Breaking News
Home / ರಾಷ್ಟ್ರೀಯ (page 330)

ರಾಷ್ಟ್ರೀಯ

ಇಂದು ಎಲ್ಲೆಲ್ಲಿ ನರೇಂದ್ರ ಮೋದಿಮತಬೇಟೆ?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಬುಧವಾರ) ಕರಾವಳಿ, ಕಿತ್ತೂರು ಕರ್ನಾಟಕದಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಬೇಟೆ ನಡೆಸುವರು.   ಎಲ್ಲೆಲ್ಲಿ?: ಬೆಳಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಇದಾದ ನಂತರ ಉತ್ತರ ಕನ್ನಡ ಜಿಲ್ಲೆಗೆ ತೆರಳಿ ಅಂಕೋಲಾದಲ್ಲಿ ಮಧ್ಯಾಹ್ನ 1.15 ಗಂಟೆಗೆ ಜರುಗಲಿರುವ ಸಾರ್ವಜನಿಕ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಜರಂಗದಳ ಬ್ಯಾನ್ ಆಗಲ್ಲ- ಸಿಎಂ

ಗದಗ: ಬಜರಂಗದಳ ನಿಷೇಧಿಸಬೇಕೆಂದರೆ ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ, ಬಜರಂಗದಳ ನಿಷೇಧ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವ್ಯಂಗ್ಯವಾಡಿದರು. ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ಮಾತನಾಡಿದ ಅವರು, ಬಜರಂಗದಳ ಬ್ಯಾನ್‌ ಮಾಡೋ ಪ್ರಶ್ನೆಯೇ ಇಲ್ಲ. ಹಾಗೆಯೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ. ಸಾಮಾಜಿಕ, ಧಾರ್ಮಿಕವಾಗಿ ಕೆಲಸ ಮಾಡುವ ಸಂಘ ಅದು. ಪಿಎಫ್​ಐ ದೇಶವಿರೋಧಿ ಕೆಲಸ ಮಾಡಿದೆ. ಭಯೋತ್ಪಾದಕ ‌ಕೆಲಸದಲ್ಲಿ ತೊಡಗಿದೆ. ಅವರ ಮೇಲೆ …

Read More »

ಮಳೆ ಅವಾಂತರದಿಂದಾ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ಕೆಸರು ಗದ್ದೆಯಲ್ಲಿ

ರಾಯಚೂರು: ಮಳೆ ಅವಾಂತರದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ಕೆಸರು ಗದ್ದೆಯಲ್ಲಿ ಸಿಲುಕಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ ಸಿಂಧನೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು. ಬಿಜೆಪಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಭರ್ಜರಿ ಚುನಾವಣಾ ಪ್ರಚಾರ ಮಾಡಿ, ಕಲಬುರ್ಗಿಯತ್ತ ಪ್ರಧಾನಿ ಮೋದಿ ಸಾಗಿದ್ದಾರೆ. ಇದೇ ವೇಳೆ ಸಿಂಧನೂರಿನಲ್ಲಿ ಭಾರಿ ಮಳೆಯಾಗಿದ್ದು, ಪ್ರಧಾನಿ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ನಿಲ್ಲಿಸಿದ್ದ ಹೊಸಹಳ್ಳಿ ಹೆಲಿಪ್ಯಾಡ್ ಸಂಪೂರ್ಣ …

Read More »

ಮೇ 10ರಂದು ವೇತನ ಸಹಿತ ರಜೆ

ಬೆಳಗಾವಿ : ಭಾರತ ಚುನಾವಣಾ ಆಯೋಗವು ಮೇ.೧೦ ೨೦೨೩ ಬುಧವಾರ ದಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ನಿಗದಿಪಡಿಸಿದೆ. ಸದರಿ ದಿನದಂದು ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ೧೯೫೧ ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷೆನ್ ೧೩೫ (ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ರ್ಟೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ-೧೯೬೩ ಕಲಂ ೩ (ಎ) ರನ್ವಯ ಅರ್ಹ …

Read More »

ಮಹಾತ್ಮಾ ಗಾಂಧೀಜಿ ಮೊಮ್ಮಗ ಅರುಣ ಗಾಂಧಿ ನಿಧನ

ಕೊಲ್ಲಾಪುರ: ಮಹಾತ್ಮಾ ಗಾಂಧಿಯವರ ಮೊಮ್ಮಗ, ಲೇಖಕ ಅರುಣ್ ಗಾಂಧಿ (89) ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇಂದು ನಿಧನರಾದರು. ಅರುಣ್ ಗಾಂಧಿಯವರು ಮಹಾತ್ಮಾ ಗಾಂಧಿ ಮತ್ತು ಕಸ್ತೂರ್ಬಾ ಗಾಂಧಿಯವರ ಮಗ ಮಣಿಲಾಲ್ ಗಾಂಧಿ ಹಾಗೂ ಸುಶೀಲಾ ಮಶ್ರುವಾಲಾ ದಂಪತಿ ಯವರ ಪುತ್ರರಾಗಿದ್ದು, 1934 ರಏಪ್ರಿಲ್ ನಲ್ಲಿ ಡರ್ಬನ್‌ನಲ್ಲಿ ಜನಿಸಿದ್ದರು. ಲೇಖಕರಾಗಿದ್ದ ಅವರು, ತಮ್ಮ ಅಜ್ಜ ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ಅನುಸರಿಸುತ್ತ ಚಳವಳಿಯ ಹಾದಿಯಲ್ಲಿದ್ದರು. ಅವರ ಮಗ ತುಷಾರ್ ಗಾಂಧಿ ಇಂದು ಟ್ವಿಟ್ಟರ್‌ನಲ್ಲಿ ಸುದ್ದಿಯನ್ನು …

Read More »

ಕೌಟುಂಬಿಕ ಕಲಹದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ.

