Breaking News

ಪಕ್ಷ ನೋಡಿ ಮತ ಹಾಕುವ ಕಾಲ‌ ಮುಗೀತು. ನಮ್ಮ ಸಮಾಜದ ವ್ಯಕ್ತಿ ನೋಡಿ ಮತ ಹಾಕುತ್ತೇ:ಮೃತ್ಯುಂಜಯ ಸ್ವಾಮೀ

Spread the love

ಬೈಲಹೊಂಗಲ : ‘ಪಕ್ಷ ನೋಡಿ ಮತ ಹಾಕುವ ಕಾಲ‌ ಮುಗೀತು. ಇನ್ನು ನಮ್ಮ ಸಮಾಜದ ವ್ಯಕ್ತಿ ನೋಡಿ ಮತ ಹಾಕುತ್ತೇವೆ’ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮದು ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ಹೋರಾಟ ಅಲ್ಲ. ರಾಜಕೀಯವೂ ಅಲ್ಲ. ನಮ್ಮ ಹೋರಾಟದ ಉದ್ದೇಶ ಮೀಸಲಾತಿ ಮಾತ್ರ’ ಎಂದರು.

‘ಪಂಚಮಸಾಲಿ ಸಮಾಜ ಹುಟ್ಟುಹಾಕಿದ್ದೆ ಮೀಸಲಾತಿ ಪಡೆಯಲು. ಹೋರಾಟದಿಂದಾಗಿ ರಾಜ್ಯದಲ್ಲಿ ಸಮಾಜದ 1.30 ಕೋಟಿ ಜನಸಂಖ್ಯೆ ಇದೆ ಎಂದು ಗೊತ್ತಾಗಿದೆ. ರಾಜಕಾರಣಿಗಳು ಸಮಾಜವನ್ನು ಚುನಾವಣೆಯಲ್ಲಿ ‘ಟ್ರಂಪ್ ಕಾರ್ಡ್’ ಮಾಡಿ ಕೊಂಡಿದ್ದಾರೆ. ಹೀಗಾಗಿ ಸಮಾಜ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಪಡೆಯೋಣ’ ಎಂದರು.

‘ಮೀಸಲಾತಿ ಕುರಿತು ಸರ್ಕಾರ ನಾಲ್ಕು ಬಾರಿ ಮಾತು ತಪ್ಪಿದೆ. ನಾವೀಗ ನಿರ್ಣಾಯಕ ಹಂತದಲ್ಲಿದ್ದೇವೆ. ಚುನಾವಣೆ ನೀತಿ ಸಂಹಿತೆಗೆ ಮೊದಲು ಹಕ್ಕು ಪಡೆದೆ ತೀರಬೇಕು. ಸಮಾಜದವರು,ಮುಖಂಡರು ಏನೇ ಭಿನ್ನಾಭಿಪ್ರಾಯ ಇದ್ದರೂ ಪಕ್ಕಕ್ಕಿಟ್ಟು ಒಗ್ಗಟ್ಟಾಗಬೇಕು. ಡಿ. 5ರಂದು ಬೈಲಹೊಂಗಲದ ಸಮಾವೇಶದಲ್ಲಿ ಪಾಲ್ಗೊಳ್ಳ ಬೇಕು’ ಎಂದು ಹೇಳಿದರು


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