Home / ರಾಜ್ಯ (page 1810)

ರಾಜ್ಯ

ಪ್ರಚೋದನಕಾರಿ ಭಾಷಣದ ಆರೋಪ: ಟಿಕಾಯತ್ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು

ಶಿವಮೊಗ್ಗ: ಮಾರ್ಚ್‌ 20ರಂದು ಇಲ್ಲಿನ ಬಿ.ಎಚ್‌.ರಸ್ತೆಯ ಸೈನ್ಸ್ ಮೈದಾನದಲ್ಲಿ ನಡೆದ ದಕ್ಷಿಣ ಭಾರತದ ಮೊದಲ ರೈತರ ಮಹಾ ಪಂಚಾಯತ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿಗೆ ದಿಗ್ಬಂಧನ ಹಾಕಬೇಕು. ಟ್ರ್ಯಾಕ್ಟರ್‌ಗಳನ್ನೇ ಅಸ್ತ್ರವಾಗಿ ಬಳಸಬೇಕು ಎಂದು ನೀಡಿದ್ದ ಹೇಳಿಕೆ ಆಧಾರಿಸಿ …

Read More »

ʼಕೊರೊನಾʼ ಲಾಕ್ ಡೌನ್ ನಂತ್ರದ ವೈಯಕ್ತಿಕ ಸಾಲ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾದಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಇದ್ರ ಮಧ್ಯೆ ವೈಯಕ್ತಿಕ ಸಾಲಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಮುಂಬೈನಲ್ಲಿ ಶೇಕಡಾ 25ರಷ್ಟು ಜನರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದಾರೆ. ಶೇಕಡಾ 17 ರಷ್ಟು ಜನರು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ಖರೀದಿಗೆ ತೆಗೆದುಕೊಂಡಿದ್ದಾರೆ. ಮನೆಯಿಂದ ಕೆಲಸ ಮಾಡ್ತಿರುವ ಶೇಕಡಾ 15ರಷ್ಟು ಮಂದಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಸಾಲ ಪಡೆದಿದ್ದಾರೆ. ಇಂಡಿಯಾ ಲ್ಯಾಂಡ್ಸ್ ಈ …

Read More »

ಭಾರತದ ರಾಷ್ಟ್ರೀಯ ಹೆದ್ದಾರಿಯಿಂದ 34000 ಕೋಟಿ ಆದಾಯ: ಗಡ್ಕರಿ

ನವದೆಹಲಿ, ಮಾರ್ಚ್ 24: ಭಾರತದ ರಾಷ್ಟ್ರೀಯ ಹೆದ್ದಾರಿ ಟೋಲ್‌ನಿಂದ ತಿಂಗಳಾಂತ್ಯದ ವೇಳೆಗೆ 34,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನವದೆಹಲಿ ಮೂಲದ ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. “ನಾವು ರಸ್ತೆಗಳಿಂದ ಹಣ ಗಳಿಸುತ್ತಿದ್ದೇವೆ. ಸಾರ್ವಜನಿಕರಿಂದಲೂ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2021ನೇ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31ರ …

Read More »

ಸುಧಾಕರ್‌ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ: ಕಲಾಪ ಅನಿರ್ಧಿಷ್ಟ ಕಾಲ ಮುಂದೂಡಿಕೆ

ಬೆಂಗಳೂರು: ರಾಜ್ಯದ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಭೋಜನ ವಿರಾಮದ ಬಳಿಕ ಕಲಾಪ ಸೇರಿದಾಗ ಸುಧಾಕರ್‌ ಹೇಳಿಕೆಯನ್ನು ವಿಪಕ್ಷ ಸದಸ್ಯರು ಕಟುವಾಗಿ ಟೀಕಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ಮಾತನಾಡಿ, ‘ಸುಧಾಕರ್‌ …

Read More »

