ಬೆಂಗಳೂರು,ಏ.6- ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ಭಾರತದಲ್ಲಿ ಸೋಂಕಿತರ ತಪಾಸಣೆಗಾಗಿ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್ ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪಟ್ಟಿ ಬಿಡುಗಡೆ ಮಾಡಿದೆ.
ಇದರಂತೆ ಹಾಸನ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬೆಂಗಳೂರಿನ ಕಮಾಂಡೋ ಆಸ್ಪತ್ರೆ (ಭಾರತೀಯ ವಾಯುಪಡೆ), ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ವೈರಾಲಜಿ, ಬೆಂಗಳೂರು ವಲಯ ಘಟಕ, ಗುಲ್ಬರ್ಗ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್,
ವಿಜಯನಗರ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಬಳ್ಳಾರಿ), ರಾಷ್ಟ್ರೀಯ ನರ ಆರೋಗ್ಯ ವಿಜ್ಞಾನ ಆಸ್ಪತ್ರೆ (ನಿಮ್ಹಾನ್ಸ್) ಮತ್ತು ಮಂಗಳೂರಿನ ವೆನ್‍ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್‍ಗಳನ್ನು ತೆರೆಯಲಾಗಿದ್ದು, ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೇಂದ್ರವನ್ನು ಕೂಡ ತೆರೆಯಲಾಗಿದೆ ಎಂದು ತಿಳಿಸಲಾಗಿದೆ.