Breaking News
Home / ರಾಷ್ಟ್ರೀಯ (page 1052)

ರಾಷ್ಟ್ರೀಯ

18 ಜನರ ಗಂಟಲು ದ್ರವ ಸಂಗ್ರಹಿಸಿ ಸೋಮವಾರ ಪ್ರಯೋಗಾಲಯಕ್ಕೆ ಒಟ್ಟು 850 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ

ಬೆಳಗಾವಿ: ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಒಟ್ಟು 18 ಜನರ ಗಂಟಲು ದ್ರವ ಸಂಗ್ರಹಿಸಿ ಸೋಮವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊರೊನಾ ಮೊದಲು ಮೂರು ಬಳಿಕ ನಾಲ್ಕು ಒಟ್ಟು ಏಳು ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಇದರಿಂದ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಜನರನ್ನು ಗುರುತಿಸಿ ಗಂಟಲು ದ್ರವ ಸಂಗ್ರಹಿಸಲಾಗಿದೆ. ಜತೆಗೆ ಇಂದು ಸಹ ಕೆಲವರ ಗಂಟಲು ದ್ರವ ಸಂಗ್ರಹ …

Read More »

ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಎಂದು ಆರೋಪಿಸಿ ಗ್ರಾಮಸ್ಥರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರು ಗ್ರಾಮದಲ್ಲಿನ ಯುವಕ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಎಂದು ಆರೋಪಿಸಿ ಗ್ರಾಮಸ್ಥರು ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಇಲ್ಲಿನ ಮೀರಸಾಬ್ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆ ಕದಡುವಂತಹ ವಿಡಿಯೋವಂದನ್ನು ಮಾಡುವ ಮೂಲಕ ಹರಿಬಿಟ್ಟಿದ್ದನು. ಆದ ಕಾರಣ ಗ್ರಾಮಸ್ಥರು, ಮುಖಂಡರು, ತಾಲ್ಲೂಕ ಪಂಚಾಯಿತಿ ಕಚೇರಿಯಲ್ಲಿ ಕೂಡಿಹಾಕಿ ಚಪ್ಪಲಿಯಿಂದ ಥಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಕ ಪಾಟೀಲ್, ಗ್ರಾಮದ ಮುಖಂಡರು ಯುವಕನನ್ನು ಕರೆದೊಯ್ದು ಥಳಿಸಿದ್ದಾರೆ. …

Read More »

ರಾಯಬಾಗ:ಒಂದೇ ಪಟ್ಟಣದಲ್ಲಿ 4 ಜನರಿಗೆ ಕೊರೊನಾ ಪಾಸಿಟಿವ್ – ಹೈ ಅಲರ್ಟ್

ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಕುಡಚಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ಲಾಕ್‍ಡೌನ್ ಆದಗಿನಿಂದ ಜನರು ಹೊರ ಬರದೆ ಮನೆಯಲ್ಲಿಯೇ ಇದ್ದಾರೆ. ಆದರೂ ಕುಡಚಿ ಪಟ್ಟಣದ ಮೂವರು ಮಹಿಳೆಯರಿಗೆ ಹಾಗೂ ಓರ್ವ ಪುರುಷನಿಗೆ ಕೊರೊನಾ ಧೃಡವಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಸೋಂಕಿತರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ …

Read More »

ದೀಪ ಹಚ್ಚುವ ಬದಲು ಸಿಗರೇಟ್ ಹಚ್ಚಿಫೋಟೋ ಟ್ವೀಟ್: ರಾಮ್ ಗೋಪಾಲ್ ವರ್ಮಾ

ಬೆಂಗಳೂರು: ಕೊರೊನಾ ಮಹಾಮಾರಿ ಪ್ರಪಂಚವನ್ನೇ ವ್ಯಾಪಿಸಿದ್ದು, ಭಾರತದಲ್ಲೂ ದಿನೇ ದಿನೇ ಆತಂಕ ಹೆಚ್ಚು ಮಾಡುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ದೀಪ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಹಲವು ನಟ, ನಟಿಯರು ಸಾಥ್ ನೀಡಿ, ದೀಪ ಬೆಳಗಿ ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ನೀಡಿದ್ದಾರೆ. ಆದರೆ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ …

Read More »

ಏ.14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಅಂತಾ ಭಾವಿಸಬೇಡಿ: ಸಿಎಂ

ಬೆಂಗಳೂರು: ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತೆ ಅಂತಾ ಭಾವಿಸಬೇಡಿ. ಲಾಕ್ ಡೌನ್ ಎಷ್ಟು ದಿನ ಮುಂದುವರಿಯುತ್ತದೆ ಎನ್ನುವುದು ಜನರ ಜವಾಬ್ದಾರಿ ಮೇಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ತಿಂಗಳೇ ಲಾಕ್‍ಡೌನ್ ಮುಗಿಯುತ್ತದೆ ಎನ್ನುವಂತಿಲ್ಲ. ದಯಮಾಡಿ ಮನೆಯೊಳಗೆ ಇರಿ. ಹೊರಗಡೆ ಬಂದರೆ ಮತ್ತಷ್ಟು ದಿನ ಲಾಕ್ ಡೌನ್ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು. ಶೇ.75 ರಷ್ಟು ಈಗ ಲಾಕ್ ಡೌನ್ …

Read More »

ನಮ್ಮ ಸರಕಾರದ ಮರ್ಯಾದೆ ಉಳಿದಿದ್ದರೆ ಡಿಸಿ, ಎಸ್ಪಿಗಳಿಂದಲೇ ಹೊರತು ಮಂತ್ರಿಗಳಿಂದಲ್:ಬಿ.ಎಸ್.ಯಡಿಯೂರಪ್ಪ

