ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರು ಗ್ರಾಮದಲ್ಲಿನ ಯುವಕ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಎಂದು ಆರೋಪಿಸಿ ಗ್ರಾಮಸ್ಥರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.
ಇಲ್ಲಿನ ಮೀರಸಾಬ್ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆ ಕದಡುವಂತಹ ವಿಡಿಯೋವಂದನ್ನು ಮಾಡುವ ಮೂಲಕ ಹರಿಬಿಟ್ಟಿದ್ದನು. ಆದ ಕಾರಣ ಗ್ರಾಮಸ್ಥರು, ಮುಖಂಡರು, ತಾಲ್ಲೂಕ ಪಂಚಾಯಿತಿ ಕಚೇರಿಯಲ್ಲಿ ಕೂಡಿಹಾಕಿ ಚಪ್ಪಲಿಯಿಂದ ಥಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಕ ಪಾಟೀಲ್, ಗ್ರಾಮದ ಮುಖಂಡರು ಯುವಕನನ್ನು ಕರೆದೊಯ್ದು ಥಳಿಸಿದ್ದಾರೆ. ಯುವಕನಿಂದ ಸಾಮಾಜಿಕ ಜಾಲತಾಣದಲ್ಲಿ ಇದ್ದಂತಹ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದಾರೆ. ಈ ರೀತಿ ಮುಂದೆ ಮಾಡದಂತೆ ಬುದ್ದಿವಾದ ಹೇಳಿ ಕೈ ಬಿಟ್ಟಿದ್ದಾರೆ. ಯುವಕ ಸಮಾಜದ ಮುಖಂಡರಿಗೆ ಕ್ಷಮೇ ಯಾಚಿಸಿದ್ದಾನೆ.