Home / ರಾಜ್ಯ (page 1792)

ರಾಜ್ಯ

ದೂರದೃಷ್ಟಿ ಹಾಗೂ ಅಭಿವೃದ್ದಿ ಯೋಜನೆಗಳು ನಮ್ಮ ತಂದೆ ಗೆಲುವಿಗೆ ಸಹಕಾರಿಯಾಗಲಿದೆ- ಯುವನಾಯಕಿ ಪ್ರಿಯಾಂಕಾ ಜಾರಕಿಹೊಳಿ

  ಪ್ರಿಯಾಂಕಾ ಜಾರಕಿಹೊಳಿ ಸಮ್ಮುಖದಲ್ಲಿ ಬಿಜೆಪಿ ಕಾರ್ಯಾಕರ್ತರು ಕಾಂಗ್ರೆಸ್ ಗೆ ಸೇರ್ಪಡೆ..     ಗೋಕಾಕ: ದೂರದೃಷ್ಟಿ ಹಾಗೂ ಅಭಿವೃದ್ದಿ ಪರ ಯೋಜನೆಗಳು ಮತ್ತು ಜನಪರ ಕಾರ್ಯಗಳು ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಶನಿವಾರದಂದು ಸಂಜೆ ನಗರದ ಉಪ್ಪಾರ ಗಲ್ಲಿಯಲ್ಲಿ ಲೋಕಸಭಾ ಉಪಚುನಾವಣೆಯ ನಿಮಿತ್ಯ ತಮ್ಮ ತಂದೆಯ ಪರವಾಗಿ ಮತಯಾಚನೆ ಮಾಡುತ್ತಾ ಮಾತನಾಡಿದ ಅವರು, ಮಾತುಗಿಂತ ಕೃತಿ …

Read More »

ಚುನಾವಣಾ ಪ್ರಚಾರಕ್ಕೆ ಇರದ ನಿಯಮ ಚಿತ್ರೋದ್ಯಮಕ್ಕೆ ಯಾಕೆ? ಸರ್ಕಾರ ನಿರ್ಧಾರಕ್ಕೆ ಸ್ಯಾಂಡಲ್ ವುಡ್ ಗರಂ

ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಪ್ರಚಾರದ ಕಾರ್ಯ ಜೋರಾಗಿದೆ. ಲಕ್ಷಾಂತರ ಜನ ಪ್ರಚಾರದಲ್ಲಿ ತೋಡಗಿದ್ದಾರೆ. ಗುಂಪು ಗುಂಪಾಗಿ ತಿರುಗಾಡುತ್ತಿದ್ದಾರೆ. ಇವರಿಗೆ ಬರದ ಕೊರೊನಾ ಬಸ್ ನಲ್ಲಿ ಪ್ರಯಾಣಿಸುವವರಿಗೆ, ಚಿತ್ರ ಮಂದಿರದಲ್ಲಿ ಸಿನಿಮಾ ನೋಡುವವರಿಗೆ ಜೀಮ್ ನಲ್ಲಿ ವರ್ಕ್ ಔಟ್ ಮಾಡುವವರಿಗೆ ವಕ್ಕರಿಸಿಕೊಳ್ಳುವುದಾ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ವ್ಯಾಕ್ಸಿನ್ ಹೆಸರಿನಲ್ಲಿ ನಡೆದ ಗೊಲ್ ಮಾಲ್ ಮರೆಮಾಚಲು ಈ ರೀತಿ ಜನ ಸಾಮಾನ್ಯರ ಧಿಕ್ಕು ತಪ್ಪಿಸುವ ಕುತಂತ್ರ …

Read More »

ಬೆಳಗಾವಿಗೆ ಹೊರಟಿದ್ದ ವೃದ್ಧ ದಂಪತಿಗೆ ರೈಲಿನಲ್ಲಿ ಕಿರುಕುಳ; 11 ವರ್ಷದ ಬಳಿಕ ಭಾರತೀಯ ರೈಲ್ವೆಗೆ 3 ಲಕ್ಷ ರೂ. ದಂಡ!

