Breaking News
Home / ರಾಷ್ಟ್ರೀಯ (page 290)

ರಾಷ್ಟ್ರೀಯ

ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ.

ಬೆಳಗಾವಿ: ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅಧಿಕಾರವಧಿಯಲ್ಲಿ ಇಲ್ಲಿನ ಅಶೋಕ ನಗರದಲ್ಲಿ ನಿರ್ಮಾಣಗೊಂಡಿದ್ದ ಕ್ರೀಡಾ ಸಂಕೀರ್ಣಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ.   ಈಗ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಿದ್ದು, ಈಗಲಾದರೂ ಅದು ಬಳಕೆಯಾಗುವುದೇ? ಅಥವಾ ನಿಷ್ಪ್ರಯೋಜಕವಾಗಿಯೇ ಉಳಿಯುವುದೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ನ ಫಿರೋಜ್‌ ಸೇಠ್‌ ಉತ್ತರ ಕ್ಷೇತ್ರದ ಶಾಸಕರಾಗಿದ್ದಾಗ ಮಹಾನಗರ ಪಾಲಿಕೆ …

Read More »

ಮನಬಂದಂತೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು

ಬೆಳಗಾವಿ: ಇಲ್ಲಿನ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆಯಿಂದ ಲಿಂಗರಾಜ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ಇದೇ ರಸ್ತೆಯಲ್ಲಿ ಆಟದ ಮೈದಾನವಿದೆ. ಅಕ್ಕ-ಪಕ್ಕದಲ್ಲೇ ಶಿಕ್ಷಣ ಸಂಸ್ಥೆಗಳಿವೆ. ಈ ರಸ್ತೆ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ, ಕೆಲವರು ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ರಸ್ತೆಬದಿ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವುದರಿಂದ ಸಂಚಾರ ಸಮಸ್ಯೆ ತಲೆದೋರುತ್ತಿದೆ. ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸಿ, ಮನಬಂದಂತೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. …

Read More »

ಕುಡಚಿ: ಇನ್ನೂ ಕಾಡುತ್ತಿದೆ ಮೂಲಸೌಕರ್ಯ ಕೊರತೆ

ಕುಡಚಿ: ಪರಿಶಿಷ್ಟ ಜಾತಿಗೆ ಮೀಸಲಾದ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕುಡಚಿ ಕೂಡ ಒಂದು. ಹಿಂದುಳಿದ, ಪರಿಶಿಷ್ಟ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಜನ ಇಲ್ಲಿ ಹೆಚ್ಚಾಗಿದ್ದಾರೆ. ನೂತನ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಈ ಎಲ್ಲ ಸಮುದಾಯಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಮತ್ತು ಅವರ ಬೇಡಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಅವರ ಯಶಸ್ಸು ನಿಂತಿದೆ.   ಕುಡಚಿಯು ಬೆಳಗಾವಿ ಜಿಲ್ಲಾ ಕೇಂದ್ರದಿಂದ 104 ಕಿ.ಮೀ ದೂರವಿದೆ. ಕ್ಷೇತ್ರದ ಜನ …

Read More »

K.S.R.T.C. ಬಸ್ ಮತ್ತು ಕಾರ್ ನಡುವೆ ಬುಧವಾರ ಮಧ್ಯಾಹ್ನ ಮುಖಾಮುಖಿ ಡಿಕ್ಕಿ

ಶಿರಸಿ: ಇಲ್ಲಿನ ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ಕೆ‌ಎಸ್‌ಆರ್ ಟಿಸಿ ಬಸ್ ಮತ್ತು ಕಾರ್ ನಡುವೆ ಬುಧವಾರ ಮಧ್ಯಾಹ್ನ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಹಾಗೂ ಬಸ್ ನಲ್ಲಿದ್ದವರು ಎಲ್ಲರೂ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಬಸ್ ಭಟ್ಕಳದಿಂದ ಗೋಕಾಕ ಕಡೆ ಸಾಗುತ್ತಿತ್ತು. ಕಾರು ಗುಜರಾತ್ ಮೂಲದ ಕುಟುಂಬಕ್ಕೆ ಸೇರಿದೆ. ಅಪಘಾತ ಸಂಭವಿಸಿದ ವೇಳೆ ಸ್ಥಳದಲ್ಲಿದ್ದ ಆರ್ ಎನ್ ಎಸ್ ಕಂಪನಿಯ ಗೋವಿಂದ ಭಟ್ ಅವರು  ಪೋಲೀಸರಿಗೆ ಮಾಹಿತಿ ನೀಡಿದರಲ್ಲದೆ  ವಾಹನ …

