Breaking News
Home / ರಾಜಕೀಯ (page 868)

ರಾಜಕೀಯ

ಚಿಕ್ಕೋಡಿಯಲ್ಲಿ ವಿವಿಧ ದಲಿತ ಸಂಘಟನೆಗಳಿಂದ ತಾಲ್ಲೂಕು ಆಡಳಿತ‌ ವಿರುದ್ಧ ಪ್ರತಿಭಟನೆ

ಇತ್ತೀಚೆಗೆ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸದೇ ತಾಲ್ಲೂಕು ಆಡಳಿತ ಅವಮಾನ ಮಾಡಿರೋದಾಗಿ ಆರೋಪಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕೋಡಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಯಿಂದ ಹೊರಟ ಮೆರವಣಿಗೆಯು ಬಸವ ಸರ್ಕಲ್ ಮೂಲಕ …

Read More »

ಗುತ್ತಿಗೆದಾರ ಸಂತೋಷ್​​ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್‌ ರಿಲೀಫ್ ಪಡೆದುಕೊಂಡಿದ್ದ ಮಾಜಿ ಸಚಿವ ಈಶ್ವರಪ್ಪಗೆ ಇದೀಗ ಮತ್ತೆ ಸಂಕಷ್ಟ ಶುರವಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವರಿಗೆ ಕ್ಲೀನ್‌ಚಿಟ್‌ ನೀಡಿದ್ದ ತನಿಖಾಧಿಕಾರಿಗಳ ಕ್ರಮ ಪ್ರಶ್ನಿಸಿ ಸಂತೋಷ್‌ ಪಾಟೀಲ್‌ ಕುಟುಂಬ ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದಾರೆ. ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಲ್ಲಿಸಿರುವ ಬಿ-ವರದಿ ಪ್ರಶ್ನಿಸಿ ಮೃತ ಸಂತೋಷ್‌ ಪಾಟೀಲ್‌ ಸಹೋದರ ಪ್ರಶಾಂತ್‌ ಪಾಟೀಲ್‌ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ …

Read More »

ಸರ್ಕಾರ ಸಮಯಕ್ಕೆ ಸರಿ ನಿರ್ಧಾರ ಕೈಗೊಳ್ಳುತ್ತಿಲ್ಲ: ಸಚಿವ ನಿತಿನ್‌ ಗಡ್ಕರಿ

ಮುಂಬೈ: “ಸರ್ಕಾರವು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಅದೇ ದೊಡ್ಡ ಸಮಸ್ಯೆ’ -ಹೀಗೆ ಹೇಳಿರುವುದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ. ಮುಂಬೈನಲ್ಲಿ ಅಸೋಸಿಯೇಷನ್‌ ಆಫ್ ಕನ್ಸಲ್ಟಿಂಗ್‌ ಸಿವಿಲ್‌ ಇಂಜಿನಿಯರ್ಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿತಿನ್‌ ಗಡ್ಕರಿ ಈ ಮಾತುಗಳನ್ನಾಡಿದ್ದಾರೆ.   “ನೀವು ಪವಾಡಗಳನ್ನು ಸೃಷ್ಟಿಸಬಹುದು. ಆ ಸಾಮರ್ಥ್ಯ ಇಲ್ಲಿದೆ. ಮೂಲ ಸೌಕರ್ಯ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ. ನಾವು ಅತ್ಯುತ್ತಮ ತಂತ್ರಜ್ಞಾನ, ನಾವಿನ್ಯತೆ, ಸಂಶೋಧನೆಯನ್ನು ಅಳವಡಿಸಿಕೊಳ್ಳಬೇಕು. …

Read More »