ಐದು ನೋಟಿಸ್ ಗಳಿಗೂ ಯುವತಿಯಿಂದ ನೋ ರೆಸ್ಪಾನ್ಸ್ :ವಿಧಾನಸೌಧಕ್ಕೆ ದೌಡಾಯಿಸಿದ ಎಸ್ ಐಟಿ ಅಧಿಕಾರಿಗಳು

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಎಸ್‌ಐಟಿ ತನಿಖೆ ಗಂಟೆಗೊಂದು ಟ್ವಿಸ್ಟ್ ಗಳನ್ನು ಪಡೆಯುತ್ತಿದ್ದು, ಸಾಲು ಸಾಲು ಸುದ್ದಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಕರಣದ ಕುರಿತು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಇಮೇಲ್​ನಲ್ಲಿ ಕಳುಹಿಸಿದ್ದ ನೋಟಿಸ್​ನ್ನು ಯುವತಿ ನೋಡಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ಪೊಲೀಸರ ನೋಟಿಸ್​ಗೆ ಆಕೆಯಿಂದ ಯಾವುದೇ ಉತ್ತರ ದೊರೆತಿಲ್ಲ ಎನ್ನಲಾಗ್ತಿದೆ. ಸಿಡಿ ಲೇಡಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದ್ದು, ಎಸ್ …

Read More »

ನನಗಿರುವುದು ಒಬ್ಬಳೆ ಹೆಂಡ್ತಿ, ಒಂದೇ ಸಂಸಾರ’ : ಸಚಿವ ಸುಧಾಕರ್ ಗೆ ಡಿ.ಕೆ. ಶಿವಕುಮಾರ್ ತಿರುಗೇಟು

ಬೆಂಗಳೂರು : ರಾಜ್ಯದ 224 ಶಾಸಕರದ್ದೂ ತನಿಖೆಯಾಗಲಿ ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂದು ಗೊತ್ತಾಗಲಿದೆ ಎಂದು ಸಚಿವ ಸುಧಾಕರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವ ಸುಧಾಕರ್ ನುಡಿಮುತ್ತುಗಳನ್ನು ಇಡೀ ರಾಜ್ಯಕ್ಕೆ ಕೊಟ್ಟಿದ್ದಾರೆ. ಇವರ ಹೇಳಿಕೆ ಹೇಳಿಕೆಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಬೇಕು. ಇದು ಸಾಮೂಹಿಕ ವಿಚಾರ, ನನಗಿರುವುದು ಒಬ್ಬ ಹೆಂಡತಿ, ನಂದು ಒಂದೇ ಸಂಸಾರ ಎಂದು ಹೇಳಿದ್ದಾರೆ. ಯಾವ್ಯಾವ ಮುಖ್ಯಮಂತ್ರಿಗಳು …

Read More »

ಮುಂದಿನ 8-10 ವರ್ಷ ಪೆಟ್ರೋಲ್ ಮತ್ತು ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಯಡಿ ತರಲು ಸಾಧ್ಯವಿಲ್ಲ: ಸುಶಿಲ್ ಕುಮಾರ್ ಮೋದಿ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ನ್ನು ಇನ್ನು 8-10 ವರ್ಷ ಜಿಎಸ್ ಟಿ ಆಡಳಿತದಡಿ ತರಲು ಸಾಧ್ಯವಿಲ್ಲ, ಇದರಿಂದ ವಾರ್ಷಿಕವಾಗಿ ಎಲ್ಲಾ ರಾಜ್ಯಗಳಿಗೆ 2 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ ಹೇಳಿದ್ದಾರೆ. ಹಣಕಾಸು ಮಸೂದೆ 2021ರ ಕುರಿತು ಇಂದು ರಾಜ್ಯಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ 5 ಲಕ್ಷ ಕೋಟಿಗಿಂತಲೂ …

Read More »