Read More »

ಭಾರಿ ಸೇಕೆಯಿಂದ ಕೂಡಿದ್ದ ಬೆಳಗಾವಿಗೆ ನಿನ್ನೆ ರಾತ್ರಿಯಿಂದ ಕೊಂಚ ನಿರಾಳ

ಬೆಳಗಾವಿ: ಬುಧವಾರ ರಾತ್ರಿ ಬೆಳಗಾವಿಯಲ್ಲಿ ಉತ್ತಮ ಮಳೆಯಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಮಳೆ ಮಧ್ಯರಾತ್ರಿ ನಂತರವೂ ಮುಂದುವರಿದಿತ್ತು.  ರಾತ್ರಿಯಾಗುತ್ತಿದ್ದಂತೆ ಅನಿರೀಕ್ಷಿತವಾಗಿ ಮಳೆ ಆರಂಭವಾಯಿತು. ಅಬ್ಬರವಿಲ್ಲದಿದ್ದರೂ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಿರಂತರವಾಗಿ ಮಳೆ ಮುಂದುವರಿದಿತ್ತು. ಭಾರೀ ಸೆಕೆಯಿಂದಾಗಿ ಜನರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ಮಳೆ ತಂಪೆರೆಯಿತು.

Read More »

ಶೆಟ್ಟರ್ ಜೊತೆ ಉಪಹಾರ ಸೇವಿಸಿದ ಮುಖಂಡರು

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಮಧುರಾ ಎಸ್ಟೇಟ್’ನಲ್ಲಿರುವ ಕಾಂಗ್ರೆಸ್ ಮುಖಂಡ ಜಗದೀಶ ಶೆಟ್ಟರ್ ನಿವಾಸಕ್ಕೆ ಬುಧವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ಶೆಟ್ಟರ್ ಜೊತೆ ಉಪಹಾರ ಸೇವಿಸಿದ ಮುಖಂಡರು ಅರ್ಧ ತಾಸಿಗೂ ಹೆಚ್ಚು ಹೊತ್ತು ಗೋಪ್ಯ ಚರ್ಚೆ ನಡೆಸಿದರು. ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ ಮತ್ತು ಶಾಸಕ ಎನ್.ಎಚ್. ಕೋನರಡ್ಡಿ ಇದ್ದರು. ‘ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು’ …

Read More »

ಮಂಗಳವಾರ ಮನೆ ಕುಸಿದಿದ್ದು, ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಕಾಗವಾಡ: ರಭಸದ ಮಳೆ, ಗಾಳಿಯಿಂದಾಗಿ ತಾಲ್ಲೂಕಿನ ಕವಲಗುಡ್ಡದ ಹೊರವಲಯದಲ್ಲಿ ಮಂಗಳವಾರ ಮನೆ ಕುಸಿದಿದ್ದು, ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮಾರುತಿ ಸನದಿ ಅವರಿಗೆ ಸೇರಿದ ಮನೆ ಕುಸಿದಿದ್ದರಿಂದ ಪುತ್ರಿ ಗೀತಾಂಜಲಿ(14) ಕಟ್ಟಡದ ಅವಶೇಷಗಳಡಿ ಸಿಲುಕಿದ್ದಳು. ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡ ಬಾಲಕಿಯನ್ನು ಚಿಕಿತ್ಸೆಗಾಗಿ ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ತಂದೆ-ತಾಯಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಮೋಳೆ ಹೊರವಲಯದ ಭಡಕೆಯವರ ತೋಟದ ಹತ್ತಿರವಿರುವ ಶುದ್ಧ …

