Home / ರಾಜ್ಯ (page 1779)

ರಾಜ್ಯ

ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತಷ್ಟು ಬಿಗಿ ಕ್ರಮ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಜಾರಿ ಮಾಡದೆ ಬಿಗಿ ಕ್ರಮ ತೆಗೆದು ಕೊಳ್ಳಲಾಗುವುದು. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಅಗತ್ಯಬಿದ್ದರೆ ಒಂದೆರಡು ಜಿಲ್ಲೆಗಳಿಗೆ ನೈಟ್ ಕರ್ಪ್ಯೂ ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.   ಇದೇ ತಿಂಗಳ 18 ರಂದು ಪ್ರತಿಪಕ್ಷ ನಾಯಕರ ಸಭೆ …

Read More »

ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​

ಕಿರಿಕ್​ ಪಾರ್ಟಿ’ ಸಿನಿಮಾದ ಹಾಡೊಂದರ ಕಾಪಿರೈಟ್​ ಕೇಸ್​ಗೆ ಸಂಬಂಧಿಸಿದ ಕಿರಿಕ್​ ಇನ್ನೂ ಬಗೆಹರಿದಿಲ್ಲ. ಲಹರಿ ಮ್ಯೂಸಿಕ್​ ಆಡಿಯೋ ಕಂಪನಿ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮ್​ವಾ ಸ್ಟುಡಿಯೋ ನಡುವೆ ಇನ್ನೂ ಜಟಾಪಟಿ ಮುಂದುವರಿದಿದೆ. ಈ ಪ್ರಕರಣದ ವಿಚಾರಣೆ ಸಲುವಾಗಿ ಸೋಮವಾರ (ಏ.12) ರಕ್ಷಿತ್​ ಶೆಟ್ಟಿ ಕೋರ್ಟ್​ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿನಿಮಾ ರಿಲೀಸ್​ ಆಗುವಾಗ ಬೇಕಂತಲೇ ಈ ರೀತಿ ಮಾಡುತ್ತಾರೆ. ತುಂಬ ಸಿನಿಮಾಗಳಿಗೆ …

Read More »

ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿದರೂ ಸರಿ 6ನೇ ವೇತನ ಆಯೋಗ ಜಾರಿ ಅಸಾಧ್ಯ:B.S.Y.

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 7ನೇ ದಿನಕ್ಕೆ ಕಾಲಿಟ್ಟಿದ್ದು, ಸಾರಿಗೆ ಸಿಬ್ಬಂದಿಗಳು ಹಾಗೂ ಸರ್ಕಾರದ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಮುಷ್ಕರ ನಿರತ ಸಿಬ್ಬಂದಿಗಳ ವಿರುದ್ಧ ಸಿಎಂ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸಾರಿಗೆ ನೌಕರರೊಂದಿಗೆ ಮಾತುಕತೆಯ ಪ್ರಶ್ನೆಯೇ ಇಲ್ಲ, ಮುಷ್ಕರ ನಿರತ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲ. ಒಂದು ತಿಂಗಳ ಕಾಲ ಪ್ರತಿಭಟನೆ …

Read More »

ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆಗಳು ಲಭ್ಯವಿರುತ್ತದೆ. ರಾತ್ರಿ 8ರ ಬಳಿಕ ಅಂಗಡಿಗಳನ್ನು ಮುಚ್ಚಬೇಕು:

