Breaking News
Home / ಜಿಲ್ಲೆ (page 826)

ಜಿಲ್ಲೆ

ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ತುಂಬಾ ಬೇಸರವಾಯ್ತು: ದರ್ಶನ್

ದಾವಣಗೆರೆ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ನನಗೆ ತುಂಬಾ ಬೇಸರವಾಯಿತು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಗರದ ಬಾಪೂಜಿ ಗೆಸ್ಟ್ ಹೌಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕ್ಲಾಸ್ ಎಂದ ಮೇಲೆ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿ ಇರುತ್ತಾರೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಕೂಡ ಇರುತ್ತಾರೆ. ಅದಕ್ಕೆ ಇಡೀ ಕ್ಲಾಸ್ ಝೀರೋ ಅಂತೀರಾ. ಹಾಗೇ ಸ್ಯಾಂಡಲ್‍ವುಡ್ ಕೂಡ ಎಂದರು. ಡ್ರಗ್ಸ್ ವಿಚಾರದಲ್ಲಿ ಚಿರು …

Read More »

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳು ಮುಂದೆ ಹಾಜರ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳು ಮುಂದೆ ಹಾಜರಾಗಿದ್ದಾರೆ. ಸಿಸಿಬಿ ಕಚೇರಿಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಿಸಿಬಿ ಅಧಿಕಾರಿಗಳು ಜೊತೆ ಮೊದಲು ಮಾತನಾಡುತ್ತೇನೆ. ನನಗೆ ಯಾರದು ಒತ್ತಡ ಇಲ್ಲ. ಯಾರಿಗೂ ಹೆದರಲ್ಲ. ನಾನು ಮಾಧ್ಯಮದವರನ್ನು ಗೌರವಿಸುವೆ. ವಿಚಾರಣೆ ಮುಗಿಸಿ ಸವಿಸ್ತರವಾಗಿ ಮಾತನಾಡುವೆ ಎಂದು ಹೇಳಿ ಸಿಸಿಬಿ ಕಚೇರಿಯ ಒಳಗೆ ಹೋಗಿದ್ದಾರೆ. ಇಂದ್ರಜಿತ್ ಸಿಸಿಬಿ ಕಚೇರಿಗೆ ಬರುವವರೆಗೆ ನಿರಂತರವಾಗಿ ಫೋನ್‍ಲ್ಲಿ ಬ್ಯುಸಿಯಾಗಿದ್ದರು. …

Read More »

ಸಕಲ ಗೌರವಗಳೊಂದಿಗೆ 18 ತಿಂಗಳ ಹಿಂದೆಯಷ್ಟೆ ಸೇನೆ ಸೇರಿದ್ದ ಯೋಧನ ಅಂತ್ಯಕ್ರಿಯೆ

ಚಿಕ್ಕೋಡಿ(ಬೆಳಗಾವಿ): ಕಳೆದ ಮೂರು ದಿನದ ಹಿಂದೆ ದೆಹಲಿಯಲ್ಲಿ ಸಾವನ್ನಪ್ಪಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧ ಅನೀಲ್ ಶಿವಾಜಿ ಶಿಂಗಾಯಿ(23) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು. ಕಳೆದ 18 ತಿಂಗಳ ಹಿಂದೆಯಷ್ಟೆ ಸೈನಿಕ ಸೇವೆಗೆ ಸೇರಿದ್ದರು. ದೆಹಲಿಯಲ್ಲಿನ ರಾಜಪುಟಾನ ರಿಫಾಯಿಲ್ ದಲ್ಲಿ ತರಬೇತಿ ಮುಗಿಸಿದ್ದರು. ನಂತರ ಕಳೆದ ಮಾರ್ಚ್‍ನಲ್ಲಿ ಕರೋಶಿ ಗ್ರಾಮಕ್ಕೆ ಆಗಮಿಸಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ …

Read More »

ಕ್ಯಾಬಿನೇಟ್ ದರ್ಜೆಯ ಸ್ಥಾನಮಾನದೊಂದಿಗೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಆದೇಶ ಹೊರಡಿಸಿದೆ.:ಶಂಕರಗೌಡ ಪಾಟೀಲ

