Breaking News
Home / ರಾಜಕೀಯ / ನೂತನ ಶಾಸಕರಾಗಿರುವ ಆಸೀಫ್​ (ರಾಜು) ಸೇಠ್ ಹಾಗೂ ಮಾಜಿ ಶಾಸಕ ಫೀರೋಜ್​​ ಸೇಠ್​ ಅವರು ಸ್ಥಗಿತಗೊಂಡಿದ್ದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಚಾಲನೆ ನೀಡಿದರು.

ನೂತನ ಶಾಸಕರಾಗಿರುವ ಆಸೀಫ್​ (ರಾಜು) ಸೇಠ್ ಹಾಗೂ ಮಾಜಿ ಶಾಸಕ ಫೀರೋಜ್​​ ಸೇಠ್​ ಅವರು ಸ್ಥಗಿತಗೊಂಡಿದ್ದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಚಾಲನೆ ನೀಡಿದರು.

Spread the love

 

ಬೆಳಗಾವಿ‌ಯಲ್ಲಿ ಸ್ಥಗಿತಗೊಂಡಿದ್ದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಆಸೀಫ್ ಸೇಠ್​​​ ಚಾಲನೆಬೆಳಗಾವಿ: ಇಲ್ಲಿನ ಕೋಟೆ ಆವರಣದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ದೇಶದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ನೂತನ ಶಾಸಕ ಆಸೀಫ್ (ರಾಜು) ಸೇಠ್ ಇಂದು ಚಾಲನೆ ನೀಡಿದರು.

 