ಮುಂಬೈ: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ 15 ದಿನ ಜನತಾ ಕರ್ಫ್ಯೂ ವಿಧಿಸಿದೆ. ಈ ಕಠಿಣ ನಿಯಮಗಳಿಂದ ಶ್ರೀಸಾಮಾನ್ಯರು, ಬಡವರಿಗೆ ತೊಂದರೆ ಆಗದಿರುಲು ಮಹಾ ನೆರವು ಸಹ ಘೋಷಿಸಿದೆ. ಜೀವ ಮತ್ತು ಜೀವನ.. ಮಂತ್ರ ಪಠಿಸಿದ ‘ಮಹಾ’ ಅಘಾಡಿ ಸರ್ಕಾರ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದವರ ಖಾತೆಗೆ ನಗದು ಪರಿಹಾರ ನೀಡಲು ಮುಂದಾಗಿದೆ. ಬಡ ಕುಟುಂಬಗಳಿಗೆ ಹೆಚ್ಚುವರಿ ಪಡಿತರದ ಜೊತೆ ‘ಶಿವ’ ಭೋಜನ್ ಆರಂಭಿಸಲು ಮುಂದಾಗಿದೆ. ಇದರ …

Read More »

ಕಂಟೇನ್ಮೆಂಟ್​ ಝೋನ್​ಗಳಲ್ಲಿರುವ ಮಸೀದಿಗಳು ಬಂದ್; ರಂಜಾನ್ ಹಬ್ಬಕ್ಕೆ ಗೈಡ್​ಲೈನ್ಸ್​

ಬೆಂಗಳೂರು: ನಾಳೆಯಿಂದ ರಂಜಾನ್ ಹಬ್ಬ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಮಾರ್ಗಸೂಚಿಯನ್ನ ಪ್ರಕಟಿಸಿದೆ. ಕಂಟೇನ್ಮೆಂಟ್ ಝೋನ್‌ಗಳಲ್ಲಿರುವ ಮಸೀದಿಗಳು ಬಂದ್ ಮುಂದಿನ ಆದೇಶದವರೆಗೆ ಕಂಟೇನ್ಮೆಂಟ್ ಝೋನ್​ಗಳ ಮಸೀದಿ ಬಂದ್ ಕಂಟೇನ್ಮೆಂಟ್ ಝೋನ್ ಹೊರಗಿನ ಮಸೀದಿಗಳಲ್ಲಿ ಮಾತ್ರ ಅವಕಾಶ ಉಪವಾಸ ಬಿಡುವಾಗ ಮಸೀದಿಗೆ ಆಹಾರ ವಸ್ತು ತರಬಾರದು ಉಪವಾಸವನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು ‌ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಡ್ಡಾಯ ಪ್ರಾರ್ಥನೆಗೂ ಮೊದಲು ಮಾಡುವ ವಝು ಸ್ವಚ್ಛತೆಗೆ ಪ್ರತ್ಯೇಕ …

Read More »

ಹಬ್ಬದ ಶಾಪಿಂಗ್‌ನಲ್ಲಿ ದಂಪತಿ ಬಿಜಿ: ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಮಗುವಿನ ಹೋರಾಟ

ಬೆಂಗಳೂರು: ಕಾರಿನಲ್ಲಿ ಮಗುವನ್ನು ಬಿಟ್ಟು ಯುಗಾದಿ ಹಬ್ಬದ ಶಾಪಿಂಗ್‌ಗೆ ತೆರಳಿದ ಪರಿಣಾಮ ಮಗು ಉಸಿರುಗಟ್ಟಿ ನರಳಾಡಿದ ಘಟನೆ ನಗರದ ಜಾಲಹಳ್ಳಿಯ ನ್ಯೂ ಬಿಇಎಲ್​ನಲ್ಲಿ ನಡೆದಿದೆ. ದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದ ಮಗುವಿನ ಪ್ರಾಣ ಉಳಿದೆ. ಜಾಲಹಳ್ಳಿಯ ನ್ಯೂ ಬಿಇಎಲ್​ನಲ್ಲಿ ಸೋಮವಾರ ರಾತ್ರಿ ನಾಲ್ಕು ವರ್ಷದ ಮಗುವನ್ನು ಕಾರಿನಲ್ಲೇ ಬಿಟ್ಟು ದಂಪತಿ ಶಾಪಿಂಗ್​ಗೆ ತೆರಳಿದ್ದರು. ಕೀ ಕಾರಿನಲ್ಲೇ ಇದ್ದಿದ್ರಿಂದ ಆಟೋಮೆಟಿಕ್ ಲಾಕ್ ಆಗಿತ್ತು. ಇದಾದ ಕೆಲವೊತ್ತಿನಲ್ಲೇ ಉಸಿರುಗಟ್ಟಲು ಆರಂಭಿಸಿ ಮಗು ಚೀರಾಡಲು ಶುರು …

