Breaking News
Home / ರಾಜ್ಯ (page 780)

ರಾಜ್ಯ

ಉಂಡು ಮಲಗಿದರೂ ಮುಗಿಯದ ಗಂಡ ಹೆಂಡತಿ ಜಗಳ.. ಬೆಳಿಗ್ಗೆ ಎದ್ದು ಪತ್ನಿ ಕೊಂದ ಪತಿ

ಗಂಡ ಹೆಂಡತಿ ಜಗಳ ಉಂಡು ಮಲಗಿ ಎದ್ದ ನಂತರ ಮುಂದುವರೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಕೋಪದಲ್ಲಿ ಹೆಂಡತಿಯನ್ನು ಗಂಡ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಶಿವಮೊಗ್ಗ: ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೊರ ವಲಯದ ದುಮ್ಮಳ್ಳಿಯಲ್ಲಿ ನಡೆದಿದೆ. ಪತಿ ಪ್ರಕಾಶ್(55) ಎಂಬುವರು ಪತ್ನಿ ಶೋಭಾ( 50) ಅವರನ್ನು ಕೊಲೆ ಮಾಡಿದ್ದಾರೆ.   ದುಮ್ಮಳ್ಳಿಯಲ್ಲಿ ಪ್ರಕಾಶ್ ಮತ್ತು ಶೋಭಾ ಎಂಬ ದಂಪತಿ ಜೀವನೋಪಾಯಕ್ಕಾಗಿ ಹಾಲಿನ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದರು. ಕೆಲವು …

Read More »

ಕಿತ್ತೂರಿನಲ್ಲಿ ವಿನಯೋತ್ಸವ: ಶಾಸಕ ಅಮೃತ್ ದೇಸಾಯಿಗೆ ಟಕ್ಕರ್ ಕೊಡಲು ವಿನಯ್ ಕುಲಕರ್ಣಿ ಶಕ್ತಿ ಪ್ರದರ್ಶನ

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇದೇ 7 ರಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಜನ್ಮದಿನದ ಅಂಗವಾಗಿ ವಿನಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಧಾರವಾಡ: ಮುಂಬರುವ ವಿಧಾನಸಭೆ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಪೈಪೋಟಿ ಶುರುವಾಗಿದೆ. ಶಾಸಕ ಅಮೃತ್ ದೇಸಾಯಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಟಕ್ಕರ್ ಕೊಡಲು ಮುಂದಾಗಿದ್ದಾರೆ.   ಹೌದು, ಶಾಸಕ ‌ಅಮೃತ ದೇಸಾಯಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಕುಲಕರ್ಣಿ ಸಜ್ಜಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇದೇ 7 …

Read More »

ಕಸ ಸಂಗ್ರಹಿಸುವಾಗ ಸಿಕ್ಕ ಚಿನ್ನದ ಮಾಂಗಲ್ಯ ಸರ; ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕರು

ಬೆಳಗಾವಿ: ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಕಸದಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಸಿಕ್ಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ನಡೆದಿದೆ. ಪುರಸಭೆ ವಾಹನಗಳ ಮೂಲಕ ಪೌರಕಾರ್ಮಿಕರು ಕಸ ಸಂಗ್ರಹ ಮಾಡುತ್ತಿದ್ದಾಗ ಕಸದಲ್ಲಿ ಮಾಂಗಲ್ಯ ಸರ ಸಿಕ್ಕಿದ್ದು, ಸಂಬಂಧಪಟ್ಟ ಮಾಲೀಕರಿಗೆ ಬಂಗಾರದ ಸರ ಮರಳಿಸುವ ಮೂಲಕ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಎಂದಿನಂತೆ ಇಂದು ಮುಂಜಾನೆ ಎಂ.ಜಿ.ಮಾರ್ಕೆಟ್ ನಲ್ಲಿ ಕಸ ಸಂಗ್ರಹಿಸಿದ ಪೌರ ಕಾರ್ಮಿಕ …

Read More »

ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಸಹಕಾರ ನೀಡಲಿದೆ ಎಂದು ರಾಹುಲ್‌ ಜಾರಕಿಹೊಳಿ

ಗೋಕಾಕ: ಮದುವೆ, ಸಭೆ -ಸಮಾರಂಭ ಅನುಕೂಲಕ್ಕಾಗಿ ಸಮುದಾಯಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಸಮಾಜ ಸೇವೆಗಾಗಿ ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಸಹಕಾರ ನೀಡಲಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು. ಇಲ್ಲಿನ ಹಿಲ್‌ ಗಾಡರ್ನ್‌ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಅರಭಾವಿ ಕ್ಷೇತ್ರದ ದೇವಸ್ಥಾನ, ಮಸ್ಜಿದ್ ,ಚರ್ಚ್, ಟ್ರಸ್ಟಿಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ …

Read More »

ಸಂತೋಷ್ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ!*

    ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.   ಈ ಸಂದರ್ಭದಲ್ಲಿ ವಿಶಾಲ ಹಿರೇಮಠ್ …

Read More »

ಉಮೇಶ್‌ ರೆಡ್ಡಿಗೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ: ಸುಪ್ರೀಂ ಕೋರ್ಟ್‌

