Breaking News
Home / ರಾಜಕೀಯ (page 869)

ರಾಜಕೀಯ

ಕಾಂಗ್ರೆಸ್ ಕಛೇರಿಗೆ ಸಾವರ್ಕರ್ ಫೋಟೋ : ಬಸವನಾಡಲ್ಲೂ ಹಬ್ಬಿದ ಸಾವರ್ಕರ್ ಕಿಡಿ

ವಿಜಯಪುರ: ಜಿಲ್ಲೆಗೂ ಸಾವರ್ಕರ್ ವಿವಾದದ ಕಿಡಿ ಹರಡಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ನಗರದ ಗಜಾನನ ಮಹಾಮಂಡಳದ ಸಭೆಯ ವೇದಿಕೆಗೆ ಸಾವರ್ಕರ್ ಎಂದು ಹೆಸರು ಇರಿಸಿದ್ದರೆ, ಇದರ ಬೆನ್ನಲ್ಲೇ ಕಾಂಗ್ರೆಸ್ ಕಛೇರಿಗೆ ಅಪರಿಚಿತ ವ್ಯಕ್ತಿ ಸಾವರ್ಕರ್ ಫೋಟೋ ಅಂಟಿಸುವ ಮೂಲಕ ಜಿಲ್ಲೆಯಲ್ಲೂ ವಿವಾದ ತಾರಕಕ್ಕೆ ಏರುವಂತೆ ಮಾಡಿದ್ದಾರೆ.   ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿನ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆದ ಶ್ರೀ ಗಜಾನನ …

Read More »

K.P.T.C.L. ಪರೀಕ್ಷಾ ಅಕ್ರಮ; 9 ಜನರ ಬಂಧನ

ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಕೆಪಿಟಿಸಿಎಲ್ ಪರೀಕ್ಷಾ ನೇಮಕಾತಿಯಲ್ಲಿ ಬಂಧಿತ ಅಭ್ಯರ್ಥಿಗಳು ಸ್ಮಾರ್ಟ್ ವಾಚ್ ಬಳಸಿ, ಪ್ರೆಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಮ್ ಆಪ್ ಮೂಲಕ ತನ್ನ ಸ್ನೇಹಿತರಿಗೆ ಕಳುಹಿಸಿ ಉತ್ತರ ಪಡೆದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಚಿನ್ ಶ್ರೀಧರ ಕಮತರ (32) ಗೋಕಾಕ ಶಹರ ಠಾಣೆಗೆ ಹಾಜರಾಗಿ …

Read More »

ಗಣೇಶೋತ್ಸವ ಶಾಂತಿಯುತವಾಗಿ ನಡೆಸುವಂತೆ ಕೇಂದ್ರ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಿಂದ ಡಿಸಿ ಹಾಗೂ ಕಮಿಶನರ್‍ರವರಿಗೆ ಮನವಿ

ಆಗಸ್ಟ್ 31 ರಂದು ಶ್ರೀ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು, ಈ ಬಾರಿಯ ಗಣೇಶೋತ್ಸವವನ್ನು ಶಾಂತಿಯುತವಾಗಿ ನಡೆಸುವಂತೆ ಕೇಂದ್ರ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ನಿಯೋಗವು ಜಿಲ್ಲಾಧಿಕಾರಿ ಹಾಗೂ ಪೆÇಲೀಸ್ ಆಯುಕ್ತರಿಗೆ ಸೋಮವಾರ ವಿವಿಧ ಬೇಡಿಕೆಗಳನ್ನು ಸಲ್ಲಿಸಿದೆ. ಈ ವರ್ಷದ ಶ್ರೀ ಗಣೇಶೋತ್ಸವವು ಹತ್ತು ದಿನಗಳು ಮತ್ತು ಬುಧವಾರ. 31 ಆಗಸ್ಟ್ ನಿಂದ ಶುಕ್ರವಾರ ಸೆಪ್ಟೆಂಬರ್ 9 ರ ಅವಧಿಯಲ್ಲಿ ಗಣೇಶೋತ್ಸವವನ್ನು ಆಚರಿಸಲಾಗುವುದು. ಬೆಳಗಾವಿಯಲ್ಲಿ 357ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಲಗಳು ಕಾರ್ಯನಿರ್ವಹಿಸುತ್ತಿದ್ದು, …

Read More »

ಬೆತ್ತಲೆ ವಿಡಿಯೋ ಕಾಲ್ ಮಾಡಿ ಯುವತಿಯಿಂದ ಬ್ಲ್ಯಾಕ್ ಮೇಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ

ಮೈಸೂರು: ಯುವತಿಯೊಬ್ಬಳು ಯುವಕನಿಗೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ವಾಸು ಬ್ಲ್ಯಾಕ್ ಮೇಲ್ ಗೊಳಗಾದ ಯುವಕ. ಯುವಕನಿಗೆ ಮೆಸೆಜ್ ಮೂಲಕ ತನ್ನನ್ನು ಅಮೃತಾ ಎಂದು ಪರಿಚಯಿಸಿಕೊಂಡ ಯುವತಿ ಪದೇ ಪದೆ ವಿಡಿಯೋ ಕಾಲ್ ಮಾಡಿದ್ದಾಳೆ ಅಲ್ಲದೇ ಬೆತ್ತಲೆ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದಾಳೆ. ತಕ್ಷಣ ಯುವಕ ವಿಡಿಯೋ ಕಾಲ್ ಕಟ್ ಮಾಡಿದ್ದಾನೆ. ಆದರೆ ವಿಡಿಯೋ ಕಾಲ್ …