Read More »

3 ವರ್ಷದ ಬಾಲಕನಿಗೆ ತಂಪು ಪಾನೀಯದ ಜತೆ ಮದ್ಯ ಬೆರೆಸಿ ಕುಡಿಸಿದ್ರು; 2 ಗಂಟೆ ಕಾಲ ಪ್ರಜ್ಞಾಹೀನನಾದ.

ಮಧುಗಿರಿ: ಮೂರು ವರ್ಷದ ಬಾಲಕನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯವನ್ನು ಬೆರೆಸಿ ಕುಡಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಏ. 10ರಂದು ಸಂಜೆ 6 ಗಂಟೆ ಸಮಯದಲ್ಲಿ ಗ್ರಾಮದ ಗುರುಸ್ವಾಮಿ ಎಂಬುವವರ ಮಗನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದಾರೆ. ತಂಪು ಪಾನೀಯ ಎಂದು ಭಾವಿಸಿ ಮದ್ಯ ಕುಡಿದ ಬಾಲಕ ಸುಮಾರು …

Read More »

ಕಸಾಪ ಚುನಾವಣೆ: ಅಂತಿಮ ಕಣದಲ್ಲಿ 21 ಮಂದಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಅಂತಿಮ ಚುನಾವಣೆ ಕಣದಲ್ಲಿ 21 ಅಭ್ಯರ್ಥಿಗಳಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೆಂಗಳೂರಿನ ಕೆ.ಎಂ. ರೇವಣ್ಣ ನಾಮಪತ್ರ ಹಿಂಪಡೆದಿದ್ದಾರೆ. ಕಣದಲ್ಲಿ ಮ.ಚಿ. ಕೃಷ್ಣ, ವ.ಚ. ಚನ್ನೇಗೌಡ, …

Read More »

ಉಪ ಚುನಾವಣೆ: ಬೆಳಗಾವಿಯಲ್ಲಿ ‌ಮುಖ್ಯಮಂತ್ರಿ‌ ಬಿ.ಎಸ್. ಯಡಿಯೂರಪ್ಪ ಠಿಕಾಣಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪ್ರಚಾರ ಮಾಡುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 14 ಮತ್ತು 15ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಯಾಚಿಸಲಿದ್ದಾರೆ. 14ರಂದು ಮಧ್ಯಾಹ್ನ 1.15ಕ್ಕೆ ಮೂಡಲಗಿಯಲ್ಲಿ, ಸಂಜೆ 5.15ಕ್ಕೆ ಗೋಕಾಕದಲ್ಲಿ ನಡೆಯುವ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9ಕ್ಕೆ ಬೆಳಗಾವಿಗೆ ಬಂದು ತಂಗಲಿದ್ದಾರೆ. 15ರಂದು ನಗರದಲ್ಲಿ ಮುಖಂಡರ ಸರಣಿ ಸಭೆಗಳು …

Read More »

ಕೋವಿಡ್ ಪರಿಸ್ಥಿತಿ; ಸರ್ವಪಕ್ಷಗಳ ಸಭೆ ಕರೆದ ಯಡಿಯೂರಪ್ಪ

ಬೆಂಗಳೂರು, ಏಪ್ರಿಲ್ 13; “ಕೋವಿಡ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಏಪ್ರಿಲ್ 18ರಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ” ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು. ಬಸವಕಲ್ಯಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, “ಮೇ 2ರ ತನಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ” ಎಂದರು. ತಾಂತ್ರಿಕ ಸಹಲಾ ಸಮಿತಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ …

Read More »