Breaking News
Home / ರಾಜಕೀಯ (page 880)

ರಾಜಕೀಯ

ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!

ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಬದುಕಿನಲ್ಲಿ ಮರೆಯಲಾರದ ದಿನ. ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ ‘ಮಹಾಭಾರತ’ ರಿಲೀಸ್ ಆಗಿದ್ದ ದಿನ. 1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು. ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ.   ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ಚಿತ್ರರಂಗದಲ್ಲಿ ದರ್ಶನ್ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಮೊದಲಿಗೆ …

Read More »

ಅಂಗಾಂಗ ದಾನಕ್ಕೆ ನಾನು ಹೆಸರು ನೋಂದಾಯಿಸಿದ್ದೇನೆ, ನೀವು ಕೂಡ ನೋಂದಾಯಿಸಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ಕುಟುಂಬಸ್ಥರನ್ನು ಮುಖ್ಯಮಂತ್ರಿಯವರು ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸತ್ತ ಮೇಲೆ ನಮ್ಮ ದೇಹದಾನದಿಂದ …

Read More »

ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ ದೃಢೀಕೃತ ಮಾಹಿತಿ ಒಳಗೊಂಡಿರುವ ಜೊತೆಗೆ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ದಾಖಲಿಸಲಾಗಿದೆ.   ಯುಐಡಿಎಐ ತನ್ನ ಆನ್​ಲೈನ್​ ಪೋರ್ಟಲ್​ ಮೂಲಕ ಈಗಾಗಲೇ ನಮೂದಿಸಿರುವ ತಮ್ಮ ವೈಯಕ್ತಿಕ ಮಾಹಿತಿಯನ್ನು ಆನ್​ಲೈನ್​ನಲ್ಲಿ ನವೀಕರಿಸಲು ಸಹಾಯ ಮಾಡುತ್ತದೆ. ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು …

Read More »

ಬಿಜೆಪಿ ಶಾಸಕರಿಂದ ‘ರಾಷ್ಟ್ರಧ್ವಜ’ಕ್ಕೆ ಅಪಮಾನ: ‘ತಿರಂಗ’ದ ಹೊದ್ದ ಆನೆ ಮೇಲೆ ಮಗನನ್ನು ಕೂರಿಸಿ ಸವಾರಿ

ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು. ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( …

Read More »

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕುಯ್ದು ಕೊಂದ ಗಂಡ:

ಹಾಸನ: ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಗಂಡ ಬರ್ಬರವಾಗಿ ಹತ್ಯೆ ಮಾಡಿದ ಭಯಾನಕ ಘಟನೆ ಹೊಳೆನರಸೀಪುರದಲ್ಲಿ ಶನಿವಾರ ಸಂಭವಿಸಿದೆ. ಪತ್ನಿ ಚೈತ್ರಾಳನ್ನು ಕೊಂದದ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್. ಅಮಾನುಷವಾಗಿ ಪತ್ನಿಯ ಕತ್ತು ಪರಾರಿಯಾಗಲು ಯತ್ನಿಸಿದ್ದ ಶಿವಕುಮಾರ್​ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಹೊನಮಾರನಹಳ್ಳಿ ಗ್ರಾಮದ ಚೈತ್ರಾಳನ್ನು 7 ವರ್ಷದ ಹಿಂದೆ ಶಿವಕುಮಾರ್​ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂ ಮಕ್ಕಳು ಹೆಣ್ಣು ಎಂಬ ಕಾರಣಕ್ಕೆ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ. …

Read More »

ವಿವಾದದ ಹೇಳಿಕೆಯೇ ʼಲಾಲ್‌ ಸಿಂಗ್‌ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್‌ ಆದ್ರು ಬೇಬೋ

ಮುಂಬಯಿ: ಮಿಸ್ಟರ್‌ ಪರ್ಫೆಕ್ಟ್‌ ಆಮಿರ್‌ ಖಾನ್‌ ನಟನೆಯ ಬಹು ನಿರೀಕ್ಷಿತ ʼಲಾಲ್‌ ಸಿಂಗ್‌ ಚಡ್ಡಾʼ ಸಿನಿಮಾ ರಿಲೀಸ್‌ ಆಗಿ ದೊಡ್ಡ ಮಟ್ಟದ ಸದ್ದು ಮಾಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಸಿನಿಮಾದ ಮೊದಲ ದಿನದ ಗಳಿಕೆಯಿಂದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿಲ್ಲ ಎನ್ನುವುದು ಸಾಬೀತಾಗಿದೆ.   1994 ರಲ್ಲಿ ಬಂದ ʼಫಾರೆಸ್ಟ್‌ ಗಂಪ್‌ʼ ರಿಮೇಕ್‌ ಚಿತ್ರವಾಗಿರುವ ʼಲಾಲ್‌ ಸಿಂಗ್‌ ಚಡ್ಡಾʼದಲ್ಲಿ ಬಹು ಸಮಯದ ಬಳಿಕ ಆಮಿರ್‌ ಖಾನ್‌ ಹಾಗೂ ಕರೀನಾ …