ಫಿರೋಜ್ ಸೇಠ್ ಶಾಸಕರಾಗಿದ್ದ ವೇಳೆ ಕಿಲ್ಲಾ ಕೆರೆ ಆವರಣದಲ್ಲಿ ಅತೀ ಎತ್ತರದ 110 ಮೀಟರ್ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಾಟಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಕಳೆದ ಹಲವು ದಿನಗಳಿಂದ ನಿರ್ವಹಣೆ ಕೊರತೆಯಿಂದ ಧ್ವಜ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಈಗ ಶಾಸಕರಾದ ನಂತರ ಮೊದಲ ಕೆಲಸವೇ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ರಾಜು ಸೇಠ್ ತಮ್ಮ ಸಹೋದರ ಫಿರೋಜ್ ಸೇಠ್ ಜೊತೆ ಸೇರಿ ಲೋಕಾರ್ಪಣೆ ಮಾಡಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜು ಸೇಠ್, “ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಪ್ರತೀಕ. ರಾಷ್ಟ್ರಾಭಿಮಾನ ಗೌರವ, ಹೃದಯದಿಂದ ಬರಬೇಕು. ಪ್ರತಿಯೊಬ್ಬರೂ ದೇಶದ ಧ್ವಜಕ್ಕೆ ಗೌರವ ನೀಡಬೇಕು. ಕೇವಲ ಮಾತಿನಲ್ಲಿ ದೇಶದ ಪರವಾಗಿ ಕೆಲಸ ಮಾಡುವುದು ಬೇಡ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಎಲ್ಲರೂ ತಲೆ ಎತ್ತಿ ಧ್ವಜವನ್ನು ನೋಡುವಂತಾಗಬೇಕು. ಅಲ್ಲದೇ ಕಿಲ್ಲಾ ಕೋಟೆಯ ಕೆರೆಯಲ್ಲಿ ರಾಷ್ಟ್ರ ಧ್ವಜ ಪ್ರತಿದಿನ ಹಾರಾಡಬೇಕೆಂದು ಪ್ರಣಾಳಿಕೆಯಲ್ಲಿತ್ತು. ಹೀಗಾಗಿ ಮೊದಲ‌ ಕೆಲಸಕ್ಕೆ ಚಾಲನೆ ನೀಡಿದ್ದೇನೆ. ರಾಷ್ಟ್ರ ಧ್ವಜ ನಿರಂತರವಾಗಿ ಹಾರಾಡಬೇಕೆಂದು ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ನಗರದಲ್ಲಿ ವಿವಿಧ ಕಾಮಗಾರಿಗಳ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜು ಸೇಠ್, ಎಲ್ಲರೂ ತೆರಿಗೆ ಕಟ್ಟುವುದು ಯಾಕೆ.? ರಾಜ್ಯ, ಜಿಲ್ಲೆ, ನಗರ ಅಭಿವೃದ್ಧಿಯಾಗಬೇಕು. ಬಾಕಿ ಉಳಿದ ಕಾಮಗಾರಿಗಳ ಬಗ್ಗೆ ಪಾಲಿಕೆ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. 15 ದಿನ ಕಾಲಾವಕಾಶ ನೀಡಿದ್ದಾರೆ. ಕೆಲಸ ಮಾಡದ ಗುತ್ತಿಗೆದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ಬೇರೆ ಗುತ್ತಿಗೆದಾರರನ್ನು ನೇಮಕ ಮಾಡಲಾಗುವುದು. ಇನ್ನು ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಎರಡು-ಮೂರು ದಿನಗಳಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಸತೀಶ್​ ಜಾರಕಿಹೊಳಿ ಡಿಸಿಎಂ ಆಗಬೇಕು: ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಡಿಸಿಎಂ ಆಗಬೇಕು ಎಂದು ಈ ಹಿಂದೆ ಭಾಷಣದಲ್ಲಿ ಹೇಳಿದ್ದೆ. ಅವರು ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಈಗಲೂ ನನ್ನ ವೈಯಕ್ತಿಕ ಆಸೆ ಅದೇ ಆಗಿದ್ದು, ಇಡೀ ಉತ್ತರ ಕರ್ನಾಟಕದಲ್ಲಿ ಅವರ ನಾಯಕತ್ವವಿದೆ. ಹೀಗಾಗಿ ಅವರು ಡಿಸಿಎಂ ಆಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ಕಳೆದ 2018ರಲ್ಲಿ ಪೂರ್ಣಗೊಳ್ಳಬೇಕಿದ್ದ ಕೆಲ ಕಾಮಗಾರಿಗಳನ್ನು ಕೆಲವರು ರಾಜಕಾರಣಿಗಳು ಮಾಡಿ ಬಂದ್ ಮಾಡಿದ್ದಾರೆ. ನಿಜವಾದ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪ್ರಾರಂಭಿಸಬೇಕು. ಪ್ರಾರಂಭದಲ್ಲಿ ಇದ್ದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಪುನಃ ಪ್ರಾರಂಭವಾಗಬೇಕು. ಈ ಹಿಂದಿನ ಯೋಜನೆಯನ್ನು ಪರಿಶೀಲನೆ ಮಾಡಲು ಶಾಸಕ ರಾಜು ಸೇಠ್​​ಗೆ ತಿಳಿಸಿದ್ದೇನೆ. ಎಲ್ಲ ಅಧಿಕಾರಿಗಳು ಉತ್ತಮವಾದ ಆಡಳಿತ ಮಾಡಬೇಕು. ಇದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಆಗುತ್ತಿರುವುದು ಸಾರ್ವಜನಿಕರ ಹಣದಿಂದ. ಇದರಲ್ಲಿ ಭ್ರಷ್ಟಾಚಾರ ಮಾಡುವುದನ್ನು ಯಾರೂ ಸಹಿಸುವುದಿಲ್ಲ. ಅಶೋಕನಗರಲ್ಲಿ ನಿರ್ಮಾಣ ಮಾಡಿರುವ ಕ್ರೀಡಾಂಗಣ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಅಲ್ಲದೇ ಕೆಲ ಕಡೆಗಳಲ್ಲಿ ವಿದ್ಯುತ್ ಕಂಬವನ್ನು ಸರಿಯಾಗಿ ಅಳವಡಿಸಿಲ್ಲ. ಎಲ್ಲೆಲ್ಲಿ ವಿದ್ಯುತ್ ಕಂಬ ಬೇಕು, ಅಲ್ಲಲ್ಲಿ ಅಳವಡಿಕೆ ಮಾಡಬೇಕೆಂದು ಶಾಸಕರಿಗೆ ವಿನಂತಿ ಮಾಡಿದ್ದೇನೆ ಎಂದು ಫಿರೋಜ್ ಸೇಠ್ ತಿಳಿಸಿದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