ಕೊಡವರ ಪರ ಜಗ್ಗೇಶ ಹೇಳಿಕೆಗೆ ಯತ್ನಾಳ್ ಸಮರ್ಥನೆ

ವಿಜಯಪುರ: ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಉರುಳುತ್ತವೆ ಎಂದಿರುವ ಸಂಸದ ಜಗ್ಗೇಶ ಹೇಳಿಕೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೆ ಸಮರ್ಥಿಸಿದ್ದಾರೆ. ಮಾಧ್ಯಮಗಳ ಮಟ್ಟಿಗೆ ಅದು ವಿವಾದಾತ್ಮಕ ಇರಬಹುದು, ಆದರೆ ವಾಸ್ತವ ಹಾಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.   ಬುಧವಾರ ನಗರದಲ್ಲಿ ವಿಜಯಪುರ ನಗರದ ಗಾಂಧಿಚೌಕ್ ಬಳಿ ಪಾಲಿಕೆಯ ವಲಯ ಕಚೇರಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು …

Read More »

ಪ್ರಶ್ನೆಪತ್ರಿಕೆ ಸೋರಿಕೆ ಮಾಡದೇ ಒಎಂಆರ್ ಶೀಟ್ ತಿದ್ದಲು ಸಂಚು!; ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣ

ಬೆಂಗಳೂರು :ಪೊಲೀಸ್ ಸಬ್​ಇನ್​ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ವೇಳೆ ಕೇಂದ್ರ ಸ್ಥಾನದಿಂದಲೇ ಪ್ರಶ್ನೆಪತ್ರಿಕೆ ಲೀಕ್ ಮಾಡಲು ಪ್ಲಾಯನ್ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಭಯದಿಂದ ಪ್ಲಾಯನ್-ಬಿ ಒಎಂಆರ್ ಶೀಟ್ ತಿದ್ದುವುದನ್ನು ಫೈನಲ್ ಮಾಡಲಾಗಿತ್ತು.   ಪೊಲೀಸ್ ನೇಮಕಾತಿ ವಿಭಾಗದ ಹಿಂದಿನ ಎಡಿಜಿಪಿ ಅಮೃತ್ ಪೌಲ್ ಮತ್ತು ಡಿವೈಎಸ್​ಪಿ ಶಾಂತಕುಮಾರ್ ನಡುವೆಯೇ ಪ್ಲ್ಯಾನ್​-ಎ ಮತ್ತು ಬಿ ಬಗ್ಗೆ ರಹಸ್ಯ ಚರ್ಚೆ ನಡೆದಿತ್ತು. ಆನಂತರ ಉಳಿದವರನ್ನು ಅವರ ಕೆಲಸಕ್ಕೆ ತಕ್ಕಂತೆ ಕಮಿಷನ್ …

Read More »

2024ರ ಲೋಕಸಭಾ ಚುನಾವಣೆ: ನರೇಂದ್ರ ಮೋದಿ Vs ಯಾರು?

2024ರ ಲೋಕಸಭಾ ಚುನಾವಣೆಗೆ 2 ವರ್ಷಗಳಷ್ಟೇ ಬಾಕಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಕಡಿದುಕೊಂಡ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇದನ್ನು ಆರ್‌ಜೆಡಿಯ ತೇಜಸ್ವಿ ಯಾದವ್‌ ಈಚೆಗೆ ಅನುಮೋದಿಸಿದ್ದರು. ಇನ್ನು, ದೆಹಲಿ ಸಿಎಂ ಕೇಜ್ರಿವಾಲ್‌ ಮುಂದಿನ ಪಿಎಂಬ ಅಭ್ಯರ್ಥಿ ಎಂದು ಅಲ್ಲಿನ ಉಪಮುಖ್ಯಮಂತ್ರಿ ಸಿಸೊಡಿಯಾ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. …

Read More »

