Breaking News
Home / ರಾಷ್ಟ್ರೀಯ (page 312)

ರಾಷ್ಟ್ರೀಯ

ನೂತನ ಶಾಸಕರೆದುರು ಸಾಲು ಸಾಲು ಸವಾಲು

ಅಳ್ನಾವರ: ತೀರಾ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳನ್ನೊಳಗೊಂಡ ಮತಕ್ಷೇತ್ರದ ಸಾಲು ಸಾಲು ಸವಾಲುಗಳು ನೂತನ ಶಾಸಕ ಸಂತೋಷ್‌ ಲಾಡ್‌ ಎದುರಿದೆ. ಕೆಲಸ ಮಾಡುವ ಹುಮ್ಮಸ್ಸಿನಿಂದ ಭಾರೀ ಬಹುಮತದಿಂದ ಆರಿಸಿ ಬಂದ ಲಾಡ್‌ ಅವರ ಮೇಲೆ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಳಿ ನದಿ ನೀರು ತರುವ ಯೋಜನೆ ಸಾಕಾರಗೊಳಿಸಿದ ಲಾಡ್‌ ಅವರು ಈ ಭಾಗದ ಜನರ ಬದುಕು ಹಸನಗೊಳಿಸಲು ದಿಟ್ಟ ಹೆಜ್ಜೆ ಹಾಕಬೇಕಿದೆ. ಹೊಸ …

Read More »

3 ತಿಂಗಳೊಳಗೆ ಫಿಟ್‌ ಆಗಿ ಇಲ್ಲಾ ರಾಜೀನಾಮೆ ನೀಡಿ: ಪೊಲೀಸರಿಗೆ DG ಖಡಕ್‌ ವಾರ್ನಿಂಗ್‌

ಮೊದಲೆಲ್ಲಾ ಪೊಲೀಸರಿಗೂ ಡೊಳ್ಳು ಹೊಟ್ಟೆಗೂ ಅದೇನೋ ಸಂಬಂಧವಿದ್ದಂತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗೀಗ ಪೊಲೀಸ್‌ ಅಧಿಕಾರಿಗಳೂ ಫಿಟ್‌ ಆಂಡ್‌ ಫೈನ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಸಹೋದ್ಯೋಗಿಗಳಿಗೂ ಅದೇ ರೀತಿ ಇರುವಂತೆ ಪ್ರೇರಣೆಯನ್ನೂ ಮಾಡುತ್ತಿದ್ದಾರೆ.   ಇದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂನ ಪೋಲಿಸ್‌ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಗಳಿಗೆ ʻ3 ತಿಂಗಳೊಳಗೆ ಫಿಟ್‌ ಆಗಿ ಇಲ್ಲಾ ರಾಜೀನಾಮೆ ನೀಡಿʼ ಎಂದು ಖಡಕ್‌ ಸೂಚನೆ ನೀಡಿದ್ದಾರೆ. ʻನಾವು ಅಸ್ಸಾಂನ ಐಪಿಎಸ್‌ …

Read More »

ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್: ತಾಳಿಕೋಟೆ ಯುವಕನ ಬಂಧನ

ವಿಜಯಪುರ: ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಯುಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ ಪೊಲೀಸ್ ಅತಿಥಿಯಾಗಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ ಮುಲ್ಲಾ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೋರಿ ಹಾಕಿದ್ದ.   ಇಬ್ರಾಹಿಂ ಮುಲ್ಲಾನ ಇನ್ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ತಾಳಿಕೋಟೆ ಪೊಲೀಸರು …

Read More »

ನೂತನ ಶಾಸಕರಾಗಿರುವ ಆಸೀಫ್​ (ರಾಜು) ಸೇಠ್ ಹಾಗೂ ಮಾಜಿ ಶಾಸಕ ಫೀರೋಜ್​​ ಸೇಠ್​ ಅವರು ಸ್ಥಗಿತಗೊಂಡಿದ್ದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಚಾಲನೆ ನೀಡಿದರು.

  ಬೆಳಗಾವಿ‌ಯಲ್ಲಿ ಸ್ಥಗಿತಗೊಂಡಿದ್ದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಆಸೀಫ್ ಸೇಠ್​​​ ಚಾಲನೆಬೆಳಗಾವಿ: ಇಲ್ಲಿನ ಕೋಟೆ ಆವರಣದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ದೇಶದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ನೂತನ ಶಾಸಕ ಆಸೀಫ್ (ರಾಜು) ಸೇಠ್ ಇಂದು ಚಾಲನೆ ನೀಡಿದರು.   ಫಿರೋಜ್ ಸೇಠ್ ಶಾಸಕರಾಗಿದ್ದ ವೇಳೆ ಕಿಲ್ಲಾ ಕೆರೆ ಆವರಣದಲ್ಲಿ ಅತೀ ಎತ್ತರದ 110 ಮೀಟರ್ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಾಟಕ್ಕೆ ಚಾಲನೆ …

Read More »

ಗೋಸಾಗಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ನಾಲ್ವರಿಗೆ ಜಾಮೀನು

ಬೆಂಗಳೂರು : ಗೋಸಾಗಣೆ ಆರೋಪದಲ್ಲಿ ಇದ್ರೀಶ್ ಪಾಷಾ ಎಂಬುವರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಆರೋಪಿಗಳಾದ ಪುನೀತ್ ಕೆರೆಹಳ್ಳಿ, …

Read More »

ಪಿವಿಆರ್​ ಐನಾಕ್ಸ್ ದೇಶದೆಲ್ಲಡೆ 50 ಸ್ಕ್ರೀನ್​​ ಮುಚ್ಚುವ ನಿರ್ಧಾರ

ಪಿವಿಆರ್​ ಐನಾಕ್ಸ್ ದೇಶದೆಲ್ಲಡೆ 50 ಸ್ಕ್ರೀನ್​​ ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಒಂದು ಕಡೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ಅನ್ನುವ ಮಾತಿದೆ. ಆದರೆ ಚಿತ್ರರಂಗದವರು ಈ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಟಿಟಿಯಿಂದ ಎದುರಾಗ್ತಿರುವ ಸಮಸ್ಯೆಯ ಬಗ್ಗೆಯೂ ಆಲೋಚನೆ ಮಾಡ್ತಿಲ್ಲ. ಚಿತ್ರಮಂದಿರಗಳ ಸ್ಥಿತಿ ಗತಿಯ ಕುರಿತು ಚರ್ಚೆ ಮಾಡ್ತಿಲ್ಲ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನ ಮರಳಿ ಕರೆತರುವ ಕುರಿತು ಚಿಂತನ ಮಂಥನ ನಡೆಯುತ್ತಿಲ್ಲ ಮಾಡ್ತಿಲ್ಲ ಎಂಬ ಮಾತುಗಳಿವೆ. ಇತ್ತ ಮಲ್ಟಿಪ್ಲೆಕ್ಸ್​ಗಳು ಭಾರಿ ನಷ್ಟ …

Read More »

ಬೆಂಗಳೂರು ನಗರದ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಕುರಿತಂತೆ ಎನ್​ಐಎ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಬೆಂಗಳೂರು : 2020ರ ಆಗಸ್ಟ್ 11ರಂದು ಬೆಂಗಳೂರು ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಎನ್‌ಐಎ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದು ಪಡಿಸುವಂತೆ ಕೋರಿ ಗಲಭೆಗೆ ಕಾರಣರಾಗಿದ್ದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.   ಸಾರ್ವಜನಿಕ ಆಸ್ತಿ ನಷ್ಟ ಆರೋಪ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯಲ್ಲಿ ನಡೆಯುತ್ತಿರುವ ತನಿಖೆ ಮತ್ತು ಈ ಸಂಬಂಧದ ಆರೋಪ ಪಟ್ಟಿಯನ್ನು ರದ್ದು ಪಡಿಸುವಂತೆ ಕೋರಿ ಮೊಹಮ್ಮದ್ …

Read More »

ಡಿಕೆಶಿ, ಸಿದ್ದರಾಮಯ್ಯ ಜೊತೆ ಖರ್ಗೆ ಚರ್ಚೆ; ನೂತನ ಸಿಎಂ ಘೋಷಣೆ ಸಾಧ್ಯತೆ..

ನವದೆಹಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್​ನಲ್ಲಿ ಭಾರಿ ಚರ್ಚೆಗಳು ನಡೆಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಎಐಸಿಸಿ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ನಂತರ ಖರ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕರ್ನಾಟಕ ಸಿಎಂ ಸ್ಥಾನದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕಾಂಗ್ರೆಸ್ ಅಧ್ಯಕ್ಷರು …

Read More »

ಸರ್ಕಾರಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

(ಉತ್ತರಪ್ರದೇಶ): ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿ ಶಿಕ್ಷಕನು ಕನಿಷ್ಠ 18 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿದುಬಂದಿದೆ. ಘಟನೆಯ ನಂತರ ವಿದ್ಯಾರ್ಥಿನಿಯರು ಶಾಲೆಗೆ ಬರುವುದನ್ನು ನಿಲ್ಲಿಸಿದ್ದು, ಈ ಹಿನ್ನೆಲೆ ಸರ್ಕಾರಿ ಶಾಲೆಯ ಹಾಜರಾತಿ ಕನಿಷ್ಠ ಶೇ.35ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಶಹಜಹಾನ್​ ಪುರದ ದಾದ್ರಾಲ್​ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. …

Read More »

ಸಿಇಟಿ-2023 ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ

ಬೆಂಗಳೂರು: ಸಿಇಟಿ ಪರೀಕ್ಷೆ 2023ಕ್ಕೆ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟಕಡೆಯ ಅವಕಾಶ ನೀಡಿದೆ. ಕೆಇಎ ಕಾಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು 21-05-2023 ರ ಸಂಜೆ 6ರಿಂದ 24-05-2023 ರ ರಾತ್ರಿ 11.59 ರವರೆಗೆ ಮಾಹಿತಿ ತಿದ್ದುಪಡಿ ಮಾಡಬಹುದು ಎಂದಿದ್ದಾರೆ. ಸಿಇಟಿ-2023 ರ ಫಲಿತಾಂಶ ಪ್ರಕಟಿಸುವ ಮುನ್ನ ಇದು ತಿದ್ದುಪಡಿಗೆ ಕೊನೆಯ …

Read More »