ರೈಲು ಸಾರಿಗೆ ಅಂದರೆ ಅದು ಜನಸಾಮಾನ್ಯರಿಗೆ ವರದಾನ. ಆದರೆ ಕೆಲವೊಮ್ಮೆ ಅಧಿಕಾರಿಗಳ ತಪ್ಪಿನಿಂದ ಇಲ್ಲವೇ ಅಸಮರ್ಪಕ ನಡವಳಿಕೆಯಿಂದಾಗಿ ಪ್ರಯಾಣಿಕರು ಪೇಚಾಟಕ್ಕೆ ಸಿಲುಕಿರುವ ಸಂದರ್ಭಗಳು ವರದಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸುವ ಕೆಲವು ಜನರ ನಡವಳಿಕೆಯಿಂದ ನಿಯಮ ಪಾಲಿಸುವವರು ಕೂಡ ಬಳಲುವುದು ನಡೆಯುತ್ತಲೇ ಇದೆ. ಇನ್ನು ಕೆಲವೊಮ್ಮೆ ಸರಿಯಾಗಿ ಟಿಕೆಟ್ ತೆಗೆದುಕೊಳ್ಳದಿರುವುದು ಸಹ ಸಮಸ್ಯೆಗೆ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ಟ್ರೈನ್​ನಲ್ಲಿ ಟಿಕೆಟ್​ ತಪಾಸಣೆ ಅಂದರೆ ಅದು ಬಹು ಕಠಿಣವಾದ ನಿಯಮ. …

Read More »

ಸಿದ್ದರಾಮಯ್ಯ ಅರ್ಜೆಂಟಾಗಿ ಸಿಎಂ ಆಗಬೇಕಾಗಿದೆ ಎಂದ ಸಚಿವ ಈಶ್ವರಪ್ಪ

ಶಿವಮೊಗ್ಗ: ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ, ವರಿಷ್ಠರಿಗೆ ದೂರು ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ನಾನು ಯಾರಿಗೂ ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನನ್ನ ಮಾತಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಸಹಿ ಸಂಗ್ರಹ, ಖಾತೆ ಬದಲಾವಣೆ, ರಾಜೀನಾಮೆ ಇವೆಲ್ಲ ವಿಚಾರಗಳು ಮೊನ್ನೆ ಚರ್ಚೆಯಾದವು. ಈಗ ಅದು ಮುಗಿದ ಕಥೆ. ಯಾರು ಏನೇ ಹೇಳಿದರೂ ನನ್ನ ಪತ್ರ ನ್ಯಾಯಬದ್ಧವಾಗಿದೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ …

Read More »

ಸಿಎಂ ಬದಲಾವಣೆಯಾಗಲೇಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೇ ಹೇಳಿದ್ದರು: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ: ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಬಗ್ಗೆ ನನ್ನ ಬಳಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರೇ ಹೇಳಿದ್ದರು ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಬದಲಾವಣೆಯಾಗಲೇಬೇಕು. ಬಿ‌ ಎಸ್ ವೈ ಸಿಎಂ ಆಗಿ ಮುಂದುವರಿದರೆ ಬಿಜೆಪಿಗೆ ಭವಿಷ್ಯ ಇಲ್ಲ. ಹಾಗಾಗಿ ಸಿಎಂ ಬದಲಾವಣೆಯಾಗಬೇಕು ಎಂದು ವಿಧಾನಸೌಧದಲ್ಲಿ ರವಿಕುಮಾರ್ ಭೇಟಿಯಾದ ವೇಳೆ ಹೇಳಿದ್ದರು. ನಾನು ಸಿಎಂ …

Read More »

ಮನೆಯವರೂ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ: ಸಿಡಿ ಯುವತಿ

ಬೆಂಗಳೂರು: ಮನೆಯವರ ಒತ್ತಡದಿಂದ ಆಕಾಶ್ ನನ್ನನ್ನು ಅರ್ಧದಲ್ಲಿಯೇ ಬಿಟ್ಟು ಹೋದ. ನಾನು, ಆಕಾಶ್ ಈಗ ಬೇರೆ ಬೇರೆಯಾಗಿದ್ದೀವಿ. ಈಗ ನನ್ನ ಹಾಗೂ ಆಕಾಶ್ ನಡುವೆ ಏನೂ ಇಲ್ಲ ಎಂದು ಸಿಡಿ ಯುವತಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.   ನಾಲ್ಕನೇ ದಿನವಾದ ಇಂದು ಕೂಡ ಯುವತಿಯನ್ನು ಎಸ್‍ಐಟಿ ವಿಚಾರಣೆಗೆ ಒಳಪಡಿಸಿತು. ಆರ್.ಟಿ.ನಗರ ಕೇಸ್ ಸಂಬಂಧ ವಿಚಾರಣೆಯ ವೇಳೆ ಯುವತಿ ಸಾಕಷ್ಟು ವಿಚಾರಗಳನ್ನು ಬಯಲು ಮಾಡಿದರು. ಯಾರಾದರೂ ನಿಮ್ಮನ್ನು ಕಿಡ್ನಾಪ್ ಮಾಡಿದ್ರಾ..?, ಇಷ್ಟು …

Read More »

