Breaking News
Home / ರಾಜ್ಯ (page 772)

ರಾಜ್ಯ

ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾಧಾರಿಗಳಿಗೆ ಅಚ್ಚುಕಟ್ಟಿನ ವ್ಯವಸ್ಥೆ: ಶಶಿಕಲಾ ಜೊಲ್ಲೆ

ಕೊಪ್ಪಳ: ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್‌ 5 ರಂದು 2 ಲಕ್ಷದಷ್ಟು ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಿನ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಕಲ್ಪಿಸುವತ್ತ ಕ್ರಮ ವಹಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ಸೂಚನೆ ನೀಡಿದರು.   ಇಂದು ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ …

Read More »

ಮುಧೋಳದಲ್ಲಿ 3 ದಿನ ನಿಷೇಧಾಜ್ಞೆ; ತೀವ್ರತೆ ಪಡೆದ ಕಬ್ಬು ಬೆಳೆಗಾರರ ಹೋರಾಟ

ಬಾಗಲಕೋಟೆ: ಕಳೆದ 45 ದಿನಗಳಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಧೋಳದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ. ಇದರ ಮಧ್ಯೆಯೇ ನಿಷೇಧಾಜ್ಞೆ ಜಾರಿ ಬೆನ್ನಲ್ಲೇ ಮತ್ತಷ್ಟು ಆಕ್ರೋಶಗೊಂಡ ರೈತರು, ಹಳ್ಳಿ-ಹಳ್ಳಿಯಿಂದ ಮುಧೋಳಕ್ಕೆ ಆಗಮಿಸಿ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಮುಧೋಳದಿಂದ ವಿವಿಧ ಹಳ್ಳಿಗಳಿಗೆ ತೆರಳುವ ಪ್ರಮುಖ ರಸ್ತೆ-ಹೆದ್ದಾರಿಗಳನ್ನು ಬಂದ್‌ ಮಾಡಿ, ರಸ್ತೆಯಲ್ಲೇ ಒಲೆ ಹೂಡಿ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷ …

Read More »

ಲೋಕಾಯುಕ್ತ: 3 ತಿಂಗಳಲ್ಲೇ 60 ಎಫ್‌ಐಆರ್‌! ಹರಿದು ಬರುತ್ತಿವೆ ದೂರುಗಳು

ಬೆಂಗಳೂರು: ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಅಧಿಕಾರ ಸಿಕ್ಕಿದ ಮೂರು ತಿಂಗಳಲ್ಲೇ ಬರೋಬ್ಬರಿ 60 ಎಫ್‌ಐಆರ್‌ ದಾಖಲಾಗಿದೆ. ವಿಶೇಷ ವೆಂದರೆ, ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಅಧಿಕಾರ ಮರಳಿಸಲು ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಸರಕಾರದ ಆದೇಶ ಹೊರಬಿದ್ದ ಬಳಿಕ ಲೋಕಾಯುಕ್ತಕ್ಕೆ ಹೆಚ್ಚಿನ ದೂರುಗಳು ಬರುತ್ತಿದೆ.   ರಾಜ್ಯಾದ್ಯಂತ 31 ಜಿಲ್ಲೆಗಳಲ್ಲೂ ಲೋಕಾಯುಕ್ತ ಪೊಲೀಸ್‌ ವಿಭಾಗವಿದ್ದು, ಬೆಂಗಳೂರಿನಲ್ಲಿ 12 ಪ್ರಕರಣ ದಾಖಲಾದರೆ, ತುಮಕೂರು, ರಾಮನಗರ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗದಲ್ಲಿ ಮೂರು ಎಫ್‌ಐಆರ್‌ ದಾಖಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಒಂದೆರಡು …

Read More »

ಶ್ರದ್ದಾ ಪ್ರಕರಣ.ಎಲ್ಲಾ ಪುರಾವೆ ನಾಶಗೊಳಿಸಿದ್ದ ಅಫ್ತಾಬ್? ನೀರಿನ ಶುಲ್ಕ ಬಾಕಿ ಇಟ್ಟಿದ್ದೇಕೆ

ನವದೆಹಲಿ: ಶ್ರದ್ದಾ ವಾಲ್ಕರ್ ಳನ್ನು ಕ್ರೂರವಾಗಿ ಕೊಂದು ಹಾಕಿರುವ ಹಂತಕ ಅಫ್ತಾಬ್ ಅಮಿನ್ ಪೂನಾವಾಲನನ್ನು ನ್ಯಾಯಾಲಯ ಗಲ್ಲಿಗೇರಿಸುವವರೆಗೆ ವಿರಮಿಸುವುದಿಲ್ಲ ಎಂದು ಶ್ರದ್ದಾ ತಂದೆ ವಿಕಾಸ್ ವಾಲ್ಕರ್ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ವಿಕಾಸ್ ವಾಲ್ಕರ್, ಕೊಲೆಗಡುಕ ಅಫ್ತಾಬ್ ತುಂಬಾ ಚಾಣಾಕ್ಷ್ಯನಾಗಿದ್ದು, ಆತ ತನ್ನ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ. ಕಳೆದ ಐದಾರು ತಿಂಗಳಿನಿಂದ ಆತ ಎಲ್ಲಾ ಪುರಾವೆ ನಾಶ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸಾಕ್ಷ್ಯ ನಾಶಗೊಳಿಸಿದ್ದರಿಂದ ಸತ್ಯವನ್ನು ಹೊರತರುವುದು ಪೊಲೀಸರಿಗೆ …

Read More »

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಲ್ಲೂ ಸ್ಪರ್ಧೆ ಮಾಡುವುದೇ ಬೇಡ: ಸಂತೋಷ ಲಾಡ್

ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ. ಶಿವಕುಮಾರ ಅವರು ಯಾವುದೇ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬೇಡ‌. ಅವರು ರಾಜ್ಯಾದ್ಯಂತ ಪಕ್ಷ ಬಲಪಡಿಸುವ ಕಾರ್ಯಮಾಡಲಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪಕ್ಷ ಬಲಪಡಿಸುವ ಕೆಲಸ ಮಾಡಲಿ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲಿಗೆ ಸೀಮಿತವಾಗುವುದು ಬೇಡ. ಇಡೀ ರಾಜ್ಯ ಸುತ್ತಬೇಕಾಗಿರುವುದರಿಂದ ಅವರು ಸ್ಪರ್ಧಿಸದಿರುವುದು ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ, …

Read More »

ಪತಿ-ಪತ್ನಿಯ ಹೊಂದಾಣಿಕೆಯೇ ಜೀವನ: ಕುಲಕರ್ಣಿ

ಬೆಳಗಾವಿ: ನಾನೇಕೆ ಮಡದಿ ಮಾತನ್ನು ಕೇಳಬೇಕೆಂಬ ಅಹಂ ಬಿಟ್ಟು. ಸಾಮರಸ್ಯದ ಬದುಕಿಗೆ ಬೇಕಾಗುವಷ್ಟು ಮಡದಿ ಮಾತನ್ನು ಕೇಳಬೇಕು. ಯಾವ ಮಾತನ್ನು ಕೇಳಬೇಕು, ಕೇಳಬಾರದೆಂಬ ಪ್ರಜ್ಞೆ ಪತಿಯಲ್ಲಿರಬೇಕು. ಪತ್ನಿಯೂ ಸಹ ಎಲ್ಲ ಮಾತನ್ನು ಪತಿ ಕೇಳಲೇಬೇಕೆಂಬ ಹಠವಿರಬಾರದು ಒಟ್ಟಿನಲ್ಲಿ ಪತಿ, ಪತ್ನಿಯರ ನಡುವಿನ ಹೊಂದಾಣಿಕೆಯೇ ಜೀವನ ಎಂದು ಪ್ರೊ. ಜಿ. ಕೆ. ಕುಲಕರ್ಣಿ ಹೇಳಿದರು. ನಗರದ ಹಾಸ್ಯಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿಂದವಾಡಿಯ ಐ.ಎಮ್‌.ಇ.ಆರ್‌. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಡದಿ ಮಾತು ಕೇಳಬೇಕೆ? …

Read More »

ಎಸ್ಟಿ ಸಮಾಜಕ್ಕೆ ಘೋರ ಅನ್ಯಾಯ; ನಿಜವಾದ ಸಮಾಜಗಳಿಗೆ ನಷ್ಟ: ಶ್ರೀ

ಅಡಹಳ್ಳಿ: ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಇನ್ನೂ ಅನೇಕ ಸಮಾಜಗಳಿಗೆ ಎಸ್ಟಿ ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿರುವುದು ನಿಜವಾದ ಎಸ್ಟಿ ಸಮಾಜಕ್ಕೆ ಮಾಡುವ ಘೋರ ಅನ್ಯಾಯ ಎಂದು ರಾಜನಹಳ್ಳಿ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.   ಸಮೀಪದ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಅಥಣಿ ತಾಲೂಕಾ ಮಟ್ಟದ ವಾಲ್ಮೀಕಿ ಸಮುದಾಯ ಜನಜಾಗೃತಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ ತಳವಾರ, ಪರಿವಾರ ಮತ್ತು …

Read More »

ಪಕ್ಷ ನೋಡಿ ಮತ ಹಾಕುವ ಕಾಲ‌ ಮುಗೀತು. ನಮ್ಮ ಸಮಾಜದ ವ್ಯಕ್ತಿ ನೋಡಿ ಮತ ಹಾಕುತ್ತೇ:ಮೃತ್ಯುಂಜಯ ಸ್ವಾಮೀ

ಬೈಲಹೊಂಗಲ : ‘ಪಕ್ಷ ನೋಡಿ ಮತ ಹಾಕುವ ಕಾಲ‌ ಮುಗೀತು. ಇನ್ನು ನಮ್ಮ ಸಮಾಜದ ವ್ಯಕ್ತಿ ನೋಡಿ ಮತ ಹಾಕುತ್ತೇವೆ’ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮದು ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ಹೋರಾಟ ಅಲ್ಲ. ರಾಜಕೀಯವೂ ಅಲ್ಲ. ನಮ್ಮ ಹೋರಾಟದ ಉದ್ದೇಶ ಮೀಸಲಾತಿ ಮಾತ್ರ’ ಎಂದರು. ‘ಪಂಚಮಸಾಲಿ ಸಮಾಜ ಹುಟ್ಟುಹಾಕಿದ್ದೆ ಮೀಸಲಾತಿ ಪಡೆಯಲು. ಹೋರಾಟದಿಂದಾಗಿ …

Read More »

ಹಿಂದೂ ಎಂಬುದು ಧರ್ಮವಲ್ಲ: ಸಿದ್ಧರಾಮಶ್ರೀ

ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವ‍ಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗು ವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು. ‘ಹಿಂದೂಗಳು …

Read More »

ಡಿಸೆಂಬರ್ 19ರಿಂದ 29ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಂಗಳೂರು: ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಡಿ.19 ರಿಂದ 29 ರವರೆಗೆ ಬೆಳಗಾವಿಯಲ್ಲಿ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.     ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಈ ವಿಷಯ ತಿಳಿಸಿದರು.       ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಈ ವಿಷಯ ತಿಳಿಸಿದರು. ‘ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು …

Read More »