ಬೆಳಗಾವಿ-:ಬೆಳಗಾವಿ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರು ಬಿಜೆಪಿ ಸರ್ಕಾರದಲ್ಲಿ ಲಾಟ್ರಿ ಮೇಲೆ ಲಾಟ್ರಿ ಹೊಡೆಯುತ್ತಲೇ ಬಂದಿದ್ದು,ಇವರಿಗೆ ಸರ್ಕಾರ ಉನ್ನತ ಹುದ್ದೆ ನೀಡಿ ಇಂದು ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಬೆಳಗಾವಿಯ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರನ್ನು ಸರ್ಕಾರ ಇಂದು ಕ್ಯಾಬಿನೇಟ್ ದರ್ಜೆಯ ಸ್ಥಾನಮಾನದೊಂದಿಗೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆದು ಇಂದು ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ …

Read More »

ಮುಂದಿನ ಮೂರು ದಿನ ರಾಜ್ಯಾದ್ಯಂತ ಭಾರೀ ಮಳೆ; ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು  : ಈ ಬಾರಿಯ ಮಾನ್ಸೂನ್​ ಅಂದುಕೊಂಡ ಮಟ್ಟಿಗೆ ಮಳೆ ನೀಡಿಲ್ಲ. ಜೂನ್​-ಜುಲೈನಲ್ಲಿ ಕೊಂಚ ತಗ್ಗಿದ್ದ ಮಳೆ ಆಗಸ್ಟ್​ನಲ್ಲಿ ಉತ್ತಮವಾಗಿ ಸುರಿದಿತ್ತು. ಈಗ ಸೆಪ್ಟೆಂಬರ್​ ಆರಂಭದಲ್ಲಿ ಮತ್ತೆ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ. ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗಲಿದೆ. ಕುಮಟಾ, ಹೊನ್ನಾವರ, ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ ನಿರಂತರವಾಗಿ ಮಳೆ …

Read More »

ಬೆಳಗಾವಿಯಲ್ಲಿ 12ಸಾವಿರದ ಗಡಿ ದಾಡಿದ ಸೋಂಕಿತರ ಸಂಖ್ಯೆ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 357 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ, ಇಲ್ಲಿನ ಸೋಂಕಿತರ ಸಂಖ್ಯೆ 12ಸಾವಿರದ (12,090) ಗಡಿ ದಾಡಿದೆ. ತಾಲ್ಲೂಕಿನ ಸಾಂಬ್ರಾ ಏರ್‌ಮನ್‌ ತರಬೇತಿ ಶಾಲೆ (ಎಟಿಎಸ್)ಯಲ್ಲಿ ಒಂದೇ ದಿನ 69 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು (ರಾಮದುರ್ಗ, ಬೈಲಹೊಂಗಲ, ಹುಕ್ಕೇರಿ ಮತ್ತು ಬೆಳಗಾವಿ ತಾಲ್ಲೂಕಿನ ತಲಾ ಒಬ್ಬರು) ಸಾವಿಗೀಡಾಗಿದ್ದಾರೆ. ಅವರಿಗೆ ಉಸಿರಾಟದ …

Read More »

ಮಟಮಟ ಮಧ್ಯಾಹ್ನ ಬರ್ತಾರೆ – ಫೇಕ್ ದಾಖಲೆ ಹಿಡಿದು ಮನೆ ಧ್ವಂಸ ಮಾಡ್ತಾರೆ

ಬೆಂಗಳೂರು: ಕೊರೊನಾ ಸಮಯದಲ್ಲಿಯೇ ಡೆಡ್ಲಿ ಗ್ಯಾಂಗ್ ಒಂದು ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಮನೆ ಧ್ವಂಸ ಮಾಡಿದ ಘಟನೆ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿ ಮುನೇಶ್ವರ ಟೆಂಪಲ್ ಬಳಿ ನಡೆದಿದೆ. ಹೌದು. ಖದೀಮರ ತಂಡವೊಂದು ಮಟಮಟ ಮಧ್ಯಾಹ್ನವೇ ಬಂದು ಜೆಸಿಬಿ ಮೂಲಕ ಮನೆ ಕೆಡವಿ ಮನೆಯಲ್ಲಿದ್ದ ಹಣ, ಒಡವೆ, ವಸ್ತುಗಳನ್ನ ಕದ್ದೊಯ್ದಿದೆ. ಈ ವೇಳೆ ಪ್ರಶ್ನೆ ಮಾಡಿದ ಮನೆಯಲ್ಲಿದ್ದ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಸಿದ್ದಲ್ಲದೆ, ಹಲ್ಲೆ ಮಾಡಿದ ಆರೋಪ …