Read More »

ಬಿತ್ತನೆಬೀಜ ವಿತರಣೆಗೆ ಸಚಿವ ಸತೀಶ ಜಾರಕಿಹೊಳಿ ಸೂಚನೆ

ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರ (ಮೇ 31) ರೈತರಿಗೆ ಬಿತ್ತನೆಬೀಜ- ಗೊಬ್ಬರ ವಿತರಿಸಬೇಕು. ಆಯಾ ಶಾಸಕರ ಗಮನಕ್ಕೆ ತಂದು ವಿತರಣೆ ಕಾರ್ಯ ಆರಂಭಿಸಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು. ಜಿಲ್ಲೆಯ ಅಭಿವೃದ್ಧಿ ಕುರಿತು ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   ‘ಬೀಜ ಖರೀದಿಗೆ ರೈತರು ದೂರ ಅಲೆಯುವುದನ್ನು ತಪ್ಪಿಸಲು ಆದಷ್ಟು ಸಮೀಪದಲ್ಲಿ ಬೀಜ ಲಭಿಸುವಂತೆ ಕ್ರಮ …

Read More »

2,000 ನೆರವನ್ನು ಹಿರಿಯರಾದ ಅತ್ತೆಗೆ ಪ್ರಾಧಾನ್ಯ:ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ‘ಗೃಹ ಲಕ್ಷ್ಮೀ’ ಯೋಜನೆಯಡಿ ₹ 2,000 ನೆರವನ್ನು ಒಂದು ಮನೆಯಲ್ಲಿ ಅತ್ತೆಗೆ ಕೊಡಬೇಕೋ, ಸೊಸೆಗೆ ಕೊಡಬೇಕೋ ಎಂಬ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಮನೆಯಲ್ಲಿ ಹಿರಿಯರಾದ ಅತ್ತೆಗೆ ಪ್ರಾಧಾನ್ಯ ಕೊಡಬೇಕಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.   ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಮ್ಮ ಸಂಸ್ಕೃತಿಯಲ್ಲಿ ಅತ್ತೆಯೇ ಮನೆಯ ಯಜಮಾನಿ. ಹಾಗಾಗಿ, ಅತ್ತೆಗೆ ಈ ನೆರವು ಸಿಗಲಿದೆ’ …

Read More »

ಬೆಳಗಾವಿ ಜಿಲ್ಲೆಯಾದ್ಯಂತ ಬುಧವಾರದಿಂದ ಪ್ರಸಕ್ತ ಸಾಲಿನ ತರಗತಿ ಆರಂಭ

ಬೆಳಗಾವಿ: ಜಿಲ್ಲೆಯಾದ್ಯಂತ ಬುಧವಾರದಿಂದ ಪ್ರಸಕ್ತ ಸಾಲಿನ ತರಗತಿ ಆರಂಭಗೊಂಡಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಜಿಲ್ಲೆಯ 4,015 ಪ್ರಾಥಮಿಕ, ,1,200 ಪ್ರೌಢ ಸೇರಿದಂತೆ 5,215 ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.   ಇಲ್ಲಿನ ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹೂವು ನೀಡಿ ಅದ್ಧೂರಿಯಾಗಿ ಬರಮಾಡಿಕೊಂಡರು. ಬೇಸಿಗೆ ರಜೆಯಿಂದಾಗಿ ವಿದ್ಯಾರ್ಥಿಗಳಿಲ್ಲದೆ ಭಣಗುಡುತ್ತಿದ್ದ ಶಾಲೆಯಂಗಳದಲ್ಲಿ ಮಕ್ಕಳ ಕಲರವ ಕಂಡುಬಂತು. ಕೆಲವೆಡೆ ಸಾಂಕೇತಿಕವಾಗಿ ಪಠ್ಯಪುಸ್ತಕ ವಿತರಿಸಲಾಯಿತು.

Read More »