Breaking News
Home / ರಾಷ್ಟ್ರೀಯ (page 314)

ರಾಷ್ಟ್ರೀಯ

ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸುವ ಶಾಸಕರು

ಬೆಳಗಾವಿ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳ ಶಾಸಕರು ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸುವ ಮೂಲಕ‌ ರಾಜ್ಯದ ಗಮನ ಸೆಳೆದಿದ್ದಾರೆ. ರಾಜಕೀಯ ಪವರ್​ ಸೆಂಟರ್​ ಎಂದೇ ಬಿಂಬಿತವಾಗಿರುವ ಬೆಳಗಾವಿಯಲ್ಲಿ ಈ ಬಾರಿ ಕೆಲ ಪ್ರಭಾವಿಗಳು ಪರಾಭವಗೊಂಡಿದ್ದು, ಹೊಸ ತಲೆಮಾರಿನ ನಾಯಕರು ಗೆದ್ದಿರುವುದು ವಿಶೇಷವಾಗಿದೆ. ಬಾಬಾಸಾಹೇಬ ಪಾಟೀಲ: ವೀರ ವನಿತೆ ಚನ್ನಮ್ಮನ ನಾಡು ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿರುವ ಬಾಬಾಸಾಹೇಬ ಪಾಟೀಲ (77,536 ಮತ) ಇದೇ ಮೊದಲ …

Read More »

ಈ ಬಾರಿ ಸತೀಶ್​ ಜಾರಕಿಹೊಳಿಗೆ ಮಂತ್ರಿ‌ ಸ್ಥಾನ ಸಿಗುವುದು ಪಕ್ಕಾ,ಯಾವ್ಯಾವ ಶಾಸಕರಿಗೆ ಒಲಿಯುತ್ತೆ ಮಂತ್ರಿ ಸ್ಥಾನ

ಬೆಳಗಾವಿಯ ಜಿಲ್ಲೆಯಿಂದ 11 ಮಂದಿ ಕಾಂಗ್ರೆಸ್​ ಶಾಸಕರು ಆಯ್ಕೆಯಾಗಿದ್ದು, ಸಚಿವ ಸ್ಥಾನ ಪಡೆಯಲು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಬೆಳಗಾವಿ: ಕಾಂಗ್ರೆಸ್​ನಲ್ಲಿ ಒಂದೆಡೆ ಮುಖ್ಯಮಂತ್ರಿ‌ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದ್ದರೆ. ಮತ್ತೊಂದೆಡೆ ಅತೀ ಹೆಚ್ಚು ಶಾಸಕರನ್ನು ಗೆಲ್ಲಿಸಿ ಕೊಟ್ಟಿರುವ ಬೆಳಗಾವಿ ಜಿಲ್ಲೆಗೆ ಈ ಬಾರಿ ಹೆಚ್ಚು ಸಚಿವ ಸ್ಥಾನ‌ ಸಿಗುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ, ದಿ. ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, …

Read More »

ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ ಟಾಪ್​ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ.

ಬೆಳಗಾವಿ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಗೆಲುವನ್ನು ಸಾಧಿಸಿದೆ. ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿರುವ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವ ಹೊಂದಿರುವ ಜಿಲ್ಲೆ. ಇಲ್ಲಿ ಯಾವ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಆ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ. ಅಲ್ಲದೇ ಹಲವು ರಾಜಕೀಯ ವಿದ್ಯಮಾನಗಳಿಂದಲೂ ಸದಾ ಸುದ್ದಿಯಲ್ಲಿರುವ ಬೆಳಗಾವಿ ಜಿಲ್ಲೆ …

Read More »

ದೆಹಲಿಗೆ ತೆರಳಲಿರುವ ಡಿಕೆಶಿ: ಅನಾರೋಗ್ಯದ ನಡುವೆಯೂ ವರಿಷ್ಠರ ಭೇಟಿ

ಬೆಂಗಳೂರು: ಸಿಎಂ ವಿಚಾರವಾಗಿ ಕಾಂಗ್ರೆಸ್​ ಪಕ್ಷದಲ್ಲಿ ಗೊಂದಲವುಂಟಾಗಿದ್ದು, ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಎಐಸಿಸಿ ವರಿಷ್ಠರು ಸಿಎಂ ಸಿದ್ದಾರಮಯ್ಯ ಮತ್ತು ಡಿಕೆಶಿ ಅವರಿಗೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಬೆಳಗ್ಗೆ 9.50 ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಸ್ತಾರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಿನ್ನೆಯೇ ದೆಹಲಿಗೆ ತರಳಬೇಕಿದ್ದ ಡಿಕೆಶಿ ಅನಾರೋಗ್ಯದ …

Read More »

ಕುಡಿದ ಮತ್ತಿನಲ್ಲಿ ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಪೊಲೀಸರ ವಶಕ್ಕೆ

ನವದೆಹಲಿ: ದುಬೈ-ಅಮೃತಸರಕ್ಕೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗಗನಸಖಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ವ್ಯಕ್ತಿಯನ್ನು ಪೊಲೀಸರು ಬಂದಿಸಿದ್ದಾರೆ. ಪಂಜಾಬ್‌ನ ಜಲಂಧರ್‌ ಕೋಟ್ಲಿ ಗ್ರಾಮದವರಾದ ರಾಜಿಂದರ್ ಸಿಂಗ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಗನಸಖಿಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ವಾಗ್ವಾದಕ್ಕೆ ಇಳಿದಿದ್ದಾನೆ ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗಗನಸಖಿ ವಿಮಾನದ ಇತರ ಸಿಬಂದಿಗಳಲ್ಲಿ ಹೇಳಿಕೊಂಡಿದ್ದು ಘಟನೆಗೆ ಸಂಬಂಧಿಸಿ ಅಮೃತಸರದ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಮಾನ …

Read More »

ಹರಿಹರ: ಆಸ್ತಿ ವಿಚಾರದ ಗಲಾಟೆ; ಅಣ್ಣನನ್ನು ಇರಿದು ಕೊಂದ ತಮ್ಮ

ದಾವಣಗೆರೆ: ಆಸ್ತಿ ವಿಚಾರವಾಗಿ ಅಣ್ಣನನ್ನು ತಮ್ಮ ಚಾಕುನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಹರಿಹರದಲ್ಲಿ ಭಾನುವಾರ ರಾತ್ರಿ ನಡೆದಿದೆ ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ (31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನ ಪುತ್ರ ರಾಜು ಹಾಗೂ ಮೊದಲನೇ ಪತ್ನಿ ಲಕ್ಷಮ್ಮ ಕೊನೆಯ ಮಗನಾದ ಕುಮಾರ್ ನಡುವೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು.   ಇವರಿಬ್ಬರ …

Read More »

ಮಹದಾಯಿ ಉಳಿಸಲು ಎಲ್ಲವನ್ನೂ ಮಾಡಲಾಗಿದೆ : ಸಿಎಂ ಸಾವಂತ್

ಪಣಜಿ: ಮಹದಾಯಿ ನದಿ ಉಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲಾಗಿದೆ. ಮಹದಾಯಿ ಎಲ್ಲಾ ಗೋಮಾಂತಕ ಜನತೆಯ ತಾಯಿ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನದಿ ನೀರು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಪುನರುಚ್ಛರಿಸಿದ್ದಾರೆ.   ಗೋವಾ ಪಂಚಾಯತ್ ಮಹಿಳಾ ಶಕ್ತಿ ಅಭಿಯಾನ ಆಯೋಜಿಸಿದ್ದ ‘ಗೋವಾ ಸ್ಟಾರ್ ಮಹಿಳಾ ಪ್ರಶಸ್ತಿ-2023’ ವಿತರಣಾ ಸಮಾರಂಭದಲ್ಲಿ ‘ಜೀವನಗೌರವ’ ಪ್ರಶಸ್ತಿ ಪುರಸ್ಕೃತ ಜನಪ್ರಿಯ ಗಾಯಕಿ ಹೇಮಾ ಸರ್ದೇಸಾಯಿ ಅವರು ಮುಖ್ಯಮಂತ್ರಿಗಳಿಗೆ ದಿಢೀರ್ ಮಹದಾಯಿ ಕುರಿತು ಪ್ರಶ್ನೆ …

Read More »

ಚರಂಡಿಯಲ್ಲಿ ಸಿಲುಕಿದ ಪೆಟ್ರೋಲ್-ಡೀಸೆಲ್ ತುಂಬಿದ್ದ ಟ್ಯಾಂಕರ್

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ತ್ಯಾಜ್ಯ ತುಂಬಿದ ಚರಂಡಿಯಲ್ಲಿ ಪೆಟ್ರೋಲ್-ಡೀಸೆಲ್ ತುಂಬಿದ್ದ ಟ್ಯಾಂಕರ್ ಸಿಲುಕಿದ ಘಟನೆ ಭಾನುವಾರ ನಡೆದಿದೆ. ವಾಹನ ನಿಲ್ಲಿಸಲು ಚಾಲಕ ರಸ್ತೆ ಪಕ್ಕ ವಾಹನ ತೆಗೆದುಕೊಳ್ಳುತ್ತಿದ್ದಂತೆ ಟ್ಯಾಂಕರ್ ಎಡಭಾಗದ ಎಲ್ಲ ಚಕ್ರಗಳು ಚರಂಡಿಯಲ್ಲಿ ಕುಸಿದಿವೆ. ಟ್ಯಾಂಕರ್ ವಾಲಿಕೊಂಡು ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸಂಜೆ ಎರಡು ಕ್ರೇನ್ ಗಳ‌ ಮೂಲಕ ತೈಲ ತುಂಬಿದ್ದ ಟ್ಯಾಂಕರ್ ಮೇಲೆತ್ತಲಾಗಿದೆ. ಹೆದ್ದಾರಿ ನಿರ್ವಹಣಾ ಕಂಪನಿ ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಸ್ಥಳೀಯ …

Read More »

R.S.S. ಕಚೇರಿಗೆ ಭೇಟಿ ಮಹತ್ವದ ಚರ್ಚೆ ನಡೆಸಿದ ಬೊಮ್ಮಾಯಿ

ಬೆಂಗಳೂರು: ಚುನಾವಣೆಯ ಫಲಿತಾಂಶದ ಬಳಿಕ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಆರ್ ಎಸ್ ಎಸ್ ನಾಯಕರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಕ್ಕೆ ಭೇಟಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇಂದು ಆರ್ ಎಸ್ ಎಸ್ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬರುವಂತಹ ದಿನಗಳಲ್ಲಿ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ.‌ ರಾಜ್ಯಾಧಕ್ಷರು, ವರಿಷ್ಠರ ಜೊತೆಗೆ …

Read More »

ಭೀಕರ ಅಪಘಾತ ಸ್ಥಳದಲ್ಲೇ ಸಾವ

ಗದಗ: ಎರಡು ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ. ಶಿವಪ್ಪ ನಾಯ್ಕ್ (50), ಛಬ್ಬಿ ತಾಂಡಾ ನಿವಾಸಿ ಶಿವಾನಂದ ಲಮಾನಿ (33) ಹಾಗೂ ಡೋಣಿ ತಾಂಡಾ ನಿವಾಸಿ ಕೃಷ್ಣಪ್ಪ ಚೌಹಾಣ್ (31) ಮೃತರು. ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ಗದಗ …

Read More »