ಬೆಂಗಳೂರು – ಕೆಲಸ ಮಾಡದೆ ಮನೆಯಲ್ಲೇ ಕುಳಿತಿರುವ ಮಂತ್ರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನು ಒಂದೆರೆಡು ದಿನದಲ್ಲೇ ಮಂತ್ರಿಗಳ ಉಸ್ತುವಾರಿ ಬದಲಾವಣೆ ಮಾಡುವುದಾಗಿ ಘೋಷಿಸಿದ್ದಾರೆ. ಖಾಸಗಿ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಯಡಿಯೂರಪ್ಪ, ಇಂತಹ ಸಂದರ್ಭದಲ್ಲಿ ಮಂತ್ರಿಗಳು ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಕುಳಿತು ಆಟ ಆಡುವುದಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿ. ಕೊರೋನಾ ತಡೆಯಲು ಏನೇನು ಬೇಕೋ ಅದನ್ನು ಮಾಡಿ ಎಂದು ಕರೆ …

Read More »

ಚೀಲವನ್ನು ಸಾಲಗಿ ಇಟ್ಟು ಗುಂಪು ಗುಂಪಾಗಿ ನಿಂತ ಜನ

ಹಾವೇರಿ: ಕೊರೊನಾ ಸೋಂಕು ತಡೆಗೆ ಲಾಕ್‍ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಪಡಿತರ ಪಡೆಯಲು ಸೇರಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಾರಾಯಣಪುರ ದೊಡ್ಡಪ್ರಮಾಣದ ವ್ಯವಸಾಯ ಸಹಕಾರಿ ಸಂಘದ ವಿತರಣಾ ಕೇಂದ್ರದ ಮುಂದೆ ಜನರು ಪಡಿತರ ಪಡೆಯಲು ಜಮಾಯಿಸಿದ್ದಾರೆ. ಪಡಿತರ ವಿತರಣಾ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿಲಾಗಿತ್ತು. ಆದರೆ ಜನರು ಮಾತ್ರ ಗುಂಪು ಗುಂಪಾಗಿ ನಿಂತು …

Read More »

ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ಬಿಜೆಪಿನಾಯಕಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ‌.

ಉತ್ತರ ಪ್ರದೇಶ: ದೇಶದ ಜನತೆ ಒಗ್ಗಟ್ಟಿನಿಂದ ಕೊರೊನಾ ಸೋಂಕಿನ ವಿರುದ್ದ ಹೋರಾಡಲು ಪ್ರಧಾನಿ ಮೋದಿ ದೀಪ ಹಚ್ಚುವ ಅಭಿಯಾನ‌ಕ್ಕೆ ಕರೆ ನೀಡಿದ್ದರು. ಆದ್ರೆ ಉತ್ತರಪ್ರದೇಶದ ಬಲರಾಮಪುರದ ಬಿಜೆಪಿ ನಾಯಕಿ ಮಂಜು ತಿವಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ‌. ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ನಾಯಕಿ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಲು ತನ್ನ ಬಳಿ ಇದ್ದ ಗನ್ ತಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಅಲ್ಲದೇ ಗುಂಡು …

Read More »

ಕೊರೊನಾ ಪರೀಕ್ಷೆಗೆ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್

ಬೆಂಗಳೂರು,ಏ.6- ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ಭಾರತದಲ್ಲಿ ಸೋಂಕಿತರ ತಪಾಸಣೆಗಾಗಿ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್ ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪಟ್ಟಿ ಬಿಡುಗಡೆ ಮಾಡಿದೆ. ಇದರಂತೆ ಹಾಸನ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬೆಂಗಳೂರಿನ ಕಮಾಂಡೋ ಆಸ್ಪತ್ರೆ (ಭಾರತೀಯ ವಾಯುಪಡೆ), ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ವೈರಾಲಜಿ, ಬೆಂಗಳೂರು ವಲಯ ಘಟಕ, …

Read More »

ದೆಹಲಿಯ ನಿಜಾಮುದ್ದೀನ್ ನಂಜಿಗೆ ದಕ್ಷಿಣ ಆಫ್ರಿಕಾದ ಧರ್ಮಗುರು ಬಲಿ..!

ಜೋಹಾನ್ಸ್‍ಬರ್ಗ್, ಏ.5-ಭಾರತದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಘಿ-ಎ-ಜಮಾತ್ ಮರ್ಕೆಜ್ ಬೃಹತ್ ಧಾರ್ಮಿಕ ಸಭೆಯ ದುಷ್ಪರಿಣಾಮ ಈಗ ಜಗತ್ತಿನ ಕೆಲ ಭಾಗಗಳಲ್ಲೂ ಗೋಚರಿಸುತ್ತಿದ್ದು, ಸಾವು ಮತ್ತು ಸೋಂಕುಗಳ ವರದಿಯಾಗುತ್ತಿವೆ. ಈ ಸಭೆಯಲ್ಲಿ ಭಾಗವಹಿಸಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ್ದ ಧರ್ಮ ಗುರು ಒಬ್ಬರು ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬದ ಮೂಲಗಳೇ ದೃಢಪಡಿಸಿವೆ. ದೆಹಲಿಯಲ್ಲಿ ಮಾರ್ಚ್ 15ರಂದು ನಡೆದ ತಬ್ಲೀಘಿ …

Read More »