Home / ರಾಜ್ಯ (page 1782)

ರಾಜ್ಯ

ಮೇ 24ರಿಂದ PUC, ಜೂನ್ 20ರಿಂದ SSLC ಪರೀಕ್ಷೆಗಳು ಆರಂಭ: ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೇ 24ರಿಂದ ಪಿಯುಸಿ ಹಾಗೂ ಜೂನ್ 20ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ. ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳು ಸುರಕ್ಷತಾ ಕೇಂದ್ರಗಳು ಆಗಿರುತ್ತೆ. ಎಸ್‍ಎಸ್‍ಎಲ್‍ಸಿಗೆ 8,75,798 ಜನ ವಿದ್ಯಾರ್ಥಿಗಳ ನೋಂದಣಿಯಾಗಿದೆ. ಪಿಯುಸಿಗೆ 7,01,651 ಮಂದಿ ವಿದ್ಯಾರ್ಥಿಗಳನ್ನು ನೋಂದಣಿ ಮಾಡಲಾಗಿದೆ ಎಂದು ವಿವರಿಸಿದರು. ಸಿಲೇಬಸ್ ನಲ್ಲಿ ಶೇ.30ರಷ್ಟು …

Read More »

ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಇನ್ನೆರಡು ದಿನಗಳಲ್ಲಿ ಪಾಲ್ಗೊಳ್ಳುವುದಾಗಿ ತಮಗೆ ತಿಳಿಸಿದ್ದಾರೆಂದ ಉಮೇಶ್ ಕತ್ತಿ

ಗೋಕಾಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸಲು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಆಶೀರ್ವಾದ ಮಾಡುವಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಮತದಾರರಲ್ಲಿ ಮನವಿ ಮಾಡಿದರು. ಅರಭಾವಿ ಮತಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ ಗ್ರಾಮಗಳಿಗೆ ತೆರಳಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥ ಸಭೆಯಲ್ಲಿ …

Read More »

ಮನೆ ಕಟ್ಟುವವರಿಗೆ ಸಿಹಿ ಸುದ್ದಿ ನೀಡಿದ ಗಣಿ ಸಚಿವ ಮುರುಗೇಶ್ ನಿರಾಣಿ

ಕಲಬುರಗಿ: ಗಣಿ ಇಲಾಖೆಯ ಸಿಬ್ಬಂದಿ ಅಧಿಕಾರಿಗಳಿಗೆ ಸಮವಸ್ತ್ರ ವಾಕಿ ಟಾಕಿ ಸೇರಿದಂತೆ ಅತ್ಯಾಧುನಿಕ ಸಾಧನಗಳ ವ್ಯವಸ್ಥೆ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಕಲ್ಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅವಘಡ ಸಂಭವಿಸದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಸ್ಪೋಟಕ ವಸ್ತುಗಳ ಸಾಗಾಟ, ಸಂಗ್ರಹಣೆಯ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಉಚಿತ ಮರಳು ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ. 10 ಲಕ್ಷ ರೂಪಾಯಿಯವರೆಗೆ ಒಂದು …

Read More »

ಬಿಜೆಪಿ ಎಂದರೆ ‘ಭ್ರಷ್ಟಾಚಾರ ಜನತಾ ಪಾರ್ಟಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು

ರಾಯಚೂರು: ಬಿಜೆಪಿ ಎಂದರೆ ‘ಭ್ರಷ್ಟಾಚಾರ ಜನತಾ ಪಾರ್ಟಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಮುದಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್ ವೈ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಿಎಂ ಮನೆಗೆ ಹೋಗುತ್ತಾರೆ ಎಂದು ಅದೇ ಪಕ್ಷದ ಯತ್ನಾಳ ಹೇಳಿದ್ದಾರೆ. ಬಿಜೆಪಿಯವರು ಎಲ್ಲಿಯಾದರೂ ಸೋಲ್ತೀವಿ ಅಂತ ಹೇಳಿದ್ದಾರೆ. ಯಡಿಯೂರಪ್ಪನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಯಡಿಯೂರಪ್ಪನವರು ಮೊದಲಿಬಿಂದಲೂ ಸುಳ್ಳು ಹೇಳಿಕೊಂಡೆ ಬಂದಿದ್ದಾರೆ ಎಂದರು. ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಹೋಗುತ್ತದೆ ಎನ್ನುವುದು ಬಾಲಿಶತನದ ಹೇಳಿಕೆ. …

Read More »

ಆರನೇ ವೇತನ ಆಯೋಗಕ್ಕೆ ಸಮನಾದ ವೇತನ ನೀಡಲ್ಲ: ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ

ಹುಮನಾಬಾದ: ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ಸಮನಾದ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮಾಣಿಕನಗರದಲ್ಲಿ ರವಿವಾರ ‘ಉದಯವಾಣಿ’ ಜತೆ ಮಾತನಾಡಿದ ಅವರು, ಆರನೇ ವೇತನ ಆಯೋಗದ ಸಮನಾದ ಸಂಬಳ ನೀಡಲು ಸಾಧ್ಯವೇ ಇಲ್ಲ. ಒಂದು ವೇಳೆ ಸಮನಾದ ಸಂಬಳ ನೀಡಿದರೆ ಇಲಾಖೆಯ ಸಿಬ್ಬಂದಿಗಳ ಮಧ್ಯೆ ತಾರತಮ್ಯ ನೀತಿ ಹುಟ್ಟಿಕೊಳ್ಳುತ್ತದೆ. ಸೀನಿಯರ್ ಸಿಬ್ಬಂದಿಗಳು ಹಾಗೂ ಜೂನಿಯರ್ ಸಿಬ್ಬಂದಿಗಳ …