Read More »

ಬೆಂಗಳೂರಿನ ಉದ್ಯಮಿಗೆ ಹನಿಟ್ರ್ಯಾಪ್​: ಸ್ಯಾಂಡಲ್​ವುಡ್​ನ ಯುವ ನಟ ಬಂಧನ

ಬೆಂಗಳೂರು: ಹನಿಟ್ರ್ಯಾಪ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ ನಟರೊಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟ ಯುವರಾಜ್ ಬಂಧಿತ. ‘ಮಿಸ್ಟರ್ ಭೀಮರಾವ್’ ಸಿನಿಮಾ ನಾಯಕ ಯುವರಾಜ್​, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರಿಗೆ ಇಬ್ಬರು ಯುವತಿಯರ ಹೆಸರಲ್ಲಿ ಚಾಟ್​ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಸಿದ್ದ ಆರೋಪ ಕೇಳಿಬಂದಿದೆ. ಉದ್ಯಮಿ ಕೊಟ್ಟ ದೂರಿನ ಮೇರೆಗೆ ನಟನನ್ನು ಬಂಧಿಸಲಾಗಿದೆ. ಉದ್ಯಮಿಯೊಬ್ಬರಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯ ಆಗಿದ್ದರು. ಅವರ ಹೆಸರನ್ನು ಬಳಸಿಕೊಂಡು ಉದ್ಯಮಿಗೆ ಯುವರಾಜ್​ …

Read More »

ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ್-ಬಿರಂಗಿ ಬಗ್ಗೆ ದಂತಕತೆಗಳು ಮಾತ್ರವಲ್ಲ, ಗುಪ್ತ ಸಿಡಿಗಳೂ ಇವೆ!

ಬೆಂಗಳೂರು: ‘ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕು ಎಂದರೆ ಯುವತಿಯರು ಮಂಚ ಹತ್ತಬೇಕಾಗಿದೆ’ ಎಂದಿದ್ದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಎಂದೂ ದೂರಿದೆ.   ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ್-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತಸಿಡಿಗಳೂ ಇವೆ. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ …

Read More »

ರಾಜ್ಯದ 6 ಪೊಲೀಸರಿಗೆ ಕೇಂದ್ರ ಗೃಹ ಸಚಿವರ ಪದಕ

ನವದೆಹಲಿ; ಅತ್ಯುತ್ತಮ ತನಿಖೆ ನಡೆಸಿದ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಸೇರಿದಂತೆ ದೇಶದ 151 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ಲಭ್ಯವಾಗಿದೆ. ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ರಾಜ್ಯದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮಿ ಗಣೇಶ್ ಕೆ, ಡಿವೈಎಸ್ ಪಿಗಳಾದ ವೆಂಕಟಪ್ಪ ನಾಯಕ, ಮೈಸೂರು ರಾಜೇಂದ್ರ ಗೌತಮ್, ಶಂಕರ್ ಕಾಳಪ್ಪ ಮಾರಿಹಾಳ್, ಶಂಕರಗೌಡ ವೀರಣ್ಣಗೌಡ ಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್, ಹೆಚ್. ಹಿರೇಗೌಡರ್ ಅವರುಗಳಿಗೆ ಕೇಂದ್ರ ಗೃಹ …

Read More »

ಬಳ್ಳಾರಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ, ಪಿಎಸ್ ಐ ಅಮಾನತು, ಇಲಾಖಾ ತನಿಖೆಗೆ ಆದೇಶ

ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆ ಕುರುಗೋಡು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪೊಲೀಸ್ ಅಧಿಕಾರಿ ಮಣಿಕಂಠ ವ್ಯಕ್ತಿಯೊಬ್ಬರನ್ನು ಥಳಿಸುವ ವಿಡಿಯೋ ವೈರಲ್ ಆಗಿತ್ತು. ಇದರಿಂದಾಗಿ ಹಿರಿಯ ಅಧಿಕಾರಿಗಳು ಆತನನ್ನು ಅಮಾನತು ಮಾಡಿದ್ದಾರೆ.ಯಾವುದೇ ಕಾರಣವಿಲ್ಲದೆ ಗಂಗಾಧರ ಎಂಬ ವ್ಯಕ್ತಿಯ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ ನಂತರ ಅಲ್ಲಿನ ನಿವಾಸಿಗಳು ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪಿಎಸ್ …

Read More »