224-225 ಜನರಲ್ಲಿ ಎಲ್ಲರೂ ಶ್ರೀರಾಮಚಂದ್ರ-ಸೀತಾ ಮಾತೆಯರೇ ಅಲ್ಲ: ಬಿ.ಸಿ ಪಾಟೀಲ್

ಬೆಂಗಳೂರು: 224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ‘224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ. ಯಾವ ಸಚಿವರು ಹೇಳಿಕೆ ನೀಡಿದ್ರೂ ಎಲ್ಲರೂ ಅವ್ರವ್ರ ಆತ್ಮ ಮುಟ್ಟಿ ನೋಡಿಕೊಳ್ಳಲಿ’ ಎಂದು ಹೇಳಿದರು. ಒಂದು ಬೆರಳು ಒಬ್ಬರ ಕಡೆ ತೋರಿಸಿದ್ರೆ, ಉಳಿದ ನಾಲ್ಕು ಬೆರಳು ನಮ್ಮ …

Read More »

ಡೀಸೆಲ್ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶ

ಬೆಳಗಾವಿ : ಬೆಳಿಗ್ಗೆ9 ಗಂಟೆಗೆ ಲೋಕಸಭಾ ಉಪ ಚುನಾವಣೆ ನಿಮಿತ್ಯ ಬಾತ್ಮಿ ಮೇರೆಗೆ ಬೆಳಗಾವಿ ತಾಲ್ಲೂಕಿನ ಕಿಣಯೇ ಕ್ರಾಸ್ ಬಳಿ ಡೀಸೆಲ್ ಟ್ಯಾಂಕರ್ ವಾಹನದಲ್ಲಿ  ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ. ಲಿಂಗಸ್ವಾಮಿ ನರಸಿಂಹ ತಾ : ನರಸಿಂಗ್ ಬಬ್ಲಾ ಜಿ : ನಲಗೊಂಡ – 508001 ರಾಜ್ಯ: ತೆಲಂಗಾಣ ಎಂಬಾತನನ್ನು ದಸ್ತಗೀರ ಮಾಡಿ ಟ್ಯಾಂಕರ್‌ನ2 ಕಂಪಾಟಮೆಂಟ್‌ನಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ121ಪೆಟ್ಟಿಗೆಗಳನ್ನು ಜಪ್ತು ಮಾಡಲಾಯಿತು. ಡಾ ವೈ …

Read More »

ಏ.1ಕ್ಕಿಂತ ಮೊದ್ಲೇ ಈ ಕೆಲ್ಸ ಮಾಡಿ.. ಇಲ್ಲದಿದ್ರೆ ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತೆ..!

ಪ್ಯಾನ್ ಕಾರ್ಡ್ ಹೊಂದಿರುವವರು ಇದನ್ನ ಎಚ್ಚರಿಕೆಯಿಂದ ಓದಿ. ಯಾಕಂದ್ರೆ, ಆದಾಯ ತೆರಿಗೆ ಇಲಾಖೆಯು 2021ರ ಮಾರ್ಚ್ 31ಕ್ಕೆ ಆಧಾರ್ ಪ್ಯಾನ್ ಲಿಂಕ್ ಗಡುವು ನೀಡಿದೆ. ಒಂದ್ವೇಳೆ ನಿಮ್ಮ ಪ್ಯಾನ್ʼನ್ನ ನಿಮ್ಮ ಆಧಾರ್ʼಗೆ ಲಿಂಕ್ ಮಾಡದಿದ್ದರೆ, ಏಪ್ರಿಲ್ 1 ರಿಂದ ನೀವು ಯಾವುದೇ ಹಣಕಾಸು ವ್ಯವಹಾರವನ್ನ ಮಾಡೋಕೆ ಸಾಧ್ಯವಾಗೋಲ್ಲ. ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡದಿದ್ರೆ, ಆದಾಯ ತೆರಿಗೆ ಕಾಯ್ದೆಯಡಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಹೇಳಿದೆ. …

Read More »