Read More »

ಮುಖ್ಯಮಂತ್ರಿಯಿಂದ ‘ಪ್ರಕೃತಿ ವಂದನಾ’

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ನಿವಾಸ ‘ಕಾವೇರಿ’ಯಲ್ಲಿ ಭಾನುವಾರ ಬೆಳಿಗ್ಗೆ ಪ್ರಕೃತಿ ವಂದನಾ ಕಾರ್ಯಕ್ರಮ ನಡೆಯಿತು. ಯಡಿಯೂರಪ್ಪ ಅವರು ಬಿಲ್ವ ಸಸಿ ನೆಟ್ಟು ಪೂಜೆ ಸಲ್ಲಿಸಿದರು. ಬಳಿಕ ವೃಕ್ಷಕ್ಕೆ ರಾಖಿ ಕಟ್ಟಿದರು. ಪ್ರಕೃತಿಯನ್ನು ಪೂಜಿಸುವ ಅಭಿಯಾನಕ್ಕೆ ಶುಭ ಹಾರೈಸಿ ಮಾತನಾಡಿದ ಯಡಿಯೂರಪ್ಪ, ‘ಮನೆ ಮನೆಗಳಲ್ಲಿ ಹಿತ್ತಲಲ್ಲಿ ಸಸಿ ನೆಟ್ಟು ರಕ್ಷಣೆ ಮಾಡಬೇಕು’ ಎಂದು ನಾಡಿನ ಜನರಿಗೆ ಮನವಿ ಮಾಡಿದರು. ಈ ವೇಳೆ ಉಪಸ್ಥಿತರಿದ್ದ ಕರ್ನಾಟಕ ಜೀವ ವೈವಿಧ್ಯ ಮಂಡಳಿ …

Read More »

ಮಹಿಳಾ ಪೊಲೀಸ್ ಪೇದೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆ

ಕಲಬುರಗಿ: ಮಹಿಳಾ ಪೊಲೀಸ್ ಪೇದೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಸುರೇಖಾ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಹಿಳಾ ಪೇದೆ. ಮೃತ ಸುರೇಖಾ ಕಲಬುರಗಿ ನಗರದಲ್ಲಿ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ಸಂಜೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲ ತಿಂಗಳ ಹಿಂದೆ ಸುರೇಖಾ ಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಇದೀಗ ಮಹಿಳಾ ಪೇದೆ ಸುರೇಖಾ ಕೂಡ ಸಾವನ್ನಪ್ಪಿದ್ದಾರೆ. …

Read More »

ರ‍್ಯಾಪಿಡ್ ಆಂಟಿಜನ್ ಟೆಸ್ಟ್ ವರದಿಪಾಸಿಟಿವ್ ಆರ್ಟಿಪಿಸಿಆರ್ ನಲ್ಲಿ ನೆಗೆಟಿವ್ : ಶಾಸಕ ಎಸ್.ಎ ರವೀಂದ್ರನಾಥ್ ಅವರ ರ‍್ಯಾಪಿಡ್ ಆಂಟಿಜನ್ ಟೆಸ್ಟ್

ದಾವಣಗೆರೆ: ಬಿಜೆಪಿ ಶಾಸಕರ ಕೊರೊನಾ ವೈರಸ್ ಟೆಸ್ಟ್ ವರದಿಯಲ್ಲಿ ಗೊಂದಲ ಉಂಟಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ಉತ್ತರ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಅವರ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಬಂದಿತ್ತು. ಆದರೆ ಮರುದಿನವೇ ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ. ಈ ಮೂಲಕ ಶಾಸಕರ ಕೋವಿಡ್ ಟೆಸ್ಟ್ ವರದಿಯಲ್ಲಿಯೇ ಗೊಂದಲ ಮೂಡಿದೆ. ರಾಜ್ಯ ಬುಲೆಟಿನ್ ನಲ್ಲಿ ಕೂಡ ಶಾಸಕರ ಪೇಷಂಟ್ ನಂಬರ್ …

Read More »