Read More »

ರೆಸಾರ್ಟ್‍ನಲ್ಲಿ ಕೊರೊನಾ ನಿಯಮ ಉಲ್ಲಂಘನೆ ಪಾರ್ಟಿ – 150ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ

ಹಾಸನ: ಖಾಸಗಿ ರೆಸಾರ್ಟ್ ಮೇಲೆ ಪೊಲೀಸರ ದಾಳಿ ನಡೆಸಿ ಕೊರೊನಾ ನಿಯಮ ಮೀರಿ ಪಾರ್ಟಿಯಲ್ಲಿ ಭಾಗವಹಿಸಿದ್ದ 150 ಕ್ಕೂ ಹೆಚ್ಚು ಜನ ವಶಕ್ಕೆ ಪಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಲವೆಡೆ ಖಾಸಗಿ ರೆಸಾರ್ಟ್ ಮೇಲೆ ದಾಳಿ ನಡೆಸಿದ ಎಸ್‍ಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ರೆಸಾರ್ಟ್‍ನಲ್ಲಿ ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಕಡೆ ಹಾಸನದಲ್ಲಿ ಕೊರೊನ ಆತಂಕ ದಿನದಿಂದ ದಿನಕ್ಕೆ …

Read More »

ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ

ಮೈಸೂರು: ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್‍ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ಮುಷ್ಕರ ಮುಂದುವರಿದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‍ಗಳು ಇಲ್ಲದೇ ಖಾಸಗಿ ಬಸ್‍ಗಳು ಸೇವೆ ಸಲ್ಲಿಸುತ್ತಿವೆ. ಇದೀಗ ಒಂದೊಂದಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳು ರಸ್ತೆಗಿಳಿಯುತ್ತಿದೆ. ಹಾಗಾಗಿ ಖಾಸಗಿ ಬಸ್‍ಗಳ ಚಾಲಕರು ಮತ್ತು ನಿರ್ವಾಹಕರು ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್‍ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ …

Read More »

ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ

ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಮೇಡೇ’ ಸಿನಿಮಾದ ಚಿತ್ರೀಕರಣ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಿಗದಿಯಾಗಿದ್ದ ಶೂಟಿಂಗ್ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರಿದ್ದ ‘ಮೇಡೇ’ ಸಿನಿಮಾ ಅದಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದೆ. ಆದರೆ, ಕೋವಿಡ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು.   ಅಂದ್ಹಾಗೆ, ಏಪ್ರಿಲ್ ಕೊನೆಯಲ್ಲಿ ದೋಹಾದಲ್ಲಿ ಶೂಟಿಂಗ್ ಶುರು ಮಾಡಲು ಎಲ್ಲಾ ತಯಾರಿ ನಡೆದಿತ್ತು. ಈ ವೇಳೆ ಅಜಯ್ …

Read More »

ಕಳತ್ಮಾಡು: ವರ್ಷದಿಂದ ಉಪಟಳ ನೀಡುತ್ತಿದ್ದ ಆನೆ ಕೊನೆಗೂ ಬಂದಿ!

ಮಡಿಕೇರಿ: ಒಂದು ವರ್ಷದಿಂದ ಗಾಮೀಣ ಭಾಗಗಳಿಗೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೆ ಕಾರಣವಾಗಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬಂದಿ ಕಳತ್ಮಾಡು ಗ್ರಾಮದ ಕಾಫಿ ತೋಟದಿಂದ ಸೆರೆ ಹಿಡಿದಿದ್ದಾರೆ. 35ರ ಹರೆಯದ ಗಂಡಾನೆಯ ಸೆರೆಗೆ 3 ದಿನ ಗಳಿಂದ ಕಾರ್ಯಾಚರಣೆ ನಡೆಸಿರುವ ಸಿಬಂದಿ ಬಲ್ಲೆ ಹಾಗೂ ಮತ್ತಿಗೋಡು ಆನೆ ಶಿಬಿರಗಳ 6 ಸಾಕಾನೆಗಳ ಸಹಕಾರ ಪಡೆದುಕೊಂಡಿದ್ದರು. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿಗೆ ಒಳಪಟ್ಟ ಗೋಣಿಕೊಪ್ಪಲು ಬಳಿಯ ಕಳತ್ಮಾಡು ಹಾಗೂ ಅಮ್ಮತ್ತಿ …

Read More »

ಕೃಷಿಕರು, ಶ್ರಮಿಕ ವರ್ಗ ಹಾಗೂ ಯುವ ಶಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ: ಬಾಬಾಗೌಡ ಪಾಟೀಲ

ಗೋಕಾಕ: ಕೃಷಿಕರು, ಶ್ರಮಿಕ ವರ್ಗ ಹಾಗೂ ಯುವ ಶಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿತನದಿಂದ ಕೂಡಿರುವ ಪ್ರಧಾನಿ ಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಹೋರಾಟದ ಧ್ಯೇಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ ಗುಡುಗಿದರು. ಶನಿವಾರ ಇಲ್ಲಿನ ಡಾಲರ್ಸ್ ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಚಿಸಿದ ಕೃಷಿ ಸಂಬಂಧಿ ಕಾನೂನುಗಳ ಸಾಧಕ-ಬಾಧಕಗಳ ಪರಾಮರ್ಶಿಸಲು ಸದಾ ಸಿದ್ಧ …

Read More »