Breaking News

ತೇಗೂರು ಚೆಕ್‌ಪೋಸ್ಟ್‌: 776 ಗ್ರಾಂ ಚಿನ್ನಾಭರಣ ವಶ

Spread the love

ಧಾರವಾಡ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (ನಿಪ್ಪಾಣಿ-ಗಂಗಾವತಿ) ಒಯ್ಯುತ್ತಿದ್ದ 776 ಗ್ರಾಂ ( ₹ 38.5 ಲಕ್ಷ) ಚಿನ್ನಾಭರಣಗಳನ್ನು ತೇಗೂರು ಚೆಕ್ ಪೋಸ್ಟ್‌ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ 11.30 ವೇಳೆಯಲ್ಲಿ ಸಿಬ್ಬಂದಿ ಬಸ್‌ ತಪಾಸಣೆ ಮಾಡಿದಾಗ ಚಿನ್ನಾಭರಣ ಸಿಕ್ಕಿವೆ.

ಧಾರವಾಡ | ತೇಗೂರು ಚೆಕ್‌ಪೋಸ್ಟ್‌: 776 ಗ್ರಾಂ ಚಿನ್ನಾಭರಣ ವಶ

ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ ಹುಕುಮಜಿ ಮಾಲಿ ಅವರು ಚಿನ್ನದ ಸರ, ಗುಂಡು, ಲಾಕೆಟ್‌ಗಳನ್ನು ಬಸ್‌ನಲ್ಲಿ ಸಿಂಧನೂರಿಗೆ ಒಯ್ಯುತ್ತಿದ್ದರು. ಅವರು ತೋರಿಸಿದ ಆಭರಣ ಖರೀದಿ ಬಿಲ್‍ಗಳಲ್ಲಿ ನಮೂದಾಗಿರುವ ತೂಕ ಮತ್ತು ತಪಾಸಣೆ ವೇಳೆ ಸಿಕ್ಕಿರುವ ಆಭರಣಗಳ ತೂಕಕ್ಕೂ ವ್ಯತ್ಯಾಸ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