬೇಕು. ಬದಲಾಗದಿದ್ದರೆ ಅಚ್ಚರಿಯ …

Read More »