ಮಗಳ ಅತ್ಯಾಚಾರದ ಆರೋಪಕ್ಕೆ ಮನನೊಂದ ತಂದೆ ನೇಣಿಗೆ ಶರಣು

ಮಡಿಕೇರಿ: ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡುನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ಪುದಿಯೊಕ್ಕಡ ಭರತ್(55) ಎಂದು ಗುರುತಿಸಲಾಗಿದೆ. ತನ್ನ ಸಾವಿಗೆ ಪತ್ನಿ, ಮಗಳೇ ಕಾರಣವೆಂದು ಡೆತ್‌ನೋಟ್​ನಲ್ಲಿ ಭರತ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದು ಈ ಹಿಂದೆ ಸ್ವಂತ ಅಪ್ಪನ ಮೇಲೆಗೆ ಮಗಳು ಅತ್ಯಾಚಾರದ ಆರೋಪ ಹೊರಿಸಿದ್ದಳು. ಹಾಗೂ ಹೆಂಡತಿ, ಮಗಳು ಸೇರಿಕೊಂಡು ಭರತ್​ನಿಗೆ ಚಿತ್ರ ಹಿಂಸೆ …

Read More »

ವೀಡಿಯೊ ಮಾಡಿದ್ದು ನಾನೇ: ಕಾರಣ ಬಿಚ್ಚಿಟ್ಟ ಸಿಡಿ ಯುವತಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗಿನ ರಾಸಲೀಲೆಯ ವೀಡಿಯೊ ಮಾಡಿದ್ದು ನಾನೆ‌ ಆದರೆ ಬ್ಲಾಕ್ ಮೇಲ್ ಮಾಡುವ ಉದ್ದೇಶ ಇರಲಿಲ್ಲ ಎಂದು ಸಿಡಿ ಯುವತಿ ಒಪ್ಪಿಕೊಂಡಿದ್ದಾಳೆ. ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಬೆಂಗಳೂರಿನ ಎಸ್ ಐಟಿ ಮುಂದೆ ಶನಿವಾರ ಹಾಜರಾದ ಸಿಡಿ ಯುವತಿ ಘಟನೆಯನ್ನು ವಿವರಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಶನಿವಾರ  ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೊಟೀಸ್ ನೀಡಲಾಗಿತ್ತು. ಈ …

Read More »

60 ಸಾವಿರ ಬೆಲೆಯ ಎರಡು ಬೈಕ್ ವಶ

ಬೆಂಗಳೂರು, ಏ.3- ಕದ್ದ ಬೈಕ್‍ಗಳನ್ನು ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಲಾಸಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ 60 ಸಾವಿರ ಬೆಲೆಯ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಿಲ್ಸನ್ ಗಾರ್ಡನ್ ನಿವಾಸಿ ಶೋಯಬ್ ಫಜಲ್ (19) ಬಂಧಿತ ಆರೋಪಿ. ನಿನ್ನೆ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯ ಎಎಂ ರಸ್ತೆಯಲ್ಲಿ ಸಿಬ್ಬಂದಿ ಗಸ್ತಿನಲ್ಲಿದ್ದಾಗ ದ್ವಿಚಕ್ರ ವಾಹನವನ್ನು ಮಾರಾಟ ಮಾಡಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿ ದ್ದಾನೆಂಬ ಮಾಹಿತಿ ಮೇರೆಗೆ ಸ್ಥಳಕ್ಕೆ …

Read More »

Zoom App ಅಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಿದ ಶ್ರೀ ಅಶೋಕ ಚಂದರಗಿ ಅವರು

ಬೆಳಗಾವಿಯ ನಡೆದಾಡುವ ಲೈಬ್ರರಿ ಎಂದೇ ಪ್ರಸಿದ್ಧರಾಗಿರುವ ಶ್ರೀ ಅಶೋಕ ಚಂದರಗಿ ಅವರಿಗೆ ಕನ್ನಡಪರ ಹೋರಾಟಗಳ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನಾ ಇಂದಿನ ಯುವಪೀಳಿಗೆಗೆ ಮುಟ್ಟಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಇಂದಿನ ಯುವಕರು ಕನ್ನಡಪರ ಕೆಲಸಗಳಲ್ಲಿ ಅಪಾರ ಆಸಕ್ತಿ ತೋರತ್ತಿದ್ದು, ಇದರಲ್ಲಿ ಅನೇಕರಿಗೆ ಇತಿಹಾಸದ ಬಗ್ಗೆ ಕೊಂಚ ಮಾಹಿತಿ ಕಡಿಮೆಯಿದೆ. ನಾವು ಇತಿಹಾಸ ತಿಳಿದುಕೊಳ್ಳದೇ ಇತಿಹಾಸವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾಳೆ ನಾವು Zoom App ಅಲ್ಲಿ ಒಂದು ಸಂವಾದ …

Read More »