Read More »

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಗದಗದಲ್ಲಿ ಅಪ್ಪ, ಮಗನಿಂದಲೇ ಡೀಲ್‌

ಗದಗ, ಆಗಸ್ಟ್‌ 21: ರಾಜ್ಯದಲ್ಲಿ ಪಿಎಸ್‌ಐ ಪರೀಕ್ಷೆಯ ಹಗರಣ ಮಾಸುವ ಮುನ್ನವೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಗದಗದ ಮುನ್ಸಿಪಲ್ ಕಾಲೇಜ್‌ನಲ್ಲಿ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಗದಗದ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯ …

Read More »

ಸಿಎಂ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೋಳಿಮಠ ಇನ್ನಿಲ್ಲ

ಬೆಂಗಳೂರು: ಮುಖ್ಯ ಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರಿ ವಿಧಿವಶರಾಗಿದ್ದಾರೆ. ಅವರಿಗೆ ಇಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಇದೇ ವೇಳೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅಲ್ಲಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುರುಲಿಂಗ ಸ್ವಾಮಿ ಹೋಳಿಮಠ ಅವರು ಮುಖ್ಯಮಂತ್ರಿ ಮಾಧ್ಯಮ ಸಂಯೋಜಕಯಾಗಿ ಕೆಲಸ ಮಾಡುತ್ತಿದ್ದರು, ಇದಲ್ಲದೇ ಇವರು ಕನ್ನಡದ ಅನೇಕ ಸುದ್ದಿ …

Read More »

ಕೊಲೆಯಾದ 50 ದಿನಗಳ ಬಳಿಕ ಅಸ್ಥಿಪಂಜರ ಪತ್ತೆ; ಇಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದವಳಿಂದಲೇ ಕೊಲೆ!

ನೆಲಮಂಗಲ: ಇಲ್ಲೊಂದು ಕೊಲೆ ನಡೆದ 50 ದಿನಗಳ ಬಳಿಕ ಕೊಲೆಗೀಡಾದವನ ಅಸ್ಥಿಪಂಜರ ಪತ್ತೆಯಾಗಿದ್ದು, ಇಬ್ಬಿಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯೇ ಕೊಲೆಗಾತಿ ಎಂಬುದು ಪತ್ತೆಯಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.   ರಾಯಚೂರು ಮೂಲದ ದೊಡ್ಡಲಿಂಗಪ್ಪ (45) ಕೊಲೆಯಾದ ವ್ಯಕ್ತಿ. ಲಕ್ಷ್ಮೀ (35) ಮತ್ತು ವೆಂಕಟೇಶ್​ (40) ಕೊಲೆ ಆರೋಪಿಗಳು. ಲಕ್ಷ್ಮೀಗೆ ವೆಂಕಟೇಶ್ ಜತೆಗಷ್ಟೇ ಅಲ್ಲದೆ, ದೊಡ್ಡಲಿಂಗಪ್ಪ ಜತೆಗೂ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಜು. …

Read More »

ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ..? ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

ಮೈಸೂರು: ಮಾಂಸಾಹಾರ ಸೇವಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ದೇವಸ್ಥಾನಕ್ಕೆ ತೆರಳಿದ್ದ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿದ್ದಾರಾ? ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.   ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಹುದು ಎಂದು ಹೇಳಿದರೆ ಬಂದು …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ: ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

  ಗೋಕಾಕ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಸಿದ್ದಲಿಂಗ ದಳವಾಯಿ, ವಿವೇಕ್ ಜತ್ತಿ, ಮಂಜುಳಾ ರಾಮಾನಗಟ್ಟಿ, ಹಾಗೂ ಅನೇಕರು ಉಪಸ್ಥಿತರಿದ್ದರು

Read More »

ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಶಶಿಧರಕುರೇರ ನೇಮಕ

ಬೆಳಗಾವಿ – ಐಎಎಸ್ ಅಧಿಕಾರಿಯಾಗಿ ಈಚೆಗಷ್ಟೆ ಭಡ್ತಿ ಪಡೆದಿರುವ ಬೆಳಗಾವಿಯ ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ(ಕಾಡಾ) ಆಡಳಿತಾಧಿಕಾರಿ ಶಶಿಧರ ಕುರೇರ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಕುರೇರ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಹಾಲಿ ಸಿಇಒ ಚಂದ್ರಶೇಖರ ನಾಯಕ ಅವರ ಸ್ಥಾನದಲ್ಲಿ ಕುರೇರ ಅವರು ನೇಮಕವಾಗಿದ್ದು, ಇದು ಐಎಎಸ್ ಅಧಿಕಾರಿಯಾಗಿ ಅವರ ಮೊದಲ ಹುದ್ದೆಯಾಗಿದೆ. ಕುರೇರ ಅವರು …

Read More »