ಹೆಚ್ಚು ಸಾಲ’ದಲ್ಲಿ ಅದಾನಿ ಸಮೂಹ: ಕ್ರೆಡಿಟ್‌ಸೈಟ್ಸ್‌ ಎಚ್ಚರಿಕೆ

ನವದೆಹಲಿ: ದೇಶದ ಅತ್ಯಂತ ಶ್ರೀಮಂತ, ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಸಮೂಹವು ‘ಹೆಚ್ಚು ಸಾಲದಲ್ಲಿದೆ’ ಎಂದು ಫಿಚ್ ಸಮೂಹದ ಅಂಗಸಂಸ್ಥೆ ಕ್ರೆಡಿಟ್‌ಸೈಟ್ಸ್‌ ವರದಿ ಹೇಳಿದೆ. ಸಮೂಹವು ಹಾಲಿ ಹಾಗೂ ಹೊಸ ವಹಿವಾಟುಗಳಿಗೆ ಹೂಡಿಕೆ ಮಾಡಲು ಸಾಲವನ್ನು ಮುಖ್ಯವಾಗಿ ಬಳಸುತ್ತಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.   ‘ಹೆಚ್ಚು ಮಹತ್ವಾಕಾಂಕ್ಷೆಯ, ಸಾಲದ ಹಣದಲ್ಲಿ ನಡೆಯುವ ಬೆಳವಣಿಗೆ ಯೋಜನೆಗಳು ಕಾಲಕ್ರಮೇಣ ಭಾರಿ ಸಾಲದ ಸುಳಿಗೆ ಸಿಲುಕಬಹುದು. ಅತ್ಯಂತ ನಕಾರಾತ್ಮಕ ಸಂದರ್ಭದಲ್ಲಿ ಮಾತ್ರ …

Read More »

ರಾಜ್ಯದ ವಿವಿಧೆಡೆ ಎರಡು ದಿನ ಮಳೆ

ಬೆಂಗಳೂರು: ಕರಾವಳಿಯ ಬಹುತೇಕ ಕಡೆ ಬುಧವಾರ ಹಾಗೂ ಗುರುವಾರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗ ಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆ ಎರಡು ದಿನಗಳು ಭಾರಿ ಮಳೆಯಾ ಗಲಿದೆ. ಕರಾವಳಿ ತೀರದಲ್ಲಿ ಬಿರು ಗಾಳಿಯ …

Read More »

ರಾತ್ರಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಅನಾಮದೇಯ ಪತ್ರ; FIR ದಾಖಲಿಸಿದ ಪೊಲೀಸರು

ಶಿವಮೊಗ್ಗ – ಈಚೆಗಷ್ಟೆ ಕೋಮುಗಲಭೆಯಿಂದ ತತ್ತರಿಸಿರುವ ಶಿವಮೊಗ್ಗ ನಗರ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಿದೆ. ದೇವಸ್ಥಾನವೊಂದರ ಕಟ್ಟೆಯ ಮೇಲೆ ಸಿಕ್ಕಿರುವ ಅನಾಮದೇಯ ಪತ್ರವೊಂದು ಜನರನ್ನು ಮಲಗದಂತೆ ಮಾಡಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮುವರನ್ನು ಕೊಲೆಗೈಯಲು ಸಂಚು ರೂಪಿಸಲಾಗಿದೆ ಎನ್ನುವ ಆಘಾತಕಾರಿ ಅಂಶವನ್ನು ಹೊತ್ತ ಪತ್ರವೊದು ಪೊಲೀಸರ ಕೈ ಸೇರಿದ್ದು, ಎಫ್ಐಆರ್ ದಾಖಲಾಗಿದೆ.   ಗಾಂಧಿ ಬಜಾರದ ಗಂಗಾ ಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕರೊಬ್ಬರು  ಅಂಗಡಿ ಬಂದ್ ಮಾಡುವ ವೇಳೆ  …

Read More »

24 ಗಂಟೆಯಲ್ಲಿಯೇ ಅನುಕಂಪ ಆಧಾರದ ನೌಕರಿ; ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ : ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ‌ಪ್ರಥಮ ದರ್ಜೆ ಸಹಾಯಕರೊಬ್ಬರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರಿಂದ ಅವರ ಅವಲಂಬಿತ ಕಿರಿಯ ಸಹೋದರನಿಗೆ ಕೇವಲ 24 ಗಂಟೆಯಲ್ಲಿ ಅನುಕಂಪ ಆಧಾರಿತ ನೇರ ನೇಮಕಾತಿ ಆದೇಶ ನೀಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಳಕಳಿಯನ್ನು ಮೆರೆದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ ಮಹಾದೇವ ಬಾದುಲೆ ಅವರು ದಿನಾಂಕ ಆಗಸ್ಟ್ 22 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು. …

Read More »