Home / ಅಂತರಾಷ್ಟ್ರೀಯ / ದೆಹಲಿಯ ನಿಜಾಮುದ್ದೀನ್ ನಂಜಿಗೆ ದಕ್ಷಿಣ ಆಫ್ರಿಕಾದ ಧರ್ಮಗುರು ಬಲಿ..!

ದೆಹಲಿಯ ನಿಜಾಮುದ್ದೀನ್ ನಂಜಿಗೆ ದಕ್ಷಿಣ ಆಫ್ರಿಕಾದ ಧರ್ಮಗುರು ಬಲಿ..!

Spread the love

ಜೋಹಾನ್ಸ್‍ಬರ್ಗ್, ಏ.5-ಭಾರತದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಘಿ-ಎ-ಜಮಾತ್ ಮರ್ಕೆಜ್ ಬೃಹತ್ ಧಾರ್ಮಿಕ ಸಭೆಯ ದುಷ್ಪರಿಣಾಮ ಈಗ ಜಗತ್ತಿನ ಕೆಲ ಭಾಗಗಳಲ್ಲೂ ಗೋಚರಿಸುತ್ತಿದ್ದು, ಸಾವು ಮತ್ತು ಸೋಂಕುಗಳ ವರದಿಯಾಗುತ್ತಿವೆ.

ಈ ಸಭೆಯಲ್ಲಿ ಭಾಗವಹಿಸಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ್ದ ಧರ್ಮ ಗುರು ಒಬ್ಬರು ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬದ ಮೂಲಗಳೇ ದೃಢಪಡಿಸಿವೆ.

ದೆಹಲಿಯಲ್ಲಿ ಮಾರ್ಚ್ 15ರಂದು ನಡೆದ ತಬ್ಲೀಘಿ ಜಮಾತ್ ಬೃಹತ್ ಧಾರ್ಮಿಕ ಸಭೆಯಲ್ಲಿ ದಕ್ಷಿಣ ಆಫ್ರಿಕಾದ ಧರ್ಮ ಗುರು ಮËಲಾನಾ ಯುಸುಫ್ ಟೂಟ್ಲಾ(80) ಬಾಗವಹಿಸಿದ್ದರು.

ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿಯಾಗಲೇ ಮËಲಾನಾ ಯೂಸೂಪ್ ಕೊನೆಯುಸಿರೆಳೆದರು. ಅವರ ಮೃತ ದೇಹವನ್ನು ಚೀಲದಲ್ಲಿ ಸಂಗ್ರಹಿಸಿ ಧಫನ್ ಮಾಡಲಾಗಿದೆ ಎಂದು ಇಸ್ಲಾಮಿಕ್ ಬರಿಯಲ್ ಕೌನ್ಸಿಲ್ (ಐಬಿಸಿ) ತಿಳಿಸಿದೆ.

ಅವರ ಸಂಪರ್ಕದಲ್ಲಿದ್ದ ಕುಟುಂಬ ವರ್ಗದವರು, ಬಂಧುಮಿತ್ರರು ಮತ್ತು ಅನುಯಾಯಿಗಳಿಗೆ ಸೋಂಕು ತಗುಲಿರುವ ಆತಂಕದ ಹಿನ್ನೆಲೆಯಲ್ಲಿ ಅವರೆಲ್ಲರ ಮೇಲೆ ತೀವ್ರ ನಿಗಾ ವಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ದಕ್ಷಿಣ ದೆಹಲಿಯಲ್ಲಿರುವ ತಬ್ಲೀಘಿ ಜಮಾನ್ ಬೃಹತ್ ಧಾರ್ಮಿಕ ಸಮಾವೇಶಕ್ಕೆ ಇಂಡೋನೆಷ್ಯಾ, ಮಲೇಷ್ಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ಥೈಲೆಂಡ್, ನೇಪಾಳ, ಮ್ಯಾನ್ಮರ್, ಶ್ರೀಲಂಕಾ, ಕಿರ್ಜಿಸ್ತಾನ ಮೊದಲಾದ ದೇಶಗಳಿಂದ ಅನೇಕ ಮೌಲಾನಗಳು, ಧರ್ಮಗುರುಗಳು ಭಾಗವಹಿಸಿದ್ದರು.

ಭಾರತದ ವಿವಿಧ ರಾಜ್ಯಗಳಿಂದಲ್ಲದೇ, ಅನೇಕ ರಾಷ್ಟ್ರಗಳಿಂದಲೂ ಸಹಸ್ರಾರು ಮಂದಿ ಈ ಸಭೆಯಲ್ಲಿ ಬಾಗವಹಿಸಿದ್ದು, ಸೋಂಕು ಹಬ್ಬುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲೂ ನಿಜಾಮುದ್ದೀನ್ ಧಾರ್ಮಿಕ ಸಭೆಯ ಸೋಂಕಿತರ ಮೇಲೆ ತೀವ್ರ ನಿಗಾ ವಹಿಸಿದ್ದು, ತಪಾಸಣೆ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