Breaking News
Home / ರಾಜ್ಯ (page 1353)

ರಾಜ್ಯ

ಆಸ್ಪತ್ರೆಯಿಂದಲೇ ‘ಬಿಗ್ ​ಬಾಸ್’​ ಕಾರ್ಯಕ್ರಮ ನಡೆಸಿಕೊಟ್ಟ ಕಮಲ್​ಹಾಸನ್.​..! ರಮ್ಯಾ ಕೃಷ್ಣನ್​ ಸಾಥ್​​

ಕೋವಿಡ್​ 19 ಸೋಂಕಿನಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮಲ್​ ಹಾಸನ್​ ಅನುಪಸ್ಥಿತಿಯಿಂದಾಗಿ ತಮಿಳಿನ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​​​ ಸೀಸನ್​​ 5ರ ನಿರೂಪಣೆಯನ್ನು ರಮ್ಯಾ ಕೃಷ್ಣ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಆಯೋಜಕರು ಮುಂಬರುವ ಎಪಿಸೋಡ್​ನ ಪ್ರೋಮೋವನ್ನು ರಿಲೀಸ್​ ಮಾಡಿದ್ದು ಇದರಲ್ಲಿ ಕಮಲ್​ ಹಾಸನ್​​​ ಆಸ್ಪತ್ರೆಯಿಂದಲೇ ಮಾತನಾಡಿದ್ದಾರೆ. ನಟಿ ರಮ್ಯಾ ಕೃಷ್ಣನ್​​ರನ್ನು ಗೆಳತಿ ಎಂದು ಪರಿಚಯಿಸಿದ ಕಮಲ್​ ಹಾಸನ್​ ಕಾರ್ಯಕ್ರಮ ನಡೆಸಲು ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ. ರಮ್ಯಾ ಕೃಷ್ಣನ್​​ರನ್ನು …

Read More »

ಅಪರಿಚಿತ ವ್ಯಕ್ತಿಯ ಮೇಲೆ ವಾಹನಗಳು ಹರಿದ ಪರಿಣಾಮ ರಸ್ತೆಯಲ್ಲಿ ಕಿಲೋಮೀಟರ್ ಉದ್ದಕ್ಕೆ ಮೃತ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿವೆ. ಗುರುತು ಪತ್ತೆಯಾಗದಂತೆ ವ್ಯಕ್ತಿಯ ಶವ ನುಜ್ಜುಗುಜ್ಜಾಗಿದೆ.

ಬೆಂಗಳೂರು: ಅಪರಿಚಿತ ವ್ಯಕ್ತಿಯ ಮೇಲೆ ಹಲವು ವಾಹನಗಳು ಹರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ವಾಹನಗಳು ಹರಿದ ಹಿನ್ನೆಲೆ ವ್ಯಕ್ತಿ ದೇಹ ತುಂಡು ತುಂಡಾಗಿದೆ. ದೇಹದ ತುಂಡುಗಳು ರಸ್ತೆಗೆ ಅಂಟಿಕೊಂಡಿವೆ. ರಸ್ತೆಗೆ ಅಂಟಿಕೊಂಡ ಮಾಂಸದ ಚೂರುಗಳು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅಪರಿಚಿತ ವ್ಯಕ್ತಿಯ ಮೇಲೆ ವಾಹನಗಳು ಹರಿದ ಪರಿಣಾಮ ರಸ್ತೆಯಲ್ಲಿ ಕಿಲೋಮೀಟರ್ ಉದ್ದಕ್ಕೆ ಮೃತ ದೇಹದ …

Read More »

ಬೆಳ್ಳುಳ್ಳಿ ದರದಲ್ಲಿ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ

ಹಾವೇರಿ: ಬೆಳ್ಳುಳ್ಳಿ ದರದಲ್ಲಿ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಭಾನುವಾರ ಕುಸಿದಿದೆ. ಕೆಲ ದಿನಗಳ ಹಿಂದೆ 1 ಕ್ವಿಂಟಲ್​ ಬೆಳ್ಳುಳ್ಳಿ ದರ 4 ಸಾವಿರದಿಂದ 10 ಸಾವಿರ ರೂಪಾಯಿ ಇತ್ತು. ಭಾನುವಾರ 1 ಕ್ವಿಂಟಲ್​ ಬೆಳ್ಳುಳ್ಳಿ ಒಂದೂವರೆ ಸಾವಿರದಿಂದ 4 ಸಾವಿರ ರೂಪಾಯಿಗೆ ಮಾರಾಟ ಆಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಧಾರಾಕಾರವಾಗಿ ಸುರಿದ ಮಳೆ, ಮೋಡಮುಸುಕಿದ ವಾತಾವರಣ ಇರುವ ಕಾರಣ ಬೆಳ್ಳುಳ್ಳಿಯನ್ನು ಒಣಗಿಸಲು …

Read More »

ರಾಜ್ಯದಲ್ಲಿ ಹೆಚ್ಚಾದ ಕರೊನಾ ಆತಂಕ; ಸಿಎಂ ಸಭೆಯಲ್ಲಿ ಹೊರಬಿತ್ತು ಹೊಸ ಗೈಡ್​​ಲೈನ್ಸ್​: ಇಲ್ಲಿದೆ ವಿವರ.

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ಹೆಚ್ಚಳದ ಜತೆಗೆ ಕರೊನಾ ರೂಪಾಂತರಿ ಒಮಿಕ್ರೋನ್​ ಭೀತಿಯೂ ಉಂಟಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೋವಿಡ್​-19 ನಿಯಂತ್ರಣ ಸಂಬಂಧ ವಿಶೇಷ ಸಭೆ ನಡೆಸಲಾಗಿದೆ. ಕರೊನಾ ಪ್ರಕರಣಗಳ ನಿಯಂತ್ರಣ ಹಾಗೂ ಸೋಂಕು ತಡೆ ಸಲುವಾಗಿ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖ ನಿರ್ಧಾರಗಳ ವಿವರ ಇಂತಿದೆ. ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆ ಕೈಗೊಳ್ಳುವುದು. ಕೇರಳ …

Read More »

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮೂವರಲ್ಲಿ ಎಲೆಕ್ಷನ್ ನಾವು ಗೆಲ್ಲಬೇಕು.. : ಲಕ್ಷ್ಮೀ ಹೆಬ್ಬಾಳ್ಕರ್

ಪರಿಷತ್ ಚುನಾವಣಾ ಫೈಟ್‌ನಲ್ಲಿ ರಾಜಕೀಯ ಬದ್ಧವೈರಿಗಳ ವಾಗ್ಯುದ್ಧ ಜೋರಾಗಿಯೇ ನಡೆದಿದ್ದು,ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಂಡುಕೋರ ಎಂದಿದ್ದಾರೆ. ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮೂವರಲ್ಲಿ ಎಲೆಕ್ಷನ್ ನಾವು ಗೆಲ್ಲಬೇಕು..ನಾವು ಗೆಲ್ಲಬೇಕು ಅಂತಾ ಓಡಾಡ್ತಿದ್ದೀವಿ..ಆದ್ರೆ,ಒಬ್ಬರು ಬಿಜೆಪಿಯಿಂದ ಓಡಾಡ್ತಿದ್ರೆ.ನಾವು ಕಾಂಗ್ರೆಸ್‌ನಿಂದ ಓಡಾಡ್ತಿದೀವಿ. ಒಬ್ಬರು ಪಕ್ಷೇತರವಾಗಿ ಓಡಾಡುತ್ತಿದ್ದಾರೆ.ಅವರು ಮುಂಚೆ ನಮ್ಮ ಪಕ್ಷದಲ್ಲಿ ಇದ್ರು. ಇಲ್ಲಿಯೂ ಬಂಡುಕೋರ ಮಾಡಿದ್ರು.ಇಲ್ಲಿಯೂ ಕೂಡ ಅವರಿಗೆ ಸಮಾಧಾನ …

Read More »

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಲಕ್ಷಿ ಹೆಬ್ಬಾಳ್ಕರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಈಶ್ವರಪ್ಪ

ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಮಗೆ ಬೇಕಾದವರಿಗೆ, ಪರಿಚಿತರಿಗೆ, ಹಾಗೂ ಹಣವಂತರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ. ಇದನ್ನು ಜನತೆ ತಿರಸ್ಕಾರ ಮಾಡುತ್ತಾರೆಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆಎಸ್ ಈಶ್ವರಪ್ಪನವರು, ಬಿಜೆಪಿ ಡಿಸೆಂಬರ್೧೨ ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಗಳಿಂದ ತಲಾ ೧೦ ಹಿಂದುಳಿದ ವರ್ಗಗಳ ನಾಯಕರ ಜಾಗೃತಿ ಸಮಾವೇಶ ನಡೆಯಲಿದೆ. ಅದರ ಪ್ರಯುಕ್ತ ಬೆಳಗಾವಿ …

Read More »

ಉಗಾರದ ಮಾಜಿ ಶಾಸಕ ರಾಜು ಕಾಗೆ ಸೇರಿ ೩೦ ರೈತರ ೧೦ ಲಕ್ಷ ರೂ ಮೌಲ್ಯದ ಪಂಪ ಸೆಟ್ ಗಳ ಕೇಬಲ್ ಕಳ್ಳತನ

ಕಾಗವಾಡ ತಾಲೂಕಿನ ಹಳ್ಳಿಗಳಲ್ಲಿ ಮನೆಗಳ ಕಳ್ಳತನ ಹಾವಳಿ ಹೆಚ್ಚಾಗಿದ್ದು, ಈಗ ಕಳ್ಳರು ನದಿಯಿಂದ ಗದ್ದೆಗಳಿಗೆ ನೀರು ಸೆಳೆಯಲು ಭಳಸಿರುವ ವಿದ್ಯೂತ್ ಪಂಪ ಸೆಟ್ ಗಳ ಕೇಬಲ್ ಕಳ್ಳತನ ಪ್ರಾರಂಭಿಸಿದ್ದಾರೆ. ಉಗಾರದ ಮಾಜಿ ಶಾಸಕ ರಾಜು ಕಾಗೆ ಸೇರಿ ೩೦ ರೈತರ ಪಂಪ ಸೆಟ್ ಗಳ ಕೇಬಲ ಕಳ್ಳತನ ಮಾಡಿದ್ದಾರೆ. ಸುಮಾರು ೧೦ ಲಕ್ಷ ರೂ ಮೌಲ್ಯದ ಕೇಬಲ್ ಕಳ್ಳತನವಾಗಿರುವದರಿಂದ ರೈತರು ಆತಂಕದಲ್ಲಿದ್ದಾರೆ. ಉಗಾರ ಬುದ್ರುಕ್ ಗ್ರಾಮದ ರೈತರು ಒಂದುಗೂಡಿ ಗ್ರಾಮದ …

Read More »

#MeToo ಪ್ರಕರಣ ‘ಕ್ಲೋಸ್‌’ – ನಟಿ ಶೃತಿ ಹರಿಹರನ್‌ಗೆ ಪೊಲೀಸರಿಂದ ನೋಟಿಸ್‌, ಠಾಣೆಗೆ ಬರುವಂತೆ ಬುಲಾವ್‌

ಬೆಂಗಳೂರು: ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಟಿ ಶೃತಿ ಹರಿಹರನ್‌ಗೆ ಪೊಲೀಸರಿಂದ ನೋಟಿಸ್‌ ನೀಡಲಾಗಿದೆಯಂತೆ. 2018ರಲ್ಲಿ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲು ಮಾಡಿದ್ದ ಶ್ರುತಿ ಅವರ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ ಭಾರತೀಯ ದಂಡ ಸಂಹಿತೆ 354, 354 ಎ ಮತ್ತು 506 ಸೆಕ್ಷನ್​ ಅಡಿಯಲ್ಲಿ ಕೇಸ್ ದಾಖಲಾಗಿತ್ತು.   ಈಗ ಶೃತಿ ಅವರು ಸಲ್ಲಿಸಿದ್ದ ದೂರಿಗೆ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರು …

Read More »

ಬೆಳಗಾವಿಯಲ್ಲಿಂದು ನಡೆದ ಬಿಡಿಸಿಸಿ ಬ್ಯಾಂಕ್, ಜಿಲ್ಲಾ ಹಾಲು ಒಕ್ಕೂಟ, ಜಿಲ್ಲಾ ಸಹಕಾರಿ ಯೂನಿಯನ್ ದಿಗ್ಧರ್ಶಕರ ಸಭೆಯಲ್ಲಿ ಈ ಹೇಳಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು. ಶನಿವಾರದಂದು ಇಲ್ಲಿಯ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಜಿಲ್ಲಾ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರುಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ಕೋರಿಕೊಂಡರು. ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೇಸ್ …

Read More »

ಬಿಜೆಪಿಯವರು ಎಲ್ಲಿ ಸೋಲುತ್ತೀರಿ ಅದನ್ನೂ ಹೇಳಿ: ಡಿ.ಕೆ.ಶಿವಕುಮಾರ್

ರಾಮನಗರ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತೇವೆ ಎನ್ನುವ ಬಿಜೆಪಿಯವರು, ಸೋಲುವ ಉಳಿದ 10 ಕ್ಷೇತ್ರಗಳು ಯಾವುವು ಎಂಬುದನ್ನೂ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.   ಕನಕಪುರದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಬಿಜೆಪಿ 25 ಕ್ಷೇತ್ರಗಳನ್ನೂ ಗೆಲ್ಲಬಹುದು. ಅವರು ಮತ್ತು ಜೆಡಿಎಸ್‌ನವರು ಯಾವಾಗ ಕಿತ್ತಾಡುತ್ತಾರೋ ಯಾವಾಗ ಒಂದಾಗುತ್ತಾರೋ ಅವರಿಗೇ ಗೊತ್ತು’ ಎಂದು ಅವರು ಲೇವಡಿ ಮಾಡಿದರು.

Read More »