Breaking News
Home / ರಾಜಕೀಯ / ಆಸ್ಪತ್ರೆಯಿಂದಲೇ ‘ಬಿಗ್ ​ಬಾಸ್’​ ಕಾರ್ಯಕ್ರಮ ನಡೆಸಿಕೊಟ್ಟ ಕಮಲ್​ಹಾಸನ್.​..! ರಮ್ಯಾ ಕೃಷ್ಣನ್​ ಸಾಥ್​​

ಆಸ್ಪತ್ರೆಯಿಂದಲೇ ‘ಬಿಗ್ ​ಬಾಸ್’​ ಕಾರ್ಯಕ್ರಮ ನಡೆಸಿಕೊಟ್ಟ ಕಮಲ್​ಹಾಸನ್.​..! ರಮ್ಯಾ ಕೃಷ್ಣನ್​ ಸಾಥ್​​

Spread the love

ಕೋವಿಡ್​ 19 ಸೋಂಕಿನಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮಲ್​ ಹಾಸನ್​ ಅನುಪಸ್ಥಿತಿಯಿಂದಾಗಿ ತಮಿಳಿನ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​​​ ಸೀಸನ್​​ 5ರ ನಿರೂಪಣೆಯನ್ನು ರಮ್ಯಾ ಕೃಷ್ಣ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಆಯೋಜಕರು ಮುಂಬರುವ ಎಪಿಸೋಡ್​ನ ಪ್ರೋಮೋವನ್ನು ರಿಲೀಸ್​ ಮಾಡಿದ್ದು ಇದರಲ್ಲಿ ಕಮಲ್​ ಹಾಸನ್​​​ ಆಸ್ಪತ್ರೆಯಿಂದಲೇ ಮಾತನಾಡಿದ್ದಾರೆ.

ನಟಿ ರಮ್ಯಾ ಕೃಷ್ಣನ್​​ರನ್ನು ಗೆಳತಿ ಎಂದು ಪರಿಚಯಿಸಿದ ಕಮಲ್​ ಹಾಸನ್​ ಕಾರ್ಯಕ್ರಮ ನಡೆಸಲು ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ.

ರಮ್ಯಾ ಕೃಷ್ಣನ್​​ರನ್ನು ಬಿಗ್​ಬಾಸ್​ ನಿರೂಪಕಿಯಾಗಿ ಪರಿಚಯಿಸುತ್ತಿರುವ ಈ ಪ್ರೋಮೋದಲ್ಲಿ ಹಿನ್ನೆಲೆ ಸಂಗೀತವಾಗಿ ಬಾಹುಬಲಿ ಸಂಗೀತವನ್ನು ಬಳಸಿಕೊಳ್ಳಲಾಗಿದೆ. ದಕ್ಷಿಣ ಭಾರತದ ಹೆಸರಾಂತ ನಟಿ ರಮ್ಯಾ ಕೃಷ್ಣನ್​​ಗೆ ಬಾಹುಬಲಿ ಸಿನಿಮಾ ಬಹುದೊಡ್ಡ ಬ್ರೇಕ್​ ನೀಡಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ನಟ ವಿಜಯ್​ ಸೇತುಪತಿ, ಕಮಲ್​ ಹಾಸನ್​ ಬದಲಿಗೆ ಈ ವಾರದ ಬಿಗ್​ ಬಾಸ್​ ಶೋ ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಪ್ರೋಮೋದ ಮೂಲಕ ಬಿಗ್​ಬಾಸ್​​ ಕಾರ್ಯಕ್ರಮದ ಆಯೋಜಕರು ತೆರೆ ಎಳೆದಿದ್ದಾರೆ. ಕಮಲ್​ ಹಾಸನ್​ 2017ರಿಂದ ಬಿಗ್​ಬಾಸ್​ ಶೋದ ನಿರೂಪಕರಾಗಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