ನವದೆಹಲಿ: ಬೆಳಗಾವಿ ಜೈಲಿನಲ್ಲಿರುವ ಸರಣಿ ಅತ್ಯಾಚಾರ, ದರೋಡೆ ಮತ್ತು ಕೊಲೆ ಪ್ರಕರಣಗಳ ಅಪರಾಧಿ ವಿಕೃತಕಾಮಿ ಉಮೇಶ್‌ ರೆಡ್ಡಿ ಅಲಿಯಾಸ್‌ ಬಿ.ಎ. ಉಮೇಶ್‌ಗೆ ಮರಣ ದಂಡನೆಯಿಂದ ವಿನಾಯಿತಿ ನೀಡಿರುವ ಸುಪ್ರೀಂ ಕೋರ್ಟ್‌, 30 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಶುಕ್ರವಾರ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್‌ ಮತ್ತು ಬೇಲಾ ಎಂ.ತ್ರಿವೇದಿ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯದಿಂದ ಮರಣ …

Read More »

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಪಾಲಿಕೆ ಸದಸ್ಯರಿಗೆ ಸಿಎಂ ಬೊಮ್ಮಾಯಿ ಸನ್ಮಾನ

ಬೆಂಗಳೂರು : ಇತ್ತೀಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಸದಸ್ಯರಿಗೆ ಸಿಎಂ ಬೊಮ್ಮಾಯಿ ಅಭಿನಂದಿಸಿ ಸನ್ಮಾನ ಮಾಡಿದ್ದಾರೆ.   ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ 35 ವಾರ್ಡ್ ಗಳ ಪೈಕಿ 17 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ 17 ನೂತನ ಪಾಲಿಕೆ ಸದಸ್ಯರು ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಇಂದು ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. …

Read More »

ನೌಕರಿ ಆಸೆ ಬಿಡಿಸಿದ ಮಿಶ್ರಕೃಷಿ

ನೇಸರಗಿ: ಬಿ.ಎಸ್.ಸಿ ಪದವಿ ಪಡೆದಿದ್ದರೂ ಸರ್ಕಾರ ನೌಕರಿಗಾಗಿ ಅಲೆದಾಡದೇ, ತಮ್ಮ ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡ ಈ ಯುವಕ ಈಗ ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮದ ರವೀಂದ್ರ ಬಸಪ್ಪ ಶಿದ್ನಾಳ 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ 25 ಎಕರೆ ಹೊಲದಲ್ಲಿ ಸದ್ಯ ಕಬ್ಬು, ಸೇವಂತಿ ಹೂವು, ಚೆಂಡು ಹೂವು ಬೆಳೆದಿದ್ದಾರೆ. ಸೌತೆಕಾಯಿ, ಕಡಲೆ, ಜೋಳ, ಟೊಮೆಟೊ, ಮೆಣಶಿನಕಾಯಿ, ಕ್ಯಾಬೀಜ್, ಕುಂಬಳಕಾಯಿ ಕೂಡ ಅವರ ಕೈ …

Read More »

ಬೆಳಗಾವಿ: ಪ್ರೋತ್ಸಾಹಕ್ಕಾಗಿ ಕತೆ, ಚಿತ್ರಕಲೆ ಸ್ಪರ್ಧೆ

ಬೆಳಗಾವಿ: ಇಲ್ಲಿನ ಸಪ್ನಾ ಬುಕ್‌ಹೌಸ್‌ ಹಾಗೂ ರೋಷ್ಟ್ರಮ್‌ ಡಯರೀಸ್‌ ಸಂಘಟನೆ ಆಶ್ರಯದಲ್ಲಿ, ಈ ಭಾಗದ ಕಲಾವಿದರು- ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕತೆ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಅಭಿಷೇಕ ಬೆಂಡಿಗೇರಿ ಹೇಳಿದರು. ಚಿತ್ರಕಲೆ ಸ್ಪರ್ಧೆ 16 ವರ್ಷ ಕೆಳಗಿನ ಹಾಗೂ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಎಲ್ಲಿಯ ಕಲಾವಿದರೂ ಪಾಲ್ಗೊಳ್ಳಬಹುದು. ‘ಬೆಳಗಾವಿ’ ವಿಷಯದ ಬಗ್ಗೆ ಮಾತ್ರ ಪೇಂಟಿಂಗ್‌ ಬಿಡಿಸಬೇಕು. ನ. 30ರೊಳಗೆ ಸಪ್ನಾ ಬುಕ್‌ಹೌಸ್‌ನಲ್ಲಿ …

Read More »

BREAKING NEWS: ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಕೊಲೆ ಬೆದರಿಕೆ

ಬೆಂಗಳೂರು: ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ( Sri Ram Sene founder president Pramod Muthalik ) ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಬಂದಿರುವುದಾಗಿ ತಿಳಿದು ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು – ಡಿ.ಕೆ. ಶಿವಕುಮಾರ್ ಪ್ರಶ್ನೆ ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಿನ್ನೆ ರಾತ್ರಿ ನಾಲ್ಕು ನಂಬರ್ ಗಳಿಂದ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಬೆಳಗಾವಿ …

Read More »