ಸದಲಗಾ: ಕೌಟುಂಬಿಕ ಕಲಹದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ. ಸುಜಾತಾ ಅಶೋಕ ಬಾನೆ ಕೊಲೆಯಾದವರು. ಸುಜಾತಾ ಹಾಗೂ ಅವರ ಪತಿ ಅಶೋಕ ಭೀಮಾ ಬಾನೆ ಮಧ್ಯೆ ಕೌಟುಂಬಿಕ ಕಲಹ ಇತ್ತೆನ್ನಲಾಗಿದೆ. ಇದು ಮಂಗಳವಾರ ತಾರಕಕ್ಕೇರಿ ಸಿಟ್ಟಿಗೆದ್ದ ಪತಿ ಅಶೋಕ ಬಾನೆ ಸುಜಾತಾ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಿದ್ದಾನೆ. ಕೊಲೆಗೈದ ನಂತರದಲ್ಲಿ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ …

Read More »

ಕಾಂಗ್ರೆಸ್​-ಜೆಡಿಎಸ್ ಎರಡೂ ಒಂದೇ, ಭ್ರಷ್ಟ, ಪರಿವಾರವಾದಿ ಪಕ್ಷಗಳು:ಮೋದಿ

ಚಿತ್ರದುರ್ಗ: ಕಾಂಗ್ರೆಸ್ ಮತ್ತು ಜೆಡಿಎಸ್​ ನೋಡಲು ಬೇರೆ ಪಕ್ಷಗಳಂತೆ ಕಂಡು ಬಂದರೂ, ಎರಡೂ ಪಕ್ಷಗಳು ಒಂದೇ ಆಗಿವೆ. ಉಭಯ ಪಕ್ಷಗಳು ಭ್ರಷ್ಟ, ಪರಿವಾರವಾದಿಯಾಗಿವೆ. ಈ ಪಕ್ಷಗಳು ಸಮಾಜದಲ್ಲಿ ಒಡಕುಗಳನ್ನು ಬಿತ್ತುತ್ತವೆ. ಅವರ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ನಿಧಾನಗತಿಯಲ್ಲಿತ್ತು. ಬಿಜೆಪಿಯ ಡಬಲ್​ ಇಂಜಿನ್​ ಸರ್ಕಾರ ರಚನೆಯಾಗುತ್ತಿದ್ದಂತೆ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಚಿತ್ರದುರ್ಗದಲ್ಲಿಂದು ಬಿಜೆಪಿ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಚಿತ್ರದುರ್ಗದ ಕೋಟೆಯನ್ನು ಏಳು …

Read More »

ಗಲ್ಲು ಬದಲಿಗೆ ಪರ್ಯಾಯ ಶಿಕ್ಷೆ ಪರಿಶೀಲಿಸಲು ಸಮಿತಿ ರಚನೆ: ಸುಪ್ರೀಂಗೆ ಕೇಂದ್ರ ಸರ್ಕಾರ

ನವದೆಹಲಿ: ಮರಣದಂಡನೆ ನೀಡುವ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವುದರ ಬದಲಾಗಿ ಪರ್ಯಾಯ ಮಾರ್ಗದ ಶೋಧನೆಗಾಗಿ ತಜ್ಞರ ಸಮಿತಿಯನ್ನು ರಚಿಸುವ ಸಲಹೆಯನ್ನು ಪರಿಗಣಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮಂಗಳವಾರ ತಿಳಿಸಿದೆ. ದೇಶದಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳನ್ನು ಉರುಳು ಹಾಕಿ ಗಲ್ಲಿಗೇರಿಸುವ ವಿಧಾನವಿದೆ. ಇದು ಅತ್ಯಂತ ಕ್ರೂರ ಎಂದು ಸುಪ್ರೀಂಕೋರ್ಟ್​ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಚಾಲ್ತಿಯಲ್ಲಿರುವ ಈ ವಿಧಾನವನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ …

Read More »

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ: ಇಲ್ಲಿದೆ ʼಕೈ‌ʼ ಗ್ಯಾರೆಂಟಿ ಲಿಸ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು. ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದರು. ಪ್ರಣಾಳಿಕೆಯ ಮುಖ್ಯಾಂಶಗಳು: ಬಿಪಿಎಲ್‌ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ …

Read More »

ನನ್ನ ಸೋಲಿಸಲು ಕಾರ್ಯಕರ್ತರ ಮೇಲೆ ಭಾಜಪ ಒತ್ತಡ: ಶೆಟ್ಟರ

ಹುಬ್ಬಳ್ಳಿ: ರಾಜಕಾರಣದಲ್ಲಿ ಒಳ ಮತ್ತು ಹೊರ ಹೊಡೆತಗಳಿವೆ. ಇದೀಗ ಬಿಜೆಪಿಯವರು ನನ್ನನ್ನು ಸೋಲಿಸಲು ಕಾರ್ಯಕರ್ತರ ಮೇಲೆ ಒತ್ತಡ ತರುತ್ತಿದ್ದಾರೆ. ಇದರಿಂದ ತಾಳ್ಮೆಯ ಕಟ್ಟೆ ಒಡೆದು ಹೋಗುತ್ತಿದ್ದು, ಇದರ ಪರಿಣಾಮ ಮುಂದಿನ ಲೋಕಸಭಾ ಚುನಾವಣೆ ಮೇಲೆ ಬೀರುತ್ತದೆ ಕಾದುನೋಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವರ್ಚಸ್ಸು ಕಡಿಮೆಯಾಗಿಲ್ಲ